Friday, 8 June 2018
Thursday, 7 June 2018
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಕನ್ನಡಿಗರು
ಕುವೆಂಪು
೧೯೬೭ - ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ
೧೯೭೩ - ನಾಕುತಂತಿ
ಶಿವರಾಮ ಕಾರಂತ
೧೯೭೭ - ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೯೮೩ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವಿ. ಕೃ. ಗೋಕಾಕ
೧೯೯೦ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ
೧೯೯೪ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ಗಿರೀಶ್ ಕಾರ್ನಾಡ್
೧೯೯೮ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು
ಚಂದ್ರಶೇಖರ ಕಂಬಾರ
೨೦೧೦ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ
ರಾಮಾಯಣ
ರಾಮಾಯಣ
ರಾಮಾಯಣ ಹಿಂದೂಗಳ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಋಷಿಯಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯ ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು.
ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ ೫ನೇ ಶತಮಾನದಿಂದ ಕ್ರಿ.ಪೂ ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಆದರೆ ಬೇರೆ ಪೌರಾಣಿಕಗಳಂತೆ ಈ ಕಾವ್ಯವೂ ಅನೇಕ ಮಾರ್ಪಾಡುಗಳಿಗೆ ಒಳಗಾಗಿರುವುದರಿಂದ ಇದರ ನಿಖರವಾದ ಕಾಲ ಊಹಿಸುವುದು ಕಷ್ಟವಾಗಿದೆ.
ರಾಮಾಯಣವು ನಂತರದ ಸಂಸ್ಕೃತ ಕಾವ್ಯದ ಮೇಲೆ ಶ್ಲೋಕದ ಹೊಸ ಛಂದಸ್ಸಿನಿಂದಾಗಿ ಬಹುಮುಖ್ಯ ಪ್ರಭಾವ ಬೀರಿದೆ. ಇದು ಪುರಾತನ ಹಿಂದೂ ಋಷಿಗಳ ಬೋಧನೆಗಳನ್ನು ಕಥಾಮಾಧ್ಯಮದ ಮೂಲಕ, ಹಾಗೂ ತಾತ್ವಿಕ ಮತ್ತು ಭಕ್ತಿಸಂಬಂಧಿತ ಚರ್ಚಾಭಾಗಗಳ ಮೂಲಕ ಒಳಗೊಂಡಿದೆ. ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಮತ್ತು ಕಥೆಯ ಖಳನಾಯಕನಾದ ರಾವಣ ಈ ಎಲ್ಲ ಪಾತ್ರಗಳು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ.
ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು. ಪ್ರಭಾವಗೊಂಡ ಪ್ರಮುಖರೆಂದರೆ, ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು(ರಾಮಾಯಣ ದರ್ಶನಂ).
ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ಎಂಟನೆ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ದಕ್ಷಿಣಪೂರ್ವ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಈ ಪ್ರದೇಶದಲ್ಲಿ ಖ್ಮೇರ್, ಮಜಪಾಹಿತ್, ಶೈಲೇಂದ್ರ, ಚಂಪಾ, ಶ್ರೀವಿಜಯ ಮೊದಲಾದ ಕೆಲವು ಮುಖ್ಯ ಭಾರತೀಯ ಸಾಮ್ರಾಜ್ಯಗಳು ಸ್ಥಾಪಿಸಲ್ಪಟ್ಟವು. ಇವುಗಳ ಮೂಲಕ ರಾಮಾಯಣ ಇಂಡೊನೇಷ್ಯಾ (ಜಾವಾ, ಸುಮಾತ್ರಾ ಮತ್ತು ಬೋರ್ನಿಯೊ), ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಯಿತು.
ರಾಮಾಯಣದ ರಚನೆ
ರಾಮಾಯಣಗಳಲ್ಲೆಲ್ಲ ಹಳೆಯದೂ ಹೆಚ್ಚು ಜನರು ಓದುವಂಥದೂ ಆದ ವಾಲ್ಮೀಕಿಯ 'ರಾಮಾಯಣ'ವು ಅನೇಕ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿರುವ ಅನೇಕ ರಾಮಾಯಣದ ಆವೃತ್ತಿಗಳಿಗೆ ಆಧಾರವಾಗಿದೆ. ಈ ಕೃತಿಯು ಅನೇಕ ಪೂರ್ಣ ಮತ್ತು ಅಪೂರ್ಣ ಹಸ್ತಪ್ರತಿಗಳಲ್ಲಿ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ಅತ್ಯಂತ ಹಳೆಯದು ೧೧ನೆಯ ಶತಮಾನದ್ದು. ವಾಲ್ಮೀಕಿ ರಾಮಾಯಣದ ಪ್ರಸ್ತುತ ಪ್ರತಿಯು ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಎರಡು ಪ್ರಾದೇಶಿಕ ಆವೃತ್ತಿಗಳ ರೂಪದಲ್ಲಿ ನಮಗೆ ಲಭ್ಯವಾಗಿದೆ . ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳು ಕಾಂಡಗಳಾಗಿ ವಿಭಜಿಸಲಾಗುತ್ತದೆ .
- ಬಾಲ ಕಾಂಡ – ರಾಮನ ಜನನ, ಬಾಲ್ಯ, ವನವಾಸಕ್ಕೆ ಹೋಗುವ ಮುನ್ನ ಅಯೋಧ್ಯೆಯಲ್ಲಿ ರಾಮ ಕಳೆದ ದಿನಗಳು, ವಿಶ್ವಾಮಿತ್ರನ ಕೋರಿಕೆಯಂತೆ ರಾಕ್ಷಸರನ್ನು ಸಂಹರಿಸಲು ಅವನೊಡನೆ ಅರಣ್ಯಕ್ಕೆ ತೆರಳುವುದು, ಸೀತಾ ಸ್ವಯಂವರ- ಈ ಘಟನೆಗಳನ್ನು ಬಾಲಕಾಂಡ ಒಳಗೊಂಡಿದೆ.
- ಅಯೋಧ್ಯಾ ಕಾಂಡ – ಈ ಭಾಗದಲ್ಲಿ ಕೈಕೇಯಿಯು ದಶರಥನಲ್ಲಿ ಕೇಳಿಕೊಂಡಿದ್ದ ಮೂರು ವರಗಳಿಂದ ರಾಮನಿಗೆ ವನವಾಸವಾಗುತ್ತದೆ. ದಶರಥನು ಪುತ್ರಶೋಕವನ್ನು ತಾಳಲಾರದೆ ಮರಣಹೊಂದುತ್ತಾನೆ.
- ಅರಣ್ಯ ಕಾಂಡ – ವನವಾಸದಲ್ಲಿ ರಾಮನ ಜೀವನ, ಸೀತೆಯ ಅಪಹರಣ ಈ ಭಾಗದಲ್ಲಿ ಚಿತ್ರಿತವಾಗಿದೆ.
- ಕಿಷ್ಕಿಂಧಾ ಕಾಂಡ – ಸೀತೆಯನ್ನು ಅರಸುತ್ತಾ ರಾಮ ಕಿಷ್ಕಿಂಧೆಯಲ್ಲಿ ಎಂಬ ವಾನರ ಸಾಮ್ರಾಜ್ಯಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಸುಗ್ರೀವ, ಹನುಮಂತ ಮುಂತಾದ ಕಪಿವೀರರ ಗೆಳೆತನವಾಗುತ್ತದೆ. ವಾನರಸೈನ್ಯವು ಸೀತೆಯನ್ನು ಹುಡುಕಲು ಪ್ರಾರಂಭಿಸುತ್ತದೆ.
- ಸುಂದರ ಕಾಂಡ – ಹನುಮಂತನ ಬಗೆಗಿನ ವಿವರಗಳಿವೆ. ಹನುಮಂತನ ಇನ್ನೊಂದು ಹೆಸರು ಸುಂದರೆ ಎಂದಿರುವುದರಿಂದ ಈ ಭಾಗಕ್ಕೆ ಸುಂದರ ಕಾಂಡ ಎಂಬ ಹೆಸರು ಬಂದಿದೆ. ಹನುಮಂತ ಸಮುದ್ರ ಲಂಘನ ಮಾಡಿ ಲಂಕೆಯನ್ನು ಪ್ರವೇಶಿಸುತ್ತಾನೆ. ಸೀತೆಯು ರಾವಣನ ರಾಜ್ಯದಲ್ಲಿರುವ ಅಶೋಕವನದಲ್ಲಿ ಇರುವ ವಿಷಯವನ್ನುರಾಮನಿಗೆ ತಿಳಿಸುತ್ತಾನೆ.
- ಯುದ್ಧ ಕಾಂಡ - ಈ ಭಾಗದಲ್ಲಿ ರಾಮ - ರಾವಣರ ಯುದ್ಧದಲ್ಲಿ, ರಾವಣ ಸಂಹಾರದ ನಂತರ ರಾಮ ತನ್ನ ಪರಿವಾರದೊಡನೆ ಅಯೋಧ್ಯೆಗೆ ಹಿಂತಿರುಗುತ್ತಾನೆ. ಅಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆಯುವುದರ ಕುರಿತಾದ ವರ್ಣನೆಗಳಿವೆ.
- ಉತ್ತರ ಕಾಂಡ – ರಾಮ,ಸೀತೆಯರು ವನವಾಸದ ನಂತರ ಅಯೋಧ್ಯೆಯಲ್ಲಿ ಕಳೆದ ದಿನಗಳು. ಅಗಸನ ಮಾತಿನ ಕಾರಣದಿಂದಾಗಿ ಸೀತೆಯನ್ನು ರಾಮ ಕಾಡಿಗಟ್ಟುವುದು, ಕಾಲಾಂತರದಲ್ಲಿ ರಾಮಾವತಾರ ಸಮಾಪ್ತಿಗೊಂಡ ವಿವರಗಳಿವೆ.
ವಾಲ್ಮೀಕಿ ರಾಮಾಯಣದ ಮೊದಲ ಮತ್ತು ಕಡೆಯ ಕಾಂಡಗಳನ್ನು ವಾಲ್ಮೀಕಿಯೇ ಬರೆದಿರುವದರ ಬಗ್ಗೆ ಸಂದೇಹಗಳಿವೆ . ಈ ಎರಡು ಅಧ್ಯಾಯಗಳು ಮತ್ತು ಉಳಿದ ಭಾಗದ ನಡುವೆ ಶೈಲಿಯಲ್ಲಿ ವ್ಯತ್ಯಾಸ ಮತ್ತು ಕಥೆಯಲ್ಲಿ ಅನೇಕ ವಿರೋಧಾಭಾಸಗಳಿದ್ದರೂ ಈ ಎರಡು ಅಧ್ಯಾಯಗಳು ಕೃತಿಯ ಬೇರ್ಪಡಿಸಲಾಗದ ಅಂಗ ಎಂದು ಅನೇಕ ತಜ್ಞರ ಅಭಿಪ್ರಾಯವಾಗಿದೆ. ರಾಮಾಯಣದಲ್ಲಿ ಕಂಡುಬರುವ ರಾಮನ ಜನ್ಮ, ಅವನ ದೈವೀ ಅಂಶ ಮತ್ತು ರಾವಣನನ್ನು ಕುರಿತಾದ ದಂತಕಥೆಗಳಂಥ ಅನೇಕ ಪೌರಾಣಿಕ ಅಂಶಗಳ ಬಹುಭಾಗ ಈ ಎರಡು ಅಧ್ಯಾಯಗಳಲ್ಲೇ ಕಂಡುಬರುತ್ತದೆ .
ರಾಮಾಯಣದ ಮುಖ್ಯ ಪಾತ್ರಗಳು
- ರಾಮ - ರಾಮ ರಾಮಾಯಣದ ನಾಯಕ. ರಾಮನನ್ನು ದೇವರ ಅವತಾರವೆಂದು ಚಿತ್ರಿಸಲಾಗಿದೆ. ರಾಮನು ಅಯೋಧ್ಯೆಯ ರಾಜನಾದ ದಶರಥನ ಹಿರಿಯ ಮಗ. ದಶರಥನಿಗೆ ಬಹಳ ಪ್ರೀತಿಪಾತ್ರನಾದ ಮಗ. ಅಯೋಧ್ಯೆಯ ಪ್ರಜೆಗಳಿಗೆಲ್ಲ ರಾಮನನ್ನು ಕಂಡರೆ ಬಹಳ ಪ್ರೀತಿ. ರಾಮ ಸದ್ಗುಣಗಳ ಸಾಕಾರ ರೂಪವಾಗಿದ್ದನು. ದಶರಥನ ಮೂವರು ಪತ್ನಿಯರಲ್ಲಿ ಒಬ್ಬಳಾದ ಕೈಕೇಯಿಯು ತನ್ನ ವರಗಳ ಮೂಲಕ ರಾಮನ ವನವಾಸಕ್ಕೆ ಕಾರಣಳಾಗುತ್ತಾಳೆ. ರಾಮನು ರಾಜನಾಗುವ ಅವಕಾಶವನ್ನು ಬಿಟ್ಟುಕೊಟ್ಟು, ತಂದೆಯಿಂದ ದೂರವಾಗಿ ಅರಣ್ಯಕ್ಕೆ ಹೋಗಬೇಕಾಗುತ್ತದೆ. ವನವಾಸದಲ್ಲಿದ್ದಾಗ ರಾಕ್ಷಸನಾದ ರಾವಣನು ರಾಮನಿಂದ ಕೊಲ್ಲಲ್ಪಡುತ್ತಾನೆ.
- ಸೀತಾ - ಸೀತೆಯು ರಾಮನ ಹೆಂಡತಿ ಮತ್ತು ಮಿಥಿಲೆಯ ರಾಜನಾದ ಜನಕನ ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ ರಾವಣನಿಂದ ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧನದಲ್ಲಿರಿಸಿರುತ್ತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ.
- ಹನುಮಂತ - ಹನುಮಂತ ಎಂಬುದು ಒಂದು ಕಪಿಯ ಹೆಸರು. ಇವನು ಕಿಷ್ಕಿಂದಾ ಎಂಬ ವಾನರ ಸಾಮ್ರಾಜ್ಯಕ್ಕೆ ಸೇರಿದವನು. ಹನುಮಂತ ರಾಮನ ಭಕ್ತ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಸಹಾಯ ಮಾಡುತ್ತಾನೆ.
- ಲಕ್ಷ್ಮಣ - ಲಕ್ಷ್ಮಣನ ರಾಮನ ತಮ್ಮ. ರಾಮ ವನವಾಸಕ್ಕೆಂದು ಹೊರಟಾಗ ಲಕ್ಶ್ಮಣನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ, ಅತ್ತಿಗೆಯರಾದ ರಾಮ ಮತ್ತು ಸೀತೆಯ ಸೇವೆ ಮಾಡುತ್ತಿರುತ್ತಾನೆ. ರಾವಣನಿಂದ ಪ್ರೇರಿತನಾದ ಮಾರೀಚ ಚಿನ್ನದ ಜಿಂಕೆಯ ವೇಷದಲ್ಲಿ ಸುಳಿದಾಡಿದಾಗ ಸೀತೆ ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ.
- ರಾವಣ - ರಾವಣನು ಲಂಕೆಯ ರಾಜನಾಗಿದ್ದು ಲಂಕಾಧಿಪತಿ ಎನಿಸಿಕೊಂಡಿದ್ದವನು. ರಾವಣನು ಬ್ರಹ್ಮನನ್ನು ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ, ರಾಕ್ಷಸರಿಂದಲೂ, ಅಥವಾ ಯಕ್ಷಕಿನ್ನರರಿಂದಲೂ" ಎಂಬುದೇ ಆ ವರ. ರಾವಣನಿಗೆ ಹತ್ತು ತಲೆಗಳು, ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕಕಂಟಕನಾಗಿ ಪರಿಣಮಿಸುತ್ತಾನೆ. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು ರಾಮ ಭೂಲೋಕದಲ್ಲಿ ಜನ್ಮ ತಾಳುತ್ತಾನೆ.
- ದಶರಥ - ದಶರಥ ಅಯೋಧ್ಯೆಯ ರಾಜ. ಶ್ರೀರಾಮನ ತಂದೆ. ದಶರಥನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮನು ಕೌಸಲ್ಯೆಯ ಮಗ. ಲಕ್ಷ್ನಣನು ಸುಮಿತ್ರೆಯ ಮಗ. ಭರತ ಮತ್ತು ಶತ್ರುಘ್ನರು ಕಿರಿಯ ರಾಣಿಯಾದ ಕೈಕೇಯಿಯ ಮಕ್ಕಳು. ಕೈಕೇಯಿ ದಶರಥನ ಪ್ರೀತಿಯ ಹೆಂಡತಿ. ದಶರಥನಲ್ಲಿ ಮೂರು ವರಗಳನ್ನು ಕೇಳಿಕೊಂಡು ರಾಮನನ್ನು ದಶರಥನಿಂದ ದೂರ ಮಾಡುತ್ತಾಳೆ. ಪ್ರಿಯಪುತ್ರನಾದ ರಾಮನ ವಿರಹವನ್ನು ಸಹಿಸದೆ ದಶರಥ ಎದೆಯೊಡೆದುಕೊಂಡು ಸಾಯುತ್ತಾನೆ.
- ಭರತ - ಭರತನು ದಶರಥನ ಎರಡನೆಯ ಮಗ. ರಾಮನು ಸೀತಾ,ಲಕ್ಶ್ಮಣರೊಡನೆ ವನವಾಸ ಹೊರಟಾಗ ಭರತ ಇರುವುದಿಲ್ಲ. ತನ್ನ ತಾಯಿಯೇ ರಾಮನನ್ನು ವನವಾಸಕ್ಕೆ ಕಳಿಸುವುದರ ಮೂಲಕ, ತನ್ನ ತಂದೆ ದಶರಥನ ಸಾವಿಗೆ ಕಾರಣಳಾದ ವಿಷಯ ಭರತನಿಗೆ ನಂತರ ತಿಳಿಯುತ್ತದೆ. ಕೂಡಲೇ ತಾಯಿಯ ಮೇಲೆ ಕೋಪಗೊಂಡು ರಾಮನನ್ನು ಹುಡುಕಲು ಹೊರಡುತ್ತಾನೆ. ಭರತ ಎಷ್ಟೇ ವಿನಂತಿಸಿಕೊಂಡರೂ, ತನ್ನ ತಂದೆಗೆ ಕೊಟ್ಟ ಮಾತಿಗೆ ತಪ್ಪ್ಪಲು ಒಪ್ಪದ ರಾಮ ಭರತನೊಡನೆ ಹಿಂತಿರುಗಲು ಒಪ್ಪುವುದಿಲ್ಲ. ಆಗ ಭರತ ರಾಮನ ಪಾದುಕೆಗಳನ್ನು ಪಡೆದುಕೊಂಡು ಹಿಂತಿರುಗುತ್ತಾನೆ. ತಾನು ಸಿಂಹಾಸನದ ಮೇಲೆ ಕುಳಿತುಕೊಳ್ಳದೆ, ಅಣ್ಣನ ಪಾದುಕೆಗಳನ್ನೇ ಸಿಂಹಾಸನದ ಮೇಲಿಟ್ಟು, ರಾಮನ ಪರವಾಗಿ ರಾಜ್ಯದ ಆಡಳಿತವನ್ನು ನಿರ್ವಹಿಸುತ್ತಿರುತ್ತಾನೆ.
- ವಿಶ್ವಾಮಿತ್ರ - ವಿಶ್ವಾಮಿತ್ರ ಒಬ್ಬ ಋಷಿ. ಅರಣ್ಯದಲ್ಲಿ ತನ್ನ ಹೋಮ,ಹವನಾದಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹರಿಸಲು ರಾಮ, ಲಕ್ಷ್ಮಣರನ್ನು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಾನೆ. ಮಾರ್ಗಮಧ್ಯದಲ್ಲಿ ವಿಶ್ವಾಮಿತ್ರ ರಾಮನನ್ನು ಮಿಥಿಲಾನಗರಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಜನಕರಾಜನು ಸೀತಾ ಸ್ವಯಂವರ ಏರ್ಪಡಿಸಿರುತ್ತಾನೆ. ಅಲ್ಲಿ ರಾಮನು ಶಿವ ಧನುಸ್ಸನ್ನು ಮುರಿದು ಸೀತೆಯನ್ನು ವಿವಾಹವಾಗುತ್ತಾನೆ.
ಸಾರಾಂಶ
ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ, ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು.
ರಾಮನ ಯೌವನ
ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮನು ರಾಕ್ಷಸರರ ರಾಜ ರಾವಣನ ಘೋರ ತಪಸ್ಸಿಗೆ ಮೆಚ್ಚಿ ಅವನನ್ನು ದೇವತೆಗಳು, ರಾಕ್ಷಸರು, ಅಥವಾ ಯಕ್ಷಕಿನ್ನರರು ಕೊಲ್ಲಲಾಗದೆಂಬ ವರವನ್ನು ಕೊಟ್ಟಿದ್ದನು .ಅದನ್ನು ಅವನು ಹಿಂತೆಗೆದುಕೊಳ್ಳುವದು ಸಾಧ್ಯವಿರಲಿಲ್ಲ. ಅಂಥ ವರವನ್ನು ಪಡೆದು ರಾವಣನು ತನ್ನ ಸಹಚರ ರಾಕ್ಷಸರೊಡಗೂಡಿ ಭೂಸಂಹಾರಕ್ಕೆ ತೊಡಗಿ , ಶಿಷ್ಟಜನರಿಗೆ ಅದರಲ್ಲೂ ಬ್ರಾಹ್ಮಣರಿಗೆ ಅವರ ಜಪತಪಗಳಿಗೆ ಉಪದ್ರವ ಕೊಡಲಾರಂಭಿಸಿದನು . ಇದನ್ನು ನೋಡಿ ಎಲ್ಲ ದೇವತೆಗಳು ಭೂಮಿಯನ್ನೂ ತಮ್ಮನ್ನು ಈ ದುಷ್ಟನಿಂದ ಕಾಪಾಡು ಎಂದು ಬ್ರಹ್ಮನ ಮೊರೆ ಹೊಕ್ಕರು . ಬ್ರಹ್ಮನು ವಿಷ್ಣುವಿನ ಬಳಿಸಾರಿ ದೇವತೆಗಳ ಚಿಂತೆಯನ್ನು ಅರುಹಿ , ರಾವಣನು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಮರಣಹೊಂದದ ವರವನ್ನು ಪಡೆದಿಲ್ಲದಿರುವದರಿಂದ ವಿಷ್ಣುವೇ ಮಾನವನಾಗಿ ಅವತಾರವೆತ್ತಿ ರಾವಣನನ್ನು ಸಂಹರಿಸಬೇಕೆಂದು ಕೇಳಿಕೊಂಡನು.
ಈ ಮಧ್ಯೆ ಕೋಸಲವನ್ನು ಆಳುತ್ತಿದ್ದ ಅಯೋಧ್ಯೆಯ ರಾಜ ದಶರಥನಿಗೆ ಮಕ್ಕಳಿಲ್ಲದ್ದರಿಂದ ತನ್ನ ಉತ್ತರಾಧಿಕಾರಿಯ ಬಗ್ಗೆ ಚಿಂತೆಯಲ್ಲಿದ್ದನು . ಮಂತ್ರಿಗಳು ಹಾಗೂ ಪುರೋಹಿತರ ಸಲಹೆಯ ಮೇರೆಗೆ ಪುತ್ರಸಂತಾನಕ್ಕಾಆಗಿ ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದನು. ವಿಷ್ಣು ದಶರಥನ ಜ್ಯೇಷ್ಠ ಪುತ್ರನಾಗಿ ಜನಿಸಲು ನಿರ್ಧರಿಸಿ ದೈವೀ ಪುರುಷನೊಬ್ಬನನ್ನು ಯಜ್ಞಕುಂಡದಲ್ಲಿ ಹುಟ್ಟುವಂತೆ ಮಾಡಿದನು. ಈ ದೈವೀ ಪುರುಷ ದಶರಥನಿಗೆ ಅಮೃತವಿದ್ದ ಚಿನ್ನದ ಕಲಶವೊಂದನ್ನು ನೀಡಿ ತನ್ನ ರಾಣಿಯರಿಗೆ ಅದನ್ನು ನೀಡುವಂತೆ ಹೇಳಿದನು. ದಶರಥನು ಅದನ್ನು ತನ್ನ ಮೂವರು ರಾಣಿಯರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಇವರ ನಡುವೆ ಹಂಚಿದನು. ಕಾಲಕ್ರಮೇಣ ಅವರು ಗರ್ಭಿಣಿಯರಾಗಿ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ರಾಣಿ ಕೌಸಲ್ಯೆಗೆ ಹಿರಿಯ ಮಗನಾಗಿ ರಾಮನೂ , ಕೈಕೇಯಿಗೆ ಭರತನೂ ಮತ್ತು ಲಕ್ಷ್ಮಣ ಮತ್ತು ಶತ್ರುಘ್ನರು ಸುಮಿತ್ರೆಗೂ ಜನಿಸಿದರು.
