Thursday, 31 May 2018

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು
* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.
* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ - ನುಡಿಮುತ್ತುಗಳು.

* ಶಿಕ್ಷಣವೆಂದರೆ, ಮನಸ್ಸು, ದೇಹ, ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ - ಹರ್ಡೀಕರ‍್ ಮಂಜಪ್ಪ.

* ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ - ವಿವೇಕಾನಂದ.
* ವಿದ್ಯಾಭ್ಯಾಸದಿಂದ ಪ್ರಭುತ್ವ ಬೆಳೆಯದು - ಜಾನ್ ಡ್ಯೂಯಿ.

* ಶಿಕ್ಷಣಕ್ಕಿಂತಲೂ ಮನುಷ್ಯರಿಗೆ ಶೀಲ ಚರಿತ್ರೆಗಳು ಹೆಚ್ಚು ಅವಶ್ಯಕ - ಸ್ಪೆನ್ಸರ್.

* ಮನುಷ್ಯನು ಕಲಿಯಲು ಬಯಸುವುದಾದರೆ ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ - ಚಾರ್ಲ್ಸ್ ಡೆಕ್ಕನ್.

* ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು, ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ -  ಗಯಟೆ.

* ಶಾಲಾ-ಕಾಲೇಜುಗಳಲ್ಲಿ ಕಲಿತದ್ದು ನಿಜವಾದ ಶಿಕ್ಷಣವಲ್ಲ.  ಅದು ಶಿಕ್ಷಣಕ್ಕೆ ಸಾಧನವಷ್ಟೆ - ಎಮರ್ಸನ್.
* ಮನುಷ್ಯರಲ್ಲಿ ಪ್ರೇಮವನ್ನು ಮೂಡಿಸುವ ಸರಳ ಜೀವನನ್ನು ಕಲಿಸುವ ವಿದ್ಯೆಯೇ ಶ್ರೇಷ್ಠವಾದದ್ದು - ಟಾಲ್ಸ್ಟಾಯ್.

* ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲ.  ಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿ - ಜಾನ್ ರಸ್ಕಿನ್.

* ಪ್ರತಿಯೊಬ್ಬ ವ್ಯಕ್ತಿಯು ಎರಡು ರೀತಿಯ ಶಿಕ್ಷಣ ಹೊಂದುತ್ತಾನೆ.  ಒಂದು ಇತರರು ಅವನಿಗೆ ನೀಡುವುದು.  ಇನ್ನೊಂದು ಸ್ವಂತ ಅವನು ಕಲಿಯುವುದು - ನುಡಿಮುತ್ತು.

* ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದರೆ ನೀನು ಓದಿದ್ದು ವ್ಯರ್ಥ - ಪ್ರೇಮಚಂದ.

* ಮನೆಯೇ ಮೊದಲ ಪಾಠಶಾಲೆ - ಗಾದೆ.

* ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಮನುಷ್ಯನನ್ನು ನಡೆಸುವುದೋ ಅದೇ ಅವನ ಭವಿಷ್ಯವನ್ನು ನಿರ್ಧರಿಸುವುದು - ಪ್ಲೇಟೋ.

* ಶಿಕ್ಷಣವು ಅನುಭವಗಳ ಪೂರ್ವ ವ್ಯವಸ್ಥೆ ವಿಧಾನ - ಜಾನ್ ಡ್ಯೂಯಿ.

* ಶಿಕ್ಷಣದ ಮುಖ್ಯ ಕೆಲಸವೆಂದರೆ ನಮ್ಮ ಬದುಕನ್ನು ಅರ್ಥಪೂರ್ಣವಾಗುವಂತೆ ಸಹಕರಿಸುವುದು - ಸ್ಪೆನ್ಸರ್.

Airplane Parts Definitions.




Aviation Alphabet


ಉತ್ತರ ಕರ್ನಾಟಕದ ಮೊದಲ ಮಹಿಳಾ ಪೈಲೆಟ್

ಇದು ಹಿಂದುಳಿದ ನಾಡಿನಲ್ಲಿ ಆಗಸದೆತ್ತರಕ್ಕೆ ಬೆಳೆದು ನಿಂತಿರುವ ಯುವತಿಯ ಗಗನಯಾನ ಸಾಹಸಗಾಥೆ ಇದು.  ಈಕೆಯ ಬಯಕೆಗೆ ಸ್ಪಂದಿಸಿ ಪ್ರೋತ್ಸಾಹಿಸಿ ನೀರೆರೆದು ಬೆನ್ನೆಲುಬಾಗಿ ನಿಂತವರು ಆಕೆಯ ಪೋಷಕರು.  ಈಗ ಇಡೀ ಉತ್ತರ ಕರ್ನಾಟಕದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ್ದಾಳೆ.  ಅಷ್ಟೇ ಅಲ್ಲ, ನಮ್ಮ ಉತ್ತರ ಕರ್ನಾಟಕದ ಯುವತಿಯರೂ ಬಾನೆತ್ತರಕ್ಕೆ ಬೆಳೆಯಬಲ್ಲರು ಎಂಬುದಕ್ಕೆ ಈಕೆ ತಾಜಾ ಉದಾಹರಣೆಯಾಗಿದ್ದಾರೆ.

ಬಾನಾಡಿಗಳಂತೆ ಮಗಳು ಹಾರಾಡುತ್ತಿರುವದನ್ನು ಕಂಡು ಈಕೆಯ ಪೋಷಕರಿಗಷ್ಟೇ ಅಲ್ಲ, ಇಡೀ ಬರದ ನಾಡಿಗೂ ಕೀರ್ತಿ ತಂದಿದೆ. ಆಕೆ ಬರದ ನಾಡಿನ ಯುವತಿ.  ಆದರೆ, ಪ್ರೋತ್ಸಾಹಕ್ಕೆ ಯಾವುದೇ ರೀತಿಯಲ್ಲಿ ಬರ ಬಾರದಂತೆ ಸಹಕಾರ ನೀಡಿ ಬೆಳೆಸಿದರುವ ಆಕೆಯ ಪೋಷಕರು.  ಅಂದು ಮಗಳಿಗೆ ಇವರು ನೀಡಿದ ಪ್ರೋತ್ಸಾಹ ಇಂದು ಫಲ ನೀಡಿದೆ.  ಈಕೆಯ ಪೋಷಕರು ಅಷ್ಟೇ ಏಕೆ, ಇಡೀ ರಾಜ್ಯದ ಜನ ಭೂಮಿಯಿಂದ ಆಗಸದೆತ್ತರಕ್ಕೆ ತಲೆ ಎತ್ತಿ ನೋಡುವಂತೆ ಮಾಡಿದೆ.

