ಏಕೆಂದರೆ
Tuesday, 22 August 2017
ಕನ್ನಡ ಶುಭಾಶಯಗಳು
ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
ನೀಲಿ ಬಾನಿಂದ ನಿನ್ನೆಡೆಗೆ ಬರುವ ಪ್ರತಿಯೊಂದು ಸೂರ್ಯ ರಶ್ಮಿಯೂ ನಿನ್ನ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಆ ಭಗವಂತ ನಿಮಗೆ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಆಶಿಸುತ್ತಾ... ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
ಆ ಭಗವಂತ ನಿನಗೆ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತಾ... ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು ನಗುತಾಯಿರಲಿ ಎಂದು ಹಾರೈಸುವೆ...
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರಲಿ ಎಂದು ಹಾರೈಸುವೆ...
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ,
ಹುಟ್ಟು ಹಬ್ಬದ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಶುಭಾಶಯಗಳನ್ನು ಕೋರುವೆ.
ನೀ ನಡೆವ ಪ್ರತಿ ದಾರಿಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಧೀರ್ಘಾಯುಷ್ಯಮಾನಭವ, ಸದಾ ಸುಖಿಯಾಗಿರು ಹುಟ್ಟು ಹಬ್ಬದ ಶುಭಾಷಯಗಳು.
ಧೀರ್ಘಾಯುಷಿಯಾಗಿರು, ಸದಾ ಸುಖವಾಗಿರು, ಜನುಮ ದಿನದ ಹಾರ್ದಿಕ ಶುಭಾಷಯಗಳು.
ಧೀರ್ಘಾಯುಷಿಯಾಗಿರಿ, ಸದಾ ಆನಂದದ ಹೊನಲಾಗಿರಿ, ಜನುಮ ದಿನದ ಹಾರ್ದಿಕ ಶುಭಾಷಯಗಳು.
ಧಾರ್ಮಿಕ ಹಬ್ಬಗಳ ಶುಭಾಶಯಗಳು
ನವ ಸಂವತ್ಸರದ ಆಗಮನದ ಈ ಶುಭ ಸಮಯವು ಹೊಸ ಚಿಗುರು ಮೂಡೋ ಸಮಯ, ಹುಳಿ ಮಾವು ಸಿಹಿಯಾಗಿ ಮಾಗೋ ಸಮಯ. ಪ್ರಕೃತಿಯಲ್ಲಿ ಒಂದು ನವೀನ ಚೈತನ್ಯ ತುಂಬುವ ಇಂತಹ ಈ ಶುಭ ಘಳಿಗೆಯಲ್ಲಿ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುವೆ. ಬೇವು-ಬೆಲ್ಲಗಳನ್ನು ಸಮನಾಗಿ ಸವಿದಂತೆ ಜೀವನದ ಕಷ್ಟ-ಸುಖ, ನೋವು-ನಲಿವುಗಳನ್ನು ಸಮನಾಗಿ ಸ್ವೀಕರಿಸೊಣ. ಸರ್ವರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಬೇವು-ಬೆಲ್ಲ ಎರಡನ್ನೂ ಸಮನಾಗಿ ಸ್ವೀಕರಿಸುತ್ತಾ ಹೊಸ ಸಂವತ್ಸರವ ಸ್ವಾಗತಿಸೋಣ, ಯುಗಾದಿಯ ಹಾರ್ದಿಕ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಚುಮು ಚುಮು ಚಳಿ ಸರಿದು, ಬೆಚ್ಚನೆ ಸುಗ್ಗಿಯ ಆಗಮನದ ಗಾಳಿ ಬೀಸುತಿದೆ. ಸುಗ್ಗಿಗೆ ಸಿದ್ದರಾಗುವ ಮುಂಚೆ ಎಳ್ಳು-ಬೆಲ್ಲ ತಿಂದು, ಎಲ್ಲರಿಗೂ ತಿನಿಸಿ, ಎಳ್ಳು ಬೆಲ್ಲದ ಸಿಹಿಯನು ಸವಿಯುತಾ, ಸಿಹಿಯಾದ ಬಾಯಿಯಿಂದ,ಸಿಹಿಯಾದ ಮಾತುಗಳನ್ನಾಡೋಣ. ಸರ್ವರಿಗೂ ಮಕರ ಸಂಕ್ರಾತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಬಾಳು ಎಳ್ಳು-ಬೆಲ್ಲದಂತೆ ಸವಿಯಾಗಿ ಸೋಗಸಾಗಿರಲಿ ಎಂದು ಆಶಿಸುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಆ ದುರ್ಗಾ ಮಾತೆ ಎಲ್ಲರಿಗೂ ಸುಖ ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಿ ಎಲ್ಲರ ಬಾಳು ಬಂಗಾರವಾಗಲಿ ಎಂದು ಹಾರೈಸುವೆ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಗಳ ಈ ಹಬ್ಬ ಎಲ್ಲರ ಬಾಳನ್ನು ಬೆಳಗಿ ಸಂತೋಷ, ಸಂಭ್ರಮ ಮತ್ತು ಸಂವೃದ್ಧಿಯನ್ನು ತರಲಿ ಎಂದು ತುಂಬು ಹೃದಯದಿಂದ ಹಾರೈಸುವೆ... :-)
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸರ್ವರಿಗೂ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ರಾಮನ ಪಿತೃವಾಕ್ಯ ಪರಿಪಾಲನೆ, ಶಿಷ್ಟರ ರಕ್ಷಣೆ, ರಾಜಧರ್ಮ ನಿಷ್ಥೆ ಈ ಎಲ್ಲ ಸದ್ಗುಣಗಳನ್ನು ಎಲ್ಲರೂ ಅನುಸರಿಸುವಂತಾಗಲಿ, ಶುಭವಾಗಲಿ.

ಇತರೆ ಶುಭಾಶಯಗಳು
ದಾಂಪತ್ಯ ಜೀವನಕ್ಕೆ ಶುಭಾಶಯಗಳು
ನೂರಾರು ವರುಷ ನೀವು ಜೊತೆ ಜೊತೆಯಾಗಿ ನಗು ನಗುತಾಯಿರಿ ಎಂದು ಹಾರೈಸುವೆ ....