ಈ ಬಾಲಕರು ವಸಿಷ್ಠರಿಂದ ಶಾಸ್ತ್ರಗಳನ್ನೂ ಬಿಲ್ಲುವಿದ್ಯೆಯನ್ನೂ ಕಲಿಯುತ್ತ ಬೆಳೆದರು. ಒಂದು ದಿನ ವಿಶ್ವಾಮಿತ್ರರು ರಾಜ್ಯಕ್ಕೆ ಬಂದು ದಶರಥನಲ್ಲಿ ತಮ್ಮ ಯಜ್ಞಯಾಗಾದಿಗಳಿಗೆ ಭಂಗತರುತ್ತಿರುವ ರಾಕ್ಷಸರಿಂದ ತಮ್ಮನ್ನು ಕಾಪಾಡಲು ರಾಮನನ್ನು ಕಳಿಸಬೇಕೆಂದು ಕೋರಿದರು. ಒಲ್ಲದ ಮನ್ಸಸ್ಸಿನಿಂದ ವಿಶ್ವಾಮಿತ್ರರೊಡನೆ ರಾಮಲಕ್ಷ್ಮಣರನ್ನು ಕಳಿಸಿಕೊಡಲು ಅವನು ಒಪ್ಪಿದನು. ಈ ಸೋದರರು ತಮ್ಮ ಕರ್ತವ್ಯವನ್ನು ಪೂರೈಸಲು ವಿಶ್ವಾಮಿತ್ರನು ಸಂತೋಷಪಟ್ಟು ಅವರಿಗೆ ಅನೇಕ ದಿವ್ಯಾಸ್ತ್ರಗಳನ್ನು ಅನುಗ್ರಹಿಸಿದನು.
ವಿಶ್ವಾಮಿತ್ರರೊಡನೆಯ ಪ್ರಯಾಣದ ಕೊನೆಯಲ್ಲಿ ರಾಮನು ಮಿಥಿಲಾ ರಾಜ್ಯಕ್ಕೆ ಬಂದನು. ಅಲ್ಲಿ ಜನಕ ಮಹಾರಾಜನು ತನ್ನ ಮಗಳು ಅಪ್ರತಿಮ ಸುಂದರಿ ಸೀತೆಯನ್ನು ತನ್ನ ಆಸ್ಥಾನದಲ್ಲಿದ್ದ ಶಿವನ ಬಹಳ ಬಲಿಷ್ಠವಾದ ಧನುಸ್ಸನ್ನು ಹೆದೆಯೀರಿಸಿದವನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲಿರುವದನ್ನು ಅರಿತನು. ಅನೇಕ ವಿವಾಹೇಚ್ಛುಗಳು ಪ್ರಯತ್ನಿಸಿ ಸೋತಿದ್ದ ಈ ಕಾರ್ಯವನ್ನು ಸಾಧಿಸಲು ರಾಮನು ನಿಶ್ಚಯಿಸಿದನು. ಅವನು ಜನಕನ ಆಸ್ಥಾನಕ್ಕೆ ಬಂದಾಗ ಜನಕನು ಅವನ ಲಾವಣ್ಯಕ್ಕೆ ಮಾರುಹೋದನು. ಐದು ಸಾವಿರ ಜನರು ಆ ಬಿಲ್ಲನ್ನು ಎಂಟು ಗಾಲಿಗಳ ರಥದಲ್ಲಿ ಆಸ್ಥಾನಕ್ಕೆ ಎಳೆದು ತಂದರು. ರಾಮನು ಬಹಳ ಸುಲಭವಾಗಿ ಅದನ್ನು ಮುರಿಯುವಷ್ಟು ಬಗ್ಗಿಸಿದನು. ಜನಕನು ಸಂತಸದಿಂದ ತನ್ನ ಲಾವಣ್ಯವತಿ ಮಗಳನ್ನು ರಾಮನಿಗೆ ಮದುವೆ ಮಾಡಿಕೊಟ್ಟನು. ಭವ್ಯವದ ಮದುವೆ ಸಮಾರಂಭದ ನಂತರ ನವಜೋಡಿಯು ಅಯೋಧ್ಯೆಗೆ ಪ್ರಯಾಣ ಬೆಳೆಸಿತು.
ರಾಮನ ವನವಾಸ
ರಾಜ ದಶರಥನು ತನ್ನ ಹಿರಿಯ ಮಗ ಹಾಗೂ ಪದ್ಧತಿಯಂತೆ ಉತ್ತರಾಧಿಕಾರಿಯಾದ ರಾಮನನ್ನು ಯುವರಾಜನನ್ನಾಗಿ ಮಾಡಲು ನಿರ್ಧರಿಸಿದನು. ಅವನ ಪ್ರಜೆಗಳು ಈ ಘೋಷಣೆಯನ್ನು ಸಂತಸದಿಂದ ಸ್ವಾಗತಿಸಿದರು. ಇಡೀ ನಗರವು ಈ ಸಂಬಂಧದ ಉತ್ಸವವನ್ನೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳಲ್ಲಿ ತೊಡಗಿತು. ದಶರಥನು ಈ ಆಚರಣೆಗಳ ಸಂಬಂಧ ಚರ್ಚಿಸಲು ತನ್ನ ಪತ್ನಿ ಕೈಕೇಯಿ ಇದ್ದಲ್ಲಿಗೆ ಹೋದನು. ಆದರೆ ದುಷ್ಟದಾಸಿಯಾದ ಮಂಥರೆಯಿಂದ ದುರ್ಬೋಧನೆಗೊಳಗಾಗಿ 'ಯುವರಾಜನಾಗುತ್ತಿರುವದು ಪ್ರವಾಸದಲ್ಲಿರುವ ತನ್ನ ಮಗ ಭರತನಲ್ಲ, ಆದರೆ ಕೌಸಲ್ಯೆಯ ಮಗ ರಾಮ' ಎಂದು ಅಸೂಯೆಪಟ್ಟು ದುಃಖಿಸಿದಳು. ದಶರಥನು ಬಂದಾಗ ಅವಳು ಅಂತಃಪುರದಲ್ಲಿ ಕಣ್ಣೀರುಗರೆಯುತ್ತಿದ್ದಳು. ಚಿಂತಿತನಾದ ದಶರಥನ ಪ್ರಶ್ನೆಗಳಿಗೆ ಉತ್ತರವಾಗಿ ಕೈಕೇಯಿ, ಅನೇಕ ವರ್ಷಗಳ ಹಿಂದೆ ದಶರಥ ತನಗಿತ್ತಿದ್ದ ಎರಡು ವರಗಳನ್ನು ನೆನಪಿಸಿದಳು. ಈ ವರಗಳನ್ನು ಪೂರೈಸಿದರೆ ಪ್ರಸನ್ನಳಾಗುವುದಾಗಿ ಹೇಳಿದಳು. ಇದಕ್ಕೆ ಪೂರಕವಾಗಿ ಅವಳು, ಮೊದಲನೆಯದಾಗಿ, ತನ್ನ ಮಗ ಭರತನನ್ನು ಯುವರಾಜನಾಗಿ ನೇಮಿಸಬೇಕೆಂದೂ, ಎರಡನೆಯದಾಗಿ, ರಾಮನನ್ನು ಹದಿನಾಲ್ಕು ವರ್ಷಕಾಲ ಘೋರವಾದ ದಂಡಕಾರಣ್ಯಕ್ಕೆ ವನವಾಸಕ್ಕೆ ಕಳಿಸಬೇಕೆಂದೂ ಕೇಳಿದಳು. ದುಃಖಿತನಾದ ದಶರಥ, ಆದಾಗ್ಯೂ ತನ್ನ ವಚನವನ್ನು ಪರಿಪಾಲಿಸಿಕೊಳ್ಳಲು ನಿರ್ಧರಿಸಿದನು. ಆದರ್ಶ ಪುತ್ರನಾದ ರಾಮ, ಸಿಂಹಾಸನದ ಮೇಲೆ ತನಗಿದ್ದ ಹಕ್ಕನ್ನು ಬಿಟ್ಟುಕೊಟ್ಟು ವನವಾಸಕ್ಕೆ ಹೊರಡಲು ಸಿದ್ಧನಾದನು. ಅವನ ನಿಷ್ಠಾವಂತ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣ, ರಾಮನ ಜೊತೆ ಹೊರಡಲು ನಿರ್ಧರಿಸಿದರು. ದಶರಥ ದುಃಖದಲ್ಲಿದ್ದಂತೆ ರಾಮ, ಅಯೋಧ್ಯೆಯ ಪರಿತಪ್ತ ಜನರಿಂದ ಹಿಂಬಾಲಿಸಲ್ಪಟ್ಟು ವನವಾಸಕ್ಕೆ ತೆರಳಿದನು. ಸ್ವಲ್ಪ ಕಾಲಾನಂತರ ದಶರಥ ದುಃಖದಿಂದ ಮರಣವನ್ನಪ್ಪಿದನು.
ಸೀತಾಪಹರಣ
ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆ ಮತ್ತು ಅಲ್ಲಿನ ಜನರನ್ನು ಬಿಟ್ಟು ಗಂಗಾ ನದಿಯನ್ನು ದಾಟಿ ಕಾಡಿನೊಳಕ್ಕೆ ಹೋದರು. ಚಿತ್ರಕೂಟ ಎಂಬ ಸುಂದರ ಸ್ಥಳವನ್ನು ಹುಡುಕಿ ಅಲ್ಲಿ ತಮ್ಮ ಕುಟೀರವನ್ನು ಸ್ಥಾಪಿಸಿದರು. ಅತ್ಯಂತ ಸುಂದರವಾಗಿದ್ದ ಈ ಸ್ಥಳದಲ್ಲಿ ಎಲ್ಲ ರೀತಿಯ ಫಲಪುಷ್ಪಗಳಿದ್ದು ಸಂಪೂರ್ಣ ಪ್ರೇಮದಿಂದ ಕೂಡಿದ್ದ ಕುಟೀರ ಭೂಮಿಯ ಮೇಲಿದ್ದ ಸ್ವರ್ಗವೇ ಆಯಿತು. ಕಾಡಿನಲ್ಲಿ ರಾಮ ಗರುಡರಾಜನಾದ ಜಟಾಯುವಿನೊಂದಿಗೆ ಮಿತ್ರತ್ವವನ್ನು ಸ್ಥಾಪಿಸಿದ.
ಇಷ್ಟರಲ್ಲಿ ಅಯೋಧ್ಯೆಗೆ ಮರಳಿ ಬಂದ ಭರತ, ನಡೆದ ವಿಷಯವನ್ನು ಕೇಳಿ, ರಾಮನನ್ನು ವನವಾಸಕ್ಕೆ ಕಳಿಸುವಲ್ಲಿ ತನ್ನ ತಾಯಿ ಕೈಕೇಯಿ ವಹಿಸಿದ ಪಾತ್ರದ ಬಗ್ಗೆ ಕೋಪಗೊಂಡನು. ರಾಮನನ್ನು ಹಿಂದಕ್ಕೆ ತರುವ ಉದ್ದೇಶದಿಂದ ಕಾಡಿಗೆ ಬಂದು ರಾಮನನ್ನು ಹಿಂದಕ್ಕೆ ಬರುವಂತೆ ಬೇಡಿಕೊಂಡನು. ತಂದೆಯ ವಚನದಿಂದ ಬದ್ಧನಾದ ರಾಮ ಇದಕ್ಕೆ ನಿರಾಕರಿಸಿದಾಗ ರಾಮನ ಪಾದುಕೆಗಳನ್ನು ಅಯೋಧ್ಯೆಗೆ ಒಯ್ದು ಸಿಂಹಾಸನದ ಮೇಲೆ ಸ್ಥಾಪಿಸಿ ರಾಮನ ಹೆಸರಿನಲ್ಲಿ ನಂದಿಗ್ರಾಮದಿಂದ ಭರತ ರಾಜ್ಯವನ್ನು ಆಳುತ್ತಿದ್ದನು. ಹದಿನಾಲ್ಕು ವರ್ಷಗಳಲ್ಲಿ ರಾಮ ಮರಳಿ ಬರದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನೂ ಭರತ ತೆಗೆದುಕೊಂಡನು.
ಒಂದು ದಿನ, ರಾವಣನ ತಂಗಿಯಾದ ಶೂರ್ಪನಖಿ ಎಂಬ ರಾಕ್ಷಸಿ ಚಿತ್ರಕೂಟದಲ್ಲಿ ರಾಮನನ್ನು ಕಂಡು ಅವನನ್ನು ಪ್ರೇಮಿಸಿದಳು. ಸುಂದರ ಹುಡುಗಿಯ ವೇಷ ಧರಿಸಿ ರಾಮನನ್ನು ಆಕರ್ಷಿಸಲು ಪ್ರಯತ್ನಿಸಿದಳು. ತನ್ನ ಪತ್ನಿಯತ್ತ ನಿಷ್ಠಾವಂತನಾದ ರಾಮ ಪ್ರತಿಕ್ರಿಯೆ ತೋರಿಸಲಿಲ್ಲ. ಶೂರ್ಪನಖಿಯ ವರ್ತನೆಯಿಂದ ಕುಪಿತನಾದ ಲಕ್ಷ್ಮಣ ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸಿಬಿಟ್ಟನು. ರಾವಣನತ್ತ ಮರಳಿ ಶೂರ್ಪನಖಿ ಇದರ ಬಗ್ಗೆ ದೂರಿತ್ತಳು. ಅವಳಿಂದ ಸೀತೆಯ ಸೌಂದರ್ಯದ ಬಗ್ಗೆ ಕೇಳಿದ ರಾವಣ, ರಾಮನನ್ನು ಕೊಂದು ಸೀತೆಯನ್ನು ಹೊತ್ತೊಯ್ಯುವ ನಿರ್ಧಾರವನ್ನು ಮಾಡಿದನು. ರಾವಣನ ಸಹಾಯಕ್ಕೆ ಬಂದ ಮಾರೀಚ ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಕುಟೀರದಲ್ಲಿ ಬಿಟ್ಟು ದೂರ ಬರುವಂತೆ ಮಾಡಿದನು. ಹೊರಡುವ ಮುನ್ನ, ಲಕ್ಷ್ಮಣ ಮಣ್ಣಿನಲ್ಲಿ ಒಂದು ಗೆರೆಯನ್ನು ಎಳೆದು ಅದರ ಒಳಗೆ ಇರುವವರೆಗೂ ಸೀತೆ ಸುರಕ್ಷಿತಳಾಗಿ ಇರುವಳೆಂದು ತಿಳಿಸಿ ಹೋದನು. ಮುದುಕನ ವೇಷ ಧರಿಸಿ ಬಂದ ರಾವಣ ಅನ್ನದಾನ ಮಾಡುವಂತೆ ಸೀತೆಯನ್ನು ಕೇಳಿಕೊಂಡನು. ಗೆರೆಯನ್ನು ದಾಟಲು ಹೆದರಿದರೂ, ಅವನಿಗೆ ದಾನ ಮಾಡಲು ಸೀತೆ ಮುಂದೆ ಬಂದಾಗ ರಾವಣ ಅವಳನ್ನು ಹೊತ್ತುಕೊಂಡು ತನ್ನ ಪುಷ್ಪಕ ವಿಮಾನದಲ್ಲಿ ಹಾರಿದನು. ಇದನ್ನು ಕಂಡ ಜಟಾಯು ಸೀತೆಯ ರಕ್ಷಣೆಗೆ ಬಂದಾಗ ರಾವಣ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹೋದನು.
ಹಿಂದಕ್ಕೆ ಮರಳಿದ ರಾಮ-ಲಕ್ಷ್ಮಣರು ಸೀತೆಯನ್ನು ಕಾಣದೆ ಹುಡುಕುತ್ತಿದ್ದಾಗ ಜಟಾಯುವಿನಿಂದ ಸೀತಾಪಹರನದ ವಿಷಯವನ್ನು ತಿಳಿದರು.
ವಾನರ ಸಾಮ್ರಾಜ್ಯ
ತಮ್ಮ ಹುಡುಕಾಟವನ್ನು ಮುಂದುವರೆಸಿ ರಾಮ ಲಕ್ಷ್ಮಣರು ಕಿಷ್ಕಿಂದೆಯ ವಾನರ ರಾಜನಾದ ಸುಗ್ರೀವ ಹಾಗೂ ಹನುಮಂತನನ್ನು ಭೇಟಿಯಾಗುತ್ತಾರೆ. ಹನುಮಂತ ಸುಗ್ರೀವನ ಸೈನ್ಯಕ್ಕೆ ಸೇನಾಧಿಪತಿ. ಸೀತೆ ರಾವಣನ ರಥದಿಂದ ಎಸೆದ ಆಭರಣಗಳು ವಾನರರಿಗೆ ದೊರೆತಿರುತ್ತದೆ. ತನ್ನ ಅಣ್ಣ ವಾಲಿಯಿಂದ ಸಾಮ್ರಾಜ್ಯದಿಂದ ಹೊರಗಟ್ಟಲ್ಪಟ್ಟ ಸುಗ್ರೀವ ರಾಮನ ಸಹಾಯ ಪಡೆಯುತ್ತಾನೆ. ಪರಸ್ಪರ ಕಾಳಗದಲ್ಲಿ ರಾಮನ ಸಹಾಯ ಪಡೆದ ಸುಗ್ರೀವನಿಂದ ವಾಲಿ ಮಡಿಯುತ್ತಾನೆ.
ಸಹಾಯ ಮಾಡಿದ ರಾಮನೊಂದಿಗೆ ಸುಗ್ರೀವ ತನ್ನ ಸೈನ್ಯವನ್ನು ಕೂಡಿ ಲಂಕೆಯೆಡೆಗೆ ಹೊರಡುತ್ತಾನೆ.
ರಾಮ, ಸುಗ್ರೀವರು ಸೀತೆಯನ್ನು ಹುಡುಕಲು ತಮ್ಮ ವಾನರಸೇನೆಯನ್ನು ನಾನಾದಿಕ್ಕಿಗೆ ಕಳಿಸಿದರು .ಅವರು ರಾವಣನಿಂದ ಹತನಾದ ಜಟಾಯುವಿನ ಸೋದರ, ಸಂಪಾತಿಯನ್ನು ಭೇಟಿಯಾಗುವವರೆಗೆ ಅವರ ಪ್ರಯತ್ನಗಳಿಗೆ ವಿಶೇಷ ಫಲ ದೊರೆಯಲಿಲ್ಲ . ಸಂಪಾತಿಯು ಅಂಗವೈಕಲ್ಯದಿಂದಾಗಿ ಹಾರಲು ಅಸಮರ್ಥನಾಗಿದ್ದನು . ಅವನು ಸೂರ್ಯನ ಅತಿ ಸಮೀಪಕ್ಕೆ ಹಾರಿದ್ದರಿಂದ ಅವನ ರೆಕ್ಕೆಗಳು ಸುಟ್ಟುಹೋಗಿದ್ದವು . ಬಲಶಾಲಿಯಾದ ಜಟಾಯುವು ಅವನನ್ನು ಸಾವಿನಿಂದ ರಕ್ಷಿಸಿದ್ದನು. ಇಬ್ಬರಲ್ಲಿ ಜಟಾಯು ದೇಹಬಲದಿಂದ ಗಟ್ಟಿಗನಾದರೂ ಸಂಪಾತಿಗೆ ಕಣ್ಣಿನ ಹೆಚ್ಚಿನ ದೃಷ್ಟಿಯಿದ್ದು ನೂರಾರು ಯೋಜನಗಳಷ್ಟು ದೂರ ನೋಡಬಲ್ಲವನಾಗಿದ್ದನು . ರಾವಣನು ತನ್ನ ಸೋದರನನ್ನು ಕೊಂದದ್ದನ್ನು ಕೇಳಿ ಅವನು ವಾನರರಿಗೆ ಸಹಾಯ ಮಾಡಲು ಒಪ್ಪಿದನು . ಅನತಿಕಾಲದಲ್ಲೇ ಅವನು ಸೀತೆಯನ್ನು ದಕ್ಷಿಣದಿಕ್ಕಿನಲ್ಲಿರುವದಾಗಿ ಪತ್ತೆಹಚ್ಚಿದನು. ಅವಳು ದಕ್ಷಿಣದಲ್ಲಿ ಸಮುದ್ರದಾಚೆಗಿನ ಲಂಕಾದ್ವೀಪದಲ್ಲಿನ ಅಶೋಕವನವೊಂದರಲ್ಲಿ ಸೆರೆಯಾಗಿರುವದನ್ನು ನೋಡಿ ಹೇಳಿದನು .
ಲಂಕೆಯಲ್ಲಿ ಹನುಮಂತ
ಸುಗ್ರೀವನು ತನ್ನ ವಾನರಸೈನ್ಯವನ್ನು ಅಂಗದನ ನೇತೃತ್ವದಲ್ಲಿ ದಕ್ಷಿಣಕ್ಕೆ ಕಳಿಸಿದನು. ಹನುಮಂತನು ಅಂಗದನ ಸೇನಾಪತಿಯಾಗಿ ತೆರಳಿದನು. ಅವರು ದಕ್ಷಿಣದಲ್ಲಿ ಬಹುದೂರ ಹೋದಮೇಲೆ ತಮ್ಮ ಮತ್ತು ಲಂಕಾದ್ವೀಪದ ನಡುವೆ ಮಹಾಸಾಗರವನ್ನು ಕಂಡರು. ಆ ಸಮುದ್ರವನ್ನು ದಾಟುವ ಬಗೆ ಹೇಗೆಂದು ತಿಳಿಯದಾದರು .ತನ್ನ ಸೈನಿಕರಿಗೆ ಅಲ್ಲಿಯೇ ಇರಹೇಳಿ ಹನುಮಂತನು ತನ್ನದೇಹವನ್ನು ಹಿಗ್ಗಿಸಿ ಮಹಾರೂಪ ತಾಳಿ ಅಪಾರ ಜಲರಾಶಿಯನ್ನು ಜಿಗಿದು ದಾಟಿ ತ್ರಿಕೂಟಪರ್ವತದ ಮೇಲೆ ಇಳಿದು ಲಂಕಾಪಟ್ಟಣದತ್ತನೋಡಿದನು. ನಗರಕ್ಕೆ ಭಾರೀ ಪಹರೆ ಇದ್ದದ್ದರಿಂದ ಬೆಕ್ಕಿನ ರೂಪತಾಳಿ ನಗರವನ್ನು ನುಸುಳಿ ನಗರವನ್ನು ವೀಕ್ಷಿಸಿದನು. ರಾವಣನು ತನ್ನ ಅಂತಃಪುರದಲ್ಲಿ ಸುಂದರಸ್ತ್ರೀಯರಿಂದ ಸುತ್ತುವರಿಯಲ್ಪಟ್ಟಿದ್ದನು. ಆದರೆ ಅಲ್ಲಿ ಸೀತೆ ಇರಲಿಲ್ಲ. ತನ್ನ ಅನ್ವೇಷಣೆಯನ್ನು ಮುಂದುವರಿಸಿ ಕೊನೆಗೆ ಆಶೋಕವನದಲ್ಲಿ ಮರದ ಕೆಳಗೆ ರಾಕ್ಷಸಿಯರಿಂದ ಸುತ್ತುವರೆಯಲ್ಪಟ್ಟು ದುಃಖದಿಂದ ಕಳೆಗುಂದಿದ ಸೌಂದರ್ಯವುಳ್ಳ ಸೀತೆಯನ್ನು ನೋಡಿದನು.
