Tuesday, 22 August 2017

ಕನ್ನಡ ಶುಭಾಶಯಗಳು

ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

ನೀಲಿ ಬಾನಿಂದ ನಿನ್ನೆಡೆಗೆ ಬರುವ ಪ್ರತಿಯೊಂದು ಸೂರ್ಯ ರಶ್ಮಿಯೂ ನಿನ್ನ  ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಭಗವಂತ ನಿಮಗೆ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಆಶಿಸುತ್ತಾ... ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

ಭಗವಂತ ನಿನಗೆ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತಾ... ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಜನುಮ ದಿನದ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು ನಗುತಾಯಿರಲಿ ಎಂದು ಹಾರೈಸುವೆ... 

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಜನುಮ ದಿನದ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿನ್ನ  ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರಲಿ ಎಂದು ಹಾರೈಸುವೆ...
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ  ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ,
ಹುಟ್ಟು ಹಬ್ಬದ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಶುಭಾಶಯಗಳನ್ನು ಕೋರುವೆ.

ನೀ ನಡೆವ ಪ್ರತಿ ದಾರಿಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಧೀರ್ಘಾಯುಷ್ಯಮಾನಭವ, ಸದಾ ಸುಖಿಯಾಗಿರು ಹುಟ್ಟು ಹಬ್ಬದ ಶುಭಾಷಯಗಳು.
ಧೀರ್ಘಾಯುಷಿಯಾಗಿರು, ಸದಾ ಸುಖವಾಗಿರು, ಜನುಮ ದಿನದ ಹಾರ್ದಿಕ ಶುಭಾಷಯಗಳು
ಧೀರ್ಘಾಯುಷಿಯಾಗಿರಿ, ಸದಾ ಆನಂದದ ಹೊನಲಾಗಿರಿಜನುಮ ದಿನದ ಹಾರ್ದಿಕ ಶುಭಾಷಯಗಳು.    

ಧಾರ್ಮಿಕ ಹಬ್ಬಗಳ ಶುಭಾಶಯಗಳು

ನವ ಸಂವತ್ಸರದ ಆಗಮನದ  ಶುಭ ಸಮಯವು ಹೊಸ ಚಿಗುರು ಮೂಡೋ ಸಮಯ, ಹುಳಿ ಮಾವು ಸಿಹಿಯಾಗಿ ಮಾಗೋ ಸಮಯಪ್ರಕೃತಿಯಲ್ಲಿ ಒಂದು ನವೀನ ಚೈತನ್ಯ ತುಂಬುವ ಇಂತಹ ಶುಭ ಘಳಿಗೆಯಲ್ಲಿ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುವೆ. ಬೇವು-ಬೆಲ್ಲಗಳನ್ನು ಸಮನಾಗಿ ಸವಿದಂತೆ ಜೀವನದ ಕಷ್ಟ-ಸುಖ, ನೋವು-ನಲಿವುಗಳನ್ನು ಸಮನಾಗಿ ಸ್ವೀಕರಿಸೊಣ. ಸರ್ವರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ.    

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಬೇವು-ಬೆಲ್ಲ ಎರಡನ್ನೂ ಸಮನಾಗಿ ಸ್ವೀಕರಿಸುತ್ತಾ ಹೊಸ ಸಂವತ್ಸರವ ಸ್ವಾಗತಿಸೋಣ, ಯುಗಾದಿಯ ಹಾರ್ದಿಕ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಚುಮು ಚುಮು ಚಳಿ ಸರಿದು, ಬೆಚ್ಚನೆ ಸುಗ್ಗಿಯ ಆಗಮನದ ಗಾಳಿ ಬೀಸುತಿದೆಸುಗ್ಗಿಗೆ ಸಿದ್ದರಾಗುವ ಮುಂಚೆ ಎಳ್ಳು-ಬೆಲ್ಲ ತಿಂದುಎಲ್ಲರಿಗೂ ತಿನಿಸಿಎಳ್ಳು ಬೆಲ್ಲದ ಸಿಹಿಯನು ಸವಿಯುತಾಸಿಹಿಯಾದ ಬಾಯಿಯಿಂದ,ಸಿಹಿಯಾದ ಮಾತುಗಳನ್ನಾಡೋಣಸರ್ವರಿಗೂ ಮಕರ ಸಂಕ್ರಾತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಬಾಳು ಎಳ್ಳು-ಬೆಲ್ಲದಂತೆ ಸವಿಯಾಗಿ ಸೋಗಸಾಗಿರಲಿ ಎಂದು ಆಶಿಸುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ದುರ್ಗಾ  ಮಾತೆ ಎಲ್ಲರಿಗೂ ಸುಖ ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಿ ಎಲ್ಲರ ಬಾಳು ಬಂಗಾರವಾಗಲಿ ಎಂದು ಹಾರೈಸುವೆ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳುದೀಪಗಳ  ಹಬ್ಬ ಎಲ್ಲರ ಬಾಳನ್ನು ಬೆಳಗಿ ಸಂತೋಷ, ಸಂಭ್ರಮ ಮತ್ತು ಸಂವೃದ್ಧಿಯನ್ನು ತರಲಿ ಎಂದು ತುಂಬು ಹೃದಯದಿಂದ ಹಾರೈಸುವೆ... :-)
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಸರ್ವರಿಗೂ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ರಾಮನ ಪಿತೃವಾಕ್ಯ ಪರಿಪಾಲನೆ, ಶಿಷ್ಟರ ರಕ್ಷಣೆ, ರಾಜಧರ್ಮ ನಿಷ್ಥೆ ಎಲ್ಲ ಸದ್ಗುಣಗಳನ್ನು ಎಲ್ಲರೂ ಅನುಸರಿಸುವಂತಾಗಲಿ, ಶುಭವಾಗಲಿ

ಇತರೆ ಶುಭಾಶಯಗಳು

ದಾಂಪತ್ಯ ಜೀವನಕ್ಕೆ ಶುಭಾಶಯಗಳು
ನೂರಾರು ವರುಷ ನೀವು ಜೊತೆ ಜೊತೆಯಾಗಿ ನಗು ನಗುತಾಯಿರಿ ಎಂದು ಹಾರೈಸುವೆ .... 
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿರುವ ಸುಮುಹೊರ್ತದಲ್ಲಿ ನಿಮ್ಮ ಮುಂಬರುವ ಸಂಸಾರವು, ಸುಖ ಸಾಗರವಾಗಲಿ ಎಂದು ಹಾರೈಸುವೆದಾಂಪತ್ಯ ಜೀವನಕ್ಕೆ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನಿಶ್ಚಿತಾರ್ಥದ ಶುಭಾಶಯಗಳು... ಬೇಗನೆ ಹೋಳಿಗೆ ಊಟದ ವ್ಯವ್ಯಸ್ಥೆ ಮಾಡಿರಿ... ;-)