Friday, 30 August 2024

ನಿಮ್ಮ ಮಕ್ಕಳು ಮೊಬೈಲ್‌ಗಳಿಂದ ದೂರ ಇರಬೇಕೇ…? Way to Keep Your Child Away From Mobile...?

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಮ್ಮೆ ಮಕ್ಕಳು ಮೊಬೈಲ್‌ ಅಡಿಕ್ಟ್‌ ಆದರೆ ಅದರಿಂದ ಅವರನ್ನು ಹೊರ ತರುವುದು ತುಂಬಾ ಕಷ್ಟ. ಅನೇಕ ಪೋಷಕರು ತಮ್ಮ ಮಗು ಇಡೀ ದಿನ ಮೊಬೈಲ್‌ನಲ್ಲಿ ಬ್ಯುಸಿಯಾಗಿರುತ್ತದೆ ಅಂತ ದೂರುತ್ತಾರೆ.


ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮೊಬೈಲ್ ಕೊಡಬೇಡಿ:ಮೊದಲನೆಯದಾಗಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಡಿ. ನಿಮ್ಮ ಮಗು ನಿಮ್ಮೊಂದಿಗಿರುವಾಗ ಮೊಬೈಲ್ ನಿಂದ ಬಳಸಬೇಡಿ. ಏಕೆಂದರೆ ನೀವು ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದರೆ ಮಕ್ಕಳು ಕೂಡ ನಿಮ್ಮನ್ನು ನೋಡಿದ ಮೊಬೈಲ್ ಕೈಗೆತ್ತಿಕೊಳ್ಳುತ್ತಾರೆ.   


ಊಟ ಮಾಡುವ ಮುನ್ನ ಮೊಬೈಲ್ ಕೊಡಬೇಡಿ: ಮಕ್ಕಳು ಊಟ ಮಾಡುವಾಗ ಮೊಬೈಲ್ ಕೊಡಬೇಡಿ. ಹಾಗೆ ಮಾಡಿದರೆ ಪ್ರತಿ ಬಾರಿ ಊಟಕ್ಕೂ ಮುನ್ನ ಮೊಬೈಲ್ ಕೊಡಬೇಕಾಗಿ ಬರುತ್ತದೆ. ಇಲ್ಲದಿದ್ದರೆ ಅವರು ತಿನ್ನಲು ಸಾಧ್ಯವಿಲ್ಲ. ಆದ್ದರಿಂದ ಮೊಬೈಲ್ ಅನ್ನು ದೂರವಿಡಿ.


ಆಟಗಳತ್ತ ಗಮನಹರಿಸಿ: ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ದೂರವಿಡುವುದೇ ಉತ್ತಮ ಪರಿಹಾರ. ಅದಕ್ಕಾಗಿ ಹೊರಾಂಗಣ ಆಟಗಳು ಅಥವಾ ಇತರೆ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ. ನೀವು ಮಗುವನ್ನು ಸೈಕ್ಲಿಂಗ್‌ಗೆ ಕರೆದೊಯ್ಯಬಹುದು. ಅವರ ಜೊತೆ ವಾಕ್‌ ಮಾಡಬಹುದು..


ಇಂಟರ್ನೆಟ್ ಅಥವಾ ವೈಫೈ ಆಫ್ ಮಾಡಿ: ನಿಮ್ಮ ಮೊಬೈಲ್‌ನಲ್ಲಿ ಕೆಲಸ ಮುಗಿದ ನಂತರ ನೀವು ಇಂಟರ್ನೆಟ್ ಅಥವಾ ವೈಫೈ ಅನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಬಳಸುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಮೊಬೈಲ್ ಬಳಸದಂತೆ ಪಾಸ್‌ವರ್ಡ್ ಇರಿಸಿ.


ಮೊಬೈಲ್ ಕಿತ್ತುಕೊಳ್ಳಬೇಡಿ: ಮಗುವಿನ ಕೈಯಲ್ಲಿ ಫೋನ್ ಕಂಡರೆ ತಕ್ಷಣ ತೆಗೆದುಕೊಂಡು ಹೋಗಬೇಡಿ. ಇದರಿಂದ ಅವರಿಗೆ ಕೋಪ ಬರುತ್ತದೆ. ಶಾಂತವಾಗಿ ವಿವರಿಸಿ ಮತ್ತು ಅವರಿಂದ ಫೋನ್ ತೆಗೆದುಕೊಳ್ಳಿ.. ಅಲ್ಲದೆ ಅದರಿಂದ ಅಪಾಯವಾಗುತ್ತೆ ಎನ್ನುವುದನ್ನ ಮನವರಿಕೆ ಮಾಡಲು ಪ್ರಯತ್ನಿಸಿ.


ಟಿವಿ ವೀಕ್ಷಣೆಗೂ ಸಮಯ ಕೊಡಿ: ಮನೆಯಲ್ಲಿ ಮಕ್ಕಳು ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು, ಸ್ಪೀಕರ್‌ನಲ್ಲಿ ಹಾಡುಗಳನ್ನು ಕೇಳುವುದು ಮುಂತಾದವುಗಳಿಂದ ಮನರಂಜಿಸಲು ಪ್ರೋತ್ಸಾಹಿಸಿ. ಮಕ್ಕಳು ಟಿವಿ ವೀಕ್ಷಿಸಲು ಸರಿಯಾದ ಸಮಯವನ್ನು ನಿಗದಿಪಡಿಸಿ. ಅತೀಯಾಗಿ ಟಿವಿ ನೋಡುವುದರಿಂದ ಮಕ್ಕಳ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ ಎಚ್ಚರ.


 ಯಲ್ಲಪ್ಪ ನಂದಿ.








Saturday, 26 August 2023

Domestic, International Air ticketing, and Reservation. ದೇಶೀಯ, ಅಂತರಾಷ್ಟ್ರೀಯ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್.

Domestic, International Air ticketing, and Reservation.

I the Mr Yallappa Nandi, I have completed Air ticketing and reservation (GDS) course, UK 5th level qualification at Institute of Commercial Management UK Bournemouth England, and I have 10 years experience in Civil Aviation Service in India, Extensive working knowledge in Airlines industry, I have issued more than 10 lakh Air tickets for Indian travelers traveling across to the worldwide, I have received worldwide operating Airline's ticketing Authority and membership.

ದೇಶೀಯ, ಅಂತರಾಷ್ಟ್ರೀಯ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್.