ಸಣ್ಣ ಕಪಿಯೊಂದರ ವೇಷ ತಾಳಿ ಹನುಮಂತನು ಮರದಿಂದ ಕೆಳಗೆ ಜಿಗಿದು ಅವಳಿಗೆ ರಾಮನ ಉಂಗುರವನ್ನು ಕೊಟ್ಟು ಅವಳಿಂದ ಒಂದು ಉಂಗುರವನ್ನು ತೆಗೆದುಕೊಂಡನು. ಅವಳನ್ನು ತನ್ನೊಡನೆ ಕೊಂಡೊಯ್ಯಲು ಸಿದ್ಧವಾಗಲು, ರಾಮನೇ ತನ್ನನ್ನು ರಕ್ಷಿಸಲು ಬರಬೇಕೆಂದು ಹೇಳಿ ತನ್ನನ್ನು ಹುಡುಕಿದ್ದಕ್ಕೆ ಸಾಕ್ಷಿಯಾಗಿ ಒಂದು ಬೆಲೆಯುಳ್ಳ ವಜ್ರವನ್ನು ರಾಮನಿಗೆ ಕೊಡುವದಕ್ಕಾಗಿ ಹನುಮಂತನಿಗೆ ಕೊಟ್ಟಳು. ಅವರು ಮಾತನಾಡುತ್ತಿರುವಾಗ ಅಲ್ಲಿ ಬಂದ ರಾವಣನು ಅವಳ ಮನವೊಲಿಸಲು ವ್ಯರ್ಥ ಪ್ರಯತ್ನ ಮಾಡಿ ಅವಳು ಇನ್ನೆರಡು ತಿಂಗಳಲ್ಲಿ ತನ್ನ ವಶವಾಗದಿದ್ದರೆ ತನ್ನ ಬೆಳಗಿನ ಉಪಾಹಾರಕ್ಕಾಗಿ ಅವಳ ಅಂಗಾಂಗಗಳನ್ನು ತುಂಡರಿಸುವದಾಗಿ ಬೆದರಿಸಿದನು.
ಸಿಟ್ಟಿಗೆದ್ದ ಹನುಮಂತನು ಮಾವಿನ ತೋಟವನ್ನು ಹಾಳುಮಾಡಿದನು. ಅವನನ್ನು ರಾಕ್ಷಸರು ಬಂಧಿಸಿ ರಾವಣನ ಮುಂದೆ ಕೊಂಡೊಯ್ದರು. ಹನುಮಂತನು ತಾನು ರಾಮನ ದೂತನೆಂದು ಹೇಳಿ , ಸೀತೆಯನ್ನು ರಾಮನಿಗೆ ಒಪ್ಪಿಸು ಇಲ್ಲವೆ ರಾಮನ ಕ್ರೋಧಕ್ಕೆ ಬಲಿಯಾಗು ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ರಾವಣನು ಅವನನ್ನು ಕೊಲ್ಲಲು ಆಜ್ಞೆ ಮಾಡಿದನು.
ಆಗ ರಾವಣನ ನ್ಯಾಯಪರ ತಮ್ಮನಾದ ವಿಭೀಷಣನು ಮಧ್ಯಪ್ರವೇಶಿಸಿ ರಾವಣನಿಗೆ ಶಾಸ್ತ್ರಗಳಲ್ಲಿ ಹೇಳಿದ ಪ್ರಕಾರ ದೂತನನ್ನು ಕೊಲ್ಲುವದು ಅನುಚಿತ ಎಂದು ಹೇಳಿ ಅವನ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಲು ಸಲಹೆ ಮಾಡಿದನು. ರಾವಣನು ಒಪ್ಪಿ ತನ್ನ ರಾಕ್ಷಸ ಸೇವಕರಿಗೆ ಹನುಮಂತನ ಬಾಲಕೆ ಬೆಂಕಿಹಚ್ಚಲು ಆಜ್ಞೆ ಮಾಡಿದನು. ಬಾಲಕ್ಕೆ ಬೆಂಕಿ ಹತ್ತಿದ ನಂತರ ಹನುಮಂತನು ತನ್ನ ಶರೀರವನ್ನು ಸಣ್ಣದಾಗಿ ಮಾಡಿಕೊಂಡು ಕಟ್ಟುಗಳಿಂದ ಪಾರಾಗಿ ಮನೆಗಳ ಮೇಲೆಲ್ಲ ಜಿಗಿಯುತ್ತ ಹೋಗಿ ಲಂಕೆಯಲ್ಲೆಲ್ಲ ಬೆಂಕಿಯನ್ನು ಹರಡಿದನು. ಅವನು ರಾಮ, ಸುಗ್ರೀವರಿದ್ದಲ್ಲಿಗೆ ಮರಳಿ ಬಂದು ಸೀತೆಯು ಬಂಧನದಲ್ಲಿರುವದನ್ನು ತಿಳಿಸಿ ಯುದ್ಧಸಿದ್ಧತೆಗೆ ತೊಡಗಿದನು.
ಲಂಕೆಯಲ್ಲಿ ಯುದ್ಧ
ಸಮುದ್ರಕ್ಕೆ ಸೇತುವೆಯನ್ನು ಕಟ್ಟದ ಹೊರತು ಹನುಮಂತನ ಹೊರತು ಬೇರಾರೂ ಅದನ್ನು ದಾಟಲಾರರು ಎಂದು ರಾಮನು ನಿರ್ಣಯಿಸಿದನು. ವ್ಯರ್ಥವಾಗಿ ಮೂರು ದಿನ ಕಾದರೂ ತನ್ನನ್ನು ಅಲಕ್ಷಿಸಿದ್ದಕ್ಕಾಗಿ ಸಿಟ್ಟಿಗೆದ್ದ ರಾಮನು ತನ್ನ ಬಾಣಗಳನ್ನು ಸಮುದ್ರಕ್ಕೆ ಗುರಿಯಿಡಲು ವರುಣನು ಪ್ರತ್ಯಕ್ಷವಾದನು . ಸಮುದ್ರದೇವತೆಯಾದ ಅವನು 'ಸೇತುವೆಯನ್ನು ಕಟ್ಟುವದಾದರೆ ನೆಲದ ಮೇಲೇ ಕಟ್ಟಿದಷ್ಟು ದೃಢವಾಗಿರುವಂತೆ ಸೇತುವೆಗೆ ಅಲೆಗಳು ಅನುಕೂಲವಾಗಿರುವಂತೆ ಏರ್ಪಡಿಸುವದಾಗಿ' ಮಾತು ಕೊಟ್ಟನು.
ರಾಮನು ಸೈನ್ಯದೊಂದಿಗೆ ಬರುವ ವಾರ್ತೆಯಿಂದ ಲಂಕೆಯಲ್ಲಿ ಭೀತಿಯ ವಾತಾವರಣ ಉಂಟಾಯಿತು. ರಾವಣನ ತಮ್ಮನಾದ ವಿಭೀಷಣನು, ರಾಮನೊಂದಿಗೆ ಸಂಧಿ ಮಾಡಿಕೊಳ್ಳಲು ರಾವಣನಿಗೆ ಸಲಹೆಯಿತ್ತಾಗ ರಾವಣನು ಅತೀವ ಸಿಟ್ಟಿಗೆದ್ದದ್ದರಿಂದ, ರಾಮನನ್ನು ಸೇರಿಕೊಂಡನು. ನಂತರ ನಡೆದ ಘನಘೋರ ಯುದ್ಧದಲ್ಲಿ ದೇವತೆಗಳೂ ಭಾಗವಹಿಸಿದರು. ವಿಷ್ಣು ಮತ್ತು ಇಂದ್ರ, ರಾಮನ ಪಕ್ಷವನ್ನೂ ಅಸುರರು ರಾವಣನ ಪಕ್ಷವನ್ನೂ ವಹಿಸಿದರು.
ಎರಡೂ ಪಕ್ಷಗಳಿಗೆ ಮಿಶ್ರಫಲಗಳೊಡನೆ ಯುದ್ಧ ಸ್ವಲ್ಪ ಕಾಲ ನಡೆದ ನಂತರ ರಾಮ-ರಾವಣರ ನಡುವೆ ನೇರ ಹೋರಾಟದ ಮೂಲಕ ಯುದ್ಧದ ಫಲಿತಾಂಶವನ್ನು ಘೋಷಿಸುವುದೆಂದು ತೀರ್ಮಾನಿಸಲಾಯಿತು. ಈ ಕಾಳಗದ ತೀವ್ರತೆಯಿಂದ ದೇವ-ದೇವತೆಗಳೂ ಭೀತರಾದರು. ರಾಮನ ಪ್ರತಿಯೊಂದು ಬಾಣವೂ ರಾವಣನ ಒಂದು ತಲೆ ಕತ್ತರಿಸಿದರೂ ಅದು ಮತ್ತೆ ಬೆಳೆಯುತ್ತಿತ್ತು. ಏನು ಮಾಡಬೇಕೆಂದು ತೋಚದೆ ಇದ್ದ ರಾಮನಿಗೆ ರಾವಣನ ದೇಹದತ್ತ ಗುರಿಯಿಡುವಂತೆ ವಿಭೀಷಣ ತಿಳಿಸಿಕೊಟ್ಟ.
ಈ ಉಪಾಯ ಫಲಿಸಿ ರಾವಣ ಉರುಳಿ ಬಿದ್ದಂತೆ, ಆಕಾಶದಿಂದ ಪುಷ್ಪಗಳು ರಾಮನ ಮೇಲೆ ಮಳೆಗರೆದವು. ಅವನ ಕಿವಿಗಳಲ್ಲಿ ದೈವೀ ಸಂಗೀತ ಅನುರಣಿಸಿತು. ರಾವಣನ ಪತ್ನಿ ಮಂಡೋದರಿಯ ವಿಲಾಪವನ್ನು ಕೇಳಿದ ರಾಮ ರಾವಣನಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರವನ್ನು ಮಾಡಿ ಲಂಕೆಯನ್ನು ಪ್ರವೇಶಿಸಿದನು.
ಸಂತೋಷದಿಂದ ಬೀಗುತ್ತಿದ್ದ ಸೀತೆ ರಾಮನ ಜೊತೆಗೂಡಿದಳು. ಆದರೆ ಅವಳ ಸಂತೋಷ ತಾತ್ಕಾಲಿಕವಾಗಿತ್ತು. ತಲೆ ತಗ್ಗಿಸಿ ಅವಳನ್ನು ಬರಮಾಡಿಕೊಂಡ ರಾಮ, ರಾವಣನ ಮನೆಯಲ್ಲಿ ಅವಳು ಇದ್ದದ್ದರಿಂದ ತನ್ನ ಪತ್ನಿಯಾಗಲು ಅವಳು ತಕ್ಕವಳಾಗಿ ಉಳಿದಿಲ್ಲವೆಂದು ಹೇಳಿದ. ತನ್ನ ಪಾತಿವ್ರತ್ಯದ ಬಗ್ಗೆ ಅವನಿಗೆ ಭರವಸೆಯಿತ್ತಳು ಸೀತೆ. ಆದರು ರಾಮನ ಅನುಮಾನ ಮುಂದುವರೆದಿದ್ದರಿಂದ ಸೀತೆ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಿ ತನ್ನ ಚಿತೆಯನ್ನು ನಿರ್ಮಿಸಬೇಕೆಂದು ಹೇಳಿದಳು. ಎಲ್ಲ ಪ್ರೇಕ್ಷಕರ ಅಂತಃಕರಣವೂ ಸೀತೆಯ ಕಡೆಗಿದ್ದಿತು. ಸೀತೆ ಚಿತೆಯನ್ನೇರಿ ಕೆಲ ಕ್ಷಣಗಳಲ್ಲಿಯೇ ಅಗ್ನಿ ಆಕೆಯನ್ನು ತನ್ನ ಬಾಹುಗಳಲ್ಲಿ ಎತ್ತಿ ತಂದು ಬಿಟ್ಟನು. ಅಗ್ನಿಪರೀಕ್ಷೆಯಲ್ಲಿ ತನ್ನ ನಿರಪರಾಧವನ್ನು ತೋರಿಸಿದ ಸೀತೆಯನ್ನು ರಾಮ ಸ್ವಾಗತಿಸಿದನು. ರಾಮನ ನಡತೆಯನ್ನು ಸೀತೆ ಕ್ಷಮಿಸಿದಳು.
ಯುದ್ಧವನ್ನು ಗೆದ್ದು, ರಾವಣನನ್ನು ಸೋಲಿಸಿ, ಸೀತೆಯನ್ನು ಮರಳಿ ಪಡೆದು, ರಾಮ ವಿಜೃಂಭಣೆಯಿಂದ ಅಯೋಧ್ಯೆಗೆ ಮರಳಿ ಭರತ ಮತ್ತು ಅಯೋಧ್ಯೆಯ ಜನರ ಅಪಾರ ಸಂತೋಷಕ್ಕೆ ರಾಜ್ಯಭಾರವನ್ನು ವಹಿಸಿಕೊಂಡನು.
ಸೀತಾ ಪರಿತ್ಯಾಗ
ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ,ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾಡತೊಡಗಿದರು. ತನ್ನ ಪ್ರಜೆಗಳನ್ನು ಸಂತೋಷಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು.
ಸೀತೆ ಸ್ವಲ್ಪಮಾತ್ರವೂ ಗೊಣಗದೆ ಕಾಡಿಗೆ ಹೊರಟಳು. ದು:ಖತಪ್ತಳಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ,ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ.
ಲವ, ಕುಶರು ಇಬ್ಬರು ಬೆಳೆದು ಇಪ್ಪತ್ತು ವರ್ಷದ ಯುವಕರಾಗಿದ್ದರು. ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು. ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳನ್ನೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ, ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ, ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮದಿಂದ ಕರೆದುಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಮೇಲಿರುವ ಕಳಂಕದಿಂದ ದೂರಾಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ.
ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ - ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿದು ನನ್ನನ್ನು ನಿನ್ನ ಬಳಿ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯನ್ನು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ.
ರಾಮಾಯಣದ ನೀತಿಪಾಠ
ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ . ಜೀವನವು ಕ್ಷಣಭಂಗುರವಾಗಿದ್ದು ಭೋಗಲಾಲಸೆಯ ನೀತಿಯು ಅರ್ಥಹೀನವಾದದ್ದು . ಆದರೆ ಹಾಗೆಂದು ಯಾವದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು. ವೇದದಲ್ಲಿ ಉಕ್ತವಾದದ್ದೇ ಧರ್ಮ, ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ, ನಷ್ಟಗಳಿಗಾಗಿ ಅಲ್ಲ ಎಂಬುದು ಅವನ ಅಭಿಪ್ರಾಯ. ಇಂಥ ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವದು ಅಷ್ಟೇ ಅಲ್ಲದೆ , ಯಾವುದೇ ಮಾತು ಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತು ಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತು ಕೊಡುತ್ತದೆ.
ನಾರದ ಮುನಿಯು ಇಡೀ ರಾಮಾಯಣವನ್ನು ಸ್ವಲ್ಪದರಲ್ಲಿ ವಾಲ್ಮೀಕಿಗೆ ಹೇಳಿದ ಸಂಕ್ಷೇಪ ರಾಮಾಯಣವು ವಾಲ್ಮೀಕಿರಾಮಾಯಣದ ಮೊದಲ ಸರ್ಗವಾಗಿದೆ. ನಾರದನು ಆದರ್ಶಮನುಷ್ಯನ ೧೬ ಗುಣಗಳನ್ನು ಪಟ್ಟಿ ಮಾಡಿ ರಾಮನು ಈ ಎಲ್ಲ ೧೬ ಗುಣಗಳನ್ನು ಹೊಂದಿದ ಸಂಪೂರ್ಣ ಮಾನವ ಎಂದು ಹೇಳುತ್ತಾನೆ ರಾಮನೇ ಸ್ವತಃ ತಾನು ಮನುಷ್ಯಮಾತ್ರನೆಂದು ಹೇಳಿದರೂ, ಒಮ್ಮೆ ಕೂಡ ತಾನು ದೈವಾಂಶವುಳ್ಳವನೆಂದು ಹೇಳದಿದ್ದರೂ, ಹಿಂದುಗಳು ಅವನನ್ನು ಆದರ್ಶವ್ಯಕ್ತಿಯೆಂದೂ ವಿಷ್ಣು ದೇವರ ಪ್ರಮುಖ ಅವತಾರಗಳಲ್ಲೊಬ್ಬ ಎಂದೂ ಪರಿಗಣಿಸುತ್ತಾರೆ.
ವಾಲ್ಮೀಕಿಯು ಅವನನ್ನು ತನ್ನ ಕಥೆಯಲ್ಲಿ ಒಬ್ಬ ಅತಿಮಾನವ ಎಂದು ಚಿತ್ರಿಸದೆ, ಎಲ್ಲ ಗುಣದೋಷಗಳಿಂದ ಕೂಡಿ, ನೈತಿಕ ಸಂದಿಗ್ಧಗಳನ್ನೆದುರಿಸಿ ಅವುಗಳನ್ನು ಧರ್ಮ (ಸರಿಯಾದ ಮಾರ್ಗ)ವನ್ನು ಅನುಸರಿಸುವುದರಿಂದ ಗೆದ್ದ ಒಬ್ಬ ಸಹಜಮಾನವನನ್ನಾಗಿ ಚಿತ್ರಿಸಿದ್ದಾನೆ. ವಾಲ್ಮೀಕಿ ರಾಮಾಯಣದಲ್ಲಿ ಕಥಾನಾಯಕನ ಪರಿಶುದ್ಧ ಚಾರಿತ್ರ್ಯದ ಬಗ್ಗೆ ಸಂಶಯವನ್ನುಂಟುಮಾಡುವ ಅನೇಕ ಸಂದರ್ಭಗಳಿವೆ. ತನ್ನ ರಾಜ್ಯವನ್ನು ಮರಳಿ ಪಡೆಯಲು ಸುಗ್ರೀವನಿಗೆ ಸಹಾಯಮಾಡಲು ವಾಲಿಯನ್ನು ಮರದ ಮರೆಯಿಂದ ರಾಮನು ಕೊಲ್ಲುವದು ಯುದ್ಧದ ನಿಯಮಗಳಿಗೆ ವಿರೋಧವಾಗಿತ್ತು. ಸೀತೆಯು ರಾವಣನ ಸೆರೆಯಿಂದ ಬಿಡುಗಡೆ ಹೊಂದಿದಾಗ ಅಗ್ನಿಯನ್ನು ಪ್ರವೇಶಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧ ಮಾಡುವಂತೆ ರಾಮನು ಅವಳನ್ನು ಬಲವಂತಪಡಿಸುತ್ತಾನೆ. ನಂತರ ಶೂದ್ರ ಶಂಬೂಕನನ್ನು ಸಮಾಜದ ಕೆಳವರ್ಗದಲ್ಲಿದ್ದು ಯೋಗಿಗಳಂತೆ ತಪಸ್ಸನ್ನು ಮಾಡಿದ್ದಕ್ಕಾಗಿ ರಾಮನು ಕೊಲ್ಲುವನು. ಇವು ಮತ್ತು ಉಳಿದ ಅನೇಕ ಇಂಥ ರಾಮಾಯಣದಲ್ಲಿನ ಪ್ರಸಂಗಗಳು ಕಥಾನಾಯಕನಾದ ರಾಮನ ಮನುಷ್ಯ ಸಹಜ ಗುಣವನ್ನೆತ್ತಿ ತೋರಿಸಿ ಕಥೆಯ ಮೂಲನೀತಿಯಾಗಿರುವ 'ಮನುಷ್ಯನು ಸತ್ಯಮಾರ್ಗವನ್ನು ಅನುಸರಿಸಲು ಅತಿಮಾನವನಿರುವದು ಅವಶ್ಯವಿಲ್ಲ' ಎಂಬುದನ್ನು ಸಮರ್ಥಿಸುತ್ತವೆ.
ಪಠ್ಯದ ಚರಿತ್ರೆ
ಸಾಂಪ್ರದಾಯಿಕ ನಂಬುಗೆಯಂತೆ ಈ ಕಾವ್ಯವು ಹಿಂದೂ ಕಾಲಗಣನೆಯ ನಾಲ್ಕು ಯುಗಗಳಲ್ಲೊಂದಾದ ತ್ರೇತಾಯುಗಕ್ಕೆ ಸೇರಿದ್ದು , ವಾಲ್ಮೀಕಿಯು ರಚಿಸಿದ್ದು . ವಾಲ್ಮೀಕಿಯೂ ಈ ಕಥೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಾನೆ.
ರಾಮಾಯಣದ ಭಾಷೆ ಪಾಣಿನಿಯ ಕಾಲಕ್ಕಿಂತಲೂ ಹಳೆಯದಾದ ಸಂಸ್ಕೃತ. ಮಹಾಭಾರತ ಮತ್ತು ರಾಮಾಯಣಗಳೆರಡರಲ್ಲೂ ಸಂಸ್ಕೃತದ ಈ ಪ್ರಭೇದ ಕಂಡುಬರುತ್ತದೆ. ರಾಮಾಯಣದ ಮೂಲ ಕೃತಿಯ ರಚನೆ ಕ್ರಿ.ಪೂ. ಐದನೆ ಶತಮಾನದಲ್ಲಿ ಆದದ್ದಿರಬಹುದು. ಅನೇಕ ಶತಮಾನಗಳ ಕಾಲ ಬಾಯಿಂದ ಬಾಯಿಗೆ, ಹಾಗೂ ಲಿಖಿತ ರೂಪದಲ್ಲೂ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಹೊಂದುತ್ತಾ, ಮಧ್ಯೆಮಧ್ಯೆ ಅನೇಕ ಮಾರ್ಪಾಟುಗಳನ್ನು ಹೊಂದುತ್ತ ಇಂದಿನ ರೂಪವನ್ನು ಪಡೆದಿದೆ. ಹೀಗಾಗಿ ರಾಮಾಯಣದ ರಚನಾಕಾಲವನ್ನು ಕೇವಲ ಭಾಷಾ ವಿಶ್ಲೇಷಣೆಯಿಂದ ಕಂಡುಹಿಡಿಯಲಾಗದು. ದೀರ್ಘವಾದ ಪ್ರಕ್ರಿಯೆಯ ಮೂಲಕ ಇಂದಿನ ರೂಪವನ್ನು ರಾಮಾಯಣ ಪಡೆದಿದ್ದು, ಈ ಪ್ರಕ್ರಿಯೆ ಸುಮಾರು ಕ್ರಿ.ಪೂ. ಐದನೆ ಶತಮಾನದಲ್ಲಿ ಆರಂಭಗೊಂಡು ಕ್ರಿ.ಶ. ನಾಲ್ಕನೆಯ ಶತಮಾನದ ಹೊತ್ತಿಗೆ ಪೂರ್ಣವಾಯಿತು ಎಂದು ಪರಿಗಣಿಸಲಾಗಿದೆ.
ರಾಮಾಯಣದ ಕಥೆಯ ಕಾಲ ಇನ್ನೂ ಹಳೆಯದಿರಬಹುದು. ರಾಮಾಯಣದಲ್ಲಿ ಬರುವ ಪಾತ್ರಗಳ ಹೆಸರುಗಳು - ರಾಮ, ಸೀತೆ, ದಶರಥ, ಜನಕ, ವಸಿಷ್ಠ, ವಿಶ್ವಾಮಿತ್ರ - ಈ ಎಲ್ಲ ಹೆಸರುಗಳೂ ವಾಲ್ಮೀಕಿ ರಾಮಾಯಣಕ್ಕಿಂತ ಹಳೆಯದಾದ ವೇದಬ್ರಾಹ್ಮಣಗಳಲ್ಲಿ ಕಂಡುಬರುತ್ತವೆ. ಆದರೆ ವೇದಗಳಲ್ಲೆಲ್ಲೂ ವಾಲ್ಮೀಕಿಯ ರಾಮಾಯಣದ ಕಥೆಯನ್ನು ಹೋಲುವ ಯಾವ ಕಥೆಯೂ ಕಂಡುಬರುವುದಿಲ್ಲ. ರಾಮಾಯಣದಲ್ಲಿ ಮುಖ್ಯ ಪಾತ್ರ ವಹಿಸುವ ಬ್ರಹ್ಮ ಮತ್ತು ವಿಷ್ಣು ವೇದೋಕ್ತ ದೇವತೆಗಳಲ್ಲ. ಮಹಾಭಾರತ-ರಾಮಾಯಣಗಳ ಮತ್ತು ಪುರಾಣಗಳ ರಚನಾನಂತರವೇ ಈ ದೇವರುಗಳ ಜನಪ್ರಿಯತೆ ಹೆಚ್ಚಿರುವುದು ಕಂಡುಬರುತ್ತದೆ.