ಆಕೆಯ ಹೆಸರು ಪ್ರೀತಿ.  ತಂದೆ ಸುಧೀರ ತಾಯಿ ಕವಿತಾ ಬಿರಾದಾರ.  ತಮ್ಮ ಯಶ್, ತಂಗಿ ಅದಿತಿ.  ಹೀಗೆ ತಂದೆ-ತಾಯಿ ಹಾಗೂ ತಮ್ಮ ಮತ್ತು ತಂಗಿಯ ಜೊತೆ ತನಗಿಷ್ಠ ಬಂದಂತೆ ಬೆಳೆದು ಈಗ ಈ ಸಾಧನೆ ಮಾಡಿರುವ ಈ ಯುವತಿ ವಿಜಯಪುರ ನಗರದ ಅಕ್ಕಮಹಾದೇವಿ ರಸ್ತೆಯ ಬಳಿ ಇರುವ ಸುಪ್ರಭಾತ ಫಾರ್ಮಸಿ ಮನೆಯಲ್ಲಿ ವಾಸಿಸುವ ಸಾಮಾನ್ಯ ಯುವತಿ.  ಆದರೆ ಈಗ ಮಾಡಿರವ ಸಾಧನೆ ಅಸಾಮಾನ್ಯ.  ಆಕೆ ಮಾಡಿದ ಸಾಧನೆ ಇಡೀ ರಾಜ್ಯ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.  ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಯಾವೊಬ್ಬ ಮಹಿಳೆಯೂ ಮಾಡದ ಸಾಧನೆಯನ್ನು ಈಕೆ ಮಾಡಿದ್ದಾಳೆ.

ಈಕೆ ಮಾಡಿರುವ ಸಾಧನೆಯೂ ಬಲು ಅಪರೂಪ.  ಅದೇನೆಂದರೆ ವಿಮಾನದಲ್ಲಿ ಪೈಲೆಟ್ .  ಈಗಾಗಲೇ ತರಬೇತಿ ಪೂರ್ಣಗೊಳಿಸಿ ಸಹ ಪೈಲೆಟ್ ಆಗಿದ್ದ ಈ ಯುವತಿ ಈಗ ಪ್ರೊಮೋಷನ್ ಅಂದರೆ ಬಡ್ತಿ ಪಡೆದು ಪೈಲೆಟ್ ಆಗಿದ್ದಾಳೆ.  ಈ ಯುವತಿ ನವದೆಹಲಿಯಲ್ಲಿ ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಗಳ ಸಾಧನೆ ಕಂಡು ಪೋಷಕರೂ ಹಿರಿಹಿರಿ ಹಿಗ್ಗಿದ್ದಾರೆ.  ಯಾವ ಉದ್ಯೋಗವನ್ನು ಮಾಡಲು ಪುರುಷರೇ ಹಿಂಜರಿಯುತ್ತಾರೆಯೋ ಅದೇ ಕೆಲಸವನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡು ಯಶಸ್ಸು ಕಂಡಿರುವ ಮಗಳ ಬಗ್ಗೆ ಇವರಿಗೆಲ್ಲ ಈಗ ಹೆಮ್ಮೆಯಾಗಿದೆ.  ಅವಳು ಓಡಿಸುವ ವಿಮಾನದಲ್ಲಿ ಸಂಚರಿಸುವ ಮಹದಾಸೆ ಪೋಷಕರದ್ದಾಗಿದೆ.

ಬಿ. ಇ. ಎಂಜಿನಿಯರಿಂಗ್ ಮುಗಿಸುವವರೆಗೂ ಪ್ರೀತಿ ಸುಧೀರ ಬಿರಾದಾರ ಪರೀಕ್ಷೆ ಫಲಿತಾಂಶದಲ್ಲಿ ಶೇಕಡ 90ಕ್ಕೂ ಹೆಚ್ಚು ಅಂಕ ಗಳಿಸಿ ಸೈ ಎನಿಸಿಕೊಂಡಿದ್ದಳು.  ಸ್ನಾತಕೋತ್ತರ ಪದವಿ ಎಂಎಸ್ ನ್ನು ವಿದೇಶದಲ್ಲಿ ಓದಬೇಕೆಂದುಕೊಂಡಿದ್ದಳು.  ಆದರೆ, ಎಂ. ಎಸ್. ಓದಿಸಿದರೆ ಮಗಳು ತಮ್ಮಿಂದ ದೂರವಾಗಿ ಬಿಡುತ್ತಾಳೆ.  ಮುಂದೆ ಭೇಟಿಯೇ ಅಪರೂಪ ಎಂದು ಭಾವಿಸಿದರು.  ಐಎಎಸ್ ಸ್ಟಡಿ ಮಾಡು ಎಂದು ಕಿವಿಮಾತು ಹೇಳಿದರು.  ಪ್ರೀತಿಗೆ ಅದು ಇಷ್ಟವಾಗಲಿಲ್ಲ. ಐಐಎಂ ಕ್ರ್ಯಾಷ್ ಕೋರ್ಸ್ ಗೆ ತರಬೇತಿಗೆ ಕಳುಹಿಸಿದರು.  ಆದರೆ, ಅಲ್ಲಿ ಆಕೆ ಕೇವಲ ಶೇಕಡ 70 ರಷ್ಟು ಮಾತ್ರ ಅಂಕ ಗಳಿಸಿದಳು.  ಅಷ್ಟರಲ್ಲಿ ನ್ಯಾಶನಲ್ ಫ್ಲಾಯಿಂಗ್ ಆ್ಯಂಡ್ ಟ್ರೇನಿಂಗ್ ಅಕ್ಯಾಡೆಮಿ ಪ್ರವೇಶ ಪರೀಕ್ಷೆಗೆ ಅರ್ಜಿ ಕರೆಯಲಾಗಿತ್ತು.  ಅದರಲ್ಲಿ ಪಾಸಾದ ಪ್ರೀತಿ ಸುಧೀರ ಬಿರಾದಾರ ಗೆ ಆಕೆಯ ಕುಟುಂಬದ ಹಿರಿಯ ಸದಸ್ಯರ ವಿರೋಧದ ನಡುವೆಯೂ ಪೋಷಕರು ಒಪ್ಪಿಗೆ ಸೂಚಿಸಿದರು.  ಈಗ ಆಕೆ ಮಾಡಿರುವ ಸಾಧನೆಯನ್ನು ಕಣ್ಣಾರೆ ಕಂಡಿರುವ ಸುಧೀರ ಮತ್ತು ಕವಿತಾ ಬಿರಾದಾರ ದಂಪತಿ ಹರ್ಷಕ್ಕೆ ಪಾರವೇ ಇಲ್ಲದಾಗಿದೆ.