ನಾನು ಶ್ರೀ ಯಲ್ಲಪ್ಪ ನಂದಿ, ಇನ್ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಮ್ಯಾನೇಜ್ಮೆಂಟ್ ಯುಕೆ ಬೋರ್ನ್ಮೌತ್ ಇಂಗ್ಲೆಂಡ್ನಲ್ಲಿ ಏರ್ ಟಿಕೆಟಿಂಗ್ ಮತ್ತು ರಿಸರ್ವೇಶನ್ (ಜಿಡಿಎಸ್) ಕೋರ್ಸ್, ಯುಕೆ 5ನೇ ಹಂತದ ಅರ್ಹತೆಯನ್ನು ಪೂರ್ಣಗೊಳಿಸಿದ್ದೇನೆ ಮತ್ತು ಭಾರತದಲ್ಲಿ ಸಿವಿಲ್ ಏವಿಯೇಷನ್ ಸೇವೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿದ್ದೇನೆ, ನಾನು ೧೦ ಲಕ್ಷಕ್ಕೂ ಅಧಿಕ ವಿಮಾನ ಟಿಕೆಟ್ಗಳನ್ನು ವಿಶ್ವದಾದ್ಯಂತ ಪ್ರಯಾಣಿಸಲು ಭಾರತೀಯ ಪ್ರಯಾಣಿಕರಿಗೆ ನೀಡಿದ್ದೇನೆ, ವಿಮಾನ ಸೇವೆಯಲ್ಲಿ ಉತ್ತಮವಾದ ಜ್ಞಾನವನ್ನು ಹೊಂದಿದ್ದೇನೆ, ವಿಶ್ವದ್ಯಾಂತ ಸಂಚರಿಸುವ ಎಲ್ಲ ವಿಮಾನ ಟಿಕೆಟಿಂಗ್ ಮಾಡುವ ಅಥಾರಿಟಿ ಪಡಿದಿದ್ದೇನೆ ಮತ್ತು ವಿಶ್ವದ್ಯಾಂತ ಹಲವಾರು ವಿಮಾನ ಸಂಸ್ಥೆಗಳ ಮೆಂಬರ್ ಶಿಪ್ ಪಡಿದಿದ್ದೇನೆ.

Tuesday, 14 March 2023

ಪುಲಿಕೇಶಿ ಸೈನ್ಯವನ್ನು "ಕರ್ಣಾಟ ಬಲಂ ಅಜೇಯಂ" ಎಂದು ಏಕೆ ಕರೆಯುತ್ತಿದ್ದರು?

​ಸಣ್ಣ ಸಣ್ಣ ಸಾಮ್ರಾಜ್ಯ ಕಟ್ಟಿರೋರೆಲ್ಲ ಸಾಮ್ರಾಟರಾದ್ರೆ ಆ ಎಲ್ಲ ಸಾಮ್ರಾಟರಿಗೆ ಅಪ್ಪ ಕಣ್ರೋ ನಮ್ಮ ಇಮ್ಮಡಿ ಪುಲಿಕೇಶಿ. 


ಆರನೇ ಶತಮಾನದಲ್ಲಿ ದಕ್ಷಿಣದಲ್ಲಿ ಪುಲಿಕೇಶಿಯು ಸಮರ್ಥ ರಾಜನಾಗಿರುತ್ತಾನೆ ಹಾಗೆಯೇ ಅವನ ಕಾಲಕ್ಕೆ ಉತ್ತರ ಭಾರತದ ಪ್ರಬಲ ದೊರೆಯಾಗಿದ್ದವನು ವರ್ಧನ ವಂಶದ ಹರ್ಷವರ್ಧನ. ಇಬ್ಬರು ರಾಜರುಗಳ ಸಾಮ್ರಾಜ್ಯಗಳ ಗಡಿ ನರ್ಮದ ನದಿ. ನರ್ಮದ ನದಿಯ ಮೇಲಿನ ಪ್ರದೇಶ ಹರ್ಷವರ್ಧನನ ಸಾಮ್ರಾಜ್ಯದ ಭಾಗವಾಗಿದ್ದಾರೆ, ನರ್ಮದ ನದಿಯ ಕೆಳಗಿನ ಪ್ರದೇಶ ಪುಲಿಕೇಶಿ ರಾಜನ ಸಾಮ್ರಾಜ್ಯದ ಭಾಗವಾಗಿರುತ್ತದೆ. ಒಮ್ಮೆ ದಕ್ಷಿಣದಲ್ಲಿ ದಿಗ್ವಿಜಯ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹರ್ಷ ಮಹಾರಾಜ ತನ್ನ ಸೈನ್ಯ ಸಮೇತ ಪುಲಿಕೇಶಿ ಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತಾನೆ. ೬೧೮-೬೧೯ರಲ್ಲಿ, ನರ್ಮದ ನದಿಯ ತಟದಲ್ಲಿ ನಡೆದ ಈ ಕದನದಲ್ಲಿ ಹರ್ಷವರ್ಧನನ ಸೈನ್ಯ ಪುಲಿಕೇಶಿಯ ಸೈನ್ಯದ ಮುಂದೆ ಸೋತು ಸುಣ್ಣವಾಗುತ್ತದೆ. ಸುಮಾರು ಅರವತ್ತು ಸಾವಿರ ಆನೆಗಳಿಂದ ಕೂಡಿದ ಪುಲಿಕೇಶಿಯ ಗಜಪಡೆ ಹಾಗೂ ಸೈನ್ಯವನ್ನ ಆ ಕಾಲಕ್ಕೆ ಯಾರಿಂದಲೂ ಸೋಲಿಸಲು ಅಸಾಧ್ಯವಾದ ಕಾರಣ ಆತನ ಸೈನ್ಯವನ್ನ "ಕರ್ಣಾಟ ಬಲಂ ಅಜೇಯಂ" ಎಂದು ವರ್ಣಿಸಲ್ಪಟ್ಟಿದೆ. ಯುದ್ಧದಲ್ಲಿ ಜಯಿಸಿದ ಪುಲಿಕೇಶಿ ಮಹರಾಜ ಪರಮೇಶ್ವರ ಎಂಬ ಬಿರುದನ್ನೂ ಪಡೆಯುತ್ತಾನೆ.




Friday, 28 October 2022

ಅಮ್ಮ

ಅಮ್ಮ ಎಂದರೆ ಪ್ರತ್ಯಕ್ಷ ದೇವತೆ,
ವಾತ್ಸಲ್ಯದ ಮೂರ್ತಿ,
ಬದುಕು ನೀಡಿದ ದೇವತೆ,
ನೀವೇ ನನ್ನ ಗುರು,
ನೀವೇ ನನ್ನ ಬದುಕಿನ ದಾರಿ,
ಅತ್ಯುತ್ತಮ ಗೆಳತಿ, ಅದ್ಭುತ ತಾಯಿ,
ಕೈ ಹಿಡಿದು ಮುನ್ನಡೆಸಿದ ಮಹಾಮಾತೆ,
ನನ್ನ ಬದುಕಿನ ಅತ್ಯಂತ ಮಹೋನ್ನತ ಮಹಿಳೆ ಮತ್ತು ಶಕ್ತಿ ನನ್ನಮ್ಮ,
ದೇವರು ನನಗೆ ಕರುಣಿಸಿದ ಬಹುದೊಡ್ಡ ಉಡುಗೊರೆ ನನ್ನಮ್ಮ.