ಸಾಮಾನ್ಯವಾಗಿ, ರಾಮಾಯಣದ ಎರಡನೆ ಕಾಂಡದಿಂದ ಆರನೆ ಕಾಂಡದವರೆಗಿನ ಭಾಗಗಳು ಈ ಕಾವ್ಯದ ಅತಿ ಪ್ರಾಚೀನ ಭಾಗಗಳೆಂದು ಪರಿಗಣಿಸಲಾಗುತ್ತದೆ. ಮೊದಲ ಕಾಂಡವಾದ ಬಾಲಕಾಂಡ ಮತ್ತು ಕೊನೆಯದಾದ ಉತ್ತರಕಾಂಡ ನಂತರ ಸೇರಿಸಲ್ಪಟ್ಟ ಭಾಗಗಳೆಂದು ಪರಿಗಣಿತವಾಗಿವೆ. ಬಾಲಕಾಂಡ ಮತ್ತು ಅಯೋಧ್ಯಾಕಾಂಡದ ಕರ್ತೃ ಅಥವಾ ಕರ್ತೃಗಳು ಗಂಗಾ ಜಲಾನಯನ ಪ್ರದೇಶ ಹಾಗೂ ಪ್ರಾಚೀನ ಭಾರತದ "ಹದಿನಾರು ಜನಪದ"ಗಳ ಕಾಲದಲ್ಲಿನ ಮಗಧ ಹಾಗೂ ಕೋಸಲ ಪ್ರದೇಶಗಳ ನಿಕಟ ಪರಿಚಯ ಪಡೆದಿದ್ದರೆನ್ನುವುದು ಕಂಡುಬರುತ್ತದೆ. ಇದಕ್ಕೆ ಕಾರಣ ರಾಮಾಯಣದ ಈ ಭಾಗಗಳಲ್ಲಿನ ರಾಜಕೀಯ ಹಾಗೂ ಭೌಗೋಳಿಕ ವರ್ಣನೆಗಳು "ಹದಿನಾರು ಜನಪದ"ಗಳ ಕಾಲದ ಸ್ಥಿತಿಗತಿಗಳನ್ನು ಬಿಂಬಿಸುತ್ತವೆ.
ಆದರೆ ರಾಮಾಯಣದ ಅರಣ್ಯಕಾಂಡವನ್ನು ಗಮನಿಸಿದರೆ, ರಾಕ್ಷಸರು, ವಿಚಿತ್ರ ಪ್ರಾಣಿಗಳು, ಮೊದಲಾದವುಗಳನ್ನೊಳಗೊಂಡ ಕಲ್ಪನಾಲೋಕದತ್ತ ವರ್ಣನೆಗಳು ಸರಿಯುತ್ತವೆ. ಮಧ್ಯ ಹಾಗೂ ದಕ್ಷಿಣ ಭಾರತದ ಭೌಗೋಳಿಕ ವರ್ಣನೆಗಳು ವಾಸ್ತವದಿಂದ ಸಾಕಷ್ಟು ದೂರವಿರುವುದು ಕಂಡುಬರುತ್ತದೆ. ಶ್ರೀಲಂಕಾ ದ್ವೀಪದ ಸರಿಯಾದ ಸ್ಥಳದ ಬಗ್ಗೆ ವಿವರಗಳು ಅಸ್ಪಷ್ಟವಾಗಿರುವುದು ಸಹ ಕಂಡುಬರುತ್ತದೆ. ಈ ಅಂಶಗಳ ಆಧಾರದ ಮೇಲೆ, ಚರಿತ್ರಜ್ಞ ಎಚ್.ಡಿ.ಸಂಕಾಲಿಯಾ ಅವರು ರಾಮಾಯಣದ ಕಾಲ ಸುಮಾರು ಕ್ರಿ.ಪೂ. ನಾಲ್ಕನೆಯ ಶತಮಾನ ಇದ್ದಿರಬಹುದೆಂದು ಪ್ರತಿಪಾದಿಸಿದ್ದಾರೆ. ಆದರೆ ಇನ್ನೊಬ್ಬ ಚರಿತ್ರಕಾರರಾದ ಎ.ಎಲ್.ಬಾಷಮ್ ಅವರು ರಾಮನು ಕ್ರಿ.ಪೂ. ೭ ನೆಯ ಅಥವಾ ೮ ನೆಯ ಶತಮಾನದಲ್ಲಿ ಇದ್ದಿರಬಹುದಾದ ಸಣ್ಣ ರಾಜ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು ರಾಮಾಯಣದ ಕಥೆಯ ಕಾಲ ಕ್ರಿ.ಪೂ. ೬೦೦೦ ದಷ್ಟು ಹಳೆಯದಿರಬಹುದೆಂದು ಪ್ರತಿಪಾದಿಸಿದ್ದಾರೆ.
ವಿಭಿನ್ನ ರೂಪಾಂತರಗಳು
ಅನೇಕ ಜಾನಪದ ಕಥೆಗಳಂತೆ, ರಾಮಾಯಣದ ಕಥೆಯ ವಿವಿಧ ರೂಪಾಂತರಗಳು ಅಸ್ತಿತ್ವದಲ್ಲಿವೆ. ಮುಖ್ಯವಾಗಿ, ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ರಾಮಾಯಣದ ಕಥೆ ದಕ್ಷಿಣ ಭಾರತ ಮತ್ತು ದಕ್ಷಿಣಪೂರ್ವ ಏಷ್ಯಾದಲ್ಲಿ ಪ್ರಚಲಿತವಾಗಿರುವ ರೂಪಾಂತರಕ್ಕಿಂತ ಕೆಲವು ಅಂಶಗಳಲ್ಲಿ ಭಿನ್ನವಾಗಿದೆ. ರಾಮಾಯಣದ ಕಥಾಸಂಪ್ರದಾಯ ಥೈಲೆಂಡ್, ಕಾಂಬೋಡಿಯ, ಮಲೇಷಿಯ, ಲಾಓಸ್, ವಿಯೆಟ್ನಾಮ್ ಮತ್ತು ಇಂಡೊನೇಷ್ಯಾ ದೇಶಗಳಲ್ಲೂ ಪ್ರಚಲಿತವಾಗಿದೆ.
ಮಲೇಷಿಯಾದ ಕೆಲವು ರೂಪಾಂತರಗಳಲ್ಲಿ ಲಕ್ಷ್ಮಣನಿಗೆ ರಾಮನ ಪಾತ್ರಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ರಾಮನ ಪಾತ್ರವನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ.
ಭಾರತೀಯ ರೂಪಾಂತರಗಳು
ಭಾರತದಲ್ಲಿ ವಿವಿಧ ಕಾಲಗಳಲ್ಲಿ ಅನೇಕ ಬರಹಗಾರರು ಬರೆದ ರಾಮಾಯಣದ ರೂಪಾಂತರಗಳಿವೆ. ಈ ವಿವಿಧ ರೂಪಾಂತರಗಳು ಒಂದರಿಂದ ಇನ್ನೊಂದು ಸಾಕಷ್ಟು ಭಿನ್ನವಾಗಿಯೂ ಇವೆ. ೧೪-೧೫ ನೆಯ ಶತಮಾನಗಳಲ್ಲಿ, ಕುಮಾರ ವಾಲ್ಮೀಕಿ ಕನ್ನಡಲ್ಲಿ ತೊರವೆ ರಾಮಾಯಣ ಎಂಬ ರೂಪಾಂತರದ ಕರ್ತೃ. ಕನ್ನಡದ ಇತರ ಮುಖ್ಯ ರಾಮಾಯಣಗಳೆಂದರೆ ರಾಷ್ಟ್ರಕವಿ ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ "ಶ್ರೀ ರಾಮಾಯಣ ದರ್ಶನಂ" ಮತ್ತು ರಂಗನಾಥ ಶರ್ಮಾ ಅವರ "ಕನ್ನಡ ವಾಲ್ಮೀಕಿ ರಾಮಾಯಣ."
೧೨ ನೆಯ ಶತಮಾನದಲ್ಲಿ ತಮಿಳು ಕವಿ ಕಂಬ "ರಾಮಾವತಾರಮ್" ಅಥವಾ ಕಂಬರಾಮಾಯಣ ರಚಿಸಿದ. ಹಿಂದಿ ಭಾಷೆಯ ಪ್ರಸಿದ್ಧ ರಾಮಾಯಣ ೧೫೭೬ ರಲ್ಲಿ ತುಲಸೀದಾಸರು ರಚಿಸಿದ ಶ್ರೀ ರಾಮಚರಿತ ಮಾನಸ. ಇದಲ್ಲದೆ ಗುಜರಾತಿ ಕವಿ ಪ್ರೇಮಾನಂದರು ೧೭ ನೆಯ ಶತಮಾನದಲ್ಲಿ, ಬಂಗಾಲಿ ಕವಿ ಕೃತ್ತಿವಾಸರು ೧೪ ನೆಯ ಶತಮಾನದಲ್ಲಿ, ಒರಿಯಾ ಕವಿ ಬಲರಾಮದಾಸರು ೧೬ ನೆಯ ಶತಮಾನದಲ್ಲಿ, ಮರಾಠಿ ಕವಿ ಶ್ರೀಧರ ೧೮ ನೆಯ ಶತಮಾನದಲ್ಲಿ, ತೆಲುಗು ಕವಿ ರಂಗನಾಥರು ೧೫ ನೆಯ ಶತಮಾನದಲ್ಲಿ ರಾಮಾಯಣದ ಆವೃತ್ತಿಗಳನ್ನು ರಚಿಸಿದ್ದಾರೆ.
ರಾಮಾಯಣದ ಉಪ-ರೂಪಾಂತರಗಳಲ್ಲಿ ಒಂದು ರಾವಣನ ಕೇಡಿಗ ತಮ್ಮಂದಿರಾದ ಅಹಿ ರಾವಣ ಮತ್ತು ಮಹಿ ರಾವಣರನ್ನು ಕುರಿತದ್ದು. ಈ ಕಥೆಯಂತೆ ಅಹಿ-ಮಹಿ ರಾವಣರು ರಾಮ ಮತ್ತು ಲಕ್ಷ್ಮಣರನ್ನು ಕಾಳಿಗೆ ಬಲಿ ಕೊಡಲು ಹೊತ್ತೊಯ್ಯುತ್ತಾರೆ. ಈ ಕಥೆಯಲ್ಲಿ ಹನುಮಂತನ ಪಾತ್ರ ಬಹಳ ಮುಖ್ಯವಾಗಿದ್ದು ಅವನೇ ರಾಮ-ಲಕ್ಷ್ಮಣರನ್ನು ಕಾಪಾಡುತ್ತಾನೆ.
ಕೇರಳದ ಮಾಪಿಳ್ಳೆಗಳಲ್ಲಿ ಪ್ರಚಲಿತವಾಗಿರುವ ರಾಮಾಯಣದ ಒಂದು ರೂಪಾಂತರದ ಬಗ್ಗೆಯೂ ವರದಿಗಳಿವೆ.
"ಮಾಪಿಳ್ಳೆ ರಾಮಾಯಣ" ಎಂದು ಕರೆಯಲ್ಪಡುವ ಈ ರೂಪಾಂತರ ಮಾಪಿಳ್ಳೆಗಳ ಜಾನಪದ ಹಾಡುಗಳ ಗುಂಪಿನಲ್ಲಿ ಸೇರಿದೆ. ಮುಸಲ್ಮಾನ ಸಂಪ್ರದಾಯದಲ್ಲಿ ಸೇರಿರುವ ಈ ರೂಪಾಂತರದಲ್ಲಿ ರಾಮಾಯಣದ ನಾಯಕ ಒಬ್ಬ ಮುಸ್ಲಿಮ್ ಸುಲ್ತಾನ. ರಾಮನ ಹೆಸರನ್ನು "ಲಾಮನ್" ಎಂದು ಬದಲಾಯಿಸಿರುವುದನ್ನು ಬಿಟ್ಟರೆ ಬೇರೆಲ್ಲ ಪಾತ್ರಗಳೂ ರಾಮಾಯಣದಲ್ಲಿ ಇರುವಂತೆಯೇ ಇವೆ. ಮುಸ್ಲಿಮ್ ಸಾಮಾಜಿಕ ರೀತಿನೀತಿಗಳಿಗೆ ಹೊಂದಿಕೊಳ್ಳುವಂತೆ ಕಥೆಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಲಾಗಿದೆ.
ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳು
ಏಷ್ಯಾದ ಇನ್ನೂ ಅನೇಕ ಸಂಸ್ಕೃತಿಗಳು ರಾಮಾಯಣವನ್ನು ಆಮದು ಪಡೆದಿದ್ದು, ಕೆಲವು ದೇಶಗಳ ರಾಷ್ಟ್ರೀಯ ಮಹಾಕಾವ್ಯಗಳು ರಾಮಾಯಣದಿಂದಲೇ ಸ್ಫೂರ್ತಿ ಪಡೆದಿವೆ. ಚೀನಾ ದೇಶದ ಮಹಾಕಾವ್ಯ "ಪಶ್ಚಿಮದತ್ತ ಪಯಣ" ದ ಕೆಲವು ಭಾಗಗಳು ರಾಮಾಯಣವನ್ನು ಆಧರಿಸಿದವು. ಪ್ರಮುಖವಾಗಿ ಈ ಕಾವ್ಯದ "ಸುನ್ ವುಕಾಂಗ್" ಪಾತ್ರ ಹನುಮಂತನನ್ನು ಆಧರಿಸಿದ ಪಾತ್ರ ಎಂದು ನಂಬಲಾಗಿದೆ. ಇಂಡೊನೇಷ್ಯಾದ ಜಾವಾ ಪ್ರದೇಶದಲ್ಲಿ ಒಂಬತ್ತನೆ ಶತಮಾನದ ಸುಮಾರಿನಲ್ಲಿ ರಾಮಾಯಣದ ಒಂದು ರೂಪಾಂತರವಾದ "ಕಾಕಾವಿನ್ ರಾಮಾಯಣ" ಜನ್ಮತಾಳಿತು. ಇದು ಸಂಸ್ಕೃತ ರಾಮಾಯಣವನ್ನು ಹೆಚ್ಚು ಬದಲಿಸದೆ ಮಾಡಿದ ಭಾಷಾಂತರವಾಗಿದೆ. ಲಾಓಸ್ ದೇಶದ ಕಾವ್ಯ "ಫ್ರಾ ಲಕ್ ಫ್ರಾ ಲಾಮ್" ರಾಮಾಯಣದ ರೂಪಾಂತರ; ಇದರ ಹೆಸರಿನಲ್ಲಿರುವ "ಲಕ್" ಮತ್ತು "ಲಾಮ್" ಲಕ್ಷ್ಮಣ ಮತ್ತು ರಾಮರ ಹೆಸರಿನ ಲಾಓ ರೂಪಾಂತರಗಳು. ಇದರಲ್ಲಿ ರಾಮನ ಜೀವನವನ್ನು ಬುದ್ಧನ ಹಿಂದಿನ ಅವತಾರಗಳಲ್ಲಿ ಒಂದೆಂದು ಚಿತ್ರಿಸಲಾಗಿದೆ. ಮಲೇಷ್ಯಾದ "ಹಿಕಾಯತ್ ಸೆರಿ ರಾಮ" ಕಾವ್ಯದಲ್ಲಿ ದಶರಥ ಪ್ರವಾದಿ ಆದಮನ ಮೊಮ್ಮಗ ಎಂದು ಚಿತ್ರಿಸಲಾಗಿದೆಯಲ್ಲದೆ, ರಾವಣ ಬ್ರಹ್ಮನಿಂದ ವರ ಪಡೆಯುವುದರ ಬದಲು ಅಲ್ಲಾನಿಂದ ವರ ಪಡೆಯುತ್ತಾನೆ.
ಥೈಲೆಂಡಿನ ಕಾವ್ಯವಾದ "ರಾಮಕಿಯೆನ್" ಸಹ ರಾಮಾಯಣವನ್ನು ಆಧರಿಸಿದೆ. ಇದರಲ್ಲಿ ಸೀತೆಯನ್ನು ರಾವಣ ಮತ್ತು ಮಂಡೋದರಿಯರ ಮಗಳೆಂದು ಚಿತ್ರಿಸಲಾಗಿದೆ. ಜ್ಯೋತಿಷಿಯಾದ ವಿಭೀಷಣನು ಸೀತೆಯ ಜಾತಕವನ್ನು ನೋಡಿ ಅಪಶಕುನವನ್ನು ಮುನ್ನುಡಿಯುತ್ತಾನೆ. ಹಾಗಾಗಿ ರಾವಣ ಅವಳನ್ನು ನೀರಿಗೆ ಎಸೆಯಿಸುತ್ತಾನೆ, ಮತ್ತು ನಂತರ ಜನಕ ಸೀತೆಯನ್ನು ಪಡೆಯುತ್ತಾನೆ. ಮುಖ್ಯ ಕಥೆ ರಾಮಾಯಣದ ಕಥೆಯಂತಿದ್ದರೂ ಸಾಮಾಜಿಕ ಸಂಪ್ರದಾಯಗಳನ್ನು ಥಾಯಿ ಸಮಾಜದ ಸಂಪ್ರದಾಯಗಳಿಗೆ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಹನುಮಂತನ ಪಾತ್ರ ಬಹಳ ಮುಖ್ಯವಾಗಿದೆ. ಈ ಕಾವ್ಯದ ವರ್ಣಚಿತ್ರಗಳು ಬ್ಯಾ೦ಗ್‍ಕಾಕ್ ನಲ್ಲಿರುವ "ವಾತ್ ಫ್ರಾ ಕಯೆವ್" ದೇವಸ್ಥಾನದಲ್ಲಿ ಕಂಡುಬರುತ್ತವೆ.
ಇತರ ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳಲ್ಲಿ ಬಾಲಿಯ "ರಾಮಕವಚ", ಫಿಲಿಪ್ಪೀನ್ಸ್ ನ "ಮರಡಿಯ ಲಾವಣ", ಕಾಂಬೋಡಿಯದ "ರೀಮ್‍ಕರ್" ಮತ್ತು ಮ್ಯಾನ್‍ಮಾರ್ ನ "ಯಾಮ ಜಾತ್‍ದವ್" ಗಳನ್ನು ಹೆಸರಿಸಬಹುದು.
ವರ್ತಮಾನದಲ್ಲಿ ರಾಮಾಯಣ
ಕನ್ನಡದ ರಾಷ್ಟ್ರಕವಿಯಾಗಿದ್ದ ಕುವೆಂಪು ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚಿಸಿದ್ದಾರೆ. ತೆಲುಗು ಕವಿಯಾದ ವಿಶ್ವನಾಥ ಸತ್ಯನಾರಾಯಣ ಎಂಬುವವರು ರಾಮಾಯಣ ಕಲ್ಪವೃಕ್ಷಮು ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಇಬ್ಬರು ಕವಿಗಳಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಅಶೋಕ್ ಬ್ಯಾಂಕರ್ ಎಂಬ ಆಂಗ್ಲ ಲೇಖಕರು ರಾಮಾಯಣವನ್ನು ಆಧರಿಸಿ ಆರು ಸರಣಿ ಕಾದಂಬರಿಗಳನ್ನು ಹೊರತಂದಿದ್ದಾರೆ.
ಕಂಚೀಪುರಂನ ಗೇಟಿ ರೈಲ್ವೇ ಥಿಯೇಟರ್ ಕಂಪನಿಯು ದ್ರವಿಡರ ಸ್ವಾಭಿಮಾನವನ್ನು ಪುನರ್ಸ್ಥಾಪಿಸುವ ಉದ್ದೇಶದಿಂದ ಈ ಕಾವ್ಯದ ಪರಿಷ್ಕೃತ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ರಾವಣನನ್ನು ವಿದ್ವಾಂಸನೆಂದೂ, ರಾಜನೀತಿಜ್ಞನೆಂದೂ, ಸೀತೆ ಅವನಿಗೆ ಮರುಳಾದಳೆಂದೂ , ರಾಮನು ನೀತಿನಿಯಮ, ನಯನಾಜೂಕುಗಳಿಲ್ಲದ ಲಂಪಟ ರಾಜಕುಮಾರನೆಂದೂ, ಕುಡಿದು ಉನ್ಮತ್ತಸ್ಥಿತಿಯಲ್ಲಿ ಭಾರೀ ಮಾರಣಹೋಮಕ್ಕೆ ಆಜ್ನೆ ನೀಡಿದನೆಂದೂ ಚಿತ್ರಿಸುವ ರಾಮಾಯಣದ ಈ ಆವೃತ್ತಿಗಳು ಸಾಂಪ್ರದಾಯಿಕ ಪ್ರಸ್ತುತಿಗಳಿಂದ ಬಹಳಷ್ಟು ದೂರ ಇವೆ. ಈ ರೀತಿಯ ಪಾತ್ರಚಿತ್ರಣಗಳು ತನ್ನ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಪುನರ್ ಸ್ಥಾಪಿಸುವ ದ್ರಾವಿಡ ಚಳುವಳಿಯ ಹೆಚ್ಚುತ್ತಿರುವ ಗುಪ್ತಪ್ರಯತ್ನದ ಅಂಗಗಳಾಗಿವೆ.
ಮಹಾಭಾರತ
ಮಹಾಭಾರತ
ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.
ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ.
ಇತಿಹಾಸ ಹಾಗೂ ಹಿನ್ನೆಲೆ
ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡುಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಕೆಲವು ಚರಿತ್ರಜ್ಞರ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. ೧೪೦೦. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿದ ಹಲವು ವಿದುಷರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. ೩೧೦೦ಕ್ಕೆ ಹೋಲುತ್ತದೆಂದು ಹೇಳಲಾಗುತ್ತದೆ. ಆದ್ದರಿಂದ ಇವು ಘಟಿತ ಘಟನೆಗಳೋ ಅಲ್ಲವೋ, ಹೌದಾಗಿದ್ದರೆ ಯಾವ ಕಾಲದಲ್ಲಿ ನಡೆದದ್ದು ಎಂಬ ಎಲ್ಲಾ ವಿಷಯಗಳ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ.
ಕಥಾವಸ್ತು
ಮಹಾಭಾರತದ ಮುಖ್ಯವಾಗಿ ಚಂದ್ರ ವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರು ವಂಶದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ ಕಥೆ ಎನಿಸಿಕೊಳ್ಫುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ್ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು.
ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.
ಮುಖ್ಯ ಪಾತ್ರಗಳು
- ಭೀಷ್ಮ: ಭೀಷ್ಮ ಶಂತನು ಮತ್ತು ಗಂಗೆಯ ಮಗ. ಶಂತನು ಮತ್ತು ಸತ್ಯವತಿಯ ವಿವಾಹಕ್ಕೆ ಸಹಾಯವಾಗಲೆಂದು ಮದುವೆಯಾಗದಿರುವ ಮತ್ತು ರಾಜನಾಗದಿರುವ ವ್ರತವನ್ನು ತೆಗೆದುಕೊಳ್ಳುತ್ತಾನೆ. ಭೀಷ್ಮನಿಗೆ "ದೇವವ್ರತ" ಎಂದೂ ಹೆಸರು. ಇಚ್ಛಾಮರಣಿಯಾದ ಭೀಷ್ಮ ಮಹಾಭಾರತ ಯುದ್ಧದ ಮೊದಲ ಹತ್ತು ದಿನಗಳ ಕಾಲ ಕೌರವರ ಸೇನಾನಿ. ಮಹಾಭಾರತದ ಯುದ್ಧದ ನಂತರ ತನ್ನ ಜೀವನವನ್ನು ಅಂತ್ಯಗೊಳಿಸುತ್ತಾನೆ.