18 ತಿಂಗಳು ನಾಗ್ಪುರ ಬಳಿಯ ಗೊಂಡಾ ಸೇರಿದಂತೆ ದುಬೈನಲ್ಲಿ ತರಬೇತಿ ಪಡೆದು ಬಂದಿರುವ ಈ ಯುವತಿಯ ಮನೆಯಲ್ಲಿ ಈಗ ಸಂತಸ ಮನೆ ಮಾಡಿದೆ.  ತರಬೇತಿಗೂ ಮುಂಚೆ ಪ್ರೀತಿ ಸುಧೀರ ಬಿರಾದಾರ ಎಂದೂ ವಿಮಾನದಲ್ಲಿ ಹಾರಾಟ ನಡೆಸಿರಲಿಲ್ಲ.  ಗುಮ್ಮಟ ನಗರಿ, ಅಣ್ಣ ಬಸವಣ್ಣನ ತವರು ಜಿಲ್ಲೆ ಎಂದೆಲ್ಲ ಹೆಸರುವಾಸಿಯಾಗಿರುವ ವಿಜಯಪುರದಲ್ಲಿ ವಿಮಾನ ನಿಲ್ದಾಣವೂ ಇಲ್ಲ.  ಇನ್ನು ಇಲ್ಲಿಯ ಜನ ಹೆಲಿಕಾಪ್ಟರ್ ಹಾರಾಟವನ್ನು ನಗರದಲ್ಲಿ ಕಣ್ಣಾರೆ ಕಂಡಿದ್ದಾರೆಯೇ ಹೊರತು, ಗಗನದ ಲೋಹದ ಹಕ್ಕಿಯ ಹಾರಾಟವನ್ನು ಜಿಲ್ಲೆಯಲ್ಲಿ ನೋಡಿದ್ದೂ ಅಪರೂಪ, ಆದರೂ ಪ್ರೀತಿಯಿಂದ ಕಲಿತ ವಿದ್ಯೆ ಕೈಹಿಡಿದ ಪರಿಣಾಮ ಪ್ರೀತಿ ಸುಧೀರ ಬಿರಾದಾರ ಈಗ ಪೈಲಟ್ ಆಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ತರಬೇತಿಯ ಕುರಿತು ಮಾತನಾಡುವ ಪ್ರೀತಿ ಸುಧೀರ ಬಿರಾದಾರ, ತಾನೆಂದೂ ಬಾನೆತ್ತರದಲ್ಲಿ ಹಾರಾಡುವಾಗ ಹೆದರಲಿಲ್ಲ.  ಮುಂಚೆಯಿಂದಲೂ ಕೆಲವು ಬಾರಿ ಪ್ಯಾರಾಸೇಲಿಂಗ್ ನಲ್ಲಿ ಭಾಗಿಯಾಗಿದ್ದರಿಂದ ಭಯ ಎಂಬುದು ಗೊತ್ತೆ ಇಲ್ಲ.  ತರಬೇತಿ ಸಂದರ್ಭದಲ್ಲಿ ಸುಮಾರು 8 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸಲಾಗುತ್ತದೆ.  ಕೆಲವು ಬಾರಿ ತರಬೇತುದಾರರ ಜೊತೆಯಲ್ಲಿ ಮತ್ತೆ ನಂತರ ಏಕಾಂಗಿಯಾಗಿ ವಿಮಾನ  ಚಲಾಯಿಸಬೇಕಾಯಿತು ಎಂದು ತರಬೇತಿಯ ಮಾಹಿತಿಯ ಬುತ್ತಿಯನ್ನು ತೆರೆದಿಡುತ್ತಾಳೆ ಪ್ರೀತಿ ಸುಧೀರ ಬಿರಾದಾರ.

ಇದೀಗ ತರಬೇತಿ ಮುಗಿಸಿಕೊಂಡು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿರುವ ಪ್ರೀತಿ ಸುಧೀರ ಬಿರಾದಾರ, ತಮ್ಮೆಲ್ಲ ಸಾಧನೆಗೆ ಪೋಷಕರೇ ಸ್ಪೂರ್ತಿ.  ಎಲ್ಲ ಹೆಣ್ಣು ಮಕ್ಕಳು ಬಯಸುವ ವಿದ್ಯೆಯೆನ್ನು ಪೋಷಕರು ಒದಗಿಸಿದರೇ, ಅವರೂ ಕೂಡ ತನ್ನಂತೆಯೇ ಸಾಧನೆ ಮಾಡಬಲ್ಲರು ಎಂಬುದು ಈ ಯುವತಿಯ ವಿಶ್ವಾಸವಾಗಿದೆ.

ಪ್ರೀತಿ ಸುಧೀರ ಬಿರಾದಾರ 5ನೇ ತರಗತಿಯವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಓದಿದ್ದಳು.  ಇವರ ತಂದೆ ಸುಧೀರ ಬಿರಾದಾರ ಡಿ. ಫಾರ್ಮ. ಓದಿದ್ದಾರೆ.  ಓಷಧ ಅಂಗಡಿಯಿದೆ.  ಹೋಲ್ ಸೇಲ್ ಔಷಧಿಗಳನ್ನು ಮಾರಾಟ ಮಾಡುತ್ತಾರೆ.  1972 ರಲ್ಲಿ ವಿಜಯಪುರಕ್ಕೆ ಬಂದ ಇವರು ಕೇಂದ್ರ ಮಾಜಿ ಸಚಿವ ಮತ್ತು ಪರಿಷತ ಸದಸ್ಯ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಬಾಲ್ಯ ಸ್ನೇಹಿತ.  ಅಷ್ಟೇ ಅಲ್ಲ, ಸಹಪಾಠಿ ಕೂಡ.  ಈ ಹಿನ್ನೆಲೆಯಲ್ಲಿ ಯತ್ನಾಳ ವಿಜಯಪುರ ಲೋಕಸಭೆ ಸದಸ್ಯರಾಗಿದ್ದಾಗ ಅವರ ಬಳಿ ತೆರಲಿದ ಸುಧೀರ ಬಿರಾದಾರ ತಮ್ಮ ಮಗಳಿಗೆ ಎಂಪಿ ಕೋಟಾದಲ್ಲಿ ಪ್ರವೇಶ ನೀಡವಂತೆ ಮಾಡಿದ ಮನವಿಗೆ ಯತ್ನಾಳ್ ಸ್ಪಂದಿಸಿದ್ದರು.  ಅದು ತಮ್ಮ ಮಗಳ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಅಂತಾರೆ ಸುಧೀರ ಬಿರಾದಾರ.