ಇಂದಿಗೆ ನೀವು ನಮ್ಮನ್ನಗಲಿ ಒಂದು ವರ್ಷ ಪ್ರಥಮ ವರ್ಷದ ಪುಣ್ಯಸ್ಮರಣೆ ಅಮ್ಮ.
ನೀವು ಮತ್ತೆ ನನ್ನ ಮಗಳಾಗಿ ಹುಟ್ಟಿ ಬಾ ನನ್ನವ್ವ.



Tuesday, 2 August 2022

ಸಿದ್ದರಾಮೋತ್ಸವ 2022

 ಸಿದ್ದರಾಮೋತ್ಸವ

ಭಾರತಕ್ಕೂ ಅಮೃತ ಮಹೋತ್ಸವ

ಭಾಗ್ಯವಿದಾತನಿಗೂ ಅಮೃತ ಮಹೋತ್ಸವ

ಎಲ್ಲೆಲ್ಲಿಯೂ ಜನರ ಹರ್ಷದ ಉತ್ಸವ

 ಕರುನಾಡಿನ ನಿತ್ಯೋತ್ಸವ ಸಿದ್ದರಾಮೋತ್ಸವ


ಭಾಗ್ಯಗಳ ಹರಿಕಾರ

ಇವರೇ ಬಡವರ ದೇವರ

ಸಮ ಸಮಾಜದ ಕನಸುಗಾರ

ಮಾಡಿದರು ಅಹಿಂದ ಉದ್ದಾರ


ರಾಜಕೀಯದಲ್ಲಿ ಯಾರಿಲ್ಲ ಇವರ ತಕ್ಕ

 ವ್ಯವಹಾರದ ಲೆಕ್ಕ ಪತ್ರ ಚೊಕ್ಕ

ಇವರೆಂದರೆ ಎದುರಾಳಿಗೆ ನಡುಕ

ಮುರಿಯುವರು ಭ್ರಷ್ಟಾಚಾರಿಗಳ ಸೊಕ್ಕ

ಹೋರಾಡುವವರು ಸಮಾಜದ ನ್ಯಾಯಕ್ಕ


ಕರುನಾಡಿನ ಜನರ ಮನ ಗೆದ್ದ ಜನನಾಯಕರು

ಕೋಟಿಗೊಬ್ಬರು  ಇಂತಹ ಪುಣ್ಯಾತ್ಮರು

ಕೇವಲ ವ್ಯಕ್ತಿಯಲ್ಲ ಕರುನಾಡಿನ ಶಕ್ತಿ ಇವರು

ಮುಂದಿನ ಜನಾಂಗಕ್ಕೆ ದಾರಿದೀಪ ಇವರು


ಯಲ್ಲಪ್ಪ ನಂದಿ


Wednesday, 16 March 2022

ಅಕ್ಷರಗಳ ಅಪ್ಪುಗೆ - ನಮ್ಮ ಒಲವಿನ 'ಅಪ್ಪು'ಗೆ

ಅಕ್ಷರಗಳ ಅಪ್ಪುಗೆ - ನಮ್ಮ ಒಲವಿನ 'ಅಪ್ಪು'ಗೆ

'ಅಪ್ಪು'ಗೆ ನೀಡಿದಾಗ ಆತ್ಮೀಯ

'ಅಭಿ'ಮಾನಿಗಳ ಪಾಲಿಗೆ ಮಹನೀಯ

'ವೀರ ಕನ್ನಡಿಗ'ರೆದೆಯಲ್ಲಿ ವಿರಾಜಮಾನ

'ಮೌರ್ಯ' ಸಾಮ್ರಾಜ್ಯಕ್ಕಿಂತ ವಿಸ್ತೃತ ವಿಶಾಲ ಅಪ್ಪು 
ನೀವು ಗಳಿಸಿದ ಅಭಿಮಾನಿ ಸಾಮ್ರಾಜ್ಯ

'ಆಕಾಶ'ದೆತ್ತರ ಬೆಳೆದರೂ, ಭೂಮಿ ತೂಕದ ವ್ಯಕ್ತಿತ್ವ ನಿಮ್ಮದು

'ನಮ್ಮ ಬಸವ' ಶರಣರು ಬರೆದಂತೆ ಬದುಕಿದ ಜೀವ, ಕಳದೇ, ಕೊಲದೇ ಹುಸಿಯ ನುಡಿಯದೇ ಬದುಕಿದ ದೇಹ

'ಅಜಯ'ರಾಗಿ ಬೆಳೆದ, ಮನದಿ ಉಳಿದ ವಿಶೇಷ ವ್ಯಕ್ತಿ

'ಅರಸು'ತಿದೆ ಕೋಟಿ ಕೋಟಿ ಜೀವಗಳು ನಿಮ್ಮದೇ ದಾರಿಯ

'ಮಿಲನ'ವಾದಂತಿದೆ ಸದ್ಗುಣಗಳೆಲ್ಲ ನಿಮ್ಮುಸಿರಿನೊಳಗೆ

'ಬಿಂದಾಸ್' ಆಗಿ ಬದುಕುವವರಿಗೂ ದಾನ ಧರ್ಮ ಪರಿಶ್ರಮದ ಮಹತ್ವ ಸದ್ದಿಲ್ಲದೆ ತಿಳಿಸಿದಿರಿ

'ವಂಶಿ'ಯವಾಗಿ ಬಂದಿರಬಹುದು ಆ ಸಹಜತೆ, ಮಾನವೀಯತೆ

'ರಾಜ'ನಂತೆ ರಾಜ್ಯಭಾರ ಮಾಡಿದಿರಿ ಸಿನಿಲೋಕದಲ್ಲಿ

'ರಾಮ'ನಂತೆ ಇದ್ದಿರಿ ಮಡದಿಯ ಪ್ರೀತಿಸುವ ವಿಷಯದಲ್ಲಿ

'ಪೃಥ್ವಿ'ಯಲ್ಲಿ ನಿಮ್ಮಂಥವರು ಅಪರೂಪ...

