ಕಡಿದಾದ ಬೆಟ್ಟ ಗುಡ್ಡಗಳಲ್ಲಿನ ಯುದ್ಧ ಇವರಿಲ್ಲದೆ ಗೆಲ್ಲಲು ಭಾರತೀಯ ಸೇನೆಗೆ ಸಾಧ್ಯವೇ ಇಲ್ಲ!!!
ಭಾರತದ ಈ ಸಾಹಸಿ ರೆಜಿಮೆಂಟ್ ಬಗ್ಗೆ ಹಿಟ್ಲರ್ ಏನಂತ ಹೇಳಿದ್ದ ಗೊತ್ತೆ?
ಭಾರತದ ಈ ಸಾಹಸಿ ರೆಜಿಮೆಂಟ್ ಬಗ್ಗೆ ಹಿಟ್ಲರ್ ಏನಂತ ಹೇಳಿದ್ದ ಗೊತ್ತೆ?
”ಒಂದು ವೇಳೆ ಯಾರಾದರೂ ನಿಮ್ಮಲ್ಲಿ ನನಗೆ ಮೃತ್ಯುವಿನ ಭಯವಿಲ್ಲ ಎಂದು ಹೇಳುತ್ತಾನಾದರೆ, ಒಂದೋ ಆತ ಸುಳ್ಳು ಹೇಳುತ್ತಿದ್ದಾನೆ, ಇಲ್ಲವೇ ಆತ ಗೂರ್ಖಾ ಆಗಿರುತ್ತಾನೆ!”.
ಈ ಗೂರ್ಖಾ ಅಂದ್ರೆ ನಮ್ಮ ಹೆಮ್ಮೆಯ ಸೇನೆಯ ಒಂದು ತುಕಡಿ. ಗೂರ್ಖಾ ಸೈನಿಕರು ಧೀರರಲ್ಲಿ ಧೀರರು, ಉದಾತ್ತರಲ್ಲಿ ಉದಾತ್ತರು. ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್ ಹೆಸರು ಕೇಳಿದರೆ ಸಾಕು ಶತ್ರುಗಳು ನಿದ್ದೆಯಲ್ಲೂ ಗಡಗಡ ನಡುಗುತ್ತಾರೆ. ಗೂರ್ಖಾ ಸೈನಿಕರು ಅಸಮಾನ್ಯ ಯೋಧರು ಎಂಬ ಮಾತಿಗೆ ಎರಡು ಮಾತಿಲ್ಲದೇ ಎಲ್ಲರೂ ಒಪ್ಪುತ್ತಾರೆ.
ಹೇಡಿಯಾಗಿ ಬದುಕುವುದಕ್ಕಿಂತ ಶೂರನಾಗಿ ಮರಣವನ್ನಪ್ಪುವುದೇ ಲೇಸು. (
“It is better to die in Valour than to live like a Coward” ) ಇದು ಗೂರ್ಖಾ ರೆಜಿಮೆಂಟಿನ ಧೇಯ ವಾಕ್ಯ. ಗೂರ್ಖಾ ಸೈನಿಕರು ಅಕ್ಷರಶಃ ಇದೇ ಧ್ಯೇಯ ವಾಕ್ಯದಂತೆ ಇರುತ್ತಾರೆ. ಗೂರ್ಖಾ ಎಂದಾಗಲೆಲ್ಲಾ ಸಾಮ್ ಮಾಣಿಕ್ ಶಾ ನೆನಪಾಗುತ್ತಾರೆ, ಅವರೊಂದು ಮಾತು ಹೇಳಿದ್ದರು. ”ಒಂದು ವೇಳೆ ಯಾರಾದರೂ ನಿಮ್ಮಲ್ಲಿ ನನಗೆ ಮೃತ್ಯುವಿನ ಭಯವಿಲ್ಲ ಎಂದು ಹೇಳುತ್ತಾನಾದರೆ, ಒಂದೋ ಆತ ಸುಳ್ಳು ಹೇಳುತ್ತಿದ್ದಾನೆ, ಇಲ್ಲವೇ ಆತ ಗೂರ್ಖಾ ಆಗಿರುತ್ತಾನೆ!”.
