ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು ।। ಪಲ್ಲವಿ ।।
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು ।। ಪಲ್ಲವಿ ।।
ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ದೇವ ವಿರೂಪಾಕ್ಷ ಈವ ನಮಗೆ ರಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ ।। ೧ ।।
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ದೇವ ವಿರೂಪಾಕ್ಷ ಈವ ನಮಗೆ ರಕ್ಷ
ಜೀವಿಗೆ ತಾ ನೀಡುವನು ಧರ್ಮದ ದೀಕ್ಷ ।। ೧ ।।
ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ ।। ೨ ।।
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ ।। ೨ ।।
ಚಿತ್ರ: ವಿಜಯನಗರದ ವೀರಪುತ್ರ (೧೯೬೧)
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಶ್ವನಾಥನ್-ರಾಮಮೂರ್ತಿ
ಗಾಯಕರು: ಪಿ.ಬಿ. ಶ್ರೀನಿವಾಸ್
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಶ್ವನಾಥನ್-ರಾಮಮೂರ್ತಿ
ಗಾಯಕರು: ಪಿ.ಬಿ. ಶ್ರೀನಿವಾಸ್