- ಕೃಷ್ಣ: ಸಾಂಪ್ರದಾಯಿಕ ಹಿಂದೂ ನಂಬಿಕೆಯಂತೆ, ಕೃಷ್ಣ ವಿಷ್ಣುವಿನ ಅವತಾರಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಸೂತ್ರಧಾರನ ಪಾತ್ರಕ್ಕೆ ಹೋಲಿಸಲಾಗಿದೆ. ಕೃಷ್ಣಾವತಾರದ ಕಥೆ ಮಹಾಭಾರತದ ಉದ್ದಕ್ಕೂ ಕಂಡುಬರುತ್ತದೆ. ಕಂಸ, ಶಿಶುಪಾಲ, ಮೊದಲಾದವರನ್ನು ಕೊಲ್ಲುವ ಕೃಷ್ಣ ಪಾಂಡವರ ಮಿತ್ರ. ಪಗಡೆಯಾಟದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯುವ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ. ಇದೇ ಸಂದರ್ಭದಲ್ಲೇ ಪ್ರಸಿದ್ಧ ಗೀತೋಪದೇಶ ನಡೆಸುತ್ತಾನೆ.
- ಪಾಂಡವರು: ಪಾಂಡವರು ಪಾಂಡು ಹಾಗೂ ಕುಂತಿಯ ಮಕ್ಕಳು. ಋಷಿಯ ಶಾಪದಿಂದ ಮಕ್ಕಳನ್ನು ಪಾಂಡು ಪಡೆಯಲಾಗದಿದ್ದರೂ, ಕುಂತಿಗೆ ದೊರೆತಿದ್ದ ದೂರ್ವಾಸನ ವರವನ್ನು ಉಪಯೋಗಿಸಿ ಕುಂತಿ ಮತ್ತು ಮಾದ್ರಿ ಪಾಂಡವರನ್ನು ಮಕ್ಕಳಾಗಿ ಪಡೆಯುತ್ತಾರೆ. ಐವರು ಪಾಂಡವರು: ಯುಧಿಷ್ಠಿರ (ಯಮನಿಂದ), ಭೀಮ (ವಾಯುವಿನಿಂದ), ಅರ್ಜುನ (ಇಂದ್ರನಿಂದ), ನಕುಲ ಮತ್ತು ಸಹದೇವ (ಅಶ್ವಿನಿ ದೇವತೆಗಳಿಂದ). ಮಹಾಭಾರತದ ಯುದ್ಧ ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ನಡೆಯುತ್ತದೆ.
- ದ್ರೌಪದಿ: ಭಾರತೀಯ ಸಾಹಿತ್ಯದ ಪ್ರಸಿದ್ಧ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ದ್ರೌಪದಿ ಐವರೂ ಪಾಂಡವರ ಪತ್ನಿ. ಪಾಂಚಾಲ ರಾಜ ದ್ರುಪದನ ಮಗಳು. ಮಹಾಭಾರತದ ಅತ್ಯಂತ ಸಂಕೀರ್ಣವಾದ ಪಾತ್ರಗಳಲ್ಲಿ ದ್ರೌಪದಿಯ ಪಾತ್ರ ಒಂದು.
- ಕೌರವರು: ಕೌರವರು ಪಾಂಡುವಿನ ಅಣ್ಣ ಧೃತರಾಷ್ಟ್ರನ ಮಕ್ಕಳು (ಗಾಂಧಾರಿಯಿಂದ); ಒಟ್ಟು ನೂರು ಕೌರವರು - ಇವರಲ್ಲಿ ಹಿರಿಯರು ದುರ್ಯೋಧನ ಮತ್ತು ದುಃಶಾಸನ.
- ಕರ್ಣ: ಕರ್ಣನ ಪಾತ್ರ ಮಹಾಭಾರತದ ದುರಂತ ಪಾತ್ರಗಳಲ್ಲಿ ಒಂದು. ಮದುವೆಗೆ ಮೊದಲು ಸೂರ್ಯನಿಂದ ಕುಂತಿಯ ಮಗನಾಗಿ ಹುಟ್ಟುವ ಕರ್ಣನನ್ನು ಕುಂತಿ ನದಿಯಲ್ಲಿ ತೇಲಿಬಿಡುತ್ತಾಳೆ. ಸೂತನೊಬ್ಬನ ಮನೆಯಲ್ಲಿ ಬೆಳೆಯುವ ಕರ್ಣ ಪರಶುರಾಮನಿಂದ ಶಿಕ್ಷಣವನ್ನು ಪಡೆದರೂ ಶಾಪವನ್ನೂ ಪಡೆಯುತ್ತಾನೆ. ದುರ್ಯೋಧನ ಕರ್ಣನ ಆಪ್ತ ಗೆಳೆಯ. ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ.
ಪರ್ವಗಳು
- 1. ಆದಿಪರ್ವ: ಪರಿಚಯ, ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ, ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
- 2. ಸಭಾಪರ್ವ: ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
- 3. ಅರಣ್ಯಕಪರ್ವ: ಹನ್ನೆರಡು ವರ್ಷದ ವನವಾಸ
- 4. ವಿರಾಟಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
- 5. ಉದ್ಯೋಗಪರ್ವ: ಯುದ್ಧದ ತಯಾರಿ
- 6. ಭೀಷ್ಮಪರ್ವ: ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ - ಕೃಷ್ಣನಿಂದ ಭಗವದ್ಗೀತೆ ಉಪದೇಶ
- 7. ದ್ರೋಣಪರ್ವ: ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ
- 8. ಕರ್ಣಪರ್ವ: ಕರ್ಣನ ಸೇನಾಧಿಪತ್ಯ, ಕರ್ಣಾವಸಾನ
- 9. ಶಲ್ಯಪರ್ವ: ಶಲ್ಯನ ಸೇನಾಧಿಪತ್ಯ
- 10. ಸೌಪ್ತಿಕಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
- 11. ಸ್ತ್ರೀಪರ್ವ: ಗಾಂಧಾರಿಯ ವಿಲಾಪ
- 12. ಶಾಂತಿಪರ್ವ: ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ
- 13. ಅನುಶಾಸನಪರ್ವ: ಭೀಷ್ಮನ ಕೊನೆಯ ಮಾತುಗಳು
- 14. ಅಶ್ವಮೇಧಿಕಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ
- 15. ಆಶ್ರಮವಾಸಿಕಪರ್ವ: ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ ಮರಣ
- 16. ಮೌಸಲಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")
- 17. ಮಹಾಪ್ರಸ್ತಾನಿಕಪರ್ವ: ಪಾಂಡವರ ಮರಣದ ಮೊದಲ ಭಾಗ
- 18. ಸ್ವರ್ಗಾರೋಹಣಪರ್ವ: ಪಾಂಡವರ ಸ್ವರ್ಗಾರೋಹಣ
ಉಪಕಥೆಗಳು ಮತ್ತು ಗ್ರಂಥಗಳು
ಮಹಾಭಾರತದ ಭಾಗವಾದ ಹಲವು ಪ್ರಮುಖ ಕಥೆಗಳು/ಗ್ರಂಥಗಳು:
- ಭಗವದ್ಗೀತೆ (ಭೀಷ್ಮಪರ್ವ): ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಭಗವದ್ಗೀತೆ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಜ್ಞಾನ, ಧ್ಯಾನ ಮತ್ತು ಕರ್ಮ ಮಾರ್ಗಗಳನ್ನು ಕೃಷ್ಣ ಅರ್ಜುನನಿಗೆ ತಿಳಿಸುತ್ತಾನೆ.
- ದಮಯಂತಿ (ಅರಣ್ಯಕಪರ್ವ): ನಳ ಮತ್ತು ದಮಯಂತಿಯರ ಕಥೆ ಮಹಾಭಾರತದ ಪ್ರಸಿದ್ಧ ಉಪಕಥೆಗಳಲ್ಲಿ ಒಂದು. ಸ್ವಯಂವರದಲ್ಲಿ ಇಂದ್ರ, ವರುಣ ಮೊದಲಾದವರನ್ನು ಕಡೆಗಣಿಸಿ ದಮಯಂತಿ ನಳನನ್ನೇ ಮದುವೆಯಾಗುತ್ತಾಳೆ. ಜೂಜಾಡಿ ಎಲ್ಲವನ್ನೂ ನಳ ಕಳೆದುಕೊಂಡ ನಂತರ ಕಾಡಿನಲ್ಲಿ ಇರಬೇಕಾಗುತ್ತದೆ. ದಮಯಂತಿ ತನ್ನ ತಂದೆಯ ಮನೆಗೆ ಹೋಗಲೆಂದು ಅವಳನ್ನು ಬಿಟ್ಟು ಓಡಿ ಹೋಗುವ ನಳ ಅಡಿಗೆ ಭಟ್ಟ ಮತ್ತು ಕುದುರೆ ತರಬೇತುಗಾರನಾಗಿ ರಾಜನೊಬ್ಬನ ಹತ್ತಿರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇದರ ಅನುಮಾನ ಬಂದ ದಮಯಂತಿ ಈ ರಾಜನನ್ನು ಇನ್ನೊಂದು ಸ್ವಯಂವರಕ್ಕೆ ಕರೆಸಿ ಅಡಿಗೆಯ ರುಚಿಯಿಂದ ನಳನನ್ನು ಗುರುತು ಹಿಡಿಯುತ್ತಾಳೆ. ನಳ ಮತ್ತೆ ತನ್ನ ಆಸ್ತಿಯೆಲ್ಲವನ್ನೂ ಗೆದ್ದ ನಂತರ ಕಥೆ ಮುಗಿಯುತ್ತದೆ.
- ಕೃಷ್ಣಾವತಾರ: ಕೃಷ್ಣನ ಸಂಪೂರ್ಣ ಕಥೆ "ಕೃಷ್ಣಾವತಾರ" ಪುರಾಣದಲ್ಲಿ ಮೂಡಿಬಂದಿದೆ. ಇದೇ ಕಥೆ ಮಹಾಭಾರತದ ಉದ್ದಕ್ಕೂ ನೇಯಲ್ಪಟ್ಟಿದೆ.
- ಋಷ್ಯಶೃಂಗ (ಅರಣ್ಯಕಪರ್ವ): ಋಷ್ಯಶೃಂಗ ಋಷಿ, ಪೌರಾಣಿಕವಾಗಿ ವಿಭಾಂಡಕ ಋಷಿಯ ಮಗ. ರೋಮಪಾದ ರಾಜ್ಯದಲ್ಲಿ ಕ್ಷಾಮ ಬಂದಾಗ ಋಷ್ಯನೇ ಮಳೆಯನ್ನು ಅಲ್ಲಿಗೆ ತಂದನಂತೆ. ಇಂದಿನ ಕರ್ನಾಟಕ ರಾಜ್ಯದ ಶೃಂಗೇರಿಯ ಮೊದಲ ಹೆಸರು "ಋಷ್ಯಶೃಂಗಗಿರಿ" ಆಗಿತ್ತೆಂದು ಹೇಳುತ್ತಾರೆ.
- (ಅನುಶಾಸನಪರ್ವ): ವಿಷ್ಣು ಸಹಸ್ರನಾಮ ವಿಷ್ಣುವಿನ ೧,೦೦೦ ಹೆಸರುಗಳನ್ನು ಒಳಗೊಂಡ ಸ್ತೋತ್ರ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡುಬರುತ್ತದೆ. ಯುದ್ಧದ ನಂತರ ಭೀಷ್ಮನ ಬಳಿ ಹೋಗುವ ಯುಧಿಷ್ಠಿರ ಭೀಷ್ಮನನ್ನು ಅನೇಕ ಧರ್ಮಪ್ರಶ್ನೆಗಳ ಪರಿಹಾರದ ಬಗ್ಗೆ ಕೇಳುತ್ತಾನೆ. ಹಾಗೆಯೇ, ಪುಣ್ಯಸಂಪಾದನೆಯ ದಾರಿಗಳ ಬಗ್ಗೆ ಕೇಳುತ್ತಾನೆ. ಭೀಷ್ಮ ಉತ್ತರವಾಗಿ ವಿಷ್ಣು ಸಹಸ್ರನಾಮವನ್ನು ತಿಳಿಸುತ್ತಾನೆ.
- ರಾಮಾಯಣದ ಕಥೆಯೂ ಮಹಾಭಾರತದ ಅರಣ್ಯಪರ್ವದಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದಿದೆ.
ತತ್ವಶಾಸ್ತ್ರ
ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ, ಕಾಮ, ಧರ್ಮ, ಮತ್ತು ಮೋಕ್ಷ.
ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ. ಮಹಾಭಾರತದಲ್ಲಿ ವೈಶಂಪಾಯನ ಜನಮೇಜಯನಿಗೆ ಹೇಳುತ್ತಾನೆ:
"ಓ ವಿವೇಕಿ! ಇವೆಲ್ಲವೂ ಜ್ಞಾನವನ್ನೇ ಪ್ರತಿನಿಧಿಸುತ್ತವೆ ಎಂದು ತಿಳಿ: ಸಾಂಖ್ಯ, ಯೋಗ, ಪಂಚರಾತ್ರ, ಆರಣ್ಯಕ. ಅವುಗಳ ದಾರಿಗಳು ಬೇರೆ, ಆದರೆ ಮೂಲದಲ್ಲಿ ಎಲ್ಲವೂ ಒಂದೇ!"
ಮಹಾಭಾರತದಲ್ಲಿ ಅಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ, ಯುದ್ಧನೀತಿ, ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು.
ಕನ್ನಡ ಸಾಹಿತ್ಯದಲ್ಲಿ ಮಹಾಭಾರತ
ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ. ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ.
ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ - ಕೃಷ್ಣಾವಸಾನದ ನಂತರ ಕುಮಾರವ್ಯಾಸ ತನ್ನ ಕಾವ್ಯವನ್ನು ಮುಗಿಸಿರುವುದರಿಂದ ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ. ಮಹಾಭಾರತದ ಉಳಿದ ಭಾಗ ವಾರ್ಧಕ ಷಟ್ಪದಿಯಲ್ಲಿ, ಲಕ್ಷ್ಮೀಶ ಕವಿ ವಿರಚಿತ "ಜೈಮಿನಿ ಭಾರತ"ದಲ್ಲಿ ಮೂಡಿ ಬ೦ದಿದೆ.
ಆಧುನಿಕ ಕನ್ನಡದಲ್ಲಿ ಪ್ರಸಿದ್ಧವಾದ ಮಹಾಭಾರತದ ಆವೃತ್ತಿ ಎ ಅರ್ ಕೃಷ್ಣಶಾಸ್ತ್ರಿಗಳು ಬರೆದ "ವಚನ ಭಾರತ." ಈ ಕೃತಿ ಸರಳವಾದ ಆಧುನಿಕ ಕನ್ನಡದಲ್ಲಿ ಬರೆಯಲ್ಪಟ್ಟಿದೆ. ಆಧುನಿಕ ಕನ್ನಡದಲ್ಲಿ ಮಹಾಭಾರತದ ಇನ್ನೊಂದು ಕೃತಿ "ಪರ್ವ" (ಎಸ್ ಎಲ್ ಭೈರಪ್ಪ).
ೇಲಿನವು ಮುಖ್ಯ ಮಹಾಭಾರತ ಕಥೆಯನ್ನು ಆಧರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆದ ಕೃತಿಗಳು ಅನೇಕ. ಆಧುನಿಕ ಕನ್ನಡದಲ್ಲಿ ಕುವೆಂಪು ರವರ "ಬೆರಳ್ ಗೆ ಕೊರಳ್" ಮಹಾಭಾರತದ ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ. ಹಾಗೆಯೇ ಬಿ ಎಂ ಶ್ರೀ ರವರ "ಗದಾಯುದ್ಧಂ" ರನ್ನನ ಕಾವ್ಯದ ನಾಟಕ ರೂಪಾಂತರ. ಗಿರೀಶ್ ಕಾರ್ನಾಡ್ ರ "ಯಯಾತಿ" ಮಹಾಭಾರತದ ಉಪಕಥೆಯೊಂದನ್ನು ಆಧರಿಸಿ ಬರೆದ ನಾಟಕ. ಇತ್ತೀಚೆಗೆ ರಾಮಚಂದ್ರ ಭಾವೆಯವರು ಅಂಧಪರ್ವ, ಅಶ್ವಮೇಧ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಕ್ರಮವಾಗಿ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿವೆ. ಅಂಧಪರ್ವ ಕಾದಂಬರಿಯಾಗಿ ಹೊರಬಂದಿದೆ. ಅಲ್ಲದೆ ಮಹಾಭಾರತ ಪಾತ್ರಪ್ರಪಂಚ ಎಂಬ ಸಂಕಲನವೂ ಇದೆ.
ಕೆಲವು ಉಕ್ತಿಗಳು
- "ಇಲ್ಲಿ ಕಂಡುಬರುವುದು ಬೇರೆ ಕಡೆಗಳಲ್ಲಿ ಸಿಗಬಹುದು, ಆದರೆ ಇಲ್ಲಿ ಇಲ್ಲದಿರುವುದು ಇನ್ನೆಲ್ಲಿಯೂ ಸಿಗುವುದಿಲ್ಲ." ಆದಿಪರ್ವ.
- "ಅತೃಪ್ತಿಯೇ ಪ್ರಗತಿಯ ಮೂಲ." ---> ದುರ್ಯೋಧನ.
- "ಅಧಿಕಾರದ ನಶೆ ಮದ್ಯದ ನಶೆಗಿಂತಲೂ ಕೆಟ್ಟದ್ದು; ಏಕೆಂದರೆ ಅಧಿಕಾರದ ನಶೆ ಇರುವವನಿಗೆ ಆತ ಕೆಳಗೆ ಬೀಳುವ ವರೆಗೂ ನಶೆ ಇಳಿಯುವುದಿಲ್ಲ." ವಿದುರ.
- "ಸಾಧುಗಳನ್ನು ರಕ್ಷಿಸಲು, ದುಷ್ಟರನ್ನು ಶಿಕ್ಷಿಸಲು, ಧರ್ಮದ ಸಂಸ್ಥಾಪನೆಗಾಗಿ, ಯುಗಯುಗಗಳಲ್ಲಿಯೂ ಸಂಭವಿಸುತ್ತೇನೆ." ಕೃಷ್ಣ.
ಪುರಾಣಗಳು
ಈ ಲೇಖನ ಹಿಂದೂ ಧರ್ಮದ ಪುರಾತನ ಸಾಹಿತ್ಯ ಪ್ರಕಾರದ ಬಗ್ಗೆ ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿನ ದಂತಕಥೆಗಳ ಸಮೂಹದ ಬಗ್ಗೆ ಲೇಖನವು ಪುರಾಣ ಎಂಬ ಪುಟದಲ್ಲಿ ಇದೆ.
ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ. ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು.
ಹಿಂದೂ ಪುರಾಣಗಳು
ಒಟ್ಟು ೧೮ ಪುರಾಣಗಳು ಹಿಂದೂ ಧರ್ಮದಲ್ಲಿದೆ. ಅವುಗಳೆಂದರೆ ವಿಷ್ಣುಪುರಾಣ, ನಾರದ ಪುರಾಣ, ಶ್ರೀಮದ್ ಭಾಗವತ ಪುರಾಣ, ಗರುಡ ಪುರಾಣ, ಪದ್ಮಪುರಾಣ, ವರಾಹ ಪುರಾಣ,ಬ್ರಹ್ಮ ಪುರಾಣ, ಬ್ರಹ್ಮಾನಂದ ಪುರಾಣ, ಬ್ರಹ್ಮ ವೈವರ್ತ ಪುರಾಣ, ಮಾರ್ಕಂಡೇಯ ಪುರಾಣ, ಭವಿಷ್ಯ ಪುರಾಣ, ವಾಮನ ಪುರಾಣ, ಮತ್ಸ್ಯ ಪುರಾಣ, ಕೂರ್ಮ ಪುರಾಣ, ಲಿಂಗ ಪುರಾಣ, ಶಿವ ಪುರಾಣ, ಸ್ಕಂದ ಪುರಾಣ ಮತ್ತು ಅಗ್ನಿ ಪುರಾಣ.
ಗರುಡ
ಅಗ್ನಿ
ನಾರದ
ಪದ್ಮ
ಸ್ಕಾಂದ
ಭವಿಷ್ಯ
ಬ್ರಹ್ಮ
ಭಾಗವತ
ಬ್ರಹ್ಮವೈವರ್ತ
ಬ್ರಹ್ಮಾಂಡ
ವಾಯು
ಲಿಂಗ
ವಿಷ್ಣು
ವಾಮನ
ಮಾರ್ಕಂಡೇಯ
ವರಾಹ
ಕೂರ್ಮ
ಮತ್ಸ್ಯ
ಗರುಡ ಪುರಾಣ
ಗರುಡ ಪುರಾಣವು ಹಿಂದೂ ಧರ್ಮದ ಪುರಾಣಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿದೆ.
ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ. ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು.
ಗರುಡನು ಹಿಂದೂಧರ್ಮದಲ್ಲಿ ವಿಷ್ಣುವಿನ ವಾಹನವಾದ ದೇವತೆ. ಇವನು ವಿನತೆಯ ಮಗ.
ಗರುಡ ಪುರಾಣಲ್ಲಿ ಎಂತ ಹೇಳುತ್ತು ?!
ಗರುಡ ಪುರಾಣಲ್ಲಿ ಎಂತ ಹೇಳುತ್ತು ಹೇಳೇಕ್ಕಾರೆ ಅದರ ಓದಿ ನೋಡಿರೆ ಅಲ್ಲದೋ ಗೊಂತಪ್ಪದು!.
ಮದಲಿಂದಲೇ ಅದೊಂದು ಮಾತೋ.. ಕ್ರಮವೋ.. ಎಂತ ಮಣ್ಣೋ .. – ಗರುಡ ಪುರಾಣ ಅಂತೇ ಓದ್ಲಾಗ! . ಈ ಓದ್ಲಾಗದ ಪುರಾಣ ಇಪ್ಪದಾದರೂ ಎಂತಕ್ಕಪ್ಪ! ಮತ್ತೂ ಒತ್ತಾಯ ಮಾಡಿ ಕೇಳಿರೆ ಅದು ಸತ್ತ ಮನೇಲಿ ಓದುತ್ತ ಕ್ರಮ!! – ಆರು ಹೇಳಿದ್ದೋ ಉಮ್ಮ.. ಅವಕ್ಕೂ ಅರಡಿಯ. ಇರ್ಲಿ ಬಿಡಿ.
(‘ಅಂತೇ ಓದ್ಲಾಗದ್ರೆ ಎನಗಿಷ್ಟು ದಕ್ಷಿಣೆ ಕೊಟ್ಟು ಓದಿ’ ಹೇಳುಗು ನೆಗೆಮಾಣಿ!. ಬಿಡಿ).
ಸತ್ಯಕ್ಕಾರು, ಈ ಓದ್ಲಾಗ ಹೇಳಿ ಸುರುವಾದ್ದು ಯಾವ ಕಾಲಂದ ಹೇಳಿ ನವಗರಡಿಯ. ಕೇಳಿರೆ – ಮದಲಿಂದಲೇ ! ಅದೂ ಇರ್ಲಿ ಬಿಡಿ.
ಬರೇ ಓದ್ಲಾಗ ಹೇಳಿ ಮಾಂತ್ರ ಅಲ್ಲ ಕೆಲವು ಜೆನ ಗರುಡ ಪುರಾಣ ಪುಸ್ತಕವ ಮನೆಲಿ ಮಡಿಕ್ಕೊಂಬಲಾಗ ಹೇಳಿಯೂ ಗ್ರೇಶಿಯೊಂಡಿದ್ದವು !! – ಅದೂ ಇರ್ಲಿ ಬಿಡಿ.