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿರುವ ಈ ಸುಮುಹೊರ್ತದಲ್ಲಿ ನಿಮ್ಮ ಮುಂಬರುವ ಸಂಸಾರವು, ಸುಖ ಸಾಗರವಾಗಲಿ ಎಂದು ಹಾರೈಸುವೆ. ದಾಂಪತ್ಯ ಜೀವನಕ್ಕೆ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನಿಶ್ಚಿತಾರ್ಥದ ಶುಭಾಶಯಗಳು... ಬೇಗನೆ ಹೋಳಿಗೆ ಊಟದ ವ್ಯವ್ಯಸ್ಥೆ ಮಾಡಿರಿ... ;-)
೨೬ ಜೂಲೈ ಕಾರ್ಗಿಲ್ ವಿಜಯ ದಿವಸ
ಯುದ್ಧ ಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಮಡಿದ ವೀರ ಕಲಿಗಳಿಗೆ ನಮ್ಮ ಕಂಬನಿಗಳು.
ಮುಗಿಲ ತೋರಿ ಮೆಲೆ ಎದ್ದ ಗಿರಿಯ ನೆತ್ತಿಯಲ್ಲಿ
ಕರುಳ ಕೊರೆಯುವ ಹಿಮಗಾಳಿಯ ಬಂಡೆ ಬಿತ್ತಿಯಲ್ಲಿ
ನನ್ನ ದೇಶ ನನ್ನ ದೈವ ಎಂದು ಹೊರಾಡುವ ಧೀರರೆ ನಿಮ್ಮೊಡನೆ ಇದೆ ನಮ್ಮ ಹೃದಯ ನಿಮಗೆ ನಮ್ಮ ವಂದನೆಗಳು..
ಕಾರ್ಗಿಲ್ ನ ಕಠೊರತೆಯಲ್ಲಿಯು ಪಾಕಿಸ್ತಾನವನ್ನು ಸದೆ ಬಡಿದು ಭಾರತದ ವಿಜಯ ಪತಾಕೆ ಹಾರಿಸಿದ ವಿರ ಧೀರ ಯೋಧರಿಗೆ ಕೋಟಿ ಕೋಟಿ ನಮನಗಳು..
ಜೈ ಭಾರತ ಮಾತೆ...
ಜೈ ಜವಾನ...
ವಂದೇ ಮಾತರಂ...
ಕಾರ್ಗಿಲ್ ವಿಜಯ ದಿವಸ
ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯ್ ನ ನಂತರ ಹೆಸರಿಸಲ್ಪಟ್ಟಿದೆ . ಈ ದಿನ, 26 ಜುಲೈ 1999, ಭಾರತ ಯಶಸ್ವಿಯಾಗಿ ಪಾಕಿಸ್ತಾನಿ ಒಳನುಗ್ಗುವವರನ್ನು ತಡೆಹಿಡಿದು ,ವಿಜಯ ಸಾಧಿಸಿತು. ಕಾರ್ಗಿಲ್ ಯುದ್ಧ ಜುಲೈ 26 ರಂದು ಕೊನೆಗೊಂಡಿತು. 60ಕ್ಕೂ ಹೆಚ್ಚು ದಿನಗಳಕಾಲ ನಡೆದ ಈ ಯುದ್ಧ ಎರಡೂ ಕಡೆಗಳಲ್ಲಿ( ಭಾರತ ಮತ್ತು ಪಾಕಿಸ್ತಾನ) ಭಾರಿ ಪ್ರಮಾಣದ ಸಾವುನೋವುಗಳಿಗೆ ಕಾರಣವಾಯಿತು. ಪಾಕಿಸ್ತಾನ ಅಂತರರಾಷ್ಟ್ರೀಯ ರಾಜತಾಂತ್ರಿಕ ಒತ್ತಡಡ ನಂತರ ಈ ಅಭಿಯಾನದಿಂದ ಹಿಂತೆಗೆದುಕೊಳ್ಳುವಂತಾಯಿತು .
ಕಾರ್ಗಿಲ್ ವಿಜಯ್ ದಿವಸ, ಕಾರ್ಗಿಲ್ ಸಮರದ ವೀರರ ಗೌರವಾರ್ಥ ಪ್ರತಿವರ್ಷ ಜುಲೈ 26 ರಂದು ಆಚರಿಸಲ್ಪಡುತ್ತಿದೆ . - ಕಾರ್ಗಿಲ್ ವಲಯ ಮತ್ತು ರಾಷ್ಟ್ರೀಯ ರಾಜಧಾನಿಯಾದ ದೆಹಲಿಯಲ್ಲಿ ಭಾರತದ ಪ್ರಧಾನಮಂತ್ರಿಯವರಿಂದ ಅಮರ್ ಜವಾನ್ ಜ್ಯೋತಿಗೆ ಗೌರವಾರ್ಪಣ ಮಾಡುವುದರ ಮೂಲಕ ಸಶಸ್ತ್ರ ಪಡೆಗಳ ಕೊಡುಗೆಯನ್ನು ನೆನಯಲಾಗುತ್ತದೆ.
ಇಂದು ಕಾರ್ಗಿಲ್ ಯುದ್ಧದ ವಿಜಯ ದಿವಸ. ಯುದ್ಧವಾಗಿ ಇಂದಿಗೆ 18 ವರ್ಷಗಳೇ ಕಳೆದಿವೆ.
ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ
ಕಾರ್ಗಿಲ್ ಕದನ. ಅದೊಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಯುದ್ಧ. ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಉಭಯ ದೇಶಗಳ ನಡುವೆ ಸುಧಾರಿಸಲಾರದಷ್ಟು ಸಂಬಂಧ ಹಳಸಿದೆ ಎನ್ನುವುದಕ್ಕೆ ಈ ಯುದ್ಧಗಳು ನಿದರ್ಶನ.
ಮುಂದಿನ ಪೀಳಿಗೆ ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ಈ ಯುದ್ಧದ ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬಹುದು. ಏಕೆಂದರೆ ಈ ಯುದ್ಧ ಅಷ್ಟು ರೋಚಕವಾಗಿತ್ತು. ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಕಾರ್ಗಿಲ್ ಈ ಹಿಂದೆ ಒಂದು ಜಿಲ್ಲಾಕೇಂದ್ರದ ಹೆಸರಾಗಿ ಉಳಿದಿತ್ತು. ದೇಶವಾಸಿಗಳಿಗೆ ಆ ಹೆಸರು ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಈಗ ಕಾರ್ಗಿಲ್ ಎಂದ ಕೂಡಲೇ ದೇಶವಾಸಿಗಳ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳ ಸಂಚಾರವಾಗುತ್ತದೆ. ಹಲವು ತೆರನಾದ ಭಾವನೆಗಳು ಉಕ್ಕಿ ಹರಿಯುತ್ತವೆ. ವಂಚನೆ, ಉದ್ವಿಗ್ನತೆ, ಕೋಪ, ದುಃಖ, ನಿರ್ಧಾರ, ಸಾಹಸ, ಪರಾಕ್ರಮ, ವಿಜಯ, ಸಂಭ್ರಮ – ಹೀಗೆ ಹತ್ತು ಹಲವು ಭಾವನೆಗಳು ಅನುರಣಿಸುತ್ತವೆ.
