ಸತಿಯ ಸುಟ್ಟ ದೇಹವನ್ನು ಹೊತ್ತು ಹುಚ್ಚನಂತೆ ಅಲೆದಾಡಿದ ಪ್ರೇಮಯೋಗಿ. ಸಮಸ್ತ ಗಣದೊಂದಿಗೆ ಕೈಲಾಸದಿಂದ ವರಯಾತ್ರೆ ಹೊರಟು ಮದುವೆಯೆಂಬ ಅಮೋಘ ಚಿತ್ರಣ ಕಟ್ಟಿಕೊಟ್ಟ ವರಯೋಗಿ. ಅರ್ಧನಾರೀಶ್ವರನಾಗಿ ಲಿಂಗಸಮಾನತೆ ಮೆರೆದ ಪುರುಷಯೋಗಿ. ಸುಬ್ರಹ್ಮಣ್ಯ, ಗಣೇಶ, ಅಶೋಕ ಸುಂದರಿಯನ್ನೊಳಗೊಂಡ ಸುಸಂಸಾರಯೋಗಿ. ಗಾನ ಹೇಳಿಕೊಟ್ಟ ನಾದಯೋಗಿ. ಜ್ಞಾನ ಕರುಣಿಸಿದ ವೇದಯೋಗಿ. ನಟರಾಜನಾದ ನಾಟ್ಯಯೋಗಿ. ಲೋಕದ ಹಿತಕಾಗಿ ವಿಷವನು ಕುಡಿದ ಲೋಕೋಪಯೋಗಿ. ಕಾಳಿಯ ಕೆಂಡದಂಥಾ ಕೋಪವನ್ನೂ ತನ್ನೆದೆಯ ಮೇಲಿನ ಒಲವಾಗಿಸಿದ ಧ್ಯಾನಯೋಗಿ. ಬದುಕು ಬೂದಿಯೆಂದು ಸಾರಿದ ಸ್ಮಶಾನಯೋಗಿ. ಸುರಾಸುರ ಭೇದ ಮಾಡದ ಕರುಣಾಯೋಗಿ. ಅಣು-ಅಣುವಿನ ಅಂಕುರನಾಥ ಈ ಆದಿಯೋಗಿ!
ಮಹಾಶಿವರಾತ್ರಿಯ ಶುಭಾಶಯಗಳು.