Wednesday, 2 December 2020

ಕನಕದಾಸರು.

ಶ್ರೀ ಕನಕದಾಸರು [ಮೂಲ ಹೆಸರು ತಿಮ್ಮಪ್ಪ ನಾಯಕ] 1508-1606 ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.


ಜನನ.

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.


ಐತಿಹ್ಯ.

ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.


ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋಗಿದ್ದರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.


ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು.


ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ.

ಕನಕ ದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.


ಸಾಧನೆ.

ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು.


ಕನಕ ದಾಸರ ಸಾಹಿತ್ಯ ರಚನೆ.

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:


ಮೋಹನತರಂಗಿಣಿ

ನಳಚರಿತ್ರೆ

ರಾಮಧಾನ್ಯ ಚರಿತೆ

ಹರಿಭಕ್ತಿಸಾರ

ನೃಸಿಂಹಸ್ತವ (ಉಪಲಬ್ದವಿಲ್ಲ)

ಮೋಹನತರಂಗಿಣಿ

ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಹಂಪಿಯ ಪತನವನ್ನು (೧೫೬೫) ಸಹ ಕನಕ ನೋಡಿದ್ದರು. ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.


ಸೋಮಸೂರಿಯ ವೀಥಿಯ ಇಕ್ಕೆಗಳಲಿ

ಹೇಮ ನಿರ್ಮಿತ ಸೌಧದೋಳಿ

ರಮಣೀಯತೆವೆತ್ತ ಕಳಸದಂಗಡಿಯಿರ್ದುಂ

ವಾ ಮಹಾ ದ್ವಾರಕಾಪುರದೇ

 

ಓರಂತೆ ಮರಕಾಲರು ಹಡಗಿನ ವ್ಯವ

ಹಾರದಿ ಗಳಿಸಿದ ಹಣವ

ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು

ಬೇರಂಗೆ ಕಡವ ಕೊಡುವರು.

 


ನಳಚರಿತ್ರೆ.

ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: ಲಲಿತ ಹೇಮದ ತೂಗಮಂಚದ ಹೊಳೆವ ಮೇಲ್ವಾಸಿನಲಿ ಮಲಗು ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨) ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.


ರಾಮಧಾನ್ಯಚರಿತೆ.

ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ? ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು.. ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.


ಹರಿಭಕ್ತಿಸಾರ.

ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.


ಕೀರ್ತನೆಗಳು.

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.


ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.


'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.

ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ. ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . ತೀರ್ಥವನು ಪಿಡಿದವರು ತಿರುನಾಮಧಾರಿಗಳೇ ಜನ್ಮ ಸಾರ್ಥಕವಿರದವರು ಭಾಗವತರಹುದೇ ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.


ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

 

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ

ನೀ ದೇಹದೊಳಗೊ, ನಿನ್ನೊಳು ದೇಹವೂ

ಬಯಲು ಆಲಯದೊಳಗೊ, ಆಲಯವು ಬಯಲೊಳಗೊ

ಬಯಲು ಆಲಯವೆರಡು ನಯನದೊಳಗೊ

ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ

ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ

ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ

ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ

ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ

ಕುಸುಮ ಗಂಧಗಳೆರಡು ಘ್ರಾಣದೊಳಗೊ

ಅಸಮಭವ ಕಾಗಿನೆಲೆಯಾದಿಕೇಶವರಾಯ

ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ.

 


ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ


ತೊರೆದು ಜೀವಿಸಬಹುದೆ

ಹರಿ ನಿನ್ನ ಚರಣಗಳ

ಬರಿದೇ ಮಾತೇಕಿನ್ನೂ

ಅರಿತು ಪೇಳುವೆನಯ್ಯ... ||||

 

 

ತಾಯಿ ತಂದೆಯ ಬಿಟ್ಟು

ತಪವ ಮಾಡಲುಬಹುದು

ದಾಯಾದಿ ಬಂಧುಗಳ ಬಿಡಲುಬಹುದು

ರಾಯ ತಾ ಮುನಿದರೆ

ರಾಜ್ಯವನೆ ಬಿಡಬಹುದು

ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು... ||||

 

 

ಒಡಲು ಹಸಿದರೆ ಮತ್ತೆ

ಅನ್ನವನೆ ಬಿಡಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು

ಮಡದಿ ಮಕ್ಕಳ ಕಡೆಗೆ

ತೊಲಗಿಸಿಯೆ ಬಿಡಬಹುದು

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...||||

 

 

ಪ್ರಾಣವನು ಪರರು

ಬೇಡಿದರೆತ್ತಿ ಕೊಡಬಹುದು

ಮಾನಾಭಿಮಾನವ ತಗ್ಗಿಸಲುಬಹುದು

ಪ್ರಾಣದಾಯಕಾನಾದ ಆದಿಕೇಶವರಾಯ

ಜಾಣ ಶ್ರೀ ಕೃಷ್ಣ ನಿನ್ನಡಿಯಬಿಡಲಾಗದು....||||






Wednesday, 21 October 2020

ಪುಸ್ತಕದ ಓದು

ಪುಸ್ತಕದ ಓದು
ಮಸ್ತಕದ ಜ್ಞಾನಕ್ಕೆ
ಮಸ್ತಕದ ಜ್ಞಾನವು
ಸುಂದರ ಸಮಾಜಕ್ಕೆ
ಸುಂದರ ಸಮಾಜದಿಂದ
ದೇಶವು ಪ್ರಗತಿಯೆಡೆಗೆ
ದೇಶದ ಪ್ರಗತಿಯಿಂದ
ವಿಶ್ವ ಭೂ ಪಟದಲ್ಲಿ ಹೆಸರಾಗಿ
ಹೆಸರಾಗಿ, ಹಸಿರಾಗಿ ಇತಿಹಾಸದಲಿ
ಅನಕ್ಷರಸ್ಥರ ಸಂಖ್ಯೆ ಇಳಿಮುಖವಾಗಿ
ಹೆಮ್ಮೆಯ ದೇಶ ನಮ್ಮದಾಗಲಿ
ಅನಕ್ಷರತೆಯ ಪಿಡುಗು ತೊಲಗಲಿ
ಅಕ್ಷರತೆಯ ದೀಪ ಬೆಳಗಲಿ, ಬೆಳಗುತ ಇರಲಿ.

