ಅಂಗಳದ ತುಂಬೆಲ್ಲ
ರಂಗು ರಂಗಿನ ರಂಗೋಲಿ
ಅಲ್ಲಿ ಬಣ್ಣಗಳದೆ ಹಾವಳಿ.
ಕಲ್ಪನೆಯ ನಾಡಲ್ಲಿ
ತಳಿರು ತೋರಣಗಳ ಶೃಂಗಾರ
ಜಗಮಗಿಸುವ ಬೆಳಕು.
ಅಲ್ಲಲ್ಲಿ ನಿನ್ನ ಹೆಜ್ಜೆಗಳ ಗುರುತು
ಮೌನ ಮಾತುಗಳ ಮೆರವಣಿಗೆ
ಭರವಸೆಯ ಚಿತ್ತಾರ.
ಬದುಕ ಬಂಧಿಸುವ
ಉತ್ತುಂಗದ ಕಾಳಜಿ
ಭಾಷೆ, ನಿರೀಕ್ಷೆ.
ಸಾಕು ಬಿಡು
ಊಟ ಉಪಚಾರ
ಜಾಗವೇ ಇಲ್ಲ ಬಿಡು.
ಹಣೆಯ ಕುಂಕುಮ,ಅರಿಶಿನ
ತಲೆ ತುಂಬಾ ಹೂ ದಿಂಡಿನೊಂದಿಗೆ
ನೋಡು ಹೊಸ ಮದುಮಗಳ!
ಹೂ ನಗು ನಾಚಿಕೆ
ಅವಳಾಗುವಳು
ಮುತ್ತೈದೆ.