ಯಾವುದೇ ಪುರಾಣವಾಗಲಿ, ಗ್ರಂಥವಾಗಲಿ - ಅದು ಅತ್ಯಮೂಲ್ಯ ಸಾಹಿತ್ಯವನ್ನೂ ಅರ್ಥವನ್ನೂ ಸೂಕ್ಷ್ಮರೂಪಲ್ಲಿ ಹೊಂದಿಪ್ಪದು. ಅದರ ಆಳ ಚಿಂತನೆ ಮಾಡಿದಷ್ಟೂ ಆಳವೇ ಹಾಂಗೂ ವಿಶಾಲವೇ. ಬರೇ ಸಾಮಾನ್ಯ ಜ್ಞಾನಂದ ಅದರ ಅರ್ತು ಜೀರ್ಣಿಸಿಗೊಂಬಲೆ ರಜ ಕಷ್ಟವೇ. ಅಷ್ಟಪ್ಪಗ ಊಹಾತ್ಮಕ ಚಿಂತನೆಗೊ ಪ್ರಾರಂಭ ಆವ್ತು. ವಿಷಯ ಎಲ್ಲಿಂದ ಎಲ್ಲಿಗೋ ಹೇಗಿ ಏನಕ್ಕೇನೋ ಅರ್ಥಂಗಳೂ ವಿವರಣೆಗಳೂ ಸೃಷ್ಟಿಯಾವ್ತು. ಅದರ ನಿಜ ಮೌಲ್ಯ ಕಳಕ್ಕೊಳ್ಳುತ್ತು. ಹೀಂಗಿರ್ಸು ಅಪ್ಪಲಾಗ, ಬೇಕಾಬೇಕಿ ಅದರ ಓದಲಾಗ ಹೇಳಿ ತಡೆ ನಾವೇ (ನಮ್ಮ ಪೂರ್ವಜರು ಸಹಿತ) ಹಾಕಿಗೊಂಡದ್ದಾದಿಕ್ಕೋ? – ಆದಿಪ್ಪಲೂ ಸಾಕು. ಇರ್ಲಿ ಬಿಡಿ.
ಗರುಡ ಪುರಾಣ ಓದ್ಲಾಗ., ಅದು ಸಾವಿನ ಮನೆಲಿ ಓದುಸ್ಸು. ಅದೆಂತಕೋ ಹಾಂಗೆ?! – ಇರ್ಲಿ ಬಿಡಿ.
ಗರುಡ ಪುರಾಣಲ್ಲಿ ಮನುಷ್ಯ ಜೀವನದ ಮತ್ತೆ ಸಾವಿನ ನಂತರದ ವಿಚಾರಂಗೊ ಹೇಳಲ್ಪಟ್ಟಿದು. ಧರ್ಮ ಅರ್ಥ ಕಾಮ ಮೋಕ್ಷ ಹೇಳ್ವ ಈ ನಾಲ್ಕು ವಿಧ ಪುರುಷಾರ್ಥ ಜೀವನಲ್ಲಿ ಸುರುವಾಣ ಮೂರು ಸಾಂಸರಿಕ ಜೀವನಲ್ಲಿ ಅನುಭವಿಸಿ ಮುಂದೆ ಸಂನ್ಯಾಸ ಸ್ವೀಕರಿಸಿ ಮೋಕ್ಷ ಸಾಧನೆ ಮಾಡೇಕ್ಕಪ್ಪದು. ಗರುಡ ಪುರಾಣವ ಅದರ ಆಳವಾಗಿ ಚಿಂತನೆ ಮಾಡಿರೆ ಈ ಜೀವನಲ್ಲಿ ಜಿಗುಪ್ಸೆ, ವೈರಾಗ್ಯ ಬಪ್ಪಲೆ ಸಾಧ್ಯತೆ ಇದ್ದು. ಇದರಿಂದ ಸಾಂಸಾರಿಕ ಜೀವನಲ್ಲಿ ಮಾಡೇಕ್ಕಪ್ಪ ಕರ್ತವ್ಯದ ಚ್ಯುತಿಗೆ ಬಲಿಯಪ್ಪ ಸಾಧ್ಯತೆ ಇದ್ದು ಹೇಳಿ ಕೆಲವರ ವಾದ. ಆಗಿಪ್ಪಲೂ ಸಾಕು – ಅದೂ ಇರ್ಲಿ ಬಿಡಿ.
ಹಾಂಗಾರೆ ಗರುಡ ಪುರಾಣ ಒದ್ಲೇ ಆಗ ಹೇದು ಏನೂ ಇಲ್ಲೆ ಹೇಳಿ ಆತಪ್ಪೋ!. ನಾವು ಮದಾಲು ಯಾವುದೇ ವಿಷಯವ ಜ್ಞಾನದ ದೃಷ್ಟಿಂದ ಓದೆಕು. ಮತ್ತೆ ಅದರ ಬುದ್ಧಿಪೂರ್ವಕವಾಗಿ ಚಿಂತನೆ ಮಾಡಿಕ್ಕಿ ಪ್ರಯೋಗದ ಬಗ್ಗೆ ನಿರ್ಧರಿಸೆಕು.
ನಿಂಗೊಗೆ ಗರುಡ ಪುರಾಣ ವಿಷಯ ಗೊಂತಿಪ್ಪಲೂ ಸಾಕು, ಆದರೆ ಎನಗರಡಿಯ ಇದಾ. ಹಾಂಗಾಗಿ ಒಂದರಿ ಓದಿ ನೋಡಿಕ್ಕಿವೋ° ಹೇಳಿ ಕಂಡತ್ತು. ನವಗೆ ಗೊಂತಾದ ವಿಷಯವ ನಾಕು ಜೆನಕ್ಕೆ ಗೊಂತುಮಾಡುಸದ್ರೆ ನವಗೆ ಒರಕ್ಕೂ ಬಾರ ಇದಾ. ಹಾಂಗೆ ಓದಿಗೊಂಡು ಹೋದಾಂಗೆ ಬೈಲಿಂಗೂ ಬರದು ತಿಳಿಶಿಕ್ಕುವೋ° ಹೇಳಿ ನಿಂಗಳ ಎದುರು ಬಂದು ಕೂಯ್ದೆ ಇದಾ.
ಅದಕ್ಕೆ ಮದಾಲು ಇದರ ಓದಲಕ್ಕೋ ಆಗದೋ ಹೇಳ್ತ ಜಿಜ್ಞಾಸೆ ನವಗೂ ಅಡ್ಡಿ ಆತು. ಹಾಂಗಾಗಿ ಪುಸ್ತಕದ ಅಕೇರಿಯಾಣ ಪುಟವ ಬಿಡಿಸಿ ಮದಾಲು ನೋಡಿಗೊಂಡಪ್ಪಗ ಕಂಡತ್ತು -
ಪ್ರಜ್ಞಾಹೀನಸ್ಯ ಪಠನಂ ಯಥಾಂಧಸ್ಯ ಚ ದರ್ಪಣಮ್ ।
ಅತಃ ಪ್ರಜ್ಞಾವತಾಂ ಶಾಸ್ತ್ರಂ ತತ್ತ್ವಜ್ಞಾನಸ್ಯ ಲಕ್ಷಣಮ್ ॥
ಅತಃ ಪ್ರಜ್ಞಾವತಾಂ ಶಾಸ್ತ್ರಂ ತತ್ತ್ವಜ್ಞಾನಸ್ಯ ಲಕ್ಷಣಮ್ ॥
(ಬುದ್ಧಿಹೀನಂಗೆ ಓದುವದು ಕುರುಡಂಗೆ ಕನ್ನಾಟಿ ಇಪ್ಪಾಂಗೆ ಆವ್ತು. ಹಾಂಗಾಗಿ ಪ್ರಜ್ಞಾವಂತರಿಂಗೆ ಶಾಸ್ತ್ರಂಗಳೂ, ತತ್ತ್ವಜ್ಞಾನ ನಿರ್ದೇಶಕಂಗೊ ಇಪ್ಪದು) - ಈ ವಿಷಯ ಎಲ್ಲಿಗೆ ಎತ್ತಿತ್ತು ಹೇಳಿರೆ ಅರ್ಥೈಸಿಗೊಂಬ ಶಕ್ತಿ ಇಲ್ಲದ್ದೆ ಓದಿರೆ, ತಥಾಕಲ್ಪಿತ ಅಸಮ್ಮತ ವ್ಯಾಖ್ಯಾನಕ್ಕೆ ಕಾರಣ ಆವ್ತು ಹೇಳ್ತ ಆರೋಪ ಸರಿ ಹೇಳಿ ಕಾಣ್ತು.
ಫಲಶ್ರುತಿಲಿ ಭಗವಂತ° ಹೇಳ್ತ° -
ಪುರಾಣಂ ಗಾರುಡಂ ಪುಣ್ಯಂ ಪವಿತ್ರಂ ಪಾಪನಾಶನಮ್ ।
ಶೃಣ್ವತಾಂ ಕಾಮನಾಪೂರಂ ಶ್ರೋತವ್ಯಂ ಸರ್ವದೈವ ಹಿ ॥
ಶೃಣ್ವತಾಂ ಕಾಮನಾಪೂರಂ ಶ್ರೋತವ್ಯಂ ಸರ್ವದೈವ ಹಿ ॥
(ಈ ಗರುಡ ಪುರಾಣ ಪುಣ್ಯಕರವೂ ಪವಿತ್ರವೂ ಪಾಪನಾಶಕವೂ ಆಗಿದ್ದು. ಇದರ ಕೇಳಿದವನ ಇಚ್ಛೆ ಪೂರೈಸಲ್ಪಡುತ್ತು. ಹಾಂಗಾಗಿ ಇದರ ಏವಾಗಳೂ ಕೇಳೆಕು) – ಹೇಳ್ವಲ್ಯಂಗೆ ಗರುಡಪುರಾಣ ‘ಓದ್ಲಾಗ ‘ಹೇಳ್ವ ಮಾತಿನ ಅರ್ಥ ಬೇರೆಯೇ ಏನೋ ಇದ್ದು. ಗರುಡಪುರಾಣವೂ ಓದಿ ಅರ್ಥೈಸತಕ್ಕುದಾದ್ದೇ ಆಗಿದ್ದು ಹೇಳ್ವಲ್ಲಿ ಸಂಶಯವೇ ಇಲ್ಲೆ. ಪಿತೃಗೊಕ್ಕೆ ಮುಕ್ತಿಪ್ರದಾಯಕವಾದ, ಪುತ್ರವಿಷಯಕ ಅಭಿಲಾಷೆಗಳ ಪೂರ್ಣಗೊಳುಸುವ, ಇಹ-ಪರಲೋಕಂಗಳಲ್ಲಿ ಸುಖ ಪ್ರದಾನಿಯಾದ ಈ ಗರುಡ ಪುರಾಣವ ಆರು ಶ್ರವಣ ಮಾಡುತ್ತವೋ, ಶ್ರವಣ ಮಾಡುಸುತ್ತವೋ ಅವರಿಬ್ಬರ ಪಾಪಂಗಳೂ ತೊಳದು ಹೋವ್ತು, ಸದ್ಗತಿ ಪ್ರಾಪ್ತಿಯಾವ್ತು. ಹಾಂಗಾಗಿ ಸಮಸ್ತ ದುಃಖ ವಿನಾಶ ಮಾಡುವ, ಧರ್ಮ ಅರ್ಥ ಕಾಮ ಮೋಕ್ಷ ಈ ಚತುರ್ವಿಧ ಪುರುಷಾರ್ಥಂಗಳ ಸಾಧುಸುವಲ್ಲಿ ಸಹಕಾರಿಯಾದ ಈ ಗರುಡಪುರಾಣ ಪ್ರೇತಕಲ್ಪವ (= ಗರುಡ ಪುರಾಣ ಉತ್ತರ ಖಂಡ = ಪುರಾಣ ಸಾರೋದ್ಧಾರ) ಎಲ್ಲರು ಅಗತ್ಯ ಶ್ರವಣ ಮಾಡೇಕ್ಕಾದ್ದೇ ಹೇದು ಫಲಶ್ರುತಿ. ಗರುಡ ಪುರಾಣ ಮನುಷ್ಯನ ದುಃಖವ ದೂರ ಮಾಡುವ ಅಮೂಲ್ಯ ಗ್ರಂಥ. ಹಾಂಗಾಗಿ ಇದು ಸಾವಿನ ದುಃಖವ ನಿವಾರುಸಲೆ ಬೇಕಾಗಿ ಕುಟುಂಬದೋರಿಂಗೆ ಓದುಸೋದು ಹೇಳಿ ಒಂದು ಅರ್ಥಶೂನ್ಯ ವಾದ. ದುಃಖ ಬಪ್ಪದು ಅಜ್ಞಾನಂದ. ಹಾಂಗಾಗಿ ಇದು ಜ್ಞಾನಕ್ಕಾಗಿ ಇಪ್ಪ ಅಮೂಲ್ಯ ಗ್ರಂಥ ಹೇಳಿಯೇ ತಿಳಿಯೆಕು. ಬಾಕಿದ್ದ ವಿವರಂಗಳ ಆಯಾ ಸಂದರ್ಭಲ್ಲಿ ಓದಿಗೊಂಬೊ.
ಮಾನವನ ಇತಿಹಾಸಲ್ಲಿ ಯಕ್ಷಪ್ರಶ್ನೆಯಾಗಿ ಒಳುಕ್ಕೊಂಡಿಪ್ಪದು ಹುಟ್ಟು ಸಾವುಗೊ. ಹುಟ್ಟಿನ ಹಿಂದೆ ಎಂತರ, ಸಾವಿನ ಮುಂದೆ ಎಂತರ ಹೇಳ್ವದರ ಇದಮಿತ್ಥಂ ಹೇದು ಹೇಳ್ತೋರು ಆರೂ ಇಲ್ಲೆ. ಒಬ್ಬೊಬ್ಬ° ವೇದಾಂತಿಯೂ ಒಂದೊಂದು ರೀತಿಲಿ ತೀರ್ಮಾನವ ಹೇಳಿದ್ದರ ನಾವು ಅಪ್ಪು ಹೇಳಿ ನಂಬಿಗೊಂಡು ಹೋಪದಷ್ಟೆ. ಇದು ಪ್ರತ್ಯಕ್ಷಕ್ಕೆ ಅನುಭವಕ್ಕೆ ಸಿಕ್ಕುತ್ತಿಲ್ಲೆ. ಅನುಮಾನಂದ ನಿರ್ಧರುಸುವ ಸುಲಭ ವಿಷಯವೂ ಅಲ್ಲ. ಹಾಂಗಾಗಿ ಈ ಹುಟ್ಟು ಸಾವುಗಳ ಅಭೇದ್ಯ ಸಮಸ್ಯೆಯ ಉತ್ತರಕ್ಕೆ ಜಿಜ್ಞಾಸುಗೊ ಆಗಮ ಶಾಸ್ತ್ರಂಗಳನ್ನೇ ನಂಬಿದ್ದವು. ವೇದಾರ್ಥ ತತ್ವಸಾರವ ನೀಡುವದು ಪುರಾಣಂಗೊ. ಸಾಕ್ಷಾತ್ ನಾರಾಯಣಾವತಾರವಾದ ಶ್ರೀ ವೇದವ್ಯಾಸರೇ ಇವುಗಳ ಕರ್ತೃ ಹೇಳ್ವದು ಆಸ್ತೀಕ ಮತ. ಹೀಂಗೆ ಹದಿನೆಂಟು ಪುರಾಣಂಗಳಲ್ಲಿ (ಪ್ರಧಾನ ಪುರಾಣಂಗೊ ಹದಿನೆಂಟು + ಉಪಪುರಾಣಂಗೊ ನಾಲ್ಕು) ಗರುಡ ಪುರಾಣವೂ ಒಂದು.
ಮನುಷ್ಯ° / ಜೀವಿ ಈ ಲೋಕವ ಬಿಟ್ಟಮತ್ತೆ ತನ್ನ ಪರಲೋಕದ ಜೀವನವ ಯಾವ ಪ್ರಕಾರ ಸುಖ-ಸಮೃದ್ಧ ಹಾಂಗೂ ಶಾಂತಿಪ್ರದವಾಗಿ ಮಾಡ್ಳಕ್ಕು ಮತ್ತೆ ಮರಣಾನಂತರ ಆ ಜೀವಿಯ ಉದ್ಧಾರಕ್ಕಾಗಿ ಅವನ ಪುತ್ರಾದಿ ಕುಟುಂಬದೋರ ಕರ್ತವ್ಯ ಎಂತರ ಹೇಳ್ವ ವಿಚಾರ ಗರುಡ ಪುರಾಣಲ್ಲಿ ಇದ್ದು.
ಭಕ್ತನಾದ ಗರುಡಂಗೆ ಶ್ರೀಮನ್ನಾರಯಣ ಪ್ರೇಮಪುರಸ್ಸರವಾಗಿ ಹೇಳಿದ ಪುರಾಣ ಇದು. ಹಾಗಾಗಿ ಇದಕ್ಕೆ ಪ್ರಮಾಣ ಗ್ರಂಥ ಹೇದು ಹೆಸರು. ಸಕಲ ವೇದ ಶಾಸ್ತ್ರ ಪುರಾಣ ಇತಿಹಾಸಂಗಳ ಸಾರವಾದ ಗರುಡ ಪುರಾಣಲ್ಲಿ, ಪೂರ್ವಖಂಡ ಮತ್ತೆ ಉತ್ತರ ಖಂಡ ಹೇಳಿ ಎರಡು ಭಾಗ. ಪೂರ್ವ ಖಂಡಲ್ಲಿ ಒಟ್ಟು 229 ಅಧ್ಯಾಯಂಗೊ (8800 ಶ್ಲೋಕಂಗೊ) – ಅಗಸ್ತ್ಯ ಸಂಹಿತೆ, ಬೃಹಸ್ಪತಿ ಸಂಹಿತೆ ಮತ್ತೆ ಧನ್ವಂತರಿ ಸಂಹಿತೆಗೊ. ಅವುಗಳಲ್ಲಿ ದೇವಪೂಜಾವಿಧಿಗೊ, ದಾನ, ವ್ರತ, ನೀತಿ, ವ್ಯಾಕರಣ, ಮಂತ್ರ, ರಕ್ಷೆಗೊ, ಔಷಧಿಗೊ, ಸಾಮುದ್ರಿಕ ಶಾಸ್ತ್ರ, ನವರತ್ನಂಗೊ .. ಇತ್ಯಾದಿ ವಿಷಯಂಗೊ. ಮತ್ತೆ ಉತ್ತರ ಖಂಡಲ್ಲಿ 35 ಅಧ್ಯಾಯಂಗೊ (1280 ಶ್ಲೋಕಂಗೊ) ಜೀವಿಯ ಮರಣಾನಂತರದ ಗತಿಯ ನಿರೂಪಣೆ, ಪಾಪ ಪುಣ್ಯಂಗಳ ಫಲಂಗಳ ವಿವರಣೆ, ಮತ್ತೆ ಮನುಷ್ಯಂಗೆ ಪ್ರೇತತ್ವ ತಪ್ಪುಸುವ ಅಪರ ಕರ್ಮಂಗಳ ಸಂಕ್ಷೇಪ ವಿಷಯಂಗೊ ಅಡಕವಾಗಿಪ್ಪದು. ಗರುಡ ಪುರಾಣದ ಈ ಭಾಗಕ್ಕೆ ‘ಪ್ರೇತಕಲ್ಪ’ ಹೇಳಿಯೂ ಹೆಸರಿದ್ದು. ಇಡೀ ಗರುಡ ಪುರಾಣ ಭಗವಾನ್ ವೇದವ್ಯಾಸರಿಂದ ರಚಿತವಾದ್ದು. ಇದಕ್ಕೆ (ಈ ಗರುಡ ಪುರಾಣ ಉತ್ತರ ಖಂಡಕ್ಕೆ) ‘ಪುರಾಣ ಸಾರೋದ್ಧಾರ’ ಅಥವಾ ‘ಸಾರೋದ್ಧಾರ’ ಹೇಳಿಯೂ ಹೆಸರಿದ್ದು. ಧರ್ಮದ ಸಕಲ ತತ್ತ್ವಂಗಳೂ ಈ ಪುರಾಣಲ್ಲಿ ಕ್ರೋಢೀಕೃತವಾಗಿದ್ದು. ಗರುಡಲ್ಲಿ ಪ್ರತ್ಯೇಕವಾಗಿ ಇಂತದ್ದು ಹೇಳಿ ಹೊಸ ವಿಷಯಂಗ ಇಲ್ಲೆ. ವೇದ ಅರ್ಥಂಗ ಅಷ್ಟಾದಶ ಪುರಾಣಲ್ಲಿ ಬೇರೆ ಬೇರೆ ಆಯಾಮಲ್ಲಿ ವಿವರಿಸಿದ್ದದು. ಹಾಂಗೇ ಗರುಡ ಪುರಾಣಲ್ಲಿ ಬಪ್ಪಂತ ವಿಷಯಂಗ ಭಾಗವತ ಹಾಂಗೂ ಇತರ ಪುರಾಣಂಗಳಲ್ಲಿ ಮತ್ತು ಭಗವದ್ಗೀತೆಲಿ ಹೇಳಿದ ಆಶಯಂಗಳೇ. ಇಲ್ಲಿ ಬಂದಂತಹ ವಿಚಾರಂಗೊ ಭಗವಂತ° ಇತರ ಭಾಗಲ್ಲಿ ಹೇಳಿದ ವಿಚಾರಂಗಳೇ. ಇತರ ಪುರಾಣಂಗಳಲ್ಲಿ ಇಪ್ಪವ ಸಾರವ ಇಲ್ಲಿ ಹೇಳಿಪ್ಪದರಿಂದ ಇದಕ್ಕೆ ಪುರಾಣ ಸಾರೋದ್ಧಾರ ಹೇಳಿ ಹೆಸರು. ಹಾಂಗಾಗಿ ಇದಕ್ಕೆ ವಿಷ್ಣುಭಕ್ತರಾಗಲಿ, ಶಿವಭಕ್ತರಾಗಲಿ, ಶಕ್ತಿ ಆರಾಧಕರಾಗಿರಲಿ ಅಥವಾ ಇನ್ಯಾವುದೇ ಪೂಜಕರಾಗಿರಲಿ, ಎಲ್ಲೋರಿಂಗೂ ಇದು ಪೂಜ್ಯ ಮತ್ತೆ ಉಪಯುಕ್ತ. ಇಲ್ಲಿ ನಿರೂಪಿತವಾಗಿಪ್ಪ ದೇವರು ಸಾಕ್ಷಾತ್ ಆ ಶ್ರೀಮನ್ನಾರಯಣನಾದ ಭಗವಂತನೆ. ದೇವರ ನಂಬದ್ದರೂ, ನೀತಿಯುತ ಜೀವನವ ಗೌರವಿಸುವಲ್ಲಿ ಇದು ಉಪಯುಕ್ತ ಗ್ರಂಥ ಹೇಳಿ ವಿಮರ್ಶಕರು ಹೇಳಿದ್ದವು.
ಜೀವಾತ್ಮವು (ಮನುಷ್ಯ°) ಸ್ಥೂಲ ಶರೀರವ ಬಿಟ್ಟಮತ್ತೆ (ಮರಣಾನಂತರ) ಸೂಕ್ಷ್ಮ ದೇಹವ ಹೊಂದಿ (ಪ್ರೇತತ್ವ) ಹತ್ತು ದಿನ ಮರಣ ಹೊಂದಿದ ಮನೆ ಹತ್ರೆವೇ ಇದ್ದು ಬಂಧುಮಿತ್ರರು ಮಾಡುವ ಎಲ್ಲ ಕಾರ್ಯಂಗಳನ್ನೂ ನೋಡ್ಯೊಂಡು ಕೇಳ್ಯೊಂಡು ಇರ್ತು. ಆ ಸಮಯಲ್ಲಿ ಗರುಡ ಪುರಾಣ ಪಾರಾಯಣ ಮಾಡುವದರಿಂದ ಮೃತ ವ್ಯಕ್ತಿಗೂ ಪುಣ್ಯ ಮತ್ತು ಮನೆಯವಕ್ಕೂ ಪುಣ್ಯ ಲಭಿಸುತ್ತು.