( “ If a man says he is not afraid of dying he is either lying or is a gurkha”)
ಎಂದು.
ಸಾವಿಗೆ ಹೆದರದ ಗೂರ್ಖಾ ಸೈನಿಕರು ಪಡೆ ಮಾನ್ಯ ಫೀಲ್ಡ್ ಮಾರ್ಷಲ್ ಮಾಣೇಕ್ ಷಾ ಅವರಿಗೆ ಅತ್ಯಂತ ಪ್ರಿಯವಾದ ಪಡೆ. ಗೂರ್ಖಾ ಸೈನಿಕರು ಅವರನ್ನು “ಸ್ಯಾಮ್ ಬಹದ್ದೂರ್” ಎಂಬ ಹೆಸರಿನಿಂದಲೇ ಗುರುತಿಸುತ್ತಿದ್ದರಂತೆ.
ಪ್ರಥಮ ಮತ್ತು ದ್ವಿತೀಯ ವಿಶ್ವ ಯುದ್ದಗಳಲ್ಲಿ ಬಿಟಿಷ್ ಸೈನ್ಯದ ಭಾಗವಾಗಿದ್ದ ಗೂರ್ಖಾ ಸೈನಿಕರ ಪರಾಕ್ರಮಕ್ಕೆ ಸರ್ವಾಧಿಕಾರಿ ಹಿಟ್ಲರ್ ಕೂಡಾ ಮನಸೋತಿದ್ದನಂತೆ! ಆತ ಇವರನ್ನು “ಬ್ಲಾಕ್ ಡೆವಿಲ್ಸ್” ಎಂದು ಕರೆಯುತ್ತಿದ್ದನಂತೆ. ಮಾತ್ರವಲ್ಲ, ಗೂರ್ಖಾ ಸೈನಿಕರನ್ನು ಹೊಗಳುತ್ತಾ ” ನನ್ನ ಬಳಿಯೇನಾದರೂ ಗೂರ್ಖಾ ಸೈನಿಕರಿದ್ದಿದ್ದರೆ ನಾನು ಇಡೀ ವಿಶ್ವವನ್ನೇ ಗೆಲ್ಲುತ್ತಿದ್ದೆ” ಎಂದು ಹಂಬಲಿಸುತ್ತಿದ್ದನಂತೆ. ಸ್ವತಃ ಶತ್ರು ಸೈನ್ಯದ ನಾಯಕನೇ ಬಾಯಿ ತುಂಬಾ ಹೊಗಳಬೇಕಾದರೆ ಗೂರ್ಖಾಗಳ ಪರಾಕ್ರಮ ಇನ್ನೆಂಥದ್ದಿರಬೇಕು ಯೋಚಿಸಿ.
ವಿಶ್ವ ಮಹಾಯುದ್ಧ ಅಂದಾಕ್ಷಣ ಒಂದು ಘಟನೆಯ ನೆನಪು ಬಂತು. ಎರಡನೇ ಮಹಾಯುದ್ಧದ ಒಂದು ರಣರಂಗದಲ್ಲಿ ತೀವ್ರವಾಗಿ ಬಾಂಬಿಂಗ್ ನಡೆಯುತ್ತಾ ಇತ್ತಂತೆ. ಪ್ರಾಣ ಉಳಿಸಿಕೊಳ್ಳಲು ಒಬ್ಬ ಜರ್ಮನ್ ಸೈನಿಕ ಮತ್ತೊಬ್ಬ ಗೂರ್ಖಾ ಸೈನಿಕ ಅಕಸ್ಮತ್ತಾಗಿ ಆಚೆ ಈಚೆಯಿಂದ ಒಂದೇ ಕಂದಕಕ್ಕೆ (ಟ್ರೆಂಚ್ಗೆ) ಧುಮುಕಿದರಂತೆ. ಇಬ್ಬರೂ ಕಂದಕದೊಳಗೆ ಮುಖಾಮುಖಿಯಾದಾಗ ವೈರಿ ಸೈನಿಕ ಅಟ್ಟಹಾಸದಿಂದ “ನನ್ನ ಆಟೋಮ್ಯಾಟಿಕ್ ರೈಫಲಿನ ಎದುರು ನಿನ್ನ ಹಳೆಯ ಸ್ಪ್ರಿಂಗ್ ಫೀಲ್ಡ್ ರೈಫಲ್ ಮತ್ತು ಕುಖ್ರಿಗಳಿಗೆ ಯಾವ ಅವಕಾಶವೂ ಇಲ್ಲ” ಅಂದನಂತೆ.