'ಜಾಕಿ'ಯಾಗಿ ನೀವು ಏರಿದ ಸಿನಿಕುದುರೆ ಇಂದಿಗೂ ರೇಸ್ ನಲ್ಲಿ ಸಾಗುತ್ತಲೇ ಇದೆ.. ಅಭಿಮಾನದ ಹಾದಿಯಲ್ಲಿ, ಅಚ್ಚಳಿಯದ ರೀತಿಯಲ್ಲಿ..

'ಹುಡುಗರು' ನಿಮ್ಮ ಸಹೃದಯಿ ಕೆಲಸಕ್ಕೆ ತಲೆ ಬಾಗಿದರು

'ಪರಮಾತ್ಮ' ಕೂಡ ಮೆಚ್ಚುವಂಥ ಜೀವಾತ್ಮ ನೀವು

'ಅಣ್ಣಾ ಬಾಂಡ್' ಆಗಿ ಕುಣಿದು ಕುಪ್ಪಳಿಸಿದ, ನೀವು ಕಲಾ ರಸಿಕರ ಪಾಲಿಗೆ ಬೆಲೆ ಕಟ್ಟಲಾಗದ ಬ್ರಾಂಡ್ ನೀವು..

'ಯಾರೇ ಕೂಗಾಡಲಿ' ಅಥವಾ ಹೊಗಳಿಕೆ ನೂರಾಗಲಿ, ಎರಡು ಸಂದರ್ಭದಿ ನೀವೆಂದು ಬೀಗಲಿಲ್ಲ 

'ನಿನ್ನಿಂದಲೇ' ಸದ್ಗತಿ ಎಂದು ಗುರುರಾಯರಿಗೆ ತಲೆಬಾಗಿದ ರಾಯರ ಪರಮಭಕ್ತ

'ಪವರ್' ಹೌಸ್ ಇಂದ ಬಂದರೂ, ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಮಾದರಿಯಾದವರು

'ಮೈತ್ರಿ' ಯಾದಂತಿತ್ತು ಸಹಜತೆ ಮತ್ತು ಸರಳತೆ, ಅದರಿಂದಲೇ ಹೆಚ್ಚಿತು ನಿಮ್ಮ ಘನತೆ..

'ರಣವಿಕ್ರಮ'ನಾಗಿ ನೀವು ಯಮನೆದುರು 
ಹೋರಾಡಲಿಲ್ಲ ಏಕೆ..?
ಒಳ್ಳೆತನವು ಹೀಗೆ ನಡುದಾರಿಯಲ್ಲಿ ಸಾವಿಗೆ ಶರಣಾಗಬೇಕೆ..?

'ಚಕ್ರವ್ಯೂಹ'ದಿ ನಿಮ್ಮನ್ನು ಸಿಲುಕಿಸಿದ ಆ ದೇವರು, 
ಮರಳಿ ಬರಲಿಲ್ಲ ನೀವು,‌ ಈಗ ನೋಡಿ, 
ಆ ನೋವಲ್ಲಿ ನರಳುತ್ತಿರುವುದು ನಿಮ್ಮ ಅಭಿಮಾನಿ ದೇವರು..

'ದೊಡ್ಮನೆ ಹುಡುಗ'ನ ದೊಡ್ಡತನ ಕೊಂಡಾಡುತಿದೆ ಜಗತ್ತು, ಈ ಅಭಿಮಾನದ ಪರಾಕಾಷ್ಠೆ ನೋಡಲು ನೀವಿರಬೇಕಿತ್ತು..

'ರಾಜಕುಮಾರ'ನಾಗಿ ಇರುವಿರಿ ಸದಾ ಕಾಲ ನಮ್ಮ ಅಭಿಮಾನದ ರಾಜ್ಯದಲ್ಲಿ, ನಿಮ್ಮ ನೆನಪು ಅಜರಾಮರ..

'ಅಂಜನಿಪುತ್ರ' ಹನುಮ ಸಂಜೀವಿನಿಯನ್ನು ತಂದು, 
ನಮಗಾಗಿ ನಿಮ್ಮನ್ನು ಉಳಿಸಬೇಕಿತ್ತು..

'ನಟಸಾರ್ವಭೌಮ'ನ ಕುಡಿಯಾಗಿ 
ವರನಟರ ಸಾಧನೆಯನ್ನು ಇನ್ನಷ್ಟು ಜೀವಂತವಾಗಿಸಿದಿರಿ, ಅಪ್ಪನ ಘನತೆಗೆ ನಾವೀನ್ಯತೆ ತುಂಬಿದಿರಿ..

'ಯುವರತ್ನ'ನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದಿರಿ,
ಕರ್ನಾಟಕ ರತ್ನ ಪಡೆದು ಕರುನಾಡಿಗೆ ಖುಷಿಯ ಹಂಚಿದಿರಿ..

'ಜೇಮ್ಸ್' ಎಂಬ ಹೆಸರಲ್ಲಿ ಬರುತ್ತಿದ್ದೀರಿ ಬೆಳ್ಳಿಪರದೆಗೆ..
ಸಹಸ್ರ ಸಹಸ್ರ ಅಭಿಮಾನಿಯ ಎದೆಯಲ್ಲಿ ಈಗ ನಿಮ್ಮದೇ ಅಭಿಮಾನದ ಫ್ರೇಮ್ಸ್ ಇದೆ.. ಮತ್ತದು ಎಂದಿಗೂ ಇರುತ್ತದೆ..‌..