       



Thursday, 15 October 2020

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನ

 ಎ.ಪಿ.ಜೆ.ಅಬ್ದುಲ್ ಕಲಾಂ ಅಂದ್ರೆ ಹೆಸರು ಮಾತ್ರ ಅಷ್ಟೇ ಅಲ್ಲ , ಅದು ಪ್ರತಿಯೊಬ್ಬ ಭಾರತೀಯನ ಉಸಿರು. 


ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ.ಅವುಲ್ ಪಕೀರ್ ಜೈನುಲಾಬ್ಡೀನ್ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು.ವಿದ್ಯಾರ್ಥಿಯಾಗಿ ಅವರ ಜೀವನವು ಕಷ್ಟಗಳು ಮತ್ತು ಹೋರಾಟಗಳಿಂದ ತುಂಬಿತ್ತು.

ಆರಂಭಿಕ ದಿನಗಳಲ್ಲಿ ಅವರು ಮನೆ ಮನೆಗೆ  ತೆರಳಿ ಪತ್ರಿಕೆಗಳನ್ನು ಮಾರಾಟ ಮಾಡುವಂತಹ ಪರಿಸ್ಥಿತಿ ಇತ್ತು. ಡಾ. ಎಪಿಜೆ ಕಲಾಂ ಅವರ ಬದ್ಧತೆ ಮತ್ತು ಶಿಕ್ಷಣದ ಮೇಲಿನ ಪ್ರೀತಿ ಮೂಲಕ ಅವರ ಎಲ್ಲ ಕಷ್ಟಗಳಿಂದ ಹೊರಬಂದಿದ್ದಲ್ಲದೆ ಆರಂಭದಲ್ಲಿ ವಿಜ್ನಾನಿಯಾಗಿ ತದನಂತರ ಭಾರತದಲ್ಲಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದರು. ಆ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿ ಮತ್ತು ರೋಲ್ ಮಾಡೆಲ್ ಆಗಿ ಉಳಿದಿದ್ದಾರೆ.


ಭಾರತದ 'ಕ್ಷಿಪಣಿ ತಜ್ಞ' ಕಲಾಂ ಅವರ 10 ಮಹತ್ವದ ಸಾಧನೆಗಳು: 

ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಪೋಖ್ರಾನ್‌ನಲ್ಲಿ ಅನೇಕ ಪರಮಾಣು ಪರೀಕ್ಷೆಗಳ ನೇತೃತ್ವ ವಹಿಸಿದ್ದರು. ಅಂದಿನ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ, ಪೋಖ್ರಾನ್- II ಪರಮಾಣು ಪರೀಕ್ಷೆಗಳ ಮುಖ್ಯಸ್ಥರಾಗಿ ಡಾ.ಕಲಾಮ್ ಪ್ರಮುಖ ಪಾತ್ರ ವಹಿಸಿದರು.

ಡಾ. ಕಲಾಂ ಅವರ ಮೇಲ್ವಿಚಾರಣೆಯಲ್ಲಿ 1992 ರ ಜುಲೈನಿಂದ 1999 ರ ಡಿಸೆಂಬರ್ ವರೆಗಿನಅಣು ಪರೀಕ್ಷೆಗಳು ಭಾರತವನ್ನು ಪರಮಾಣು ಶಕ್ತಿಯನ್ನಾಗಿ ಮಾಡಿತು.

ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ಎರಡು ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವ ವಹಿಸಿದ್ದರು.

'ಸ್ಥಳೀಯ ಮಾರ್ಗದರ್ಶಿ ಕ್ಷಿಪಣಿಗಳಾದ ಎಜಿಎನ್‌ಐ ಮತ್ತು ಪೃಥ್ವಿ' ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿನ ಮಹತ್ವದ ಹೆಗ್ಗಳಿಕೆಗೆ ಡಾ.ಕಲಾಮ್ ಪಾತ್ರರಾಗಿದ್ದಾರೆ.

ಎಜಿಎನ್‌ಐ ಮತ್ತು ಪೃಥ್ವಿ ಅವರ ಕೆಲಸಕ್ಕಾಗಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು 'ಭಾರತದ ಕ್ಷಿಪಣಿ ವ್ಯಕ್ತಿ ' ಎಂದು ಪ್ರೀತಿಯಿಂದ ಕರೆಯಲಾಯಿತು.

ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು (ಎಸ್‌ಎಲ್‌ವಿ) ಅಭಿವೃದ್ಧಿಪಡಿಸುವ ಯೋಜನೆಗೆ ಡಾ. ಕಲಾಂ ಅವರು ಇಸ್ರೋದಲ್ಲಿ ಸ್ಥಳೀಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೆ ಯೋಜನಾ ನಿರ್ದೇಶಕರಾಗಿ 10 ವರ್ಷಗಳ ಕಾಲ ಕೆಲಸ ಮಾಡಿದರು.

ಜುಲೈ 1980 ರಲ್ಲಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮಾರ್ಗದರ್ಶನದಲ್ಲಿ, ಭಾರತದ ಎಸ್‌ಎಲ್‌ವಿ -3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿ, ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್‌ನ ಸದಸ್ಯರನ್ನಾಗಿ ಮಾಡಿತು.