ಆಗ ಗೂರ್ಖಾ ನಮ್ರತೆಯಿಂದಲೇ “ಸರ್, ನಿಮ್ಮ ತಲೆಯನ್ನು ಸ್ವಲ್ಪ ಅಲ್ಲಾಡಿಸಿ” ಅಂದನಂತೆ. ವೈರಿ ಸೈನಿಕನು ತನ್ನ ತಲೆಯನ್ನು ಅಲ್ಲಾಡಿಸಲು ಆತನ ತಲೆಯೇ ಉರುಳಿಬಿತ್ತಂತೆ! ಟ್ರೆಂಚಿನ ಒಳಗೆ ನೆಗೆಯಬೇಕಾದ ಕ್ಷಣದಲ್ಲೇ ಗೂರ್ಖಾ ಸೈನಿಕ ತನ್ನ ಕೆಲಸ ಪೂರೈಸಿ ನಿರಾಳವಾಗಿ ಕುಳಿತಿದ್ದನಂತೆ! ಎಂತಹ ಕೆಚ್ಚೆದೆಯ ಸೈನಿಕನ ರಕ್ತವನ್ನೂ ಹೆಪ್ಪುಗಟ್ಟಿಸುವಂತಹುದು ಗೂರ್ಖಾ ಪಡೆಯ ರಣರಂಗದ ಸಿಂಹನಾದ.
ನನ್ನ ರಕ್ತದ ತಾಕತ್ತನ್ನು ತೋರಿಸುವ ಮುನ್ನ ಸಾವೇನಾದರೂ ನನ್ನ ಮುಂದೆ ಬಂದರೆ, ನಾನು ಸಾವನ್ನೇ ಕೊಂದು ಬಿಡುತ್ತೇನೆ ಎಂದು ಬರೆದಿದ್ದ. ಕೊನೆಗೂ ತನ್ನ ರಕ್ತದ ತಾಕತ್ತನ್ನು ತೋರಿಸಿ ಭಾರತಾಂಬೆಗೆ ರಕ್ತತಿಲಕವಾದ ವೀರ ಯೋಧ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ.
ವೀರ ಯೋಧ ಮನೋಜ್ ಕುಮಾರ್ ಪಾಂಡೆ ಹುತಾತ್ಮನಾದ ನಂತರ ಅವನ ಬ್ಯಾಗಿನಲ್ಲಿ ಒಂದು ಪತ್ರ ಬರೆದಿಟ್ಟಿದ್ದನಂತೆ. ಅದರಲ್ಲಿ ಏನು ಬರೆದಿದ್ದನೆಂದು ಗೊತ್ತಾ?
ನನ್ನ ರಕ್ತದ ತಾಕತ್ತನ್ನು ತೋರಿಸುವ ಮುನ್ನ ಸಾವೇನಾದರೂ ನನ್ನ ಮುಂದೆ ಬಂದರೆ,ನಾನು ಸಾವನ್ನೇ ಕೊಂದು ಬಿಡುತ್ತೇನೆ ಎಂದು ಬರೆದಿದ್ದ. ಕೊನೆಗೂ ತನ್ನ ರಕ್ತದ ತಾಕತ್ತನ್ನು ತೋರಿಸಿ ಭಾರತಾಂಬೆಗೆ ರಕ್ತತಿಲಕವಾದ. ಮನೋಜ್ ಕುಮಾರ್ ಪಾಂಡೇ ಇದೇ ಗೂರ್ಖಾ ಪಡೆಯ ಸೈನಿಕ. ಗೂರ್ಖಾ ಪಡೆಯ ಧ್ಯೇಯ ವಾಕ್ಯಕ್ಕೆಅಕ್ಷರಶಃ ಸಾಕ್ಷಿಯಾಗಿ ನಿಲ್ಲುತ್ತಾರೆ ಗೂರ್ಖಾ ರೈಫಲ್ಸ್ ಅಲ್ಲಿ ಇದ್ದ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ. ಮೃತ್ಯುವಿನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯವಿರುವುದು ಗೂರ್ಖಾ ಸೈನಿಕರಿಗೆ ಮಾತ್ರ. ಇದಕ್ಕೆ ಸಾಕ್ಷಿ ಮನೋಜ್ ಕುಮಾರ್ ಪಾಂಡೆ.