ವಿಚಾರಪೂರ್ಣವಾಗಿಯೂ, ವೈಜ್ಞಾನಿಕವಾಗಿಯೂ, ಕಾವ್ಯದೃಷ್ಟಿಂದಲೂ, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, ಮನಃಶಾಸ್ತ್ರ ದೃಷ್ಟಿಂದಲೂ ಗರುಡಪುರಾಣ ಅಮೂಲ್ಯವಾಗಿದ್ದು ಹೇಳಿ ವಿಮರ್ಶಕರ ಅಭಿಪ್ರಾಯ.
ಸಾವಿನ ಆಚಿಗಾಣ ಜೀವನದ ಬಗ್ಗೆ ಗರುಡಪುರಾಣ ವಿವರವ ನೀಡುತ್ತು . ಗರುಡ ಪುರಾಣಲ್ಲಿ ದೇಹತ್ಯಾಗ ಮಾಡಿದ ‘ಆತ್ಮ’ದ ಸಂಚಾರವ ತನ್ನ ಗುರಿ ಮುಟ್ಟುತ್ತವರೇಂಗೆ ಇಪ್ಪ ವಿಚಾರಂಗೊ ವಿವರಿಸಲ್ಪಟ್ಟಿದು. ಅಬ್ಬೆ ಅಪ್ಪ ಗುರು ಹಿರಿಯರಲ್ಲಿ ಭಕ್ತಿ, ಜೀವನದ ವಿವಿಧ ಹಂತಂಗಳಲ್ಲಿ ಅನುಸರುಸೆಕ್ಕಾದ ನೀತಿ ಗರುಡಪುರಾಣಲ್ಲಿ ಉಲ್ಲೇಖವಾಗಿಪ್ಪದರಿಂದ ಇದು ಎಲ್ಲ ಸಮಯಲ್ಲೂ ಎಲ್ಲ ಮನೆಗಳಲ್ಲಿಯೂ ಓದೇಕ್ಕಾದ ಗ್ರಂಥ ಹೇಳಿ ವಿಮರ್ಶಕರ ನುಡಿ. ಮಾನವನ ಆಚಾರ ವಿಚಾರಂಗೊ, ಸತ್ಕರ್ಮ ದುಷ್ಕರ್ಮಂಗಳ ನಿರೂಪಣೆ ಅವುಗಳ ಫಲಂಗಳಾದ ಪುಣ್ಯಪಾಪಂಗಳ ಗತಿ, ಮಾತಾಪಿತೃಗೊಕ್ಕೆ ಮಕ್ಕೊ ಮಾಡೇಕ್ಕಪ್ಪ ಕಾರ್ಯಂಗೊ, ಸ್ಥೂಲ, ಸೂಕ್ಷ್ಮ ಇತ್ಯಾದಿ ದೇಹಂಗಳ ವಿವರಣೆ, ಪಾರಮಾರ್ಥಿಕ ತತ್ತ್ವಂಗಳ ಸರಳ ಪರಿಚಯ, ಸಾಕಾರ ನಿರಾಕಾರ ಬ್ರಹ್ಮನ ಅನುಸಂಧಾನ .. ಇವೆಲ್ಲ ಗರುಡಪುರಾಣಲ್ಲಿ ವಿವರಿಸಲ್ಪಟ್ಟ ಮುಖ್ಯ ಸಂಗತಿಗೊ.
‘ಗರುಡ ಪುರಾಣ -ಸಾರೋದ್ಧಾರ’ದ ಶ್ರವಣ ಮತ್ತೆ ಪಠನೆಂದ ಸಹಜವಾಗಿಯೇ ಪುಣ್ಯಲಾಭ, ಅಂತಃಕರಣದ ಪರಿಶುದ್ಧಿ., ಮತ್ತೆ , ಭಗವಂತನಲ್ಲಿ ಆಸಕ್ತಿ ಹಾಂಗೂ ಲೌಕಿಕ ವಸ್ತು ಭೋಗ ವಿಷಯಂಗಳಲ್ಲಿ ವಿರಕ್ತಿ ಆಗಿ ಹೋಪಲೆ ಸಾಧ್ಯ ಆವ್ತು. ಇದರಿಂದ ಮನಸ್ಸು ಶುಭ್ರವಾಗಿ ತನ್ನ ಉದ್ಧಾರಕ್ಕಾಗಿ ಎಂತ ಮಾಡೆಕ್ಕು ಹೇಳ್ವದರ ಬಗ್ಗೆ ಚಿಂತನೆ ಮಾಡ್ಳೆ ಒಳ್ಳೆ ಅವಕಾಶ ಇದ್ದು. ವ್ಯಕ್ತಿಗೆ ಇಹ-ಪರ ಲೋಕದ ಹಾನಿ ಲಾಭದ ಯಥಾರ್ಥ ಜ್ಞಾನವು / ಪರಿಚಯವು ಸಿಕ್ಕಿ ತನ್ನ ಕರ್ತವ್ಯದ ಬಗ್ಗೆ ಜಾಗೃತಿ ಮೂಡ್ಳೆ ಸಹಾಯಕ ಆವ್ತು. ಯಾವುದೇ ವೇದ, ಶಾಸ್ತ್ರ, ಪುರಾಣವಾಗಲಿ ಅದರ ಬರೇ ಓದುವ ಹವ್ಯಾಸಂದ ಓದಿರೆ ಬರೇ ಸಾಹಿತ್ಯ ಜ್ಞಾನ ಮಾತ್ರ ಸಿಕ್ಕುಗಷ್ಟೆ. ಅದರಲ್ಲಿ ಭಕ್ತಿ, ನಂಬಿಕೆ ವಿಶ್ವಾಸ ಮಡಿಕ್ಕೊಂಡು ಓದಿ ತಿಳಿವ ಮನಸ್ಸಿಂದ ಓದಿರೆ ತನ್ನ ಯಶಸ್ಸಿಂಗೆ ಉತ್ತಮ ಒಂದು ಮಾರ್ಗ ಸಾಧನ ಆವ್ತು.
ಗರುಡ° ಹೇಳಿರೆ ಒಂದು ಮಹಾ ಅದ್ಭುತ ಶಕ್ತಿ. ಅಂವ° ಸ್ವರ್ಗಂದ ಭೂಲೋಕಕ್ಕೆ ಅಮೃತವ ತಂದ ಮಹಾ ವೈದ್ಯ. ಈ ಅಮೃತ ದೇಹ ಮನಸ್ಸುಗಳ ಕಾಯಿಲೆಗೊಕ್ಕೆ ಇಪ್ಪದು ಅಲ್ಲ, ಅದು ಅಮರತ್ವವ ಪಡವ ಜ್ಞಾನಾಮೃತ. ಚೂಪಾದ ಕೊಕ್ಕು ಇಪ್ಪ ಗರುಡ° ಏಕಾಗ್ರದೃಷ್ಟಿಯ, ನಾಸಿಕಾಗ್ರಲ್ಲಿ ಏಕಾಗ್ರದೃಷ್ಟಿಯ ಮಡಿಕ್ಕೊಂಡು ಧ್ಯಾನ ಮಾಡುವ ಯೋಗಿಯ ಸಂಕೇತ. ಅತೀ ಎತ್ತರಕ್ಕೆ ಹಾರುವ ಪಕ್ಷಿಯಾದ ಅಂವ° ಮಾನವರಲ್ಲೇ ಅತೀ ಉನ್ನತ ಮಟ್ಟಲ್ಲಿ ಯೋಚಿಸುವ ಜ್ಞಾನಿಯ ಸಂಕೇತ, ಭಗವಂತನ ದರ್ಶನ, ಸ್ಪರ್ಶನ, ಸಂಭಾಷಣ, ಸಹಚರಣ ಮಾಡ್ಯೊಂಡು ಅವನನ್ನೇ ಏವತ್ತೂ ಹೊತ್ತೊಂಡಿಪ್ಪ ಗರುಡ° ಭಗವಂತನನ್ನೇ ಪವಿತ್ರ ಮನಸ್ಸಿನ ಮತ್ತೆ ಬ್ರಹ್ಮ ಕರ್ಮ ಸಂಯೋಜನೆ ಮಾಡುವ ಮಹಾಭಕ್ತನ ಸಂಕೇತ, ಚಂದ್ರಲೋಕಂದ ಅಮೃತವ ತಂದ ಗರುಡ° ಪ್ರಶಾಂತ ಪ್ರಕಾಶಸ್ವರೂಪ°, ಹುಟ್ಟು ಸಾವುಗಳ ದೂರ ಮಾಡುವ ಜ್ಞಾನದ ಸಂಕೇತ, ಭವ ಬಂಧನದ ದಾಸ್ಯಂದ ಬಿಡುಗಡೆಗೊಳುಸುವ ಸಂಕೇತ, ಸರ್ಪಂಗಳ ದಾಸ್ಯಂದ ತನ್ನಬ್ಬೆಯ ಬಿಡುಗಡೆ ಗೊಳುಸಿದ ಗರುಡ ಸರ್ವವಿಷಾಪಹಾರಿ ಜ್ಞಾನಾಮೃತದ ಸಂಕೇತ ಹೇದು ತಿಳುದೋರು ಹೇಳಿದ್ದದು.
ಗರುಡಪುರಾಣಲ್ಲಿ ಮರಣಾನಂತರ ಜೀವಿಯು ಏವ ಏವ ಅವಸ್ಥೆಗಳ ಹೊಂದುತ್ತ° ಹೇಳ್ವ ವಿಷಯಂಗಳ ಕೂಲಂಕುಷವಾಗಿ ವಿಚಾರ ಮಾಡಿದ್ದು. ಧರ್ಮ, ನಿಷ್ಠೆ, ಸತ್ಯದ ಬಲಂಗಳಿಂದ ಮರಣವನ್ನೂ ಜಯಿಸಲೆಡಿಗು. ಹೇಳಿರೆ., ಆತ್ಮವು ಸೃಷ್ಟಿಕರ್ತನಲ್ಲಿ ಐಕ್ಯವಾಗಿ ಜನ್ಮರಹಿತ ಮೋಕ್ಷವ ಪಡವಲೆ ಎಡಿಗು ಹೇಳಿ ಪಂಡಿತಕ್ಕಳ ಅಂಬೋಣ. ಹಾಂಗಾಗಿ ಮರಣಾನಂತರ ಅನೇಕ ಕರ್ಮಾಂಗಗಳ ಕಟ್ಟುನಿಟ್ಟಾಗಿ ಆಚರುಸೆಕ್ಕಾದ್ದು ಅಗತ್ಯ. ಮೋಕ್ಷ, ಸಾಧನೆ ಇಲ್ಲದ್ದೆ ಸಿಕ್ಕುತ್ತ ಹಾಂಗಿರ್ಸು ಅಲ್ಲ. ಪುರಾಣಂಗೊ ಹೇಳಿದ ಆಚರಣೆಗೊ ಮೃತ° ‘ಪುಣ್ಯ’ ಹೇಳ್ವ ಗುರಿಯ ಹೊಂದಲೆ ಇಪ್ಪ ಮೆಟ್ಳುಗೊ. “ಪಾಪವೇ ನರಕ, ಪುಣ್ಯವೇ ಸ್ವರ್ಗ”. ಇದು ಗರುಡಪುರಾಣದ ಅತೀ ಮುಖ್ಯ ಸಂದೇಶ.
ದೇಹದ ನಶ್ವರತೆಯನ್ನೂ ಆತ್ಮದ ಅಮರತ್ವವನ್ನೂ ಬೋಧುಸುವ ಈ ಗ್ರಂಥ, ವಿಯೋಗ ದುಃಖವನ್ನೂ, ಮರಣಭಯವನ್ನೂ ದೂರಮಾಡ್ಳೆ ಸಹಾಯಕ ಆವುತ್ತು. ಹಾಂಗಾಗಿ ಇದರ ಸಾವಿನ ಮನೆಲಿ ಓದೇಕ್ಕಪ್ಪದು ಹೇಳಿ ಮಾಡಿಗೊಂಡವು. ಆದರೆ ಯಥಾರ್ಥವಾಗಿ ವಿಯೋಗ ಸಮಯಲ್ಲಿ ಮಾಂತ್ರ ಅಲ್ಲ, ಇದು ಎಲ್ಲ ಸಮಯಲ್ಲಿಯೂ ಓದೇಕ್ಕಾದ ಗ್ರಂಥ ಹೇಳ್ವದು ತಿಳುದೋರ ಅಭಿಪ್ರಾಯ. ಮನುಷ್ಯ° ಬಾಲ್ಯ ಯೌವ್ವನ ಮತ್ತೆ ವೃದ್ಧಾಪ್ಯಲ್ಲಿ ಮಾಡುವ ಕೆಲಸಂಗಳಲ್ಲಿ ಏವುದು ಸರಿ, ಏವುದು ತಪ್ಪು ಹೇಳ್ವದರ ಗರುಡ ಪುರಾಣಲ್ಲಿ ಅನುಮಾನ ಇಲ್ಲದ್ದೆ ನಿಖರವಾಗಿ ಉಲ್ಲೇಖಿಸಲ್ಪಟ್ಟಿದು. ಈ ಬೋಧನೆಗಳ ಮುಪ್ಪಿಲ್ಲಿ ಕೇಳಿ ಪ್ರಯೋಜನ ಆದರೂ ಎಂತರ?!. ಅವುಗಳ ಅನುಷ್ಠಾನಕ್ಕೆ ತಪ್ಪಲೆ ಬೇಕಾದ ಜೀವನದ ಆಯಸ್ಸಿನ ಬಹುತೇಕ ಪ್ರಾಯವೇ ಕಳದು ಹೋಗಿರ್ತು. ಹಾಂಗಾಗಿ ಗರುಡಪುರಾಣದ ನೀತಿಯ ತಿಳಿಯೇಕ್ಕಾದ್ದು ಸಣ್ಣಪ್ರಾಯಲ್ಲಿಯೇ ಹೊರತು ದಂಟುಕುಟ್ಳೆ ಅಪ್ಪಗ ಅಲ್ಲ. ಮಕ್ಕಳ ಮನಸ್ಸಿಲ್ಲಿ ಗರುಡ ಪುರಾಣದ ಬೋಧನಾ ವಿಧಾನ ಜೀವನ ನೀತಿಯ ಬೇರೂರುಸುತ್ತು ಹೇಳ್ವದು ಪ್ರಾಜ್ಞರ ಅಭಿಪ್ರಾಯ.
ಜೀವನದ ಭವಿಷ್ಯವ ಸನ್ಮಾರ್ಗಲ್ಲಿ ರೂಪುಸಲೆ ಸಹಾಯಕವಪ್ಪ, ಸಾಧನಾಪಥಲ್ಲಿ ಉಪಯುಕ್ತವಪ್ಪ, ಮಾನವೀಯ ಮೌಲ್ಯಂಗಳ ಎತ್ತಿ ಹಿಡಿವ, ಮರಣಾನಂತರ ಜೀವಿಯ ಗತಿಯ ವಿವರುಸುವ ಈ ಗರುಡ ಪುರಾಣಲ್ಲಿ ಭಗವಂತ° ಗರುಡನ ಮೂಲಕ ನವಗೆ ಎಂತ ಹೇಳಿದ್ದ° ಹೇಳ್ವದರ ನಾವಿಲ್ಲಿ ಓದುವೋ°. ಗರುಡ ಪುರಾಣವ ಮೃತ ಸಂದರ್ಭಲ್ಲಿ ಓದುತ್ತರ/ಓದುಸುತ್ತರ ಬದಲು ಎಲ್ಲೋರು ಸಣ್ಣಪ್ರಾಯಂದಲೇ ಅಂಬಗಂಬಗ ಶ್ರವಣ / ಪಾರಾಯಣ ಮಾಡಿಗೊಂಡು ಹೋಗ್ಯೊಂಡಿದ್ದರೆ ಸದಾಚಾರ ಪ್ರವೃತ್ತಿ ಮನುಷ್ಯರಲ್ಲಿ ಇನ್ನೂ ಹೆಚ್ಚು ಉಳಿತ್ತಿತ್ತೋ ಏನೋ! ಹೇಳ್ವದು ವೈಯಕ್ತಿಕ ಅಭಿಪ್ರಾಯ. ಬಹುಶಃ ಕೆಲವು ಅಧ್ಯಾಯಂಗಳ ಓದಿದ ಮತ್ತೆ ನಿಂಗೊಗೂ ಹಾಂಗೇ ಅನುಸಲೂ ಸಾಕು.
ಇಲ್ಲಿ ಸಂಪೂರ್ಣ ಗರುಡ ಪುರಾಣವ ಬರೆತ್ತಿಲ್ಲೆ. ಸಾಮಾನ್ಯವಾಗಿ ನಮ್ಮಲ್ಲಿ ಪ್ರಚಲಿತ ಇಪ್ಪ ಪಾರಾಯಣದ ಭಾಗ, ಹೇಳಿರೆ , ಗರುಡ ಪುರಾಣದ ಉತ್ತರ ಖಂಡ = ಪ್ರೇತಕಾಂಡ (ಉತ್ತರಖಂಡ = ಸಕಲ ಶಾಸ್ತ್ರಂಗಳ ಸಾರ = ಪುರಾಣ ಸಾರೋದ್ಧಾರ)ವ ತೆಕ್ಕೊಂಡಿದು. [ಇಲ್ಲಿ ಬರವಲೆ ತೆಕ್ಕೊಂಡದು ಮೂಲ ಗರುಡ ಪುರಾಣ ಅಲ್ಲ. ಇದು ಸಾಮಾನ್ಯ ನಮ್ಮಲ್ಲಿ ಪ್ರಚಲಿತಲಿಪ್ಪ ಪಾರಾಯಣಕ್ಕೆ ಬಳಸುವ ಮೂಲ ಗರುಡಪುರಾಣಂದ ಭಟ್ಟಿ ಇಳಿಸಿದ ರೂಪ. ಮೂಲಗರುಡಪುರಾಣದ ಆಶಯವ ವಿದ್ವಾಂಸರು ಸಂಸ್ಕರಿಸಿ ಸುಲಭ ಪಾರಾಯಣಕ್ಕೆ ಅನುಕೂಲ ಅಪ್ಪಲೆ ಸಂಸ್ಕರಿಸಿ ಬರದ ಗರುಡಪುರಾಣ ಇದಾಗಿದ್ದು. ಮೂಲ ಗರುಡಪುರಾಣ ಬೇಕಾರೆ ಇಲ್ಲಿದ್ದು - ಇದರ್ಲಿ ಸುರುವಿಂದ ಅಕೇರಿವರೆಗೆ ವಿಸ್ತೃತವಾಗಿ ಇದ್ದು.]
ಸಾಹಿತ್ಯ ಶಿರೋಮಣಿ ಶ್ರೀಯುತ ಕುಳಮರ್ವ ವೆಂಕಪ್ಪ ಭಟ್ಟರು ಬರದ “ಪುನರ್ಜನ್ಮ – ಮರಣೋತ್ತರ ಜೀವನ” ಪುಸ್ತಕಲ್ಲಿ ಮರಣೋತ್ತರ ಜೀವನದ ಬಗ್ಗೆ ಬೇರೆ ಬೇರೆ ಪುರಾಣಂಗಳಲ್ಲಿ ಪ್ರತಿಪಾದಿತ ವಿಷಯಂಗಳ ಉದ್ಧರಿಸಿ ವ್ಯಾಖ್ಯಾನಿಸಿ ಅತಿ ಉಪಯುಕ್ತ ಮಾಹಿತಿಯ ನೀಡಿದ್ದವು. ನಾವೆಲ್ಲರೂ ನಿಶ್ಚಯವಾಗಿ ಆ ಪುಸ್ತಕವ ಓದಿ ವಿಷಯವ ತಿಳುಕ್ಕೊಳ್ಳೆಕು ಹೇಳ್ವ ಸದಾಶಯವ ಇಲ್ಲಿ ಹೇಳ್ಳೆ ಬಯಸುತ್ತೆ.
ಗರುಡಪುರಾಣ ಉತ್ತರಖಂಡಲ್ಲಿ ಹೇಳಿದ ಆ ಸಾರವ ಹೀರುವ ಪ್ರಯತ್ನ ಇಲ್ಲಿ ಮಾಡುವೋ°. ದೀರ್ಘ ವ್ಯಾಖ್ಯಾನಕ್ಕೆ ಹೋಗದ್ದೆ ಶ್ಲೋಕವನ್ನೂ ಶ್ಲೋಕಾರ್ಥವನ್ನು ಅರ್ಥೈಸಿಗೊಂಡು ಸರಳಾರ್ಥಲ್ಲಿ ಬರವಲೆ ಹೆರಡುವ ಕಾರ್ಯಕ್ಕೆ ನಿಂಗೊ ಎಲ್ಲೋರು ಪ್ರೋತ್ಸಾಹಿಸುತ್ತಿ ಹೇಳ್ವ ನಂಬಿಕೆಂದ ಎಲ್ಲೋರಿಂಗೂ ಉಪಯೋಗವಾಗಲಿ, ಎಲ್ಲೋರಿಂಗೂ ಒಳ್ಳೆದಾಗಲಿ ಹೇಳ್ವ ಸದಾಶಯಂದ ನಮ್ಮ ಆರಧ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಸ್ಮರಿಸಿಗೊಂಡು, ಎನ್ನ ಅಬ್ಬೆ ಅಪ್ಪ° ಕುಲಗುರು ಹಿರಿಯರ ನಂಬಿಗೊಂಡು, ನಿಂಗೊ ಎಲ್ಲೋರ ಅಶೀರ್ವಾದವ ಬೇಡಿಗೊಂಡು, ಅವಿಘ್ನಮಸ್ತು ಹೇಳಿ ವಿಘ್ನನಿವಾರಕನಾದ ಗಣಪತಿಯ ಮನಸಾ ಧ್ಯಾನಿಸಿ, ವಿದ್ಯಾವಾರಿಧಿ ಶಾರದೆಗೆ ನಮಿಸಿ, ಸರ್ವಶಕ್ತ ಭಗವಂತನ ಸೇವೆ ಹೇದು ಸಂಕಲ್ಪಿಸಿ, ‘ಶಾರದಮ್ಮ ಧಾರ್ಮಿಕ ಪ್ರಕಾಶನ’ದವರ ಮತ್ತು ‘ಶ್ರೀನಿಧಿ ಪಬ್ಲಿಕೇಶನ್’ನವರ ‘ಗರುಡ ಪುರಾಣ’, ಕುಳಮರ್ವ ವೆಂಕಪ್ಪ ಭಟ್ಟರ ‘ಪುನರ್ಜನ್ಮ’ ಪುಸ್ತಕಂಗಳ ಆಧಾರವಾಗಿ ಮಡಿಕ್ಕೊಂಡು ಬರವ ಈ ಗರುಡಪುರಾಣದ ಉತ್ತರಖಂಡ ಭಾಗವ ಕಂತು ಕಂತಾಗಿ ನಿಂಗಳ ಮುಂದೆ ಮಡುಗುತ್ತಾ ಇದ್ದೆ.
ಅಗ್ನಿ ಪುರಾಣ
ಅಗ್ನಿ ಪುರಾಣಹದಿನೆಂಟು ಪುರಾಣಗಳಲ್ಲಿ ಒಂದು.ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಈ ಪುರಾಣದಲ್ಲಿ ಕಾವ್ಯ,ನಾಟಕಗಳ ಲಕ್ಷಣಗಳು,ರಸವರ್ಣನೆಗಳು,ಮಂತ್ರ ಮತ್ತು ಮಂತ್ರವಿಧಾನಗಳು,ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ.ಇದರ ಹೆಚ್ಚಿನ ಭಾಗಗಳು ೮ನೇ ಶತಮಾನದಿಂದ ೧೧ನೇ ಶತಮಾನ ಅಂದಾಜಿನಲ್ಲಿ ರಚಿಸಲ್ಪಟ್ಟವು ಎಂದು ವಿದ್ವಾಂಸರ ಅಭಿಪ್ರಾಯ.