1999 ರ ಮೇ 8 ರಿಂದ ಜುಲೈ 14 ರವರೆಗೆ ನಡೆದ ಆ 74 ದಿನಗಳು, ದೇಶಾದ್ಯಂತ ಪೂರ್ತಿ ಕಾರ್ಗಿಲ್ ಯುದ್ಧದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಯುದ್ಧದ ಸುದ್ದಿಗಳಿಗೇ ಆದ್ಯತೆ. ಉಳಿದೆಲ್ಲ ಕಾರ್ಯಕ್ರಮಗಳು ಮೂಲೆಗೆ. ಏನಾಯಿತು ಕಾರ್ಗಿಲ್‌ನಲ್ಲಿ ? ಇವತ್ತು ಪಾಕ್ ಶತ್ರುಗಳೆಷ್ಟು ಮಂದಿ ಸತ್ತರು ? ಭಾರತೀಯ ಸೇನೆ ಹೊಸದಾಗಿ ಯಾವ ಪ್ರದೇಶ ವಶಪಡಿಸಿಕೊಂಡಿತು ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಜೊತೆಗೆ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧರ ಸುದ್ದಿ ಕೇಳಿ ಕಣ್ಣೀರು ಮಿಡಿದವರೆಷ್ಟೋ. ಯುದ್ಧ ಮುಗಿಯುವವರೆಗೆ ದೇಶ ತನ್ನೆಲ್ಲ ಮಾಮೂಲು ಸಮಸ್ಯೆಗಳನ್ನು ಬದಿಗಿಟ್ಟು ಕಾರ್ಗಿಲ್ ಕದನದ ಸುದ್ದಿಗಳಿಗಾಗಿ ಕಣ್ಣು, ಕಿವಿ ತೆರೆದು ಕುಳಿತಿದ್ದಂತೂ ನಿಜ. ಹಿಂದೆಂದೂ ಕಾಣದಂತಹ ಏಕತೆ ಈ ಯುದ್ಧದ ಸಂದರ್ಭದಲ್ಲಿ ಕಂಡುಬಂತು.
ಇದೇನು ನಾವಾಗಿ ಬಯಸಿದ ಯುದ್ಧವಲ್ಲ. ಕಾಲು ಕೆರೆದು, ಜಗಳ ತೆಗೆದು ನಾವಾಗಿ ಯುದ್ಧವನ್ನು ಮೈಮೇಲೆ ಎಳೆದುಕೊಂಡದ್ದಲ್ಲ. ನಿಜವಾಗಿ ಹೇಳುವುದಾದರೆ, ಲಾಹೋರ್‌ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ (ಯುದ್ಧ ಆಗಲು ಬಿಡುವುದಿಲ್ಲ) ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರ್‌ನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಅದರಂತೆಯೇ ಅವರು ನಡೆದುಕೊಂಡರು.
ಆದರೆ ಆಗಿದ್ದೇ ಬೇರೆ. ಇಡೀ ಜಗತ್ತೇ ಬದಲಾವಣೆಯ ಹಾದಿ ತುಳಿಯುತ್ತಿದ್ದರೂ ಪಾಕಿಸ್ಥಾನ ಮಾತ್ರ ಭಾರತದ ವಿರುದ್ಧದ ತನ್ನ ದ್ವೇಷ ಭಾವನೆ ತೊರೆಯಲಿಲ್ಲ. ಆಕ್ರಮಣಕಾರಿ ಪ್ರವೃತ್ತಿಯನ್ನು ಅದು ಮರೆಯಲಿಲ್ಲ. ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಕುಲುಕಿದ ಅದು ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರ್‌ನಲ್ಲಿ ನವಾಜ್ ಶರೀಫ್ ವಾಜಪೇಯಿ ಅವರು ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು. ಯುದ್ಧದ ಸಿದ್ಧತೆ ಸಾಗಿತ್ತು. ಭಾರತದ ಸ್ನೇಹಕ್ಕೆ ಪಾಕ್ ನೀಡಿದ ಬೆಲೆ ಇಂತಹದು !
ಭಾರತ ಮಾನಸಿಕವಾಗಿ ಯುದ್ಧಕ್ಕೆ ಖಂಡಿತ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವೆ, ಪಾಕ್ ವೈರಿ ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ಪಂಡಿತ್ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ಕೊನೆಗೂ ವಿಜಯಲಕ್ಷ್ಮಿ ಒಲಿದದ್ದು ನಮಗೇ.
ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರನ್ನು ಕಾಡಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ. ಬಹುಶಃ ಜಗತ್ತಿನಲ್ಲೇ ಇದೊಂದು ಕಠಿಣತಮ ಯುದ್ಧ ಆಗಿರಬಹುದು. ದುರ್ಗಮ ಪರ್ವತದೆತ್ತರವನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಇನ್‌ಫೆಂಟ್ರಿಗೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವು ಬಾರಿ ಇಡೀ ರಾತ್ರಿ ಯುದ್ಧ ಮಾಡಬೇಕಾಗಿ ಬಂದರೆ ಇನ್ನು ಕೆಲವು ಸಲ 36 ಗಂಟೆಗಳ ಕಾಲ ಶತ್ರುಪಡೆಯೊಂದಿಗೆ ಸೆಣಸಿದ ಸಂದರ್ಭಗಳೂ ಉಂಟು. ಭೂಸೈನ್ಯದ ಜೊತೆ ಆರ್ಟಿಲರಿ ಹಾಗೂ ವಾಯುದಳ ಕೂಡ ಹೋರಾಡಿತು. ಸೇನೆಯ ವೈದ್ಯಾಧಿಕಾರಿಗಳು ಅಸುರಕ್ಷಿತ ಬಂಕರ್‌ಗಳಲ್ಲಿ ಗಾಯಗೊಂಡು ಕುಸಿದುಬಿದ್ದಿದ್ದ 584 ಕ್ಕೂ ಹೆಚ್ಚು ಯೋಧರ ಶುಶ್ರೂಷೆಯಲ್ಲಿ ಹಗಲಿರುಳೂ ಶ್ರಮಿಸಿದರು. ಭಾರತ ಸೇನೆ ಇದುವರೆಗೆ ಕಂಡ ಅತ್ಯಂತ ಕಠಿಣ ಯುದ್ಧವಿದಾಗಿತ್ತು. ಈ ಯುದ್ಧದಲ್ಲಿ ಒಂದೋ ಹೋರಾಡಬೇಕಿತ್ತು, ಇಲ್ಲವೇ ಹೋರಾಡುತ್ತಾ ಮಡಿಯಬೇಕಾಗಿತ್ತು. ಬೇರೆ ಅವಕಾಶವೇ ಅವರಲ್ಲಿರಲಿಲ್ಲ. ಹಿಮ್ಮೆಟ್ಟುವ ಸಾಧ್ಯತೆಯಂತೂ ಇರಲೇ ಇಲ್ಲ. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು. ಜುಲೈ 14 ರಂದು ಅಟಲ್ ಬಿಹಾರಿ ವಾಜಪೇಯಿಯವರು ಆಪರೇಷನ್ ವಿಜಯ್ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಆದರೆ ಕಾರ್ಗಿಲ್ ಯುದ್ಧ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಭಾರತೀಯ ಸೇನೆ ಪಾಕ್ ನುಸುಳುಕೋರರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಘೋಷಿಸಿದ ದಿನ ಜುಲೈ 26 ರಂದು. ಆದ್ದರಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತದೆ.