ತುಂಬು ಅಭಿಮಾನದಿಂದ ಬರೆದ ಸಾಲುಗಳಿವು

ರಚನೆ - ಯಲ್ಲಪ್ಪ ನಂದಿ. 17th March 2022

Tuesday, 1 March 2022

ಮಹಾಶಿವರಾತ್ರಿಯ ಶುಭಾಶಯಗಳು

ಸತಿಯ ಸುಟ್ಟ ದೇಹವನ್ನು ಹೊತ್ತು ಹುಚ್ಚನಂತೆ ಅಲೆದಾಡಿದ ಪ್ರೇಮಯೋಗಿ. ಸಮಸ್ತ ಗಣದೊಂದಿಗೆ ಕೈಲಾಸದಿಂದ ವರಯಾತ್ರೆ ಹೊರಟು ಮದುವೆಯೆಂಬ ಅಮೋಘ ಚಿತ್ರಣ ಕಟ್ಟಿಕೊಟ್ಟ ವರಯೋಗಿ. ಅರ್ಧನಾರೀಶ್ವರನಾಗಿ ಲಿಂಗಸಮಾನತೆ ಮೆರೆದ ಪುರುಷಯೋಗಿ. ಸುಬ್ರಹ್ಮಣ್ಯ, ಗಣೇಶ, ಅಶೋಕ ಸುಂದರಿಯನ್ನೊಳಗೊಂಡ ಸುಸಂಸಾರಯೋಗಿ. ಗಾನ ಹೇಳಿಕೊಟ್ಟ ನಾದಯೋಗಿ. ಜ್ಞಾನ ಕರುಣಿಸಿದ ವೇದಯೋಗಿ. ನಟರಾಜನಾದ ನಾಟ್ಯಯೋಗಿ. ಲೋಕದ ಹಿತಕಾಗಿ ವಿಷವನು ಕುಡಿದ ಲೋಕೋಪಯೋಗಿ. ಕಾಳಿಯ ಕೆಂಡದಂಥಾ ಕೋಪವನ್ನೂ ತನ್ನೆದೆಯ ಮೇಲಿನ ಒಲವಾಗಿಸಿದ ಧ್ಯಾನಯೋಗಿ. ಬದುಕು ಬೂದಿಯೆಂದು ಸಾರಿದ ಸ್ಮಶಾನಯೋಗಿ. ಸುರಾಸುರ ಭೇದ ಮಾಡದ ಕರುಣಾಯೋಗಿ. ಅಣು-ಅಣುವಿನ ಅಂಕುರನಾಥ ಈ ಆದಿಯೋಗಿ! 
ಮಹಾಶಿವರಾತ್ರಿಯ ಶುಭಾಶಯಗಳು.

Tuesday, 11 January 2022

ಭಗವದ್ಗೀತೆಯ ಕಿರು ಪರಿಚಯ.

* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು.?

 ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.

 

* ಯಾವಾಗ ಬೋಧಿಸಿದ.?

ಉತ್ತರ : ಇಂದಿನಿಂದ ಸುಮಾರು ಸಾವಿರ ವರ್ಷಗಳ ಹಿಂದೆ.

 

* ಯಾವ ದಿನ ಬೋಧಿಸಿದ.?

ಉತ್ತರ : ರವಿವಾರ.

 

* ಯಾವ ತಿಥಿಯಲ್ಲಿ.?

ಉತ್ತರ : ಏಕಾದಶಿಯಂದು.

 

* ಎಲ್ಲಿ ಬೋಧಿಸಿದ..?

ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.

 

* ಎಷ್ಟು ಸಮಯ ಬೋಧಿಸಿದ.?

ಉತ್ತರ : 45 ನಿಮಿಷ.

 

 

 

* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ.?

ಉತ್ತರ : ಕ್ಷತ್ರಿಯನಿಗೆ

 

ಕರ್ತವ್ಯವಾದದ್ದು ಯುದ್ಧ...

ತನ್ನ ಕರ್ತವ್ಯದಿಂದ ಅರ್ಜುನ

ವಿಮುಖನಾಗಲು ಬಯಸುತ್ತಾನೆ...

ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ...

ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು

ಮಾಡಲು ಹಾಗೂ ಭವಿಷ್ಯದ

ಮಾನವಸಂತತಿಗೆ ಧರ್ಮಜ್ಞಾನವನ್ನು

ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.

 

* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ.?

ಉತ್ತರ : ಹದಿನೆಂಟು.

 

* ಎಷ್ಟು ಶ್ಲೋಕಗಳಿವೆ..?

ಉತ್ತರ : 700 ಶ್ಲೋಕಗಳು.

 

* ಗೀತೆಯಲ್ಲಿರುವ ವಿಷಯಗಳಾವವು.?

ಉತ್ತರ : ಜ್ಞಾನಭಕ್ತಿಕರ್ಮಯೋಗ

ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ. ಮಾರ್ಗಗಳಲ್ಲಿ ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ.

 

* ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ.?

ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.

 

 

 

* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು.?

ಉತ್ತರ : ಭಗವಾನ್ ಸೂರ್ಯದೇವನಿಗೆ.

 

* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ.?

ಉತ್ತರ : ಉಪನಿಷತ್ತಿನಲ್ಲಿ.

 

* ಗೀತೆ ಯಾವ ಗ್ರಂಥದ ಭಾಗವಾಗಿದೆ.?

ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ.

 

* ಭಗವದ್ಗೀತೆಯ ಇನ್ನೊಂದು ಹೆಸರು.?

ಉತ್ತರ : ಗೀತೋಪನಿಷತ್.

 

* ಗೀತೆಯ ಸಾರವೇನು.?

ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ ಶರಣಾಗತಿಯನ್ನು ಹೊಂದುವುದು.

 

* ಭಗವದ್ಗೀತೆಯಲ್ಲಿ ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ?

ಉತ್ತರ

ಶ್ರೀಕೃಷ್ಣ – 574

ಅರ್ಜುನ – 85

ಧೃತರಾಷ್ಟ್ರ – 01

ಸಂಜಯ – 40






Tuesday, 16 November 2021

ನನ್ನ ಈ ಜನ್ಮ ನಿನಗೆ ಸದಾ ಋಣಿ ಅಮ್ಮ

ನನ್ನ ಈ ಜನ್ಮ ನಿನಗೆ ಸದಾ ಋಣಿ ಅಮ್ಮ
ಮರುಜನ್ಮ ನೀ ಹುಟ್ಟಿ ಬಾ ನನ್ನ ಮಗಳಾಗಿ ಅಮ್ಮ
ಮುದ್ದಿಸುವೆ ನಿನ್ನಂತೆ ಲಾಲಿಸುವೆ ಮಗುವಂತೆ
ಕೈ ತುತ್ತು ನೀಡಿ ಲಾಲಿ ಹಾಡಿ ಮಡಿಲಲ್ಲಿ ಮಲಗಿಸುವೆ
ಕೊರಗಬೇಡ ಮರುಗಬೇಡ
ನಾನಿರುವವರೆಗು ಹೆದರಬೇಡ.

ನಿನ್ನಂತೆ ಬದುಕಿದವರ ಕಂಡಿಲ್ಲ ನಾನು
ನಿನ್ನ ಜೀವನವೆ ಮಹೋನ್ನತ ಇತಿಹಾಸ ಇನ್ನು
ನೀನಾದೆ ಪತಿ ಮಕ್ಕಳಿಗೆ ದಾರಿ ದೀಪ
ನಿನ್ನ ಕನಸು ಬಯಕೆಗಳ ಮುಚ್ಚಿಟ್ಟು ಪಾಪ
ಹೆದರಿ ಕುಂತು ಬದುಕಿಗೆ ಹಿಂಜರಿಯುವಾಗ
ಗದರಿ ನಿಲ್ಲುವಂತೆ ಬೆನ್ತಟ್ಟಿ ನೆರಳಾದೆ ಈಗ
ನಿನ್ನ ಹಾಗೆ ಕರುಣೆ ದೇವರಿಗು ಇಲ್ಲ
ನಿನಗಾಗಿ ನಾ ಇರುವೆ ಕೊರಗಬೇಡ ಅಮ್ಮ.