ಡಾ. ಕಲಾಂ ಅವರು ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿಗೆ ಯೋಜನೆಗಳನ್ನು ನಿರ್ದೇಶಿಸಿದರು. ಯಶಸ್ವಿ ಎಸ್‌ಎಲ್‌ವಿ ಕಾರ್ಯಕ್ರಮದ ಹಿಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿಗಾಗಿ ಅವರು ಡೆವಿಲ್ ಮತ್ತು ವೇಲಿಯಂಟ್ ಯೋಜನೆಗಳ ನೇತೃತ್ವ ವಹಿಸಿದ್ದರು.

ಎಪಿಜೆ ಅಬ್ದುಲ್ ಕಲಾಂ ಅವರು ಆರೋಗ್ಯ ಕ್ಷೇತ್ರಕ್ಕೆ ಭಾರಿ ಕೊಡುಗೆ ನೀಡಿದ್ದಾರೆ.ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ಅವರು ಶ್ರಮಿಸಿದರು. ಡಾ. ಕಲಾಂ ಅವರು ಹೃದ್ರೋಗ ತಜ್ಞ ಸೋಮಾ ರಾಜು ಅವರೊಂದಿಗೆ ಕೆಲಸ ಮಾಡಿದರು ಮತ್ತು ಕಡಿಮೆ ವೆಚ್ಚದ ಪರಿಧಮನಿಯ ಸ್ಟೆಂಟ್ ಅನ್ನು 'ಕಲಾಂ-ರಾಜು ಸ್ಟೆಂಟ್' ಅನ್ನು ಅಭಿವೃದ್ಧಿಪಡಿಸಿದರು.

ಶಿಲ್ಲಾಂಗ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಉಪನ್ಯಾಸ ನೀಡುತ್ತಿರುವಾಗ ಡಾ. ಕಲಾಂ ಅವರು ಜುಲೈ 27, 2015 ರಂದು ನಿಧನರಾದರು.


ಡಾ. ಅಬ್ದುಲ್ ಕಲಾಂ ಅವರ ನುಡಿಮುತ್ತುಗಳು.

''ಮೀನುಗಾರನ ಮಗ ಮಿಸೈಲ್ ಮ್ಯಾನ್''

ಅಬ್ದುಲ್ ಕಲಾಂ ಅವರ ಜೀವನ ಎಲ್ಲಾ ಯುವ ಜನರಿಗೆ ಸ್ಫೂರ್ತಿ ಎಂದು ಪರಿಗಣಿಸಲಾಗುತ್ತದೆ. ಇಂದಿಗೂ ಸಹ, ಯುವ ಜನರು ತಮ್ಮ ಮಾರ್ಗದರ್ಶನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮೀನುಗಾರನ ಮಗ ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ದೇಶದ ರಾಷ್ಟ್ರಪತಿಯಾಗುವುದು ಸುಲಭದ ಮಾತಲ್ಲ. ಡಾ ಕಲಾಂ ಜೀವನದ ಕಠಿಣ ಹೋರಾಟ ಮತ್ತು ಅವರ ಧನಾತ್ಮಕ ಹೋರಾಟ ಮುಂದುವರಿಸುತ್ತಾ ಅವರು ಒಂದು ದೇಶದ ರಾಷ್ಟ್ರಪತಿ ಆಗುವ ಹಂತವನ್ನು ತಲುಪಿದರು.

''ನಿಮ್ಮನ್ನು ನಂಬಿರಿ ಮತ್ತು ಮುಂದುವರಿಯಿರಿ''

ಡಾ. ಕಲಾಂ ಯಾವಾಗಲೂ ತನ್ನ ಕನಸನ್ನು ನಂಬುವ ಬಗ್ಗೆ ಮಾತನಾಡುತ್ತಿದ್ದರು. ಅವರು ತಮ್ಮ ಕನಸಿನಲ್ಲಿ ನಂಬಿಕೆ ಇಟ್ಟಿದ್ದರು. ಪ್ರಾಯಶಃ ಅದಕ್ಕಾಗಿಯೇ ಜೀವನದಲ್ಲಿ ವಿರುದ್ಧ ಪರಿಸ್ಥಿತಿಗಳ ನಡುವೆಯೂ, ಅವರು ಉತ್ತುಂಗಕ್ಕೇರಿದರು. ವಿಶ್ವದ ಕೆಲವೇ ಜನರು ತಲುಪಲು ಸಾಧ್ಯವಾಗುವ ಹಂತವನ್ನು ತಲುಪಿದರು. ಡಾ. ಕಲಾಂ ಮಾತನಾಡುವ ಪ್ರಮುಖ ವಿಷಯಗಳು ನಮಗೆ ಮುಂದುವರೆಯಲು ಪ್ರೇರೇಪಿಸುವಂತಹವು. 


"ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು."

"ನೀವು ಅಭಿವೃದ್ಧಿ ಬಯಸಿದರೆ, ದೇಶದಲ್ಲಿ ಶಾಂತಿ ಪರಿಸ್ಥಿತಿ ಅವಶ್ಯಕ"

"ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ, ಕೋಟಲೆಗಳ ಭಯವೇಕೆ?"

"ಒಂದು ದೇಶ ಭ್ರಷ್ಟಾಚಾರ ಮುಕ್ತವಾದರೆ ಆ ದೇಶದಲ್ಲಿ ಸುಂದರ ಚಿಂತನೆಗಳನ್ನು ಕಾಣಬಹುದು. ಸಮಾಜವನ್ನು ಮೂವರು ಮಾತ್ರ ನಿರ್ಮಾಣ ಮಾಡಬಲ್ಲರು, ಅವರೆಂದರೆ ತಂದೆ,ತಾಯಿ ಮತ್ತು ಗುರು."

"ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ."

"ಪ್ರತಿಯೊಬ್ಬರೂ ಜೀವನದಲ್ಲಿ ದುಃಖವನ್ನು ಅನುಭವಿಸುತ್ತಾರೆ, ಈ ದುಃಖವು ಎಲ್ಲರಲ್ಲೂ ತಾಳ್ಮೆಯನ್ನು ಪರೀಕ್ಷಿಸುತ್ತದೆ."