ಗೂರ್ಖಾ ರೆಜಿಮೆಂಟ್ ಇದುವರೆಗೂ ಭಾಗವಹಿಸಿದ ಅಷ್ಟೂ ಯುದ್ದಗಳಲ್ಲಿ ಒಂದೇ ಒಂದು ಯುದ್ದವನ್ನೂ ಸೋತಿಲ್ಲ!
1947-48 ರ ಉರಿ ಸೆಕ್ಟರ್, 1962 ನ ಲಡಾಖ್ ಯುದ್ದ, 1965-1971 ನ ಜಮ್ಮು-ಕಾಶ್ಮೀರ ಯುದ್ದಗಳಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಶಾಂತಿ ಸ್ಥಾಪನೆಯ ಕಾರ್ಯಗಳಲ್ಲೂ ಗೂರ್ಖಾ ರೆಜಿಮೆಂಟನ್ನು ಬಳಸಿಕೊಳ್ಳಲಾಗಿದೆ. ಪ್ರಸ್ತುತ ಭಾರತೀಯ ಸೇನೆಯಲ್ಲಿ
1,20,000 ರಷ್ಟು ಗೂರ್ಖಾ ಸೈನಿಕರಿದ್ದಾರೆ. ಇವರಲ್ಲಿ
70% “ನೇಪಾಳ”ದವರಾದರೆ ಇನ್ನುಳಿದವರು ಭಾರತೀಯ ಗೂರ್ಖಾ ಸೈನಿಕರು.
ಭಾರತದ ಸೇನೆಯಲ್ಲಿ ನೇಪಾಳದವರು ಹೇಗೆ ಸೈನಿಕರಾಗಿದ್ದಾರೆ ಅಂತ ಗೊಂದಲವಾಗಿರಬಹುದು. ಹೌದು ಗೂರ್ಖಾ ಪಡೆಗೆ ಒಂದು ಇತಿಹಾಸವಿದೆ. ಗೂರ್ಖಾ ಎನ್ನುವುದು ನೇಪಾಳದ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಜಿಲ್ಲೆ. ಇಲ್ಲಿ ವಾಸಿಸುವವರೆಲ್ಲರೂ ಗೂರ್ಖಾಗಳು. ಗೂರ್ಖಾ ಎನ್ನುವುದು ಒಂದು ಜಾತಿಯಲ್ಲ, ಬದಲಾಗಿ ಸುನವರ್, ಗುರಾಂಗ್, ರಾಯ್, ಮಾಗರ್ ಮತ್ತು ಲಿಂಬೂ ಎಂಬಿತ್ಯಾದಿ ವಿಭಿನ್ನ ಸಮುದಾಯಗಳ ಜನರು ವಾಸಿಸುವ ಪ್ರದೇಶ.
ಎಂಟನೇ ಶತಮಾನದಲ್ಲಿ ಇಸ್ಲಾಮಿನ ವಿರುದ್ಧ ತೊಡೆ ತಟ್ಟಿದ ಹಿಂದೂ ಸಂತ ಮತ್ತು ಯೋದ್ಧ ಗೋರಖನಾಥರಿಂದಾಗಿ ನೇಪಾಲದ ಈ ಪ್ರದೇಶಕ್ಕೆ ಗೋರಖಾ ಎನ್ನುವ ಹೆಸರು ಬಂತು. ರಾಜಸ್ಥಾನದ ರಜಪೂತ ರಾಜ ಪೃಥ್ವಿ ನಾರಾಯಣ ಶಾಹ್ ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಕಾಲದಲ್ಲಿ ಅವರ ಸೈನ್ಯದ ಸೈನಿಕರನ್ನು ಗೋರ್ಖಾಲಿ ಎಂದು ಕರೆಯಲಾಗುತ್ತಿತ್ತು.