ಈ ಜನ್ಮ ಅಂತು ಮರೆತುಬಿಡು ನೀನು
ಬರುವ ಜನ್ಮವಂತು ನಿಂಗೆ ಅಪ್ಪ ನಾನು
ಬೆತ್ತ ಹಿಡಿದು ಗದರಲಾರೆ, ಅತ್ತ-ಇತ್ತ ಹೋಗಲಾರೆ
ಒಂದು ಕಂಬನಿಯ ತರಿಸಲಾರೆ ಕೇಳಿದ್ದೇನು ಇಲ್ಲ ಎನ್ನಲಾರೆ
ಸುತ್ತಲಿನ ಜನರೆಲ್ಲ ನಿನ್ನ ಕೊಂಡು ಮುದ್ದಾಡಬೇಕು
ಅಮ್ಮ-ಅಪ್ಪ ನಾನಾಗಿ, ಅಕ್ಕ-ತಮ್ಮ ನಾನಾಗಿ
ಬಂಧು-ಬಳಗ ನಾನಾಗಿ ಎಂದೂ ಜೊತೆಯಿರುವೆ
ಮರುಗದಿರು ಮತ್ತೆ ನೋವ ಪಡದಿರು
ನಾನಿರುವೆ ಇನ್ನೆಂದು ಜಾಸ್ತಿ ನಗುತಲಿರು ಅಮ್ಮ.

ಪಾರ್ವತಿ ಪುತ್ರ ಯಲ್ಲಪ್ಪ ನಂದಿ.






Saturday, 18 September 2021

ಕುರುಬರ ಹಾಡು

 

ಕುರುಬರು ಇರಬೇಕು

ಊರು ತುಂಬ

ಕುರಿಗಳು ಇರಬೇಕು

ದೇಶ ತುಂಬ...

 

ಕುರಿ ಹಾಲು ಇರಬೇಕು

ಮನೆ ತುಂಬ

ಕುರಿ ಹಾಲು ಕುಡಿಬೇಕು

ಹೊಟ್ಟೆ ತುಂಬ...

 

ಗಟ್ಟಿ ಇರಬೇಕು 

ತೋಳ ತುಂಬ

ತೊಡೆ ತಟ್ಟಬೇಕು

ಕಣದ ತುಂಬ..

 

ಕಂಬಳಿ ಬೀಸಬೇಕು

ಮೋಡ ತುಂಬ

ಮೇಘ ಸುರಿಯಬೇಕು

ಧರೆಯ ತುಂಬ..

 

ಭಕ್ತಿಯ ಮಾಡಬೇಕು

ಭಾವ ತುಂಬಿ 

ಸಿದ್ದರ ನೆನೆಯಬೇಕು

ಮನ ತುಂಬಿ...

 

ಹಾಲುಮತದ ಕುರುಬ ಯಲ್ಲಪ್ಪ ನಂದಿ.



Saturday, 19 June 2021

Baby boy

We thank the Lord above

for sending us a child to love...
Blessed Baby "Boy" on 20th Jun 2021 12:27 PM

Yallappa and Ratna Nandi.

Thursday, 17 June 2021

RANI CHANNAMMA UNIVERSITY, BELAGAVI


               "ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು."                      

"THEY CANNOT MAKE HISTORY WHO FORGET HISTORY."



Monday, 14 June 2021

ಕೋವಿಡ್ 19

 2019 -ಎನ್ ಕೋವ್ ಅಥವಾ 2019 ನಾವೆಲ್ ಕರೋನಾ ವೈರಸ್ ಕೋವಿಡ್ -19 ಎಂದೂ ಕರೆಯಲ್ಪಡುವ ಈ ವೈರಸ್ ಮೊದಲಿಗೆ ಚೈನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019 ರಲ್ಲಿ ಗುರುತಿಸಲ್ಪಟ್ಟಿತು. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ಯಾಂಡಿಮೀಕ್(ಸಾಂಕ್ರಾಮಿಕ) ಕಾಯಿಲೆ ಎಂದು ಗುರುತಿಸಿ 11 ಮಾರ್ಚ್ 2020 ರಂದು ಘೋಷಿಸಿದೆ. ಕೋವಿಡ್ 2019 ಕರೋನಾ ವೈರಸ್ ಗುಂಪಿಗೆ ಸೇರಿದ ಈ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ.


ಅರಿಯಿರಿ 

ಈ ವೈರಸ್ ಪ್ರಮುಖವಾಗಿ ಸೋಂಕುಳ್ಳ ವ್ಯಕ್ತಿಯ ಸಂಪರ್ಕದಲ್ಲಿದ್ದಾಗ ಅವರುಗಳ ಕೆಮ್ಮು ಅಥವಾ ಸೀನಿನಿಂದ ಆ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಸಾಮಾಜಿಕ ಅಂತರ ಕಾಯ್ದಿಟ್ಟುಕೊಳ್ಳುವ ಮೂಲಕ (ಅಂದರೆ ಕನಿಷ್ಟ ಆರು ಫೀಟ್ ಅಂತರ) ಮತ್ತು ಕೆಮ್ಮುವಾಗ ಕೈಯ್ಯನ್ನು ಬಾಯಿಗೆ ಅಡ್ಡ ಹಿಡಿದುಕೊಳ್ಳುವ ಮೂಲಕ ಈ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿದೆ.


ಮುನ್ನೆಚ್ಚರಿಕೆ 

ಆಗಾಗ ಕನಿಷ್ಠ 20 ಸೆಕೆಂಡ್ ಗಳ ಕಾಲ ಸೊಪಿನಿಂದ ಕೈ ಗಳನ್ನು ತೊಳೆಯುವುದು.