ಕಾರ್ಗಿಲ್ ಕದನ ಇಡೀ ದೇಶದ ಮಾನಸಿಕತೆಯ ಮೇಲೆ ಆಳವಾದ ಮುದ್ರೆಯೊತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಲಡಾಖ್‌ನಿಂದ ನಾಗಾಲ್ಯಾಂಡ್‌ವರೆಗೆ ದೇಶದುದ್ದಗಲಕ್ಕೆ ದೇಶಭಕ್ತಿಯ ಪ್ರವಾಹವೇ ಹರಿದಿದೆ. ಯುದ್ಧದಲ್ಲಿ ಹುತಾತ್ಮರಾದ ವೀರಯೋಧರನ್ನು ಇಡೀ ದೇಶ ಹೀರೋಗಳಂತೆ ಕಂಡು ಗೌರವ ಸಲ್ಲಿಸಿದೆ, ಆರಾಧಿಸಿದೆ. ಜಾತಿ, ಮತ, ಧರ್ಮ, ಪ್ರಾಂತ, ಭಾಷೆ ಯಾವುದೂ ಇದಕ್ಕೆ ಅಡ್ಡಿಯಾಗಲಿಲ್ಲವೆನ್ನುವುದು ವಿಶೇಷ. ದೆಹಲಿಯ ಸಮೀಪವಿರುವ ನೊಯ್ಡಾಕ್ಕೆ ಲೆಫ್ಟಿನೆಂಟ್ ವೈಜಯಂತ್ ಥಾಪರ್ ಅವರ ಪಾರ್ಥಿವ ಶರೀರ ಆಗಮಿಸಿದಾಗ, ಅವರ ಅಂತ್ಯಕ್ರಿಯೆಗಾಗಿ ಇಡೀ ಊರು ತನ್ನ ವ್ಯವಹಾರಗಳನ್ನು ಸ್ಥಗಿತಗೊಳಿಸಿತ್ತು. ದಲಿತ ಜಾತಿಗೆ ಸೇರಿದ ಸಿಪಾಯಿ ದಿನೇಶ್ ವಘೇಲಾರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವೇಳೆ ಗುಜರಾತಿನ ಖೇಡಾ ಜಿಲ್ಲೆಯ ನಿರ್ಮಲಿ ಗ್ರಾಮದ ಎಲ್ಲ ಜಾತಿಯವರೂ ಒಟ್ಟಾಗಿ ಸೇರಿ ಆತನ ವೀರಮರಣಕ್ಕೆ ಕಣ್ಣೀರು ಹಾಕಿದರು. ಆ ಯೋಧನ ಪರಾಕ್ರಮಕ್ಕೆ ಅವರೆಲ್ಲ ಹೆಮ್ಮೆಪಟ್ಟರು. ಈ ಯುದ್ಧ ಇಡೀ ದೇಶವನ್ನೇ ಒಂದುಗೂಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಟೈಗರ್ ಹಿಲ್ಸ್, ತೊಲೊಲಿಂಗ್ ಹಿಮಪರ್ವತಗಳು ಸಿಖ್ಖರು, ಪಂಜಾಬಿಗಳು, ಗೂರ್ಖರು, ಬಿಹಾರಿಗಳು, ನಾಗಾಗಳು, ಬಂಗಾಲಿಗಳು, ಮಲೆಯಾಳಿಗಳು, ಮರಾಠರು, ಜಾಟರು, ಕನ್ನಡಿಗರು, ತಮಿಳರು… ಹೀಗೆ ಎಲ್ಲರ ರಕ್ತದಿಂದ ತೊಯ್ದಿದೆ. ಈ ರಕ್ತದ ಕಲೆಗಳ ಮೇಲೆ ಮತ್ತೆ ಚಳಿಗಾಲದಲ್ಲಿ ಹಿಮ ಹರಡಿಕೊಳ್ಳಲಿದೆ. ಆದರೆ ಅವರೆಲ್ಲರ ತ್ಯಾಗ, ಬಲಿದಾನಗಳು ಎಂದಿಗೂ ಅಳಿಯಲಾರವು. ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿ ಇದೆಯೆಂದು ಚರಿತ್ರೆ ಓದಿದ ಮುಂದಿನ ಪೀಳಿಗೆಗೆ ಖಂಡಿತ ಆಶ್ಚರ್ಯಚಕಿತವಾಗದೇ ಇರದು. ಭಾರತದ ಆತ್ಮಶಕ್ತಿ ಸುಪ್ತವಾಗಿರಬಹುದು. ಆದರೆ ಸಮಯ ಬಂದಾಗ ಅದು ಜಾಗೃತವಾಗಿ ಇಡೀ ದೇಶವನ್ನು ಬಡಿದೆಬ್ಬಿಸಬಲ್ಲದೆಂಬುದಕ್ಕೆ ಕಾರ್ಗಿಲ್ ಕದನ ಒಂದು ಜ್ವಲಂತ ಸಾಕ್ಷಿ.
ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು, ಅದರ ಕೆಳಗೊಂದು ವಾಕ್ಯ :
ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ : ನಿಮ್ಮ ನಾಳೆಗಳಿಗೆ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ.
ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ, ಗಾಳಿಗೆ ತೊಯ್ದು ಮಸುಕಾಗಿದೆ. ಬರಹ ಮಸುಕಾದರೇನು ? ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ವೀರಗಾಥೆ ಇಂದಿಗೂ ಅಕ್ಷರಶಃ ಈ ಮಾತನ್ನು ಮಾತ್ರ ನೆನಪಿಸುತ್ತಿದೆ. ಕಾರ್ಗಿಲ್ ಕದನ ಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರು ನಮ್ಮೆಲ್ಲರ ನಾಳೆಗಳಿಗಾಗಿ ತಮ್ಮ ಈ ದಿನಗಳನ್ನು ಬಲಿದಾನ ಮಾಡಿದ್ದಾರೆ.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ, ಟಿ. ವಿ. ಚಾನೆಲ್‌ಗಳಲ್ಲಿ ಜಾಹೀರಾತೊಂದು ತೇಲಿಬರುತ್ತಿತ್ತು. ‘They didn’t go down fighting for their lives in Kargil : but for ours’ ಅದರ ಹಿಂದೆಯೇ ಮತ್ತೊಂದು ವಾಕ್ಯ ತೇಲಿಬರುತ್ತಿತ್ತು. ‘They die for a stranger. And that stranger is you.’
ನಿಜ, ಕಾರ್ಗಿಲ್ ಕದನದಲ್ಲಿ ಸುಮಾರು 527 ಕ್ಕೂ ಹೆಚ್ಚು ವೀರ ಯೋಧರು ನಮಗಾಗಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಸುಮಾರು 1,363 ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಈಗಲೂ ಅನೇಕರು ದೇಶಕ್ಕಾಗಿ ಹುತಾತ್ಮರಾಗುತ್ತಲೇ ಇದ್ದಾರೆ. ಹದಿನೆಂಟು ಸಹಸ್ರ ಅಡಿಯೆತ್ತರಕ್ಕೆ ತಲುಪಿ ವೈರಿಪಡೆಯನ್ನು ಚೆಂಡಾಡುವುದು ಅಷ್ಟು ಸುಲಭವೇನಲ್ಲ. ಭಾರತೀಯ ಸೈನ್ಯ ಇದುವರೆಗೆ ಕಾದಾಡಿದ ಕದನಗಳಲ್ಲಿ ಕಾರ್ಗಿಲ್ ಸಮರ ಅತ್ಯಂತ ಕಠಿಣವಾದುದು. 1965 ಹಾಗೂ 1971 ರಲ್ಲಿದ್ದಂತೆ ಈ ಬಾರಿ ಇನ್‌ಫ್ರೆಂಟಿಯನ್ನು ಬೆಂಬಲಿಸುವ ಟ್ಯಾಂಕುಗಳಿಲ್ಲ. ಗತಪ್ರಾಣನಾಗಿ ಬಿದ್ದಾಗ ವಾಯುದಳದ ನೆರವು ಕೋರುವಂತಿರಲಿಲ್ಲ. ಯುದ್ಧರಂಗದಿಂದ ತಪ್ಪಿಸಿಕೊಂಡು ಸುರಕ್ಷಿತ ತಾಣಕ್ಕೆ ತಲುಪುವ ಪ್ರಶ್ನೆಯೇ ಈ ಬಾರಿ ಇರಲಿಲ್ಲ. ಹಾಗೆಂದೇ ಕಾರ್ಗಿಲ್ ಯುದ್ಧಕ್ಕೆ ತೆರಳಿದ ನಮ್ಮ ಸೈನಿಕರೊಬ್ಬೊಬ್ಬರದ್ದೂ ಒಂದೊಂದು ಸಾಹಸಗಾಥೆ. ಇವರಲ್ಲದೆ ರಾಷ್ಟ್ರಕ್ಕೆ ಪ್ರಾಣದೀವಿಗೆಯಾಗಿ ತಾಯ್ನಾಡಿಗಾಗಿ ತಲೆಯೊಡ್ಡಿದವರು ಇನ್ನೆಷ್ಟೋ … ಅಂತಹ ಎಲ್ಲಾ ಮಹಾನ್ ಚೇತನಗಳಿಗೆ ನಮ್ಮ ಶತಶತ ನಮನಗಳು.
ಈ ವಿಜಯ ದಿವಸದ ನೆನಪಿನೊಂದಿಗೆ ಸಮಾಜದಲ್ಲಿರುವ ಪ್ರತಿಯೊಬ್ಬ ಯುವಕರೂ ಸೈನಿಕರಂತೆ ದೇಶ, ಧರ್ಮ ರಕ್ಷಣೆಗೆ ತಮ್ಮ ಕರ್ತವ್ಯವನ್ನು ಪಾಲಿಸಿದಲ್ಲಿ ಸ್ವಸ್ಥ ಸಮಾಜದೊಂದಿಗೆ ಸುಭದ್ರ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರತಿಯೊಬ್ಬ ಯುವಕರು ನಾಡಿನ ರಕ್ಷಣೆಗೆ ಮುಂದಾಗುತ್ತಾ ಸೈನಿಕರು ಗಡಿಯಲ್ಲಿ ನಾಡ ರಕ್ಷಣೆ ಮಾಡಿದಂತೆ ಹಾಗೂ ಸೈನಿಕರು ಶತ್ರುಗಳನ್ನು ದೇಶದಿಂದ ಹೊರಗಟ್ಟಿ ಈ ವಿಜಯದಿವಸ ಆಚರಣೆ ಮಾಡಿದ ರೀತಿಯಲ್ಲಿ ನಾವೆಲ್ಲರೂ ಸೇರಿ ಸಮಾಜದ ಸೈನಿಕರಾಗಿ ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ಹೊರಗಟ್ಟುವ ಸಂಕಲ್ಪ ಮಾಡೋಣ.
ಕಾಶ್ಮೀರದ ಶ್ರೀನಗರದಿಂದ ೨೦೫ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ, ೦೪೮ ದೀಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. ೧೬೦ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.
`ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಖೂ. ಸಿಯಾಚಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಈ ಪ್ರದೇಶಕ್ಕೆ ತನ್ನ ಸೇನೆ ನುಗ್ಗಿಸಿತ್ತು. ಈ ಆಕ್ರಮಣಕ್ಕೆ ಪಾಕಿಸ್ತಾನಕ್ಕೀ ಸೇನೆ ಕೊಟ್ಟ ಹೆಸರು `ಆಪರೇಷನ್ ಬದ್ರ್'.