1814 ರಲ್ಲಿ ಆಂಗ್ಲೋ-ನೇಪಾಳ ಯುದ್ಧದಲ್ಲಿ ಗೂರ್ಖಾಗಳ ಪರಾಕ್ರಮಕ್ಕೆ ಮನಸೋತ ಬ್ರಿಟಿಷರು
1815 ರಲ್ಲಿ ಇವರನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾರೆ. ಅಂದಿನಿಂದ ಇಂದಿನವರೆಗೂ ಗೂರ್ಖಾಗಳು ಭಾರತೀಯ ಸೈನ್ಯದ ಭಾಗವಾಗಿದ್ದಾರೆ.
ಗೂರ್ಖಾಗಳು ರಣರಂಗಕ್ಕೆ ಇಳಿದರೆ ನರಸಿಂಹನ ಅವತಾರ ತಾಳಿದ್ದಾರೆ ಅಂತಲೇ ಅರ್ಥ. ನರಸಿಂಹನ ರೂಪ ತಾಳಿದ ಗೂರ್ಖಾ ಸೈನಿಕರು ರಣರಂಗಕ್ಕೆ ಧುಮುಕಿದರೆ ವೈರಿಪಡೆಯ ರಕ್ತವನ್ನು ಭುಮಿತಾಯಿಗೆ ಅರ್ಪಿಸುವವರೆಗೂ ಬಿಡೋದಿಲ್ಲ. ಗೂರ್ಖಾ ಸೈನಿಕರ ಬಳಿ ಹದಿನೆರಡು ಇಂಚು ಉದ್ದದ ಚಿಕ್ಕ ತಲವಾರಿನಂತಿರುವ ಆಯುಧವಿರುತ್ತದೆ. “ಆ ಆಯುಧದ ಹೆಸರು ಕುಖ್ರಿ”.
ಆ ಆಯುಧವನ್ನು ಗೂರ್ಖಾ ಸೈನಿಕರು ಎಳೆದು ನಿಂತರೆ ವೈರಿಗಳ ಕಥೆ ಮುಗಿಯಿತು ಅಂತಲೇ ಅರ್ಥ. ಹೀಗಾಗಿಯೇ ಜಗತ್ತಿನ ಎಲ್ಲ ರಾಷ್ಟ್ರಗಳು ಕೂಡಾ ನಮ್ಮ ಸೇನೆಯ ಗೂರ್ಖಾ ಪಡೆ ಎಂದರೆ ಹೆದರುತ್ತಾರೆ. ಹೀಗಾಗಿಯೇ ಸರ್ವಾಧಿಕಾರಿ ಹಿಟ್ಲರ್ ಕೂಡಾ ಗೂರ್ಖಾ ಪಡೆಯ ಶೌರ್ಯಕ್ಕೆ ಮನಸೋತಿದ್ದನಂತೆ!
ಮನಸೋತ ಹಿಟ್ಟಲರ್ ಗೂರ್ಖಾ ಸೈನಿಕರನ್ನು ಹೊಗಳುತ್ತಾ ” ನನ್ನ ಬಳಿಯೇನಾದರೂ ಗೂರ್ಖಾ ಸೈನಿಕರಿದ್ದಿದ್ದರೆ ನಾನು ಇಡೀ ವಿಶ್ವವನ್ನೇ ಗೆಲ್ಲುತ್ತಿದ್ದೆ” ಎಂದು ಹಂಬಲಿಸುತ್ತಿದ್ದನಂತೆ. ಸರ್ವಾಧಿಕಾರಿ ಹಿಟ್ಲರ್ ಕೂಡಾ ಮನಸೋತು ಗೂರ್ಖಾ ಪಡೆಯ ಬಗ್ಗೆ ಈ ರೀತಿ ಮಾತನಾಡಿದ್ದನೆಂದರೆ ನಮ್ಮ ಸೇನೆಯ ಗೂರ್ಖಾ ಪಡೆಯ ಶೌರ್ಯ ಎಷ್ಟಿರಬಹುದು ನೀವೇ ಆಲೋಚಿಸಿ.