"ಜೀವನದಲ್ಲಿ ಕಠಿಣ ಪರಿಶ್ರಮದಿಂದ ಪಡೆದ ಸುಖವು ಸಂತೋಷದ ಅನುಭವವನ್ನು ನೀಡುತ್ತದೆ."

"ದೇಶದಲ್ಲಿನ ಅತ್ಯುತ್ತಮ ಮಿದುಳುಗಳನ್ನು ತರಗತಿ ಕೊಠಡಿಗಳ ಕೊನೆಯ ಬೆಂಚುಗಳಲ್ಲಿ ಕಾಣಬಹುದು".

"ಯಾರೂ ಪರಿಶ್ರಮ ಜೀವಿಯೋ ಆತನಿಗೆ ದೇವರು ಸದಾ ಸಹಾಯ ಮಾಡುತ್ತಾನೆ."

"ನಿಮ್ಮ ಗುರಿಯೆಡೆಗೆ ಸಾಗಬೇಕು ಎಂದಾದರೆ ಒಂದೆ ದೃಷ್ಟಿಯ ಯೋಚನೆ ಧ್ಯೆಯ ಬೆನ್ನ ಹಿಂದೆ ಇರಲಿ"



Monday, 5 October 2020

ಮಹಾಭಾರತದ ಇರಾವಣ

 ಅರ್ಜುನ ಮತ್ತು ನಾಗ ಕನ್ಯೆ ಉಲೂಪಿಯ ಮಗನೇ ಇರಾವಣ್. ಇವನಿಗೆ ಐರಾವಣ, ಅರಾವಣ ಎಂಬ ಹೆಸರುಗಳೂ ಇವೆ. ಇವನು ಅತ್ಯಂತ ಸಮರ್ಥ ವೀರ ಯೋಧ ಹಾಗೂ ಅರ್ಜುನನಂತೆ ಸುಂದರ ಯುವಕನಾಗಿದ್ದ. ತನ್ನ ತಾಯಿಯಾದ ಉಲೂಪಿಯಿಂದ ಸಮರ ಕಲೆಯನ್ನು ಕಲಿತಿದ್ದ. ಪಾಂಡವರ ಹಾಗೂ ಕೌರವರ ನಡುವೆ ಕುರುಕ್ಷೇತ್ರ ಯುದ್ಧ ಪ್ರಾರಂಭವಾದಾಗ ತನ್ನ ತಂದೆಯಾದ ಅರ್ಜುನನಿಗೆ ಸಹಾಯ ಮಾಡಲು ಇರಾವಣ್ ಯುದ್ಧ ಭೂಮಿಗೆ ಹೋಗುತ್ತಾನೆ. ಇರಾವಣ್ ಯುದ್ಧದಲ್ಲಿ ಕೌರವರ ಅಸಂಖ್ಯಾತ ಸೈನಿಕರನ್ನು ಕೊಂದು ಪಾಂಡವರಿಗೆ ಸಹಾಯ ಮಾಡುತ್ತಾನೆ.


 ಒಂಬತ್ತನೇ ಶತಮಾನದಲ್ಲಿ ರಚಿತವಾದ ತಮಿಳು ಭಾಷೆಯ ಮಹಾಭಾರತದಲ್ಲಿ ಇರಾವಣ್ ಬಗ್ಗೆ ಉಲ್ಲೇಖವಿದೆ. ಅದರ ಪ್ರಕಾರ ಯುದ್ಧದ ಸಮಯದಲ್ಲಿ ಪಾಂಡವರಿಗೆ ಯುದ್ಧ ಗೆಲ್ಲ ಬೇಕಾದಲ್ಲಿ ಮಹಾಕಾಳಿಯನ್ನು ಪ್ರಸನ್ನ ಪಡಿಸುವ ‘ಕಲಾಪಲ್ಲಿ' ಎಂಬ ಯಾಗ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಯಿತು. ಈ ಯಾಗದ ಪೂರ್ಣಾಹುತಿಯ ಸಮಯ ಮಾನವ ಬಲಿಯನ್ನು ಕಾಳಿಮಾತೆಗೆ ಕೊಡಬೇಕಾಗಿತ್ತು. ಅದಕ್ಕೆ ರಾಜ ಕುಟುಂಬದ, ಸಕಲ ಕಲಾ ಪರಿಣಿತ ಯುವಕರೇ ಆಗಬೇಕಿತ್ತು. ಈ ಯಾಗ ಪೂರ್ಣವಾದಲ್ಲಿ ಪಾಂಡವರ ಗೆಲುವು ನಿಶ್ಚಯವಾಗುತ್ತಿತ್ತು. ಆದರೆ ಬಲಿಯಾಗಲು ರಾಜಕುಮಾರರು ಯಾರೂ ಮುಂದೆ ಬರುವುದಿಲ್ಲ. ಆಗ ಇರಾವಣ್ ಮುಂದೆ ಬಂದು ಮಹಾಕಾಳಿಗೆ ಬಲಿಯಾಗಲು ಒಪ್ಪುತ್ತಾನೆ. ಆದರೆ ಅವನು ಬಲಿ ಕೊಡುವ ಮೊದಲು ತನ್ನ ವಿವಾಹ ಆಗಬೇಕು ಎಂಬ ಶರತ್ತು ವಿಧಿಸುತ್ತಾನೆ. 