ಅಲ್ಲಿಂದ ಪ್ರೀತಿ ಸುಧೀರ ಬಿರಾದಾರ ಹಿಂದಿರುಗಿ ನೋಡಿದ್ದೆ ಇಲ್ಲ.  ಮುಟ್ಟಿದ್ದೆಲ್ಲ ಯಶಸ್ಸು.   ಈ ಹಿನ್ನೆಲೆಯಲ್ಲಿ ತಮ್ಮ ಮಗಳಿಗೆ ಮಾತೊಂದನ್ನು ಅವರು ಹೇಳಿದ್ದರು.  ಅದರಂತೆ ತನ್ನ ಮೊದಲ ತಿಂಗಳ ಸಂಬಳವಾದ ಒಂದು ಲಕ್ಷ ರೂಪಾಯಿಯೊಂದಿಗೆ ವಿಜಯಪುರಕ್ಕೆ ಬಂದ ಪ್ರೀತಿ ಸುಧೀರ ಬಿರಾದಾರ ತನ್ನ ತಂದೆಯೊಂದಿಗೆ ನೇರವಾಗಿ ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿದ್ದಾಳೆ.  ಅಲ್ಲಿ ಸಂಸ್ಥೆಯ ಅಧ್ಯಕ್ಷ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಕೈಗೆ ತನ್ನ ಮೊದಲ ತಿಂಗಳ ಸಂಬಂಳದ ಚೆಕ್ ನೀಡಿದ್ದಾಳೆ.  ಕಗ್ಗೋಡ ಗ್ರಾಮದಲ್ಲಿರುವ ನಿರ್ಗತಿಕ ಹಸುಗಳ ಗೋಶಾಲೆಗೆ ತನ್ನ ಮೊದಲ ತಿಂಗಳ ಪಗಾರನ್ನು ದಾನವಾಗಿ ನೀಡುವ ಮೂಲಕ ಋಣ ತೀರಿಸಿದ್ದಾಳೆ.

ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಬೆಳೆಸಿದರೂ ಉಪಕಾರ ಹಿಡಿಯುವರ ಸಂಖ್ಯೆ ಈಗ ಕಡಿಮೆ ಇದೆ.  ಆದರೆ, ಎಂದೊ ಮಾಡಿದ ಒಂದು ಸಣ್ಣ ಕೆಲಸವನ್ನು ನೆನಪಿಟ್ಟುಕೊಂಡು ಬಂದು ಈ ರೀತಿಯಲ್ಲಿ ಋಣ ತೀರಿಸುವುದು ಕಂಡು ಸ್ವತಃ ಯತ್ನಾಳ ಮೂಕ ವಿಸ್ಮಿತರಾಗಿದ್ದಾರೆ.  ಇಂಥ ಕ್ಷಣಗಳು ಎಷ್ಟೇ ಹಣ ಗಳಿಸಿದರೂ ಸಿಗುವುದಿಲ್ಲ. ಎಷ್ಟೇ ದೊಡ್ಡ ಹುದ್ದೆಯಲ್ಲಿ ಅಧಿಕಾರದಲ್ಲಿದರೂ ಬರಲಾರವು ಎಂಬುದು ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಅಭಿಮಾನದಿಂದ ಹೇಳುತ್ತಾಳೆ.   ಮಕ್ಕಳ ಕನಸನ್ನು ನಿರೇರೆದು ಪ್ರೋತ್ಸಾಹಿಸಬೇಕು.  ಅದರಲ್ಲಿಯೂ ಬಾಲಕಿಯರ ವಿದ್ಯಾಭ್ಯಾಸಕ್ಕಾಗಿ ಸರಕಾರ ಹಾಗೂ ಬ್ಯಾಂಕುಗಳು ಸಾಲ ನೀಡುತ್ತವೆ.  ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತರ ಕರ್ನಾಟಕದಲ್ಲಿ ಯುವತಿಯರು ಉನ್ನತ ಸ್ಥಾನಕ್ಕೇರಬೇಕು ಎಂಬುದು ಸುಧೀರ ಬಿರಾದಾರ ಅವರ ಆಶಯವಾಗಿದೆ.


ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊಟ್ಟಮೊದಲ ಮಹಿಳಾ ವೈದ್ಯೆ ಆನಂದಿಬಾಯಿ ಜೋಷಿ

