Wednesday, 6 June 2018

ದೇಶ ಭಕ್ತರು ನಾವು ದೇಶ ಭಕ್ತರು

ದೇಶ ಭಕ್ತರು ನಾವು ದೇಶ ಭಕ್ತರು
ಕನಸ ಕಟ್ಟಿ ನನಸುಗೈವ ದೇಶ ಭಕ್ತರು
ದುಷ್ಟ ಶಕ್ತಿಯಾ ಮೆಟ್ಟಿ ದೇಶ ಬೆಳಗುವ
ದೇಶ ಭಕ್ತರು ನಾವು ದೇಶ ಭಕ್ತರು
ಇಹುದು ನಮಗೆ ಭಗತ್ ಸಿಂಗ್
ಆಜಾóದರ ಆದರ್ಶವು
ಅವರ ಹಾದಿಯಲ್ಲಿ ನಡೆದು
ಕಿಚ್ಚ ತಡೆದು ಕೆಚ್ಚಿನಿಂದ
ಹಗೆಯ ಮೆಟ್ಟಿ ಹೊಗೆಯನಳಿ
ಪ್ರೀತಿ ಪ್ರೇಮದಿಂದ ಕಲೆತು
ದೇಶ ಬೆಳಗುವ ದೇಶ ಭಕ್ತರು
ನಾವು ದೇಶ ಭಕ್ತರು
ವಿದೇಶಿಯ ಮೋಹ ತೊರೆದು
ದೇಸೀಯರಾಗಿ ನಾವು ನಾಡ ಬೆಳೆಸುತ
ನಮ್ಮತನವ ನಾವು ಬಿಡದೆ
ನಮ್ಮ ನೆಲ ಜಲವ ಉಳಿಸುತ
ಸತ್ಯ ಧರ್ಮ ಶಾಂತಿ ಪಥದಿ ನಡೆದು
ಸಹನೆಯಿಂದ ದೇಶ ಉಳಿಸುವ
ದೇಶ ಭಕ್ತರು ನಾವು ದೇಶ ಭಕ್ತರು
ಅಹಂಕಾರ ದರ್ಪಬಿಟ್ಟು ,
ಅಹಂಭಾವ ಈರ್ಷೆ ತೊರೆದು
ರಾಗ ದ್ವೇಷಗಳನು ಮೆಟ್ಟಿ,
ಮಮತೆಯಿಂದ ಎಲ್ಲರೊಂದಾಗಿ
ದೇಶ ಉಳಿಸಿ, ದೇಶ ಬೆಳಸಿ, ದೇಶ ಬೆಳಗುವ
ದೇಶ ಭಕ್ತರು ನಾವು ದೇಶ ಭಕ್ತರು