ಪಾಂಡವರು ಅಲ್ಲಿದ್ದ ರಾಜ ಕುಟುಂಬದವರಲ್ಲಿ ವಿಚಾರಿಸಿದಾಗ ಯಾರೂ ತಮ್ಮ ಹುಡುಗಿಯನ್ನು ಇರಾವಣ್ ಗೆ ಮದುವೆ ಮಾಡಿಕೊಡಲು ಒಪ್ಪುವುದಿಲ್ಲ. ಮದುವೆಯ ಒಂದೇ ದಿನಕ್ಕೆ ವಿಧವೆಯಾಗಲು ಯಾರು ಮುಂದೆ ಬರುತ್ತಾರೆ ಹೇಳಿ? ಆಗ ಶ್ರೀಕೃಷ್ಣನು ತಾನೇ ಮೋಹಿನಿ (ಸ್ತ್ರೀ) ರೂಪ ಧರಿಸಿ ಇರಾವಣ್ ಜೊತೆ ವಿವಾಹವಾಗುತ್ತಾನೆ. ವಿವಾಹದ ರಾತ್ರಿ ಇರಾವಣ್ ಹಾಗೂ ಸ್ತ್ರೀ ವೇಷಧಾರಿ ಕೃಷ್ಣ ಜೊತೆಯಾಗಿಯೇ ಕಳೆಯುತ್ತಾರೆ. ಮರುದಿನ ಮಹಾಕಾಳಿಗೆ ಇರಾವಣ್ ನನ್ನು ಬಲಿಯಾಗಿ ಅರ್ಪಿಸಲಾಗುತ್ತೆ. ಇರಾವಣ್ ನಿಧನದ ನಂತರ ಕೃಷ್ಣ ಸ್ತ್ರೀ ರೂಪದಲ್ಲೇ ಸ್ವಲ್ಪ ಸಮಯ ವಿಧವೆಯಂತೆ ರೋಧಿಸುತ್ತಾನೆ. 


ಪುರುಷನಾಗಿದ್ದೂ ಲೋಕ ಕಲ್ಯಾಣಕ್ಕೆ ಶ್ರೀಕೃಷ್ಣನು ಸ್ತ್ರೀ ವೇಷ ಧರಿಸಿದ ವಿಧಿಯನ್ನು ಈಗಲೂ ತಮಿಳುನಾಡಿನ ವೆಲ್ಲುಪುರಂನಲ್ಲಿರುವ ದೇವಸ್ಥಾನವೊಂದರಲ್ಲಿ ಆಚರಿಸುತ್ತಾರೆ. ಈ ದೇವಸ್ಥಾನದಲ್ಲಿ ಇರಾವಣ್ ಅನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ವರ್ಷದಲ್ಲಿ ಒಂದು ದಿನ ಎಲ್ಲಾ ಕಿನ್ನರರು ಅಥವಾ ಮಂಗಳಮುಖಿಯರು ಬಣ್ಣ ಬಣ್ಣದ ಸೀರೆಯನ್ನು ತೊಟ್ಟು ಸ್ತ್ರೀವೇಷದಲ್ಲಿ ಇರಾವಣ್ ದೇವರನ್ನು ಒಂದು ದಿನದ ಪತಿಯ ರೂಪದಲ್ಲಿ ಪೂಜಿಸುತ್ತಾರೆ. ಅವರಿಗೆ ಪತ್ನಿಯಂತೆ ಸೇವೆ ಮಾಡುತ್ತಾರೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾದ ವಿಧಿ ವಿಧಾನವಾಗಿರುತ್ತದೆ. ಮರುದಿನ ಅವರೆಲ್ಲಾ ವಿಧವೆಯರಂತೆ ಗೋಳಾಡುತ್ತಾ, ತಮ್ಮ ಪತಿಯ ಮರಣಕ್ಕೆ ದುಃಖ ಪಡುತ್ತಾರೆ. 


ಕೆಲವು ಮಹಾಭಾರತದ ಕತೆಗಳಲ್ಲಿ ಇರಾವಣ್ ನನ್ನು ಕಾಳಿದೇವಿಗೆ ಬಲಿ ನೀಡಿದ ಬಳಿಕ, ದೇವಿ ಈ ಬಲಿಯಿಂದ ಪ್ರಸನ್ನಳಾಗಿ ಅವನನ್ನು ಮತ್ತೆ ಜೀವಿತನನ್ನಾಗಿ ಮಾಡುತ್ತಾಳೆ. ನಂತರ ಮಹಾಭಾರತ ಯುದ್ಧದ ಏಳನೇ ದಿನ ಇರಾವಣ್ ಕೌರವರ ಸೈನ್ಯದ ಮೇಲೆ ಆಕ್ರಮಣ ಮಾಡಿ ಅವರಿಗೆ ತುಂಬಾ ನಷ್ಟವನ್ನು ಉಂಟು ಮಾಡುತ್ತಾನೆ. ಇದನ್ನು ಗಮನಿಸಿದ ದುರ್ಯೋಧನ ಇರಾವಣ್ ಹೀಗೆಯೇ ಯುದ್ಧ ಮಾಡಿದರೆ ನಮ್ಮ ಸೇನೆ ಸಂಪೂರ್ಣ ನಾಶವಾಗುತ್ತದೆ ಎಂದು ಭಯ ಪಡುತ್ತಾನೆ. ಅವನು ರಾಕ್ಷಸನಾದ ಅಲಂಭಷ್ ಅನ್ನು ಯುದ್ಧದಲ್ಲಿ ಸಹಾಯ ಮಾಡಲು ಕರೆಯುತ್ತಾನೆ. ಅಲಂಭಷ್ ಮತ್ತು ಇರಾವಣ್ ನಡುವೆ ಭೀಕರ ಯುದ್ಧವಾಗುತ್ತದೆ. ಇರಾವಣ್ ಬೆಂಬಲಕ್ಕೆ ನಾಗಲೋಕದ ನಾಗ ಸ್ವರೂಪಿ ಸೈನಿಕರು ಬರುತ್ತಾರೆ. ಇದನ್ನು ಗಮನಿಸಿದ ಅಲಂಭಷ್ ಗರುಡ ರೂಪ ತಾಳುತ್ತಾನೆ. ಎಲ್ಲಾ ನಾಗಗಳನ್ನು ತಿನ್ನುತ್ತಾ ಸಂಹಾರ ಮಾಡುತ್ತಾನೆ. ತನ್ನ ಸಹಾಯಕ್ಕೆ ಬಂದ ನಾಗ ಸೈನಿಕರೆಲ್ಲರೂ ಅಲಂಭಷ್ ಕೈಯಲ್ಲಿ ಹತರಾದದನ್ನು ಕಂಡ ಇರಾವಣ್ ಅಧೀರನಾಗುತ್ತಾನೆ. ಈ ಸಂದರ್ಭವನ್ನು ನೋಡಿ ಅಲಂಭಷ್ ಇರಾವಣ್ ನನ್ನು ಹತ್ಯೆ ಮಾಡುತ್ತಾನೆ. ಹೀಗೆ ಅರ್ಜುನ-ಉಲೂಪಿಯವರ ಧೀರ ಪುತ್ರ ಇರಾವಣ್ ಮರಣ ಹೊಂದುತ್ತಾನೆ.