ಇಂದು ಅನೇಕ ಸೌಲಭ್ಯ, ಕಾಯ್ದೆ, ತಿದ್ದುಪಡಿಗಳಿಂದ ಮಹಿಳೆ ಸಮಾಜದ ಅನೇಕ ರಂಗಗಳಲ್ಲಿ ತನ್ನ ಪ್ರಭಾವ ಬೀರುತ್ತಿದ್ದಾಳೆ. ಆದರೆ ಸ್ವಾತಂತ್ರ್ಯಕ್ಕೆ ಮುಂಚೆ, ಈ ಯಾವುದೇ ಸೌಲಭ್ಯಗಳಿಲ್ಲದೆಯೂ, ಪುರುಷಪ್ರಧಾನ ಸಮಾಜಕ್ಕೆ ವಿರುದ್ಧವಾಗಿ ನಿಂತು ಒಬ್ಬ ಮಹಿಳೆ ಸಾಧನೆಯನ್ನು ಮಾಡಿ, ಭಾರತದಲ್ಲಿಯೇ ಪ್ರಥಮ ಮಹಿಳಾ ವ್ಶೆದ್ಯೆ ಎಂಬ ಕೀರ್ತಿಗೆ ಪಾತ್ರರಾದರೆಂಬುದು ಸಾಮಾನ್ಯ ವಿಷಯವಲ್ಲ.
ಆನಂದಿಬಾಯಿ ಜೋಷಿ 1865ರ ಮಾರ್ಚ್ 31 ರಂದು ಮುಂಬೈನ ಥಾಣೆ ಎಂಬಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಯಮುನಾ ಜೋಷಿ. ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಇವರಿಗಿಂತ 20 ವರ್ಷ ದೊಡ್ಡವರಾದ, ವಿಧುರರಾದ, ಅಂಚೆ ಗುಮಾಸ್ತರಾಗಿದ್ದ ಗೋಪಾಲ್ ಜೋಷಿಯವರೊಂದಿಗೆ ವಿವಾಹವಾಯಿತು. ಮಹಾರಾಷ್ರದ ಸಂಪ್ರದಾಯದಂತೆ ಯಮುನಾ ಜೋಷಿ ಆನಂದಿಬಾಯಿ ಜೋಷಿಯಾದರು. ಗೋಪಾಲ್ ಜೋಷಿಯವರು ಪ್ರಗತಿಪರ ವಿಚಾರಗಳನ್ನು ಹೊಂದಿದ್ದರಿಂದ ತಮ್ಮ ಪತ್ನಿಯ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಿದರು.
ಆನಂದಿಯವರು 14 ವರ್ಷದವರಾಗಿದ್ದಾಗ ಅವರಿಗೆ ಮಗುವೊಂದು ಜನಿಸಿತು. ಆದರೆ ಉತ್ತಮ ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಆ ಮಗು ತೀರಿಕೊಂಡಿತು. ಈ ಘಟನೆ ಆನಂದಿಬಾಯಿಯವರಿಗೆ ಆಘಾತವನ್ನುಂಟುಮಾಡಿತು. ಜೊತೆಗೆ ವೈದ್ಯಕೀಯ ಶಿಕ್ಷಣ ಮಾಡುವಂತೆ ಪ್ರೇರೇಪಿಸಿತು. ಇಷ್ಟರಲ್ಲಿ ಆಕೆಯ ಪತಿಗೆ ಕಲ್ಕತ್ತಾಗೆ ವರ್ಗವಾಯಿತು. ಅವರ ಬಯಕೆಯನ್ನು ಈಡೇರಿಸಲು ಪತಿ ಪತ್ರಿಕೆಗಳಲ್ಲಿ, ಆಕೆಯ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಕೋರಿದರು. ಇದನ್ನು ಓದಿದ ಸಹೃದಯಿ ಥಿಯೋಡೇಶಿಯಾ ಕಾರ್ಪೆಂಟರ್‍ರವರು ನ್ಯೂಜರ್ಸಿಯ ತಮ್ಮ ಮನೆಯಲ್ಲಿ ಆನಂದಿಯವರಿಗೆ ಆಶ್ರಯ ನೀಡಲು ಮುಂದಾದರು.
ಆದರೆ ಆನಂದಿಬಾಯಿಯವರ ಇಚ್ಛೆಗೆ ಪುರುಷಪ್ರಧಾನ ಭಾರತೀಯ ಸಮಾಜ ಪ್ರೋತ್ಸಾಹಿಸಲಿಲ್ಲ. ಬದಲಿಗೆ ಅವರೊಂದಿಗೆ ಕಟುವಾಗಿ ವರ್ತಿಸಿತು, ಕಲ್ಲುತೂರಾಟವೂ ಆಯಿತು. ಆ ಸಮಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಅವರನ್ನು ಉಳಿಸಿದರು. ಇದಾವುದಕ್ಕೂ ಆನಂದಿಯವರು ಹಿಂಜರಿಯಲಿಲ್ಲ. ಕಲ್ಕತ್ತಾದ ಸೆರಾಂಪುರ್ ಕಾಲೇಜಿನಲ್ಲಿ ಅವರಿಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು, ಅದನ್ನೇ ವೇದಿಕೆಯಾಗಿ ಮಾಡಿಕೊಂಡು ತಾನೊಬ್ಬ ವ್ಶೆದ್ಯೆಯಾಗಿ ಜನಸೇವೆ ಮಾಡಬೇಕೆಂಬ ತಮ್ಮ ನಿರ್ಧಾರವನ್ನು ತಿಳಿಸಿದರು. ಅವರ ನಿರ್ಧಾರಕ್ಕೆ ಬೆಂಬಲವಾಗಿ ಅಂದಿನ ವೈಸ್‍ರಾಯ್ 200 ರೂ ಸಂಗ್ರಹಿಸಿ ಆನಂದಿಯವರಿಗೆ ನೀಡಿದರು. ಅದರ ಜೊತೆ ಆನಂದಿಯವರು ತಮ್ಮ ಬಳೆಗಳನ್ನು ಮಾರಿ 1833ರಲ್ಲಿ ನ್ಯೂಜರ್ಸಿಗೆ ತೆರಳಿದರು.
ಅವರು ತಮ್ಮ 19 ನೇ ವಯಸ್ಸಿನಲ್ಲಿ ವೈದ್ಯಕೀಯ ಪದವಿ ಪ್ರವೇಶಿಸಿದರು. ಆದರೆ ಕೆಲವೇ ದಿನಗಳಲ್ಲಿ ಕ್ಷಯ ರೋಗಕ್ಕೆ ತುತ್ತಾದರು. ಅವರ ಸ್ನೇಹಿತರು ಅವರಿಗೆ ಬಹಳಷ್ಟು ಸಹಾಯ ಮಾಡಿ ಅವರ ಆರೋಗ್ಯ ಸುಧಾರಿಸುವಂತೆ ಮಾಡಿದರು. ನಂತರ ಅವರನ್ನು ನೋಡಿಕೊಳ್ಳುತ್ತಿದ್ದ ವ್ಶೆದ್ಯ ದಂಪತಿಗಳಾದ ಡಾ|| ಟಾರ್ಬನ್ ಮತ್ತು ಅವರ ಪತ್ನಿಯ ಮಾತಿನ ಮೇರೆಗೆ ಪೆನ್‍ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿಗೆ ಸೇರಿ 1886ರ ಮಾರ್ಚ್ 11ರಂದು ವೈದ್ಯಕೀಯ ಪದವಿ ಪಡೆದುಕೊಂಡರು.
ಅವರ ಆರೋಗ್ಯದ ದೃಷ್ಟಿಯಿಂದ ಅವರ ಪತಿ ಮತ್ತು ಸ್ನೇಹಿತರು ಅವರನ್ನು ಅಲ್ಲಿಯೇ ಉಳಿಯುವಂತೆ ಹೇಳಿದರು. ಆದರೆ ಆನಂದಿಬಾಯಿಯವರು ತಾವು ವೈದ್ಯಕೀಯ ಪದವಿ ಪಡೆದದ್ದು ವೈದ್ಯಕೀಯ ಸೌಲಭ್ಯ ವಂಚಿತರಾದ ತನ್ನ ದೇಶದವರ ಸೇವೆಗೆ, ಆದ್ದರಿಂದ ತಾವು ಭಾರತಕ್ಕೆ ಹಿಂತಿರುಗುತ್ತೇವೆಂದು ಹೇಳಿದರು. ಹಿಂತಿರುಗಿದ ಮೇಲೆ ಕೊಲ್ಲಾಪುರದ ರಾಜಸಂಸ್ಥಾನದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ 7 ತಿಂಗಳುಗಳ ಕಾಲ ಸೇವೆ ಸಲ್ಲಿಸಿದರು. ಆದರೆ ಅವರನ್ನು ಹಿಂದೆ ಕಾಡಿದ್ದ ಕ್ಷಯ ರೋಗ ಪುನಃ ಅವರನ್ನು ಕಾಡಿತು. ಅವರು 1886ರ ಅಕ್ಟೋಬರ್ 9ರಂದು ನಿಧನರಾದರು. ಆದರೆ ಅವರ ಓದುವ ಛಲ, ಸೇವಾ ಮನೋಭಾವ, ದೇಶಪ್ರೇಮ ಹಲವರಿಗೆ ಸ್ಫ್ಫೂರ್ತಿಯಾಯಿತು. ಇಂದೂ ಸಹ ಅವರ ಹೆಸರು ಹೆಣ್ಣುಮಕ್ಕಳಿಗೆ ಸಾಧನೆ ಮಾಡುವ ದಾರಿಯನ್ನು ತೋರಿಸುವ ದೀಪವಾಗಿದೆ.