ಯಾವುದಾದರೂ ಹೊರಗಿನ ವಸ್ತುಗಳನ್ನ ಮುಟ್ಟಿದ ನಂತರ ಕೂಡಲೆ ಸ್ಯಾನಿಟೈಜರ್ಗಳನ್ನ ಬಳಸಿ ನಿಮ್ಮ ಕೈಗಳನ್ನು ಉಜ್ಜಿಕೊಳ್ಳಿ

ಕೈ ತೊಳೆಯದೆ ನಿಮ್ಮ ಮುಖ ( ಕಣ್ಣು , ಮೂಗು, ಬಾಯಿ) ಇವುಗಳನ್ನು ಮುಟ್ಟುವುದನ್ನು ತಡೆಯಿರಿ

ಮನೆಯಲ್ಲಿಯೇ ಇರಿ ಮತ್ತು ಕಾಯಿಲೆ ಇರುವ ವ್ಯಕ್ತಿಗಳ ಜೊತೆ ಅತಿ ಹತ್ತಿರದ ಸಂಪರ್ಕ ಬೇಡ

60 ವರ್ಷ ಮೇಲ್ಪಟ್ಟ ಮತ್ತು ಹತ್ತು ವರ್ಷದ ಕೆಳಗಿನವರುಗಳು ಈ ವೈರಸ್ ಸೋಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ವಯಸ್ಸಿನವರ ಜೊತೆ ಹತ್ತಿರದ ಸಂಪರ್ಕವನ್ನು ತಡೆಯುವುದು ಉತ್ತಮ

ಕೆಮ್ಮುವಾಗ ಅಥವ ಸೀನುವಾಗ ಟಿಶ್ಯೂ ವನ್ನು ಅಡ್ಡ ಹಿಡಿದುಕೊಂಡರೆ ಆ ಕೂಡಲೇ ಅವುಗಳನ್ನು ಒಂದು ಸಣ್ಣ ಚೀಲದಲ್ಲಿ ಕಟ್ಟಿ ಪ್ರತ್ಯೇಕವಾಗಿ ಎಸೆಯಿರಿ.

ನಿಮ್ಮ ಮನೆ, ಆಫೀಸಿನ ಸೋಫಾಗಳನ್ನು, ಟೇಬಲ್, ಬಾಗಿಲು, ಬಾಗಿಲಿನ ಹಿಡಿಕೆ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗಾಗ ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುತ್ತಿರಿ.

ಕೊರಿಯರ್ ಅಥವಾ ಯಾವುದೇ ಪಾರ್ಸೆಲ್ ಪಡೆಯುವಾಗ ಸಾಧ್ಯವಿದ್ದಲ್ಲಿ ಅವುಗಳನ್ನು ಒಂದೆಡೆ ಇರಿಸಲು ಹೇಳಿ. ಕೈಗಳಿಂದ ಪಡೆಯವುದನ್ನು ಆದಷ್ಟೂ ತಪ್ಪಿಸಿ ತೊಳೆಯುವಂತಹುದಾದರೆ ತೊಳೆದು ತೆಗೆದಕೊಳ್ಳಿ ಇಲ್ಲವಾದಲ್ಲಿ ಸ್ವಲ್ಪ ಘಂಟೆಗಳ ಕಾಲ ಮುಟ್ಟದೇ ಹಾಗೆಯೇ ಇಟ್ಟು ನಂತರ ಪಾರ್ಸೆಲ್ ಅಥವಾ ಕೊರಿಯರ್ ತೆರೆಯಬಹುದು.


ಯಲ್ಲಪ್ಪ ನಂದಿ 



ಕಾಳಜಿ

ತಿಂಗಳಿನ ಎದೆ ಮೇಲೆ
ಕಾಲಿಟ್ಟು ಬಂದವರೆ
ಮಂಗಳನ ಅಂಗಳದಿ
ಜೀವನವ ಕಂಡವರೆ!



ನೂರೊಂದು ಮಹಡಿಗಳ
ಕಟ್ಟಡವ ಕಟ್ಟುವರೆ
ಹಾರಿ ಸಾಗರದಾಚೆ
ಊರುಗಳ ಸೇರುವರೆ!



ಹೊರಗೊಂದು ನೆಲೆಯನ್ನು
ಹುಡುಕುವಾ ಮುನ್ನ
ನೆಲೆ ಕೊಟ್ಟವಳ ಬಗೆಗೆ
ಕಾಳಜಿಯು ಚೆನ್ನ!



ನಮಗೊಂದೆ ದೇಗುಲವು
ಭೂಮಿತಾಯಿ
ಅವಳ ಪೊರೆವುದೆ ನಮ್ಮ
ಪರಮ ಧ್ಯೇಯ



ಕಂಕಣವ ತೊಟ್ಟು
ಹಬ್ಬಿಸಬೇಕು ಹಸಿರು
ಇಂಗಿ ಹೋಗುವ ಮುನ್ನ
ಇಳೆಯ ಉಸಿರು


ಯಲ್ಲಪ್ಪ ನಂದಿ.