ನಾರದ ಪುರಾಣ
ನಾರದ ಪುರಾಣಅಥವಾ ನಾರದೀಯ ಪುರಾಣದಲ್ಲಿ ವೇದಾಂಗಗಳಾದ ಶಿಕ್ಷಾ,ವ್ಯಾಕರಾಣಾದಿಗಳ ವಿಚಾರ ಇತ್ಯಾದಿಗಳು ಬರುತ್ತವೆ.ಅನೇಕ ಕಥೆಗಳು ಹಾಗೂ ಉಪಕಥೆಗಳನ್ನು ಒಳಗೊಂಡ ಇದು ಸಂಸಾರಿಗಳಿಗೆ ಉಪಯುಕ್ತವಾದ ಹಲವಾರು ವಿಷಯಗಳನ್ನು ಒಳಗೊಂಡಿದೆ.ನಾರದ ಹಾಗೂ ಸನತ್ಕುಮಾರರ ನಡುವೆ ನಡೆದ ಸಂಭಾಷಣೆಯ ರೂಪದಲ್ಲಿರುವುದರಿಂದ ನಾರದೀಯ ಪುರಾಣ ಎನ್ನುತ್ತಾರೆ.
ನಾರದ ಪುರಾಣದಲ್ಲಿ ಬರುವ ವಿಷ್ಣು ಹಾಗೂ ಲಕ್ಶ್ಮಿ ಶೇಷನಾಗನ ಮೇಲೆ ವಿಶ್ರಮಿಸುತ್ತಿರುವ ದೃಶ್ಯ.ಎರಡು ಬದಿಗಳಲ್ಲಿ ನಾರದ ಹಾಗೂ ಬ್ರಹ್ಮರನ್ನು ಚಿತ್ರಿಸಲಾಗಿದೆ.
ನಾರದ ಪುರಾಣ
ಪದ್ಮ ಪುರಾಣಇದರಲ್ಲಿ ಐದು ಕಾಂಡಗಳಿವೆ. ಪ್ರಥಮ ಸೃಷ್ಟಿ ಕಾಂಡದಲ್ಲಿ ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇದೆ.ಇದರಲ್ಲಿ ಗ್ರಹಗಳ ಬಗ್ಗೆ,ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೂಗೋಳದ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ.ನಾಲ್ಕನೆಯ ಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ.ಕೊನೆಯ ಉತ್ತರಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.
ಸ್ಕಾಂದ ಪುರಾಣ
ಸ್ಕಾಂದ ಪುರಾಣ ಬಹುವಿಸ್ತಾರವಾದ ಪುರಾಣಗಳಲ್ಲಿ ಒಂದು. ಪರಮೇಶ್ವರನ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ ಜೀವನ-ಲೀಲೆಗಳ ಕುರಿತಾದ ವಿವರಣೆಯೇ ಈ ಪುರಾಣದ ಮುಖ್ಯ ವಿಷಯವಾಗಿದೆ.ಶಿವನ ಬಗ್ಗೆ ಇರುವ ಹಲವಾರು ಕಥೆಗಳು ಈ ಪುರಾಣದಲ್ಲಿ ಬರುತ್ತವೆ.
ಭವಿಷ್ಯ ಪುರಾಣ
ಭವಿಷ್ಯ ಪುರಾಣ ಒಂದು ಹಿಂದೂ ಧಾರ್ಮಿಕ ಪಠ್ಯ ಮತ್ತು ಹದಿನೆಂಟು ಪ್ರಮುಖ ಭಾರತೀಯ ಪುರಾಣಗಳು ಒಂದಾಗಿದೆ. ಇದು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ ಮತ್ತು ರಿಷಿ ವ್ಯಾಸ, ವೇದಗಳ ಕಂಪೈಲರ್ ಗೆ ನಿಯುಕ್ತಿಗೊಂಡಿದೆ. ಕೆಲಸದ ವಿಷಯ, ಭವಿಷ್ಯ ಪುರಾಣ ಮಹತ್ವದ್ದಾಗುತ್ತದೆ ಹೆಸರು ಎಂದು, ಎಲ್ಲಾ ಭವಿಷ್ಯದ ಪ್ರೊಫೆಸೀಸ್ ಸುಮಾರು. ಪುಸ್ತಕ ಹದಿನಾಲ್ಕು ಸಾವಿರ ಪದ್ಯಗಳ ಒಂದು ಭಂಡಾರ ಮತ್ತು ಉಡುಗೊರೆಯಾಗಿ ಗೆ ಉತ್ತಮ (ಅತ್ಯುತ್ತಮ) ಪರಿಗಣಿಸಲಾಗಿದೆ ಈ ಪುಸ್ತಕ (ಕಾಕಂಬಿ ಜೊತೆಗೆ) ಪುಶ್ಯ ತಿಂಗಳಲ್ಲಿ ಒಂದು ಹುಣ್ಣಿಮೆಯ ದಿನ (ಜನವರಿ) ಒಂದು ಬ್ರಾಹ್ಮಣ ಹೋಗುವಾಗ.
ಭವಿಷ್ಯ ಪುರಾಣ ವಿವರ
ಭವಿಷ್ಯ ಪುರಾಣ ಭವಿಷ್ಯದ ಬಗ್ಗೆ ಮುನ್ಸೂಚನೆ ಹೊಂದಿದೆ. ಮನು ಕಾನೂನು ಪುಸ್ತಕ ಡ್ರಾ ಮಾಡಲಾಯಿತು ಪಠ್ಯದ ಕೆಲವು ಭಾಗಗಳು, ಇವೆ. ಇದು ಒಳಗೊಂಡಿದೆ ಲಾರ್ಡ್ ಸೂರ್ಯ ಪದಗಳನ್ನು ಮನು ಹೇಳಿದಂತೆ. ಸೂರ್ಯನ ಅಥವಾ ಸನ್, ಅಗ್ನಿ ಅಥವಾ ಫೈರ್ ಮತ್ತು ನಾಗಾ ಅಥವಾ ಸರ್ಪ ಪೂಜೆ ಶ್ಲಾಘಿಸಿದ್ದಾನೆ. ಇದು ಭಕ್ತಿ ಸೇವೆ ಮತ್ತು ಲಾರ್ಡ್ ಚೈತನ್ಯ ಭವಿಷ್ಯವನ್ನು ಕೀರ್ತಿಗಳನ್ನು ಹೊಂದಿದೆ. ಇದು `ಹಿಂದಿನ ರಾಜವಂಶದದಿಂದ ಪಟ್ಟಿಯನ್ನು` ಭವಿಷ್ಯದಲ್ಲಿ ಆಳುವ ಊಹಿಸಿದ್ದನು ರಾಜರ ಪಟ್ಟಿ ನಡೆಯುತ್ತಿದೆ ಅನೇಕ ಪುರಾಣಗಳಲ್ಲಿ ಒಂದು. ಪುಸ್ತಕ ಒಳಗೊಂಡಿರುವ 14500 ಪದ್ಯಗಳು ಒಟ್ಟಾರೆಯಾಗಿ.
ಬ್ರಾಹ್ಮಣರ ಆಚರಣೆಗಳು ಮತ್ತು ಹರಿದಿನಗಳಲ್ಲಿ, ಜಾತಿಗಳ ಕರ್ತವ್ಯಗಳನ್ನು, ಮತ್ತು ವ್ಯವಹರಿಸುತ್ತದೆ. ಕೆಲವು ಪುರಾಣ ಸಂಬಂಧಿಸಿದ. ಹಾವುಗಳು ಪೂಜೆ ಮೀಸಲಾಗಿರುವ ಹಬ್ಬದ ಒಂದು ವಿವರಣೆ, ನಾಗರ ಪಂಚಮಿ ಸರ್ಪ ರಾಕ್ಷಸ ಒಂದು ಎಣಿಸುವ ಪ್ರಕ್ರಿಯೆ ಮತ್ತು ಕೆಲವು ಸರ್ಪ ಪುರಾಣಗಳ ನಿರೂಪಣೆಯು ಒಂದು ಆರಂಭಿಕ ನೀಡುತ್ತದೆ. ಭೊಜಕ ಮತ್ತು ಮಗ ಎಂಬ ಸೂರ್ಯ-ಪಾದ್ರಿಗಳು ಉಲ್ಲೇಖಿಸಲಾಗಿದೆ ಇದರಲ್ಲಿ "Sakadvipa" ಸೂರ್ಯನ ಪೂಜೆ ಒಂದು ಗಮನಾರ್ಹ ಭಾಗವನ್ನುತೆರೆದು ವ್ಯವಹರಿಸುತ್ತದೆ.
Bhavisyottara Turana ಈ ಪುರಾಣ ಮುಂದುವರಿಕೆ ಒಂದು ತೆರನಾದ. ಇದು ಕೆಲವು ಪ್ರಾಚೀನ ಪುರಾಣ ಮತ್ತು ಐತಿಹ್ಯಗಳನ್ನು ಹೊಂದಿದೆ, ಇದು ಹೆಚ್ಚು ಧಾರ್ಮಿಕ ವಿಧಿಗಳನ್ನು ಒಂದು ಕೈಪಿಡಿ ಹಾಗೆ ಇದೆ. ಹಲವಾರು ಮಹತ್ಮೆಗಳು ಮತ್ತು ವಿಶೇಷವಾಗಿ ಭವಿಷ್ಯ ಪುರಾಣದ ಭಾಗಗಳು, ಇತರ ಆಧುನಿಕ ಗ್ರಂಥಗಳು ಇವೆ.
ಬ್ರಹ್ಮ ಪುರಾಣ
ಬ್ರಹ್ಮ ಪುರಾಣ ಪ್ರಮುಖ ಹದಿನೆಂಟು ಪುರಾಣಗಳಲ್ಲಿ ಒಂದು. ಇದು ಹಿಂದೂ ಧಾರ್ಮಿಕ ಪಠ್ಯ. ಬ್ರಹ್ಮ ಪುರಾಣ ಬ್ರಹ್ಮ ಮೂಲಕ Daksha ಗೆ ಬೋಧನೆಗಳು ಮಾದರಿಯಲ್ಲಿರುತ್ತದೆ ಮತ್ತು ಪದ್ಯಗಳು ಹೊಂದಿದೆ. ಇದು ಆದಿ ಪುರಾಣ ಕರೆಯಲಾಗುತ್ತದೆ. ಒರಿಸ್ಸಾ, ಭರತ ಪುರಾತನ ಪವಿತ್ರ ಪ್ರದೇಶದಲ್ಲಿ ಈ ಪುಸ್ತಕದಲ್ಲಿ ವಿಶೇಷ ಪ್ರಕರಣ ಇದೆ. ಇತರ ಭಾರತೀಯ ಪುರಾಣ ಒಂದು ದಿಕ್ಚ್ಯುತಿ ಇದು ಶಿವ ಮತ್ತು ಸೂರ್ಯ, ನಡುವೆ ಅನ್ಯೋನ್ಯತೆ ವಿವರಿಸುವ ಈ ವಿಶೇಷ ಜೋಡಣೆ ರಲ್ಲಿ ಇದೆ. ಬ್ರಹ್ಮ ಪುರಾಣ ಪ್ರಕಾರ ಇದು ಆರೋಹಣ ಮೇರು ರಂದು ಋಷಿಗಳ ಗೆ ಬ್ರಹ್ಮ ಪುರಾಣ ಕಥೆಯನ್ನು ನಿರೂಪಿಸಿದ್ದಾರೆ ಯಾರು ಬ್ರಾಹ್ಮಣ. ನಾರದ ಪುರಾಣ ಬ್ರಹ್ಮ ಪುರಾಣ 10,000 ಪದ್ಯಗಳನ್ನು ಒಳಗೊಂಡಿರುವ ಹೇಳುತ್ತಾರೆ. ಪುರಾಣ ಸಹ ಸಾಹಿತ್ಯದ ವರ್ಗ ವಿವಿಧ ಹಂತಗಳು ಮತ್ತು ವಿವಿಧ ವಯಸ್ಸಿನ ಜನರು ವಾಸಿಸುತ್ತಿದ್ದರು ಜೀವನದ ಅಂಶಗಳನ್ನು ಪ್ರತಿನಿಧಿಸುತ್ತದೆ.
ಬ್ರಹ್ಮ ಪುರಾಣ ಹೆಚ್ಚಿನ ಭಾಗವು ಧಾರ್ಮಿಕ ಪ್ರಕೃತಿಯ ವಿಷಯಗಳನ್ನು ಒಳಗೊಂಡಿರುತ್ತದೆ. ಬ್ರಹ್ಮ ಪುರಾಣ ಪ್ರಧಾನವಾಗಿ ವೈಷ್ಣವ ಆಗಿದೆ. ಪುರಾಣ ಪ್ರಧಾನವಾಗಿ ಭಗವಾನ್ ವಿಷ್ಣುವಿನ ತೇಜೋಮಯಗೊಳಿಸುತ್ತಿದೆ. ಸತಿ ಆಫ್ ಬಲಿ, ಪಾರ್ವತಿ ಜೊತೆ ದಕ್ಷ `ಬಲಿದಾನ, ಶಿವ` ಮದುವೆಗೆ ನಾಶ, ಹಿಮಾಲಯ ತನ್ನ ಕ್ರೀಡೆ ಮತ್ತು ಅಂತಿಮವಾಗಿ ಆರೋಹಣ ಮೇರು ತಮ್ಮ ನಿರ್ಗಮನದ ಸೇರಿದಂತೆ ಶಿವ ನ ಕಥೆಗಳಲ್ಲಿ ಸಹ ಬ್ರಹ್ಮ ಪುರಾಣ ಪ್ರಮುಖ ಭಾಗಗಳು. ಪುರಾಣ ಸೌರ ದೇವತೆಯ ನೂರಾ ಎಂಟು ಹೆಸರುಗಳು ದಾಖಲಿಸುತ್ತದೆ, ಮತ್ತು ತನ್ನ ವೈಭವ ಮತ್ತು ಮೂಲ ತೋರಿಸುತ್ತದೆ. ದೇವರುಗಳ ಬಹುಸಂಖ್ಯಾ ಸಮ್ಮುಖದಲ್ಲಿ ಹೊರತಾಗಿಯೂ, ಬ್ರಹ್ಮ ಪುರಾಣ ಪ್ರವೃತ್ತಿಯ ಹೊಂದಿರುವ ಏಕೀಶ್ವರ ಆಗಿದೆ. ಪುರಾಣ ಎಲ್ಲ ದೇವತೆಗಳು ಸಮಾನ ಕಾಲಿಡುವುದು ಮೇಲೆ ನಿಂತು ವಾದಿಸುತ್ತಾರೆ.
ಭಾಗವತ ಪುರಾಣ
ಭಾಗವತ ಪುರಾಣ ಹದಿನೆಂಟು ಪುರಾಣಗಳಲ್ಲೇ ತುಂಬಾ ಪ್ರಸಿದ್ಧವಾದುದು. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.ಜ್ಞಾನ ಹಾಗೂ ಭಕ್ತಿ ಎರಡು ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ.ಕೃಷ್ಣನ ಜನ್ಮ ಲೀಲೆಗಳು,ಸೃಷ್ಟಿ,ಭಗವಂತ,ಆತ್ಮ ಮುಂತಾದ ವಿಷಯಗಳು ವಿಷದವಾಗಿ ವಿವರಿಸಲ್ಪಟ್ಟಿದೆ.
ಬ್ರಹ್ಮವೈವರ್ತ ಪುರಾಣ
ಬ್ರಹ್ಮವೈವರ್ತ ಪುರಾಣ ಇದು ನಾಲ್ಕು ಭಾಗಗಳಲ್ಲಿ ಇದೆ. ಮೊದಲನೆಯ ಭಾಗದಲ್ಲಿ ಪ್ರಕೃತಿಯ ಸೃಷ್ಟಿಯ ವಿಷಯವಿದೆ.ಎರಡನೆಯ ಭಾಗದಲ್ಲಿ ಪ್ರಕೃತಿಯ ಭಾಗವಾದ ಸ್ತ್ರೀ ದೇವತೆಗಳ ಬಗ್ಗೆ ವಿವರಗಳಿವೆ.ಮೂರನೆಯ ಭಾಗದಲ್ಲಿ ಗಣೇಶ,ಶಿವ,ಪಾರ್ವತಿ ಮುಂತಾದವರ ಬಗ್ಗೆ ವಿವರಗಳಿವೆ.ನಾಲ್ಕನೆಯ ಭಾಗದಲ್ಲಿ ಕೃಷ್ನ ಜನ್ಮ ವೃತ್ತಾಂತ ಇದೆ.
ಬ್ರಹ್ಮಾಂಡ ಪುರಾಣ
ಬ್ರಹ್ಮಾಂಡ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ಈ ಪ್ರಪಂಚದ ಸೃಷ್ಟಿಯ ವಿಚಾರ ಬ್ರಹ್ಮನಿಂದ ಹೇಳಲ್ಪಟ್ಟಂತೆ ಇದರಲ್ಲಿ ವಿವರಿಸಲಾಗಿದೆ.ಸಕಲ ಲೋಕಗಳ ವಿಚಾರವಾಗಿ ಈ ಪುರಾಣದಲ್ಲಿ ವಿಸ್ತಾರವಾದ ವಿವರಗಳಿವೆ.
ವಾಯು ಪುರಾಣ
ವಾಯು ಪುರಾಣ ಇದರಲ್ಲಿ ಜಗತ್ತಿನ ಸೃಷ್ಟಿ,ಕಾಲದ ಮಾನ,ಪ್ರಾಣಿ-ಪಕ್ಷಿಗಳ ಹುಟ್ಟು ಬೆಳವಣಿಗೆ,ವೈವಸ್ವತ ಮನು ಮೊದಲಾದವರ ವಂಶಾವಳಿ ಪ್ರಮುಖವಾಗಿ ವಿವರಿಸಲ್ಪಟ್ಟಿದೆ.ಜಗತ್ತನ್ನು ಏಳು ದ್ವೀಪಗಳ ವಿಭಾಗ ಮಾಡಿ ಅದರ ವಿವರ,ಬೇರೆ ಬೇರೆ ಖಂಡಗಳಲ್ಲಿರುವ ಜನರ ಜೀವನ ವಿಚಾರ,ಏಳು ಲೋಕಗಳ ವಿವರ,ನಾಲ್ಕು ಯುಗಗಳ ವಿಚಾರ,ಸಂಗೀತ ವಿದ್ಯೆ,ವೇದವಿದ್ಯೆ,ವಿವಿಧ ಜಾತಿ ಆಶ್ರಮಗಳ ಜನರ ಕರ್ತವ್ಯ ಜವಾಬ್ದಾರಿಗಳ ವಿವರ ಇತ್ಯಾದಿ ವಿಷಯಗಳು ಈ ಪುರಾಣದಲ್ಲಿ ಅಡಕವಾಗಿದೆ.
ಲಿಂಗ ಪುರಾಣ
ಲಿಂಗ ಪುರಾಣ ಶಿವನ ಮಹಾತ್ಮೆ, ಶಿವಲೀಲೆಗಳು,ಲಿಂಗದ ಮಹಿಮೆ ಮುಂತಾದವುಗಳು ಈ ಪುರಾಣದ ಮುಖ್ಯವಸ್ತು. ಲಿಂಗದಿಂದ ಉಂಟಾಗಿರುವ ಸೃಷ್ಟಿ,ಸ್ಥಿತಿ,ಲಯ ರೂಪಗಳಾದ ಭಗವಂತನ ಲೀಲೆಗಳು,ನೀತಿ ಬೋಧೆಗಳು ಈ ಪುರಾಣದಲ್ಲಿ ವಿವರಿಸಲ್ಪಟ್ಟಿದೆ.
ವಿಷ್ಣು ಪುರಾಣ
ವಿಷ್ಣು ಪುರಾಣಪುರಾಣರತ್ನವೆಂದು ಕರೆಯಲ್ಪಡುವ ವಿಷ್ಣು ಪುರಾಣವು ಅತ್ಯಂತ ಪ್ರಮುಖವಾದ ಒಂದು ಪುರಾಣ.ಜಗತ್ತಿನ ಸೃಷ್ಟಿ-ಸ್ಠಿತಿ-ಲಯಗಳ ವಿಚಾರ,೨೮ ವ್ಯಾಸರುಗಳ ಚರಿತ್ರೆ,ವಿವಿಧ ಜಾತಿಯವರ, ಆಶ್ರಮದವರ ಕರ್ತವ್ಯಗಳು,ಯೋಗದ ವಿಚಾರ ಮುಂತಾದವುಗಳು ಇದರಲ್ಲಿ ಸೇರಿರುವ ಮುಖ್ಯ ವಿಚಾರಗಳು.
ವಾಮನ ಪುರಾಣ
ವಾಮನ ಪುರಾಣ ಭಗವಂತನಾದವಿಷ್ಣುವಿನ ವಾಮನ ಅವತಾರದ ಕಥೆ,ಸಾತ್ವಿಕನ ಗುಣಸ್ವರೂಪಗಳು,ದಾನದ ಮಹಿಮೆ ಮುಂತಾದ ವಿಚಾರಗಳು ಇದರಲ್ಲಿ ವಿವರಿಸಲ್ಪಟ್ಟಿದೆ..
ಮಾರ್ಕಂಡೇಯ ಪುರಾಣ
ಮಾರ್ಕಂಡೇಯ ಪುರಾಣ ಇದು ಜೈಮಿನಿಹಾಗೂಮಾರ್ಕಾಂಡೇಯ ರ ನಡುವಿನ ಸಂಭಾಷಣೆಯ ರೂಪದಲ್ಲಿದೆ.ಇದರಲ್ಲಿ ಜಗತ್ತಿನ ಸೃಷ್ಟಿ, ಅಗ್ನಿ ಸೂರ್ಯ,ಬ್ರಹ್ಮಾದಿ ದೇವತೆಗಳ ಸ್ತುತಿ ಮುಂತಾದವುಗಳು ಇದೆ. ಇದಲ್ಲದೆ ಇದರ ಮುಖ್ಯ ಭಾಗವಾಗಿ ಸುಪ್ರಸಿದ್ಧ 'ದೇವಿ ಮಹಾತ್ಮೆ' ಯ ಕಥೆ ಬರುತ್ತದೆ.
ವರಾಹ ಪುರಾಣ
ವರಾಹ ಪುರಾಣ ಇದರಲ್ಲಿ ವಿಷ್ಣು ವರಾಹ ಅವತಾರ ಎತ್ತಿ ಜಗತ್ತಿನಲ್ಲಿ ಮಾಡಿದ ಲೀಲೆಗಳ ವಿವರ ಇದೆ.
ಕೂರ್ಮ ಪುರಾಣ
ಕೂರ್ಮ ಪುರಾಣ ಇದು ವಿಷ್ಣುವಿನ ಕೂರ್ಮಾವತಾರದ ಕಥೆಯನ್ನು ಮುಖ್ಯವಾಗಿ ಹೊಂದಿದೆ. ಇದರಲ್ಲಿ ಚತುವರ್ಣದವರ ಕರ್ತವ್ಯ ಹಾಗೂ ಜವಾಬ್ದಾರಿಗಳು,ಮೋಕ್ಷವಿಚಾರಗಳು ಇತ್ಯಾದಿಗಳು ಅಡಕವಾಗಿದೆ.
ಮತ್ಸ್ಯ ಪುರಾಣ
ಮತ್ಸ್ಯ ಪುರಾಣ ಇದು ಪುರಾಣಗಳಲ್ಲೇ ಅತೀ ಪ್ರಾಚೀನವಾದುದು ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಇದರಲ್ಲಿ ವಿಷ್ಣುವಿನ ಪ್ರಥಮ ಅವತಾರವಾದ ಮತ್ಸ್ಯಾವತಾರದ ಕಥೆ ಬರುತ್ತದೆ.ಕಚದೇವಯಾನಿ ಕಥೆ,ತ್ರಿಪುರದಹನದ ಕಥೆ ಮುಂತಾದವುಗಳು ಇದರಲ್ಲಿ ಅಡಕವಾಗಿದೆ.
ಯಲ್ಲಪ್ಪ ನಂದಿ
Subscribe to:
Posts (Atom)