“ಬ್ಲಾಕ್ ಡೆವಿಲ್ಸ್” Gorkha regiment in Indian Army



ಕಡಿದಾದ ಬೆಟ್ಟ ಗುಡ್ಡಗಳಲ್ಲಿನ ಯುದ್ಧ ಇವರಿಲ್ಲದೆ ಗೆಲ್ಲಲು ಭಾರತೀಯ ಸೇನೆಗೆ ಸಾಧ್ಯವೇ ಇಲ್ಲ!!!
ಭಾರತದ ಸಾಹಸಿ ರೆಜಿಮೆಂಟ್ ಬಗ್ಗೆ ಹಿಟ್ಲರ್ ಏನಂತ ಹೇಳಿದ್ದ ಗೊತ್ತೆ?
ಒಂದು ವೇಳೆ ಯಾರಾದರೂ ನಿಮ್ಮಲ್ಲಿ ನನಗೆ ಮೃತ್ಯುವಿನ ಭಯವಿಲ್ಲ ಎಂದು ಹೇಳುತ್ತಾನಾದರೆ, ಒಂದೋ ಆತ ಸುಳ್ಳು ಹೇಳುತ್ತಿದ್ದಾನೆ, ಇಲ್ಲವೇ ಆತ ಗೂರ್ಖಾ ಆಗಿರುತ್ತಾನೆ!”.‌‌ ಗೂರ್ಖಾ ಅಂದ್ರೆ ನಮ್ಮ ಹೆಮ್ಮೆಯ ಸೇನೆಯ ಒಂದು ತುಕಡಿ. ಗೂರ್ಖಾ ಸೈನಿಕರು ಧೀರರಲ್ಲಿ ಧೀರರು, ಉದಾತ್ತರಲ್ಲಿ ಉದಾತ್ತರು. ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್ ಹೆಸರು ಕೇಳಿದರೆ ಸಾಕು ಶತ್ರುಗಳು ನಿದ್ದೆಯಲ್ಲೂ ಗಡಗಡ ನಡುಗುತ್ತಾರೆ. ಗೂರ್ಖಾ ಸೈನಿಕರು ಅಸಮಾನ್ಯ ಯೋಧರು ಎಂಬ ಮಾತಿಗೆ ಎರಡು ಮಾತಿಲ್ಲದೇ ಎಲ್ಲರೂ ಒಪ್ಪುತ್ತಾರೆ.
ಹೇಡಿಯಾಗಿ ಬದುಕುವುದಕ್ಕಿಂತ ಶೂರನಾಗಿ ಮರಣವನ್ನಪ್ಪುವುದೇ ಲೇಸು. ( “It is better to die in Valour than to live like a Coward” ) ಇದು ಗೂರ್ಖಾ ರೆಜಿಮೆಂಟಿನ ಧೇಯ ವಾಕ್ಯ.‌ ಗೂರ್ಖಾ ಸೈನಿಕರು ಅಕ್ಷರಶಃ ಇದೇ ಧ್ಯೇಯ ವಾಕ್ಯದಂತೆ ಇರುತ್ತಾರೆ. ಗೂರ್ಖಾ ಎಂದಾಗಲೆಲ್ಲಾ ಸಾಮ್ ಮಾಣಿಕ್ ಶಾ ನೆನಪಾಗುತ್ತಾರೆ, ಅವರೊಂದು ಮಾತು ಹೇಳಿದ್ದರು. ”ಒಂದು ವೇಳೆ ಯಾರಾದರೂ ನಿಮ್ಮಲ್ಲಿ ನನಗೆ ಮೃತ್ಯುವಿನ ಭಯವಿಲ್ಲ ಎಂದು ಹೇಳುತ್ತಾನಾದರೆ, ಒಂದೋ ಆತ ಸುಳ್ಳು ಹೇಳುತ್ತಿದ್ದಾನೆ, ಇಲ್ಲವೇ ಆತ ಗೂರ್ಖಾ ಆಗಿರುತ್ತಾನೆ!”.‌‌ ( “ If a man says he is not afraid of dying he is either lying or is a gurkha”) ಎಂದು.
ಸಾವಿಗೆ ಹೆದರದ ಗೂರ್ಖಾ ಸೈನಿಕರು ಪಡೆ ಮಾನ್ಯ ಫೀಲ್ಡ್ ಮಾರ್ಷಲ್ ಮಾಣೇಕ್ ಷಾ ಅವರಿಗೆ ಅತ್ಯಂತ ಪ್ರಿಯವಾದ ಪಡೆ. ಗೂರ್ಖಾ ಸೈನಿಕರು ಅವರನ್ನುಸ್ಯಾಮ್ ಬಹದ್ದೂರ್ಎಂಬ ಹೆಸರಿನಿಂದಲೇ ಗುರುತಿಸುತ್ತಿದ್ದರಂತೆ.
ಪ್ರಥಮ ಮತ್ತು ದ್ವಿತೀಯ ವಿಶ್ವ ಯುದ್ದಗಳಲ್ಲಿ ಬಿಟಿಷ್ ಸೈನ್ಯದ ಭಾಗವಾಗಿದ್ದ ಗೂರ್ಖಾ ಸೈನಿಕರ ಪರಾಕ್ರಮಕ್ಕೆ ಸರ್ವಾಧಿಕಾರಿ ಹಿಟ್ಲರ್ ಕೂಡಾ ಮನಸೋತಿದ್ದನಂತೆ! ಆತ ಇವರನ್ನುಬ್ಲಾಕ್ ಡೆವಿಲ್ಸ್ಎಂದು ಕರೆಯುತ್ತಿದ್ದನಂತೆ. ಮಾತ್ರವಲ್ಲ, ಗೂರ್ಖಾ ಸೈನಿಕರನ್ನು ಹೊಗಳುತ್ತಾನನ್ನ ಬಳಿಯೇನಾದರೂ ಗೂರ್ಖಾ ಸೈನಿಕರಿದ್ದಿದ್ದರೆ ನಾನು ಇಡೀ ವಿಶ್ವವನ್ನೇ ಗೆಲ್ಲುತ್ತಿದ್ದೆಎಂದು ಹಂಬಲಿಸುತ್ತಿದ್ದನಂತೆ. ಸ್ವತಃ ಶತ್ರು ಸೈನ್ಯದ ನಾಯಕನೇ ಬಾಯಿ ತುಂಬಾ ಹೊಗಳಬೇಕಾದರೆ ಗೂರ್ಖಾಗಳ ಪರಾಕ್ರಮ ಇನ್ನೆಂಥದ್ದಿರಬೇಕು ಯೋಚಿಸಿ.