Thursday, 25 February 2021

QR Code's

 Facebook main account QR code













 Facebook page QR code












Twitter QR code










Pinterest QR code










LinkedIn QR code










Instagram  QR code



Sunday, 17 January 2021

Important Shortcut Keys for Computer

CTRL+A. . . . . . . . . . . . . . . . . Select All
CTRL+C. . . . . . . . . . . . . . . . . Copy
CTRL+X. . . . . . . . . . . . . . . . . Cut
CTRL+V. . . . . . . . . . . . . . . . . Paste
CTRL+Z. . . . . . . . . . . . . . . . . Undo
CTRL+B. . . . . . . . . . . . . . . . . Bold
CTRL+U. . . . . . . . . . . . . . . . . Underline
CTRL+I . . . . . . . . . . . . . . . . . Italic
F1 . . . . . . . . . . . . . . . . . . . . . . Help
F2 . . . . . . . . . . . . . . . . . . . . . Rename selected object
F3 . . . . . . . . . . . . . . . . . . . . . Find all files
F4 . . . . . . . . . . . . . . . . . . . . . Opens file list drop-down in dialogs
F5 . . . . . . . . . . . . . . . . . . . . . Refresh current window
F6 . . . . . . . . . . . . . . . . . . . . . Shifts focus in Windows Explorer
F10 . . . . . . . . . . . . . . . . . . . . Activates menu bar options
ALT+TAB . . . . . . . . . . . . . . . . Cycles between open applications
ALT+F4 . . . . . . . . . . . . . . . . . Quit program, close current window
ALT+F6 . . . . . . . . . . . . . . . . . Switch between current program windows
ALT+ENTER. . . . . . . . . . . . . . Opens properties dialog
ALT+SPACE . . . . . . . . . . . . . . System menu for current window
ALT+¢ . . . . . . . . . . . . . . . . . . opens drop-down lists in dialog boxes
BACKSPACE . . . . . . . . . . . . . Switch to parent folder
CTRL+ESC . . . . . . . . . . . . . . Opens Start menu
CTRL+ALT+DEL . . . . . . . . . . Opens task manager, reboots the computer
CTRL+TAB . . . . . . . . . . . . . . Move through property tabs
CTRL+SHIFT+DRAG . . . . . . . Create shortcut (also right-click, drag)
CTRL+DRAG . . . . . . . . . . . . . Copy File
ESC . . . . . . . . . . . . . . . . . . . Cancel last function
SHIFT . . . . . . . . . . . . . . . . . . Press/hold SHIFT, insert CD-ROM to bypass auto-play
SHIFT+DRAG . . . . . . . . . . . . Move file
SHIFT+F10. . . . . . . . . . . . . . . Opens context menu (same as right-click)
SHIFT+DELETE . . . . . . . . . . . Full wipe delete (bypasses Recycle Bin)
ALT+underlined letter . . . . Opens the corresponding menu
PC Keyboard Shortcuts
Document Cursor Controls
HOME . . . . . . . . . . . . . . to beginning of line or far left of field or screen
END . . . . . . . . . . . . . . . . to end of line, or far right of field or screen
CTRL+HOME . . . . . . . . to the top
CTRL+END . . . . . . . . . . to the bottom
PAGE UP . . . . . . . . . . . . moves document or dialog box up one page
PAGE DOWN . . . . . . . . moves document or dialog down one page
ARROW KEYS . . . . . . . move focus in documents, dialogs, etc.
CTRL+ > . . . . . . . . . . . . next word
CTRL+SHIFT+ > . . . . . . selects word
Windows Explorer Tree Control
Numeric Keypad * . . . Expand all under current selection
Numeric Keypad + . . . Expands current selection
Numeric Keypad – . . . Collapses current selection
¦ . . . . . . . . . . . . . . . . . . Expand current selection or go to first child
‰ . . . . . . . . . . . . . . . . . . Collapse current selection or go to parent
Special Characters
‘ Opening single quote . . . alt 0145
’ Closing single quote . . . . alt 0146
“ Opening double quote . . . alt 0147
“ Closing double quote. . . . alt 0148
– En dash. . . . . . . . . . . . . . . alt 0150
— Em dash . . . . . . . . . . . . . . alt 0151
… Ellipsis. . . . . . . . . . . . . . . . alt 0133
• Bullet . . . . . . . . . . . . . . . . alt 0149
® Registration Mark . . . . . . . alt 0174
© Copyright . . . . . . . . . . . . . alt 0169
™ Trademark . . . . . . . . . . . . alt 0153
° Degree symbol. . . . . . . . . alt 0176
¢ Cent sign . . . . . . . . . . . . . alt 0162
1⁄4 . . . . . . . . . . . . . . . . . . . . . alt 0188
1⁄2 . . . . . . . . . . . . . . . . . . . . . alt 0189
3⁄4 . . . . . . . . . . . . . . . . . . . . . alt 0190
PC Keyboard Shortcuts
Creating unique images in a uniform world! Creating unique images in a uniform world!
é . . . . . . . . . . . . . . . alt 0233
É . . . . . . . . . . . . . . . alt 0201
ñ . . . . . . . . . . . . . . . alt 0241
÷ . . . . . . . . . . . . . . . alt 0247
File menu options in current program
Alt + E Edit options in current program
F1 Universal help (for all programs)
Ctrl + A Select all text
Ctrl + X Cut selected item
Shift + Del Cut selected item
Ctrl + C Copy selected item
Ctrl + Ins Copy selected item
Ctrl + V Paste
Shift + Ins Paste
Home Go to beginning of current line
Ctrl + Home Go to beginning of document
End Go to end of current line
Ctrl + End Go to end of document
Shift + Home Highlight from current position to beginning of line
Shift + End Highlight from current position to end of line
Ctrl + f Move one word to the left at a time
Ctrl + g Move one word to the right at a time
MICROSOFT® WINDOWS® SHORTCUT KEYS
Alt + Tab Switch between open applications
Alt +
Shift + Tab
Switch backwards between open
applications
Alt + Print
Screen
Create screen shot for current program
Ctrl + Alt + Del Reboot/Windows® task manager
Ctrl + Esc Bring up start menu
Alt + Esc Switch between applications on taskbar
F2 Rename selected icon
F3 Start find from desktop
F4 Open the drive selection when browsing
F5 Refresh contents
Alt + F4 Close current open program
Ctrl + F4 Close window in program
Ctrl + Plus
Key
Automatically adjust widths of all columns
in Windows Explorer
Alt + Enter Open properties window of selected icon
or program
Shift + F10 Simulate right-click on selected item
Shift + Del Delete programs/files permanently
Holding Shift
During Bootup
Boot safe mode or bypass system files
Holding Shift
During Bootup
When putting in an audio CD, will prevent
CD Player from playing
WINKEY SHORTCUTS
WINKEY + D Bring desktop to the top of other windows
WINKEY + M Minimize all windows
WINKEY +
SHIFT + M
Undo the minimize done by WINKEY + M
and WINKEY + D
WINKEY + E Open Microsoft Explorer
WINKEY + Tab Cycle through open programs on taskbar
WINKEY + F Display the Windows® Search/Find feature
WINKEY +
CTRL + F
Display the search for computers window
WINKEY + F1 Display the Microsoft® Windows® help
WINKEY + R Open the run window
WINKEY +
Pause /Break
Open the system properties window
WINKEY + U Open utility manager
WINKEY + L Lock the computer (Windows XP® & later)
OUTLOOK® SHORTCUT KEYS
Alt + S Send the email
Ctrl + C Copy selected text
Ctrl + X Cut selected text
Ctrl + P Open print dialog box
Ctrl + K Complete name/email typed in address bar
Ctrl + B Bold highlighted selection
Ctrl + I Italicize highlighted selection
Ctrl + U Underline highlighted selection
Ctrl + R Reply to an email
Ctrl + F Forward an email
Ctrl + N Create a new email
Ctrl + Shift + A Create a new appointment to your calendar
Ctrl + Shift + O Open the outbox
Ctrl + Shift + I Open the inbox
Ctrl + Shift + K Add a new task
Ctrl + Shift + C Create a new contact
Ctrl + Shift+ J Create a new journal entry
WORD® SHORTCUT KEYS
Ctrl + A Select all contents of the page
Ctrl + B Bold highlighted selection
Ctrl + C Copy selected text
Ctrl + X Cut selected text
Ctrl + N Open new/blank document
Ctrl + O Open options
Ctrl + P Open the print window
Ctrl + F Open find box
Ctrl + I Italicize highlighted selection
Ctrl + K Insert link
Ctrl + U Underline highlighted selection
Ctrl + V Paste
Ctrl + Y Redo the last action performed
Ctrl + Z Undo last action
Ctrl + G Find and replace options
Ctrl + H Find and replace options
Ctrl + J Justify paragraph alignment
Ctrl + L Align selected text or line to the left
Ctrl + Q Align selected paragraph