ದಕ್ಷಿಣ ಭಾರತದ ಕೆಲವೆಡೆ ಇರಾವಣ್ ಮೂರ್ತಿಯನ್ನು ಮಾಡಿ ಪೂಜಿಸುತ್ತಾರೆ. ವರ್ಷದಲ್ಲಿ ಒಮ್ಮೆ ಜಾತ್ರೆ ಮಹೋತ್ಸವವೂ ನಡೆಯುತ್ತದೆ. ಸಿಂಗಾಪುರದಲ್ಲಿರುವ ಮರಿಯಮ್ಮನ ದೇವಸ್ಥಾನದಲ್ಲೂ ಇರಾವಣ್ ಮೂರ್ತಿ ಇದೆ.



Saturday, 3 October 2020

ದೇಶ ಸುತ್ತಿ ನೋಡು ಕೋಶ ಓದಿ ನೋಡು

ಮನುಷ್ಯ ತನ್ನ ಅನುಭವಗಳನ್ನು ಹೆಚ್ಚಿಸಿಕೊಳ್ಳ ಬೇಕಾದರೆ ಬೇರೆ ಬೇರೆ ಊರುಗಳಿಗೆ ಹೋಗಿ, ಅಲ್ಲಿನ ಜೀವನ ಶೈಲಿ, ಅವರ ಆಚಾರ ವಿಚಾರಗಳನ್ನು ತಿಳಿದುಕೊಳ್ಳ ಬೇಕು. ಒಂದೇ ಊರಲ್ಲಿ ಕಾಲಕಳೆದರೆ  ನಮಗೆ ಯಾವುದೇ ಜೀವಾನುಭವ ಆಗುದಿಲ್ಲ. ನಮಗೆ ಒಳ್ಳೆಯ ನಿರ್ಧಾರಗಳನ್ನು ಮಾಡಿ, ಜೀವನದಲ್ಲಿ ಒಳ್ಳೆಯ ಸ್ವಭಾವವನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.

ಪುಸ್ತಕ (ಕೋಶ) ಗಳನ್ನು ಓದಿದಷ್ಟು ನಮಗೆ ಲೋಕ ಜ್ಞಾನ ಬೆಳೆಯುತ್ತದೆ. ಒಂದು ವಿಷದ ಬಗ್ಗೆ ಗಾಹನವಾಗಿ ತಿಳಿದುಕೊಳ್ಳ ಬೇಕಾದರೆ, ಅದರ ಬಗ್ಗೆ ತುಂಬ ಓದಬೇಕು. ಅದೇ ಬೇರೆ ಬೇರೆ ವಿಷಯ ತಿಳಿದುಕೊಳ್ಳ ಬೇಕಾದರೆ, ಬೇರೆ ಬೇರೆ ವಿಷಯಗಳ ಬಗ್ಗೆ ಓದಬೇಕು.  ನಾವು ಎಷ್ಟು ಓದುತ್ತೇವೋ ಅಷ್ಟೇ ಜಾಣರಾಗುತ್ತೇವೆ. ಆದರಿಂದಲೇ ನಮ್ಮ ಶಾಲೆಯಲ್ಲಿ ಶಿಕ್ಷಕರು ನಮಗೆ ಬೇರೆ ಬೇರೆ ವಿಷಯಗಳ ಬಗ್ಗೆ ಓದಬೇಕು ಎಂದು ಸಲಹೆನೀಡುತ್ತಾರೆ.ನಮಗೆ ಊರುಗಳನ್ನು ಭೇಟಿ ಮಾಡುವ ಅವಕಾಶವಿಲ್ಲದಿದ್ದರೆ, ಆ ಊರಿನ ಬಗೆಗಿನ ಕೋಶವನ್ನಾದರೂ ಓದಬೇಕು.

ನಾವು ಈ ಎರಡು ಸಲಹೆಗಳನ್ನು ಕಾರ್ಯಗತಗೊಳಿಸಿದರೆ ನಾವು ಜಾಣರಾಗುವುದರಲ್ಲಿ ಸಂದೇಹವೇ ಇಲ್ಲ.