ಭಾರತೀಯ ಭೂಸೇನೆ ಮತ್ತು ವಾಯುಸೇನಾ ಪಡೆಗಳು ಜಂಟಿಯಾಗಿ ಮೇ ಮತ್ತು ಜುಲೈ ೧೯೯೯ರಲ್ಲಿ ಜಯಿಸಿದ್ದು ಕಾರ್ಗಿಲ್ ಕದನ. ಈ ಕ್ರಿಯೆಗೆ ಕೊಟ್ಟ ನಾಮಧೇಯ `ಆಪರೇಶನ್ ವಿಜಯ್'. ಭಾರತೀಯ ಸೇನಾ ಇತಿಹಾಸದಲ್ಲೇ ಅತ್ಯಂತ ಮಹತ್ತರವಾದ ವಿಜಯವದು. ಸಮುದ್ರಮಟ್ಟದಿಂದ ಅತೀ ಎತ್ತರ ಪ್ರದೇಶದಲ್ಲಿ ನಡೆದ ಮೊದಲ ಯುದ್ಧವೂ ಹೌದು.
೬೦ದಿನಗಳ ಕಾಲ ರಾತ್ರಿ ಹಗಲೂ ಸತತ ಕಾದಾಟದ ನಂತರ ೫೭೨ ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಕ್ಕೆ ೧೯೯೯ರ ಜುಲೈ ೨೬ರಂದು ವಿಜಯ ಸಿಕ್ಕಿತು. ಸಿಪಾಯಿಗಳ ಗೌರವಾರ್ಥವಾಗಿ ಅಂದಿನಿಂದ ಈ ದಿನವನ್ನು ದೇಶದಾದ್ಯಂತ `ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.
ಕಾರ್ಗಿಲ್ ರಣಾಂಗಣದಲ್ಲಿ ಜೀವದ ಹಂಗು ತೊರೆದು ಹೋರಾಡಿ ಮಡಿದ ಹಲವಾರು ಯೋಧರ ಜೀವನಗಾಥೆಗಳು ಸಂಕ್ಷಿಪ್ತವಾಗಿ ಬಿಂಬಿಸುವ ಪ್ರಯತ್ನ ಇಲ್ಲಿದೆ.
ಜಸ್ವಿಂದರ್ ಸಿಂಗ್ ಭರವಸೆ:
"ನೀನೆನೂ ಹೆದರಬೇಕಾಗಿಲ್ಲ. ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ" - ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿದುಂಬಿದ ತನ್ನ ೨೦ರ ಹರೆಯದ ಪತ್ನಿ ಗುರುದಯಾರ್ ಕೌರ್ಗೆ ಸಿಪಾಯಿ ಜಸ್ವಿಂದರ್ ಸಿಂಗ್ ಬೆಚ್ಚನೆಯ ಭರವಸೆ ಇತ್ತ. ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧಭೂಮಿಗೆ ಹೊರಟಿದ್ದ.
ಕೌರ್ ಜಸ್ವಿಂದರ್ಸಿಂಗ್ನನ್ನು ಮದುವೆಯಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೆ. ಕಂಗಳ ತುಂಬಾ, ಮನದ ತುಂಬಾ ಅದೇನೇನೋ. ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು, ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂಬ ಲೆಕ್ಕಾಚಾರ ಹಾಕಿದ್ದಳು.
ಗುರುದಯಾರ್ ಕೌರ್ ತನ್ನ ಪತಿ ಜಸ್ವಿಂದರ್ ಸಿಂಗ್ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೆ. ಅದೇ ಆಕೆಯ ದಾಂಪತ್ಯ ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತ ಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ವಿಂದರ್ ಸಿಂಗ್ ಪ್ಲೈವು ಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು.
ಜಸ್ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಆಂಧ್ರ ರೈತ. ಮೂರು ಎಕರೆ ಜಮೀನು ಹೊಂದಿರುವ ಅತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರ ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿದ ಕಿರ್ಯ ಜಸ್ವಿಂದರ್ ಸಿಂಗ್ ೧೭ನೇ ವಯಸ್ಸಿನಲ್ಲೇ ಮನೆಬಿಟ್ಟು ಹೊರಟ. ಅವನನ್ನು ಬರಸೆಳೆದು ಅಪ್ಪಿಕೊಂಡಿದ್ದು ಭಾರತೀಯ ಸೇನೆ. ಆತನ ಸಾಹಸದ ಬದುಕಿಗೆ ಆಸರೆ ನೀಡಿತು.
ಮೇ ೨೧ರಂದು ಜಸ್ವಿಂದರ್ ಸಿಂಗ್ ಸಾಹಸದ ಬದುಕಿನ ಕೊನೆಯ ಅಧ್ಯಾಯ. ಆಯಕಟ್ಟಿನ ಟೈಗರ್ಹಿಲ್ಸ್ ಶತ್ರುಗಳ ವಶದಲ್ಲಿತ್ತು. ಅದನ್ನು ಹೇಗಾದರೂ ವೈರಿಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಅದೇನು ಅಷ್ಟು ಸುಲಭವೇ? ದುರ್ಗಮ ಶಿಖರ. ಕಡಿದಾದ ಹಾದಿ. ಶಿಖರದೆತ್ತರದಲ್ಲಿ ಬಂಕರ್ಗಳಲ್ಲಿ ಮದ್ದುಗುಂಡು ತುಂಬಿಕೊಂಡು ಕಾದಿರುವ ವೈರಿಪಡೆ. ವೈರಿಪಡೆಯ ಈ ದುರ್ಗಮ ಅಡಗುದಾಣ ಅರಸಿ ಹೊರಟ ಸಿಪಾಯಿ ಜಸ್ವಿಂದರ್ ಸಿಂಗ್ ಕೊನೆಗೂ ಮೇಲಕ್ಕೆ ತಲುಪಿದ. ಟೈಗರ್ ಶಿಖರವೇರಿದ. ಅಷ್ಟರಲ್ಲಿ ಆತನ ಎರಡೂ ತೊಡೆಗಳಿಗೆ ಎಲ್ಲಿಂದಲೋ ಗುಂಡುಗಳು ಬಂದು ಬಡಿದವು. ತೊಡೆಗಳು ಛಿದ್ರಛಿದ್ರ. ಆದರೆ ಮನಸ್ಸು ಮಾತ್ರ ಇನ್ನೂ ಭದ್ರ. ಕೊನೆಯುಸಿರಿನವರೆಗೂ ಕೈಯಲ್ಲಿದ್ದ ಬಂದೂಕು ವೈರಿಪಡೆಯ ಮೇಲೆ ಬೆಂಕಿ ಕಾರುತ್ತಲೇ ಇತ್ತು.
