ನಾನು ಪಂಜರದ ಪಕ್ಷಿ ಇನ್ನು ನನಗಾರು ಗತಿ
ಕೇಳ ಬಯಸುವಿಯೇನು ನನ್ನ ಕಥೆಯ
ಯಾರ ಸಂತೋಷಕ್ಕೆ ಹಿಡಿದು ತಂದರು ನನ್ನ
ಅರಿಯಬಲ್ಲೆಯ ನನ್ನ ಒಡಲ ವ್ಯಥೆಯ ।। ಪಲ್ಲವಿ ।।
ಕೇಳ ಬಯಸುವಿಯೇನು ನನ್ನ ಕಥೆಯ
ಯಾರ ಸಂತೋಷಕ್ಕೆ ಹಿಡಿದು ತಂದರು ನನ್ನ
ಅರಿಯಬಲ್ಲೆಯ ನನ್ನ ಒಡಲ ವ್ಯಥೆಯ ।। ಪಲ್ಲವಿ ।।
ಬಹು ದೂರ ಯಾವುದೋ ಪರ್ವತದ ಓರೆಯಲಿ
ಮರದ ಕಿರಿ ಹೊದರಿನಲ್ಲಿ ಜನಸಿ ಬಂದೆ
ಆ ತಂದೆ ತಾಯಿಯರು ನನ್ನಣ್ಣ ತಂಗಿಯರು
ಅವರ ಜೊತೆಯಲ್ಲಿ ನಾನು ನಲಿಯುತಿದ್ದೆ ।। ೧ ।।
ಮರದ ಕಿರಿ ಹೊದರಿನಲ್ಲಿ ಜನಸಿ ಬಂದೆ
ಆ ತಂದೆ ತಾಯಿಯರು ನನ್ನಣ್ಣ ತಂಗಿಯರು
ಅವರ ಜೊತೆಯಲ್ಲಿ ನಾನು ನಲಿಯುತಿದ್ದೆ ।। ೧ ।।
ಅಲ್ಲಿ ಬನಬನದಲ್ಲಿ ಕಾಡ ಗಿಡಗಿಡದಲ್ಲಿ
ಕೊಂಬೆ ಕೊಂಬೆಗೂ ಹೂ ಸಾವಿರಾರು
ಬನದ ಹಣ್ಣಿನ ರುಚಿಯ ಬರಿ ನೆನದರೇನುಂಟು
ಮರಳಿ ದೊರೆಯಲುಬಹುದೇ ತೌರಿನವರು ।। ೨ ।।
ಕೊಂಬೆ ಕೊಂಬೆಗೂ ಹೂ ಸಾವಿರಾರು
ಬನದ ಹಣ್ಣಿನ ರುಚಿಯ ಬರಿ ನೆನದರೇನುಂಟು
ಮರಳಿ ದೊರೆಯಲುಬಹುದೇ ತೌರಿನವರು ।। ೨ ।।
ಬಣ್ಣ ಬಣ್ಣದ ಹಕ್ಕಿ ಮತ್ತೆ ಪಾತರಗಿತ್ತಿ
ನನ್ನ ಆ ಗೆಳೆತನವಿತ್ತು ಬನದ ತುಂಬ
ಚೈತ್ರ ಋತು ಬಂದಾಗ ಬನತುಂಬಿ ನಿಂತಾಗ
ಎಂಥ ಸಂತೋಷವೋ ಕೊರಳ ತುಂಬ ।। ೩ ।।
ನನ್ನ ಆ ಗೆಳೆತನವಿತ್ತು ಬನದ ತುಂಬ
ಚೈತ್ರ ಋತು ಬಂದಾಗ ಬನತುಂಬಿ ನಿಂತಾಗ
ಎಂಥ ಸಂತೋಷವೋ ಕೊರಳ ತುಂಬ ।। ೩ ।।
ಗಿರಿ ಶಿಖರ ಝರಿ ನೀರು ಸ್ವಚ್ಛಂದ ಆಕಾಶ
ಇನ್ನೊಮ್ಮೆ ಅಂಥ ಸುಖ ಪಡುವೆನೇನು
ಯಾರ ಪ್ರೀತಿಯ ನಂಬಿ ಜೀವ ಹಿಡಿಯಲಿ ನಾನು
ಅರ್ಥವಿಲ್ಲದ ಹಾಡ ಹಾಡಲೇನು ।। ೪ ।।
ಇನ್ನೊಮ್ಮೆ ಅಂಥ ಸುಖ ಪಡುವೆನೇನು
ಯಾರ ಪ್ರೀತಿಯ ನಂಬಿ ಜೀವ ಹಿಡಿಯಲಿ ನಾನು
ಅರ್ಥವಿಲ್ಲದ ಹಾಡ ಹಾಡಲೇನು ।। ೪ ।।
ಸಾಹಿತ್ಯ: ಸಿದ್ದಣ್ಣ ಮಸಳಿ