                                         ಯಲ್ಲಪ್ಪ ನಂದಿ





ಐರಾವಣ

ಐರಾವಣ

ಐರಾವಣ ಹಾಗೂ ಐರಾವತ  ಮತ್ತು ಐರಾವಂತ ಎಂದೂ ಹೆಸರಾಗಿರುವುದು, ಹಿಂದೂ ಮಹಾಕಾವ್ಯವಾದ ಮಹಾಭಾರತದ ಕಿರು ಪಾತ್ರವಾಗಿದೆ. ಪಾಂಡವ ರಾಜ ಅರ್ಜುನನ (ಮಹಾಭಾರತದ ಒರ್ವ ಮುಖ್ಯ ನಾಯಕ) ಮತ್ತು ನಾಗ ರಾಣಿ ಉಲುಪಿಯ ಪುತ್ರನಾದ, ಐರಾವಣನು ಕುತ್ತಂತವರ್ ಭಕ್ತ ವೃಂದರ ಮುಖ್ಯ ದೇವನಾಗಿದ್ದನು, ಇದು ಆ ಭಕ್ತ ವೃಂದದಲ್ಲಿ ನೀಡುವ ಸಾಮಾನ್ಯ ಹೆಸರೂ ಸಹ ಆಗಿದೆ, ಮತ್ತು ದ್ರೌಪದಿಯ ಉಪಾಸನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಈ ಎರಡೂ ಭಕ್ತ ಗಣದವರು ದಕ್ಷಿಣ ಭಾರತ ಮೂಲದವರಾಗಿದ್ದು, ರಾಷ್ಟ್ರದ ಈ ಪ್ರದೇಶದಲ್ಲಿ ಅವನನ್ನು ಗ್ರಾಮ ದೇವರೆಂದು ಪೂಜಿಸಲಾಗುತ್ತದೆ ಮತ್ತು ಅರಾವಣ (ತಮಿಳು) ಎಂದು ಹೆಸರಾಗಿದ್ದಾನೆ. ಅವನು ಅಲಿ ಎಂದು ಕರೆಯಲಾಗುವ (ಹಾಗೆಯೇ ದಕ್ಷಿಣ ಭಾರತದಲ್ಲಿ ಅರಾವಣಿ ಮತ್ತು ದಕ್ಷಿಣ ಏಷ್ಯಾದಾದ್ಯಂತ ಹಿಜ್ರಾ ) ಹೆಸರಾಂತ ಲಿಂಗಪರಿವರ್ತಕರ ಪೋಷಕ ದೇವನಾಗಿದ್ದಾನೆ.

ಮಹಾಭಾರತವು ಐರಾವಣನನ್ನು 18 ನೇ ದಿನದ ಕುರುಕ್ಷೇತ್ರ ಯುದ್ಧ (ಮಹಾಭಾರತ ಯುದ್ಧ) ದಲ್ಲಿ ಸಾಯುವ ಮಹಾಪುರುಷನಾಗಿ ನಿರೂಪಿಸಿದ್ದು, ಇದು ಮಹಾಕಾವ್ಯದ ಮುಖ್ಯ ವಿಷಯವಾಗಿದೆ. ಆದರೆ, ದೇವಿ ಕಾಳಿಯ ಕೃಪಾಕಟಾಕ್ಷವನ್ನು ಮತ್ತು ಯುದ್ಧದಲ್ಲಿ ಪಾಂಡವರ ಜಯವನ್ನು ಖಚಿತಪಡಿಸಿಕೊಳ್ಳಲು ಸ್ವಯಂ-ತ್ಯಾಗ ಮಾಡಿದವನಾಗಿ ಅರಾವಣನನ್ನು ಗೌರವಿಸುವ ಪೂರಕವಾದ ಸಂಪ್ರದಾಯವನ್ನು ದಕ್ಷಿಣ ಭಾರತೀಯ ಭಕ್ತ ವೃಂದದವರು ಹೊಂದಿದ್ದಾರೆ. ಈ ಸ್ವಯಂ-ತ್ಯಾಗಕ್ಕೆ ಪ್ರತಿಯಾಗಿ ಕೃಷ್ಣನು ಅರಾವತನಿಗೆ ಅನುಗ್ರಹಿಸಿದ ಮೂರು ವರಗಳಲ್ಲಿ ಒಂದರ ಬಗ್ಗೆ ಕುಟ್ಟಾಂತವರ್ ಭಕ್ತ ವೃಂದದವರು ಒತ್ತು ನೀಡುತ್ತಾರೆ. ತಾನು ಸಾಯುವುದಕ್ಕೆ ಮೊದಲು ಮದುವೆಯಾಗಬೇಕೆಂದು ಅರಾವಣನು ಕೋರಿಕೆ ಸಲ್ಲಿಸುತ್ತಾನೆ. ಕೃಷ್ಣನು ಮೋಹಿನಿಯಾಗಿ ತನ್ನ ಮಹಿಳೆಯ ರೂಪದಲ್ಲಿ ಈ ವರವನ್ನು ಪೂರೈಸುತ್ತಾನೆ. ತಮಿಳುನಾಡಿನ ಕೂವಾಗಮ್ನಲ್ಲಿ ಈ ಘಟನೆಯನ್ನು ಮೊದಲು ಅರಾವಣ ಮತ್ತು ಪುರುಷ ಗ್ರಾಮಸ್ಥರೊಂದಿಗೆ (ಅರಾವಣನಿಗೆ ಹರಕೆ ಹೊತ್ತವರು) ಅಲಿ ಯೊಂದಿಗೆ ವಿಧ್ಯುಕ್ತ ಮದುವೆ, ತದನಂತರ ರಾವಣನ ತ್ಯಾಗದ ಮರು-ಪಾತ್ರವಹಿಸುವಿಕೆಯೊಂದಿಗೆ ಅವರ ವೈಧವ್ಯ ಹೀಗೆ 18 ದಿನದ ಉತ್ಸವದ ರೂಪದಲ್ಲಿ ಮರು-ಪಾತ್ರವಹಿಸುತ್ತಾರೆ.