ಗುರುದಯಾಲ್ ಕೌರ್ ಮನೆಯಲ್ಲಿ ಟಿವಿ ಮುಂದೆ ಕುಳಿತಿದ್ದಳು. ಕಾರ್ಗಿಲ್ ಕದನದ ಸುದ್ದಿಗಳನ್ನು ಕಾತರದಿಂದ ಆಲಿಸುತ್ತಿದ್ದಳು. ತನ್ನ ಪತಿ ಸಿಪಾಯಿ ಜಸ್ವಿಂದರ್ ಸಿಂಗ್ ಬಗ್ಗೆ ಏನಾದರೂ ಸುದ್ಧಿ, ಚಿತ್ರ ಬರುವದೋ ಎಂದು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗಲಿಲ್ಲ. ಒಂದೆರಡು ದಿನದಲ್ಲೇ ಜಸ್ವಿಂದರ್ ಸಿಂಗ್ಮನೆಯಂಗಳಕ್ಕೆ ಬಂದಿಳಿದ. ಆದರೆ ಶವವಾಗಿ ಪೆಟ್ಟಿಗೆಯೊಂದರಲ್ಲಿ ಮಲಗಿ. ಪಂಜಾಬಿನ ಧೂಳುತುಂಬಿದ ಹಳ್ಳಿ ಮುನ್ನೆಯ ಆ ಸಣ್ಣ ಮನೆಯಂಗಳದಲ್ಲಿ ಕುಳಿತು ಆಗಸದತ್ತ ದೃಷ್ತಿ ನೆಟ್ಟಿರುವ ಕೌರ್ ಈಗ ಮ್ಲಾನವದನೆ.
ಜಸ್ವಿಂದರ್ ಸಿಂಗ್ ವೀರಮರಣ ಅಪ್ಪಿದ್ದಕ್ಕೆ ತಂದೆಗೆ ದುಃಖವಿಲ್ಲ. "ಶತ್ರುವಪಡೆಯನ್ನು ಹಿಮ್ಮೆಟ್ಟಿಸಲು ಯಾರಾದರೂ ಹೋರಾಡುತ್ತಾ ಸಾಯಲೇಬೇಕು." ಎಂದು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರ್ಎ.
"ನಮ್ಮ ಬದುಕಿಗೆ ಇದೊಂದು ಬರಸಿಡಿಲಿನಂತೆ ಬಂದಪ್ಪಳಿಸಿದ ದುರಂತ. ಆದರಿದು ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡಬಹುದೇನೋ. ಅದೇ ನಮಗೆ ಈಗುಳಿದಿರುವ ಸಮಾಧಾನ." - ದಾಂಪತ್ಯದ ಸವಿಯನ್ನೇ ಉಣ್ಣದ ಕೌರ್ ಉಮ್ಮಳಿಸಿ ಬರುವ ದುಃಖವನ್ನು ತಡೆದೊತ್ತಿ ಹೇಳುತ್ತಾಳೆ.
ಹೌದು, ಜಸ್ವಿಂದರ್ ಸಿಂಗ್ನ ಸಾವು ವ್ಯರ್ಥವಾಗುವದಿಲ್ಲ.
ಕಾರ್ಗಿಲ್ ಕದನ : ಕೆಲವು ವಿವರಗಳು
ಕಾಲಮಿತಿ :
ಯುದ್ಧ ನಡೆದ ಒಟ್ಟು ಅವಧಿ : ೭೪ ದಿನಗಳು
ಯುದ್ಧಕ್ಷೇತ್ರದ ಒಟ್ಟು ಅವಧಿ : ೧೫೦ ಕಿ.ಮೀ.
ಬಳಸಿದ ಬಲಾಬಲ
ಭಾರತೀಯ ಸೇನೆ : ೨೦,೦೦೦
ಪಾಕಿಸ್ತಾನಿ ಸೇನೆ : ಅಘೋಷಿತ
ಅತಿಕ್ರಮಣಕಾರಿಗಳು : ೧೫೦೦
ಶಸ್ತ್ರಾಸ್ತ್ರ ಬಳಕೆ
ಆರ್ಟಿಲರಿ : ೩೦೦ (೧೦೦ ಬೊಫೋರ್ಸ್ ಬಂದೂಕುಗಳೂ ಸೇರಿದಂತೆ)
ಶೆಲ್‍ಗಳು (ಪ್ರತಿನಿತ್ಯ) : ೫,೦೦೦
ಟೋನೇಜ್ (ಪ್ರತಿನಿತ್ಯ) : ೧೫,೦೦೦
ವಾಯುಬಲ
ಸ್ಟ್ರೈಕ್ ಮಿಶನ್ಸ್ : ೫೫೦
ರೆಕನೈಸಾನ್ಸ್ : ೧೫೦
ಎಸ್ಕಾರ್ಟ್ ಮಿಶನ್ : ೫೦೦
ಚಾಪರ್ ಸಾರ್ಟೀಸ್ : ೨,೧೮೫
ಮಡಿದವರು
ಭಾರತಸೇನೆ : ೪೦೭
ಗಾಯಗೊಂಡವರು : ೫೮೪
ನಾಪತ್ತೆಯಾದವರು : ೬
ಪಾಕ್ ಸೇನೆ ಮಡಿದವರು : ೬೯೬
ಯುದ್ಧ ವೆಚ್ಚ
ದೈನಂದಿನ ಸರಾಸರಿ ವೆಚ್ಚ : ೧೫ ಕೋಟಿ ರೂ.
ಒಟ್ಟು ವೆಚ್ಚ : ೧,೧೦೦ ಕೋಟಿ ರೂ.
ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕನ್ನಡದ ಕೆಲವರು ಕಡುಗಲಿಗಳು
*ಭಾರತೀಯ ವಾಯುಪಡೆಯ ಪ್ಲೈಟ್ ಲೆಫ್ಟಿನೆಂಟ್ ಎಂ.ಸುಬ್ರಹ್ಮಣ್ಯಂ (ಬೆಳಗಾವಿ)
* ಮಡಿವಾಳಪ್ಪ ನಾಯ್ಕರ್ (ಆಸುಂಡಿ ಗ್ರಾಮ, ಸವದತ್ತಿ ತಾಲೂಕು, ಬೆಳಗಾವಿ)
* ಸಿಪಾಯಿ ಧೋಂಡಿಬಾ ದೇಸಾಯಿ (ವಡಗಾಂವ, ಖಾನಾಪುರ, ತಾಲೂಕು, ಬೆಳಗಾವಿ)
ಸಿದ್ಧನಗೌಡ ಬಸನಗೌಡ ಪಾಟೀಲ, ಸಿ.ಆರ್.ಪಿ.ಎಫ್. (ಕೆರೂರು ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ)
* ಅಪ್ಪಾಸಾಹೇಬ ಪೀರಪ್ಪ ಧನವಾಡೆ, ಸಿ.ಆರ್.ಪಿ.ಎಫ್. (ಇಂಗಳಿ ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ)
* ನಾಯಕ ಶಿವಬಸಯ್ಯ ಕುಲಕರ್ಣಿ, ೨೦ನೆಯ ರಾಷ್ಟ್ರೀಯ ರೈಫಲ್ಸ್ (ಚೊಳಚಗುಡ್ಡ ಗ್ರಾಮ, ಬಾದಾಮಿ, ಬಾಗಲಕೋಟ ಜಿಲ್ಲೆ)
* ಸಿದ್ಧರಾಮಪ್ಪ (ರೇಕುಳಿ ಗ್ರಾಮ, ಬೀದರ್ ಜಿಲ್ಲೆ)
* ಲ್ಯಾನ್ಸ್ ಹವಿಲ್ದಾರ್ ಮಲ್ಲಯ್ಯ ಚನ್ನಬಸಯ್ಯ ಮೇಗಳಮಠ (ಅಳವಂಡಿ ಗ್ರಾಮ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ)
* ಎಸ್.ಕೆ.ಮೇದಪ್ಪ, ಮರಾಠಾ ಲೈಟ್ ಇನ್‍ಫೆಂಟ್ರಿ (ಕಿರಂಗನದೂರು, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ)
* ದಾವಲಸಾಬ್ ಅಲಿಸಾಬ್ ಕಂಬಾರ್, ಬಿ.ಎಸ್.ಎಫ್. (ಬಲವಟ್ ಗ್ರಾಮ, ಮುದ್ದೇಬಿಹಾಳ ತಾಲೂಕು, ಬಿಜಾಪುರ)
* ಸುಬೇದಾರ್ ಪೆಮ್ಮಂಡ ದೇವಯ್ಯ ಕಾವೇರಪ್ಪ (ವಿರಾಜಪೇಟೆ, ಕೊಡಗು ಜಿಲ್ಲೆ)
* ಲಾನ್ಸ್ ನಾಯಕ್ ಎಚ್.ವಿ.ವೆಂಕಟ್ (ಅಗ್ರಹಾರ ಗ್ರಾಮ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ)
* ಲಾನ್ಸ್ ನಾಯಕ್ ಯಶವಂತ ಕೋಲಕಾರ (ಮೇಕಲಮರಡಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ)
* ದಿಲೀಪ ಪೀರಪ್ಪ ಪೋತ್ರಾಜ (ಗದ್ಯಾಳ ಗ್ರಾಮ, ಜಮಖಂಡಿ ತಾಲೂಕು, ಬಿಜಾಪುರ ಜಿಲ್ಲೆ)
* ಗೋವಿಂದ ಶೆಡೋಳೆ (ವರದಟ್ಟಿ ಗ್ರಾಮ, ಭಾಲ್ಕಿ ತಾಲೂಕು, ಬೀದರ ಜಿಲ್ಲೆ)

ಅಂತಾರಾಷ್ಟ್ರೀಯ ಗೆಳೆತನ ದಿನದ ಶುಭಾಶಯ.
ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಗೆಳೆತನದ ದಿನವನ್ನಾಗಿ ಆಚರಿಸಲಾಗುತ್ತಿದೆ. ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಹುಟ್ಟಿ ಇಂದು ಪ್ರಪಂಚದಲ್ಲೆಡೆ ಹರಡಿಕೊಂಡಿದೆ. ೧೯೩೫ರಲ್ಲಿ ಇದನ್ನು ಅಧಿಕೃತ ರಜಾದಿನವನ್ನಾಗಿ ಅಮೇರಿಕಾ ದೇಶವು ಘೋಷಿಸಿತ್ತು.ಸ್ನೇಹದ ಸಂಕೇತವಾಗಿ ಪರಸ್ಪರರಿಗೆ 'ಗೆಳೆತನದ ಪಟ್ಟಿ'(Friendship band) ಕಟ್ಟಿ,ಈ ದಿನವನ್ನು ಆಚರಿಸಲಾಗುತ್ತಿದೆ. ಪ್ರೀತಿಗಿಂತ ಸ್ನೇಹ ದೊಡ್ದದು ಎಂದು ಹಲವಾರು ಸಿನಿಮಾಗಳಲ್ಲಿ ಕೇಳಿರಬಹುದು ಬಹುಶಃ ಅದು ಸತ್ಯ, ಏಕೆಂದರೆ ಪ್ರೀತಿಯ ಪರಿದಿಗಿಂತ ಸ್ನೇಹದ ಪರಿದಿ ತುಂಬಾ ವಿಸ್ತಾರವಾದುದು. ಯಾವ ಸ್ನೇಹದಲ್ಲಿ ಪ್ರೀತಿ ಇರುತ್ತದೊ ಅ ಪ್ರೀತಿಯಲ್ಲಿ ಸ್ನೇಹ ಇರುತ್ತದೆ. ಏಕೆಂದರೆ "ಸ್ನೇಹ ಮತ್ತು ಪ್ರೀತಿ ಎರಡು ಮಾನವನ ದೇಹದ ಮಾಂಸ ಮತ್ತು ರಕ್ತವಿದ್ದಂತೆ"
ಭಾರತದ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ ೧೫
ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಬ್ರಿಟೀಷರಿಂದ ಸ್ವತಂತ್ರವಾಯಿತು.
ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ದೇಶದಾದ್ಯಂತ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು-ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ,ಭಾರತದ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡಿ ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ,ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಣಿದ ನಾಯಕರನ್ನು ಸ್ಮರಿಸಲಾಗುತ್ತದೆ.

ಸ್ವಾತ್ರಂತ್ರ್ಯದ ಹಾದಿ
ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ಬ್ಯಾಟನ್, ಬ್ರಿಟಿಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ರನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ, ಜವಾಹರ್ ಲಾಲ್ ನೆಹರು ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ತ್ರವನ್ನುದ್ದೇಶಿಸಿ,ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ಮಾಡಿದರು.
ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ..... ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ .
ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಜೂನ್ ೧೯೪೮ ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಂದರು. ಪಟೇಲರು ೫೬೫ ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ "ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ" ತಂತ್ರವನ್ನು ಉಪಯೋಗಿಸಿದರು.
ಸಂವಿಧಾನ ರಚನಾಸಭೆಯು ಸಂವಿಧಾನದ ಕರಡನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ತುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು ೧೯೫೪ರಲ್ಲಿ ಒಪ್ಪಿಸಿದ ಪಾಂಡಿಚೇರಿ . ೧೯೫೨ ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. ೬೨ ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಯಿತು.

ಯಲ್ಲಪ್ಪ ನಂದಿ
Subscribe to:
Posts (Atom)