ವಿಶ್ವ ಮಹಾಯುದ್ಧ ಅಂದಾಕ್ಷಣ ಒಂದು ಘಟನೆಯ ನೆನಪು ಬಂತು.‌ ಎರಡನೇ ಮಹಾಯುದ್ಧದ ಒಂದು ರಣರಂಗದಲ್ಲಿ ತೀವ್ರವಾಗಿ ಬಾಂಬಿಂಗ್ ನಡೆಯುತ್ತಾ ಇತ್ತಂತೆ. ಪ್ರಾಣ ಉಳಿಸಿಕೊಳ್ಳಲು ಒಬ್ಬ ಜರ್ಮನ್ ಸೈನಿಕ ಮತ್ತೊಬ್ಬ ಗೂರ್ಖಾ ಸೈನಿಕ ಅಕಸ್ಮತ್ತಾಗಿ ಆಚೆ ಈಚೆಯಿಂದ ಒಂದೇ ಕಂದಕಕ್ಕೆ (ಟ್ರೆಂಚ್ಗೆ) ಧುಮುಕಿದರಂತೆ. ಇಬ್ಬರೂ ಕಂದಕದೊಳಗೆ ಮುಖಾಮುಖಿಯಾದಾಗ ವೈರಿ ಸೈನಿಕ ಅಟ್ಟಹಾಸದಿಂದನನ್ನ ಆಟೋಮ್ಯಾಟಿಕ್ ರೈಫಲಿನ ಎದುರು ನಿನ್ನ ಹಳೆಯ ಸ್ಪ್ರಿಂಗ್ ಫೀಲ್ಡ್ ರೈಫಲ್ ಮತ್ತು ಕುಖ್ರಿಗಳಿಗೆ ಯಾವ ಅವಕಾಶವೂ ಇಲ್ಲಅಂದನಂತೆ.
ಆಗ ಗೂರ್ಖಾ ನಮ್ರತೆಯಿಂದಲೇಸರ್, ನಿಮ್ಮ ತಲೆಯನ್ನು ಸ್ವಲ್ಪ ಅಲ್ಲಾಡಿಸಿಅಂದನಂತೆ. ವೈರಿ ಸೈನಿಕನು ತನ್ನ ತಲೆಯನ್ನು ಅಲ್ಲಾಡಿಸಲು ಆತನ ತಲೆಯೇ ಉರುಳಿಬಿತ್ತಂತೆ! ಟ್ರೆಂಚಿನ ಒಳಗೆ ನೆಗೆಯಬೇಕಾದ ಕ್ಷಣದಲ್ಲೇ ಗೂರ್ಖಾ ಸೈನಿಕ ತನ್ನ ಕೆಲಸ ಪೂರೈಸಿ ನಿರಾಳವಾಗಿ ಕುಳಿತಿದ್ದನಂತೆ! ಎಂತಹ ಕೆಚ್ಚೆದೆಯ ಸೈನಿಕನ ರಕ್ತವನ್ನೂ ಹೆಪ್ಪುಗಟ್ಟಿಸುವಂತಹುದು ಗೂರ್ಖಾ ಪಡೆಯ ರಣರಂಗದ ಸಿಂಹನಾದ.
ನನ್ನ ರಕ್ತದ ತಾಕತ್ತನ್ನು ತೋರಿಸುವ ಮುನ್ನ ಸಾವೇನಾದರೂ ನನ್ನ ಮುಂದೆ ಬಂದರೆ, ನಾನು ಸಾವನ್ನೇ ಕೊಂದು ಬಿಡುತ್ತೇನೆ ಎಂದು ಬರೆದಿದ್ದ. ಕೊನೆಗೂ ತನ್ನ ರಕ್ತದ ತಾಕತ್ತನ್ನು ತೋರಿಸಿ ಭಾರತಾಂಬೆಗೆ ರಕ್ತತಿಲಕವಾದ ವೀರ ಯೋಧ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ.
ವೀರ ಯೋಧ ಮನೋಜ್ ಕುಮಾರ್ ಪಾಂಡೆ ಹುತಾತ್ಮನಾದ ನಂತರ ಅವನ ಬ್ಯಾಗಿನಲ್ಲಿ ಒಂದು ಪತ್ರ ಬರೆದಿಟ್ಟಿದ್ದನಂತೆ. ಅದರಲ್ಲಿ ಏನು ಬರೆದಿದ್ದನೆಂದು ಗೊತ್ತಾ?
ನನ್ನ ರಕ್ತದ ತಾಕತ್ತನ್ನು ತೋರಿಸುವ ಮುನ್ನ ಸಾವೇನಾದರೂ ನನ್ನ ಮುಂದೆ ಬಂದರೆ,ನಾನು ಸಾವನ್ನೇ ಕೊಂದು ಬಿಡುತ್ತೇನೆ ಎಂದು ಬರೆದಿದ್ದ. ಕೊನೆಗೂ ತನ್ನ ರಕ್ತದ ತಾಕತ್ತನ್ನು ತೋರಿಸಿ ಭಾರತಾಂಬೆಗೆ ರಕ್ತತಿಲಕವಾದ. ಮನೋಜ್ ಕುಮಾರ್ ಪಾಂಡೇ ಇದೇ ಗೂರ್ಖಾ ಪಡೆಯ ಸೈನಿಕ. ಗೂರ್ಖಾ ಪಡೆಯ ಧ್ಯೇಯ ವಾಕ್ಯಕ್ಕೆಅಕ್ಷರಶಃ ಸಾಕ್ಷಿಯಾಗಿ ನಿಲ್ಲುತ್ತಾರೆ ಗೂರ್ಖಾ ರೈಫಲ್ಸ್ ಅಲ್ಲಿ ಇದ್ದ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ. ಮೃತ್ಯುವಿನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯವಿರುವುದು ಗೂರ್ಖಾ ಸೈನಿಕರಿಗೆ ಮಾತ್ರ. ಇದಕ್ಕೆ ಸಾಕ್ಷಿ ಮನೋಜ್ ಕುಮಾರ್ ಪಾಂಡೆ.
ಗೂರ್ಖಾ ರೆಜಿಮೆಂಟ್ ಇದುವರೆಗೂ ಭಾಗವಹಿಸಿದ ಅಷ್ಟೂ ಯುದ್ದಗಳಲ್ಲಿ ಒಂದೇ ಒಂದು ಯುದ್ದವನ್ನೂ ಸೋತಿಲ್ಲ! 1947-48 ಉರಿ ಸೆಕ್ಟರ್, 1962 ಲಡಾಖ್ ಯುದ್ದ, 1965-1971 ಜಮ್ಮು-ಕಾಶ್ಮೀರ ಯುದ್ದಗಳಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಶಾಂತಿ ಸ್ಥಾಪನೆಯ ಕಾರ್ಯಗಳಲ್ಲೂ ಗೂರ್ಖಾ ರೆಜಿಮೆಂಟನ್ನು ಬಳಸಿಕೊಳ್ಳಲಾಗಿದೆ. ಪ್ರಸ್ತುತ ಭಾರತೀಯ ಸೇನೆಯಲ್ಲಿ 1,20,000 ರಷ್ಟು ಗೂರ್ಖಾ ಸೈನಿಕರಿದ್ದಾರೆ. ಇವರಲ್ಲಿ 70% “ನೇಪಾಳದವರಾದರೆ ಇನ್ನುಳಿದವರು ಭಾರತೀಯ ಗೂರ್ಖಾ ಸೈನಿಕರು.
ಭಾರತದ ಸೇನೆಯಲ್ಲಿ ನೇಪಾಳದವರು ಹೇಗೆ ಸೈನಿಕರಾಗಿದ್ದಾರೆ ಅಂತ ಗೊಂದಲವಾಗಿರಬಹುದು. ಹೌದು ಗೂರ್ಖಾ ಪಡೆಗೆ ಒಂದು ಇತಿಹಾಸವಿದೆ. ಗೂರ್ಖಾ ಎನ್ನುವುದು ನೇಪಾಳದ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಜಿಲ್ಲೆ. ಇಲ್ಲಿ ವಾಸಿಸುವವರೆಲ್ಲರೂ ಗೂರ್ಖಾಗಳು. ಗೂರ್ಖಾ ಎನ್ನುವುದು ಒಂದು ಜಾತಿಯಲ್ಲ, ಬದಲಾಗಿ ಸುನವರ್, ಗುರಾಂಗ್, ರಾಯ್, ಮಾಗರ್ ಮತ್ತು ಲಿಂಬೂ ಎಂಬಿತ್ಯಾದಿ ವಿಭಿನ್ನ ಸಮುದಾಯಗಳ ಜನರು ವಾಸಿಸುವ ಪ್ರದೇಶ.
ಎಂಟನೇ ಶತಮಾನದಲ್ಲಿ ಇಸ್ಲಾಮಿನ ವಿರುದ್ಧ ತೊಡೆ ತಟ್ಟಿದ ಹಿಂದೂ ಸಂತ ಮತ್ತು ಯೋದ್ಧ ಗೋರಖನಾಥರಿಂದಾಗಿ ನೇಪಾಲದ ಪ್ರದೇಶಕ್ಕೆ ಗೋರಖಾ ಎನ್ನುವ ಹೆಸರು ಬಂತು. ರಾಜಸ್ಥಾನದ ರಜಪೂತ ರಾಜ ಪೃಥ್ವಿ ನಾರಾಯಣ ಶಾಹ್ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಕಾಲದಲ್ಲಿ ಅವರ ಸೈನ್ಯದ ಸೈನಿಕರನ್ನು ಗೋರ್ಖಾಲಿ ಎಂದು ಕರೆಯಲಾಗುತ್ತಿತ್ತು. 1814 ರಲ್ಲಿ ಆಂಗ್ಲೋ-ನೇಪಾಳ ಯುದ್ಧದಲ್ಲಿ ಗೂರ್ಖಾಗಳ ಪರಾಕ್ರಮಕ್ಕೆ ಮನಸೋತ ಬ್ರಿಟಿಷರು 1815 ರಲ್ಲಿ ಇವರನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾರೆ. ಅಂದಿನಿಂದ ಇಂದಿನವರೆಗೂ ಗೂರ್ಖಾಗಳು ಭಾರತೀಯ ಸೈನ್ಯದ ಭಾಗವಾಗಿದ್ದಾರೆ.
ಗೂರ್ಖಾಗಳು ರಣರಂಗಕ್ಕೆ ಇಳಿದರೆ ನರಸಿಂಹನ ಅವತಾರ ತಾಳಿದ್ದಾರೆ ಅಂತಲೇ ಅರ್ಥ. ನರಸಿಂಹನ ರೂಪ ತಾಳಿದ ಗೂರ್ಖಾ ಸೈನಿಕರು ರಣರಂಗಕ್ಕೆ ಧುಮುಕಿದರೆ ವೈರಿಪಡೆಯ ರಕ್ತವನ್ನು ಭುಮಿತಾಯಿಗೆ ಅರ್ಪಿಸುವವರೆಗೂ ಬಿಡೋದಿಲ್ಲ. ಗೂರ್ಖಾ ಸೈನಿಕರ ಬಳಿ ಹದಿನೆರಡು ಇಂಚು ಉದ್ದದ ಚಿಕ್ಕ ತಲವಾರಿನಂತಿರುವ ಆಯುಧವಿರುತ್ತದೆ. “ ಆಯುಧದ ಹೆಸರು ಕುಖ್ರಿ”.
ಆಯುಧವನ್ನು ಗೂರ್ಖಾ ಸೈನಿಕರು ಎಳೆದು ನಿಂತರೆ ವೈರಿಗಳ ಕಥೆ ಮುಗಿಯಿತು ಅಂತಲೇ ಅರ್ಥ. ಹೀಗಾಗಿಯೇ ಜಗತ್ತಿನ ಎಲ್ಲ ರಾಷ್ಟ್ರಗಳು ಕೂಡಾ ನಮ್ಮ ಸೇನೆಯ ಗೂರ್ಖಾ ಪಡೆ ಎಂದರೆ ಹೆದರುತ್ತಾರೆ. ಹೀಗಾಗಿಯೇ ಸರ್ವಾಧಿಕಾರಿ ಹಿಟ್ಲರ್ ಕೂಡಾ ಗೂರ್ಖಾ ಪಡೆಯ ಶೌರ್ಯಕ್ಕೆ ಮನಸೋತಿದ್ದನಂತೆ!
ಮನಸೋತ ಹಿಟ್ಟಲರ್ ಗೂರ್ಖಾ ಸೈನಿಕರನ್ನು ಹೊಗಳುತ್ತಾನನ್ನ ಬಳಿಯೇನಾದರೂ ಗೂರ್ಖಾ ಸೈನಿಕರಿದ್ದಿದ್ದರೆ ನಾನು ಇಡೀ ವಿಶ್ವವನ್ನೇ ಗೆಲ್ಲುತ್ತಿದ್ದೆಎಂದು ಹಂಬಲಿಸುತ್ತಿದ್ದನಂತೆ. ಸರ್ವಾಧಿಕಾರಿ ಹಿಟ್ಲರ್ ಕೂಡಾ ಮನಸೋತು ಗೂರ್ಖಾ ಪಡೆಯ ಬಗ್ಗೆ ರೀತಿ ಮಾತನಾಡಿದ್ದನೆಂದರೆ ನಮ್ಮ ಸೇನೆಯ ಗೂರ್ಖಾ ಪಡೆಯ ಶೌರ್ಯ ಎಷ್ಟಿರಬಹುದು ನೀವೇ ಆಲೋಚಿಸಿ.