ದ್ರೌಪದಿ ಭಕ್ತ ವೃಂದದವರು ಇನ್ನೊಂದು ವರದ ಬಗ್ಗೆ ಒತ್ತು ನೀಡುತ್ತಾರೆ: ತನ್ನ ಬೇರ್ಪಟ್ಟ ತಲೆಯ ಕಣ್ಣಿನ ಮೂಲಕ ಮಹಾಭಾರತ ಯುದ್ಧದ ಸಂಪೂರ್ಣ ಕಾಲಾವಧಿಯನ್ನು ವೀಕ್ಷಿಸಲು ಅರಾವಣನಿಗೆ ಕೃಷ್ಣನು ಅನುಮತಿ ನೀಡುತ್ತಾನೆ. ಮತ್ತೊಂದು 18 ದಿನದ ಉತ್ಸವದಲ್ಲಿ, ಮಹಾಭಾರತದ ಯುದ್ಧದ ಸಾಂಪ್ರದಾಯಿಕ ಮರು-ಪಾತ್ರವಹಿಸುವಿಕೆಯನ್ನು ವೀಕ್ಷಿಸಲು ಅರಾವಣನ ಔಪಚಾರಿಕ ತಲೆಯನ್ನು ಇರಿಸಲಾಗುತ್ತದೆ. ಅರಾವಣನ ತಲೆಯು ದ್ರೌಪದಿ ದೇವಾಲಯಗಳಲ್ಲಿ ಸಾಮಾನ್ಯವಾದ ಅಲಂಕಾರ ಸಂಕೇತವಾಗಿದೆ. ಸಾಮಾನ್ಯವಾಗಿ ಅದು ಸಾಗಿಸಬಹುದಾದ ಮರದ ತಲೆಯಾಗಿರುತ್ತದೆ, ಕೆಲವೊಮ್ಮೆ ದೇವಾಲಯದ ಪ್ರಾಂಗಣದಲ್ಲಿ ಅದರದ್ದೇ ಆದ ದೇಗುಲವಿರುತ್ತದೆ ಅಥವಾ ದೇವಾಲಯದ ಮೇಲ್ಭಾವಣಿಯ ತುದಿಗಳಲ್ಲಿ ದುಷ್ಟಶಕ್ತಿಗಳ ವಿರುದ್ಧ ರಕ್ಷಕನಾಗಿ ಇರಿಸಲಾಗುತ್ತದೆ. ಅರಾವಣನನ್ನು ಅವನ ಬೇರ್ಪಟ್ಟ ತಲೆಯ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ಅದು ರೋಗಗಳನ್ನು ವಾಸಿಮಾಡುತ್ತದೆ ಮತ್ತು ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳನ್ನು ಕರುಣಿಸುತ್ತಾನೆ ಎಂದು ನಂಬಲಾಗಿದೆ.


ಇತರ ಹೆಸರುಗಳು

ಕುಟ್ಟಕುರನ್ ರಾಕ್ಷಸನನ್ನು ಕೊಂದ ಧೀರ ಕುಟ್ಟಂತವರ್‌ ಮೂಲದಿಂದ ಬಂದಿದೆ. ಈ ಹೆಸರನ್ನು ಕೆಲವೊಮ್ಮೆ ಕುಟ್ಟಂದರ್ , ಖೂತಾಂಡವರ್ ಅಥವಾ ಕೂತಾಂಡವರ್ ಎಂದು ಹೇಳಲಾಗುತ್ತದೆ.

ದಕ್ಷಿಣ ಭಾರತದ ತಮಿಳು ಹೆಸರಾದ ಅರಾವಣ ಎಂಬ ಹೆಸರು ಅರಾವು (ಹಾವು) ಪದದಿಂದ ವ್ಯುತ್ಪತ್ತಿಯಾಗಿದೆ ಎಂದು ಜನಪ್ರಿಯವಾಗಿ ನಂಬಲಾಗಿದೆ. ಹಾವುಗಳೊಂದಿಗೆ ಅರಾವಣನ ಸಂಬಂಧವು ಅವನ ಮೂರ್ತಿಚಿತ್ರಣದಲ್ಲೂ ಸ್ಪಷ್ಟವಾಗುತ್ತದೆ.


ಮೂರ್ತಿಚಿತ್ರಣ

ಅರಾವಣನ ಬೇರ್ಪಟ್ಟ ತಲೆಯ ರೂಪದಲ್ಲಿ ಅವನನ್ನು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ. ಅವನನ್ನು ಸಾಮಾನ್ಯವಾಗಿ ಮೀಸೆ, ಎದ್ದುಕಾಣುವ ಕಣ್ಣುಗಳು ಮತ್ತು ದೊಡ್ಡ ಕಿವಿಗಳೊಂದಿಗೆ ಚಿತ್ರಿಸಲಾಗುತ್ತದೆ. ಪ್ರಾಸಂಗಿಕವಾಗಿ, ಅವನು ಶಂಕುವಿನಾಕೃತಿಯ ಕಿರೀಟವನ್ನು, ತನ್ನ ಹಣೆಯಲ್ಲಿ ವೈಷ್ಣವ ತಿಲಕ ವನ್ನು ಸಾಮಾನ್ಯವಾಗಿ ಧರಿಸುತ್ತಾನೆ. ಅರಾವಣನನ್ನು ಆಗಾಗ್ಗೆ ಕಿರೀಟದ ಮೇಲ್ಭಾಗದಲ್ಲಿ ನಾಗರಹಾವಿನ ಹೆಡೆಯೊಂದಿಗೆ ಕಿರೀಟದ ಮೂಲಕ ಅದು ಹೊರ ಮೂಡಿರುವಂತೆ ಅಥವಾ ಕಿರೀಟದ ಹಿಂಭಾಗದಿಂದ ಹಾವು ಹೊರ ಸೂಸಿರುವಂತೆ ಚಿತ್ರಿಸಲಾಗುತ್ತದೆ. ಮುಖ್ಯ ಕೂವಾಗಮ್ ಪ್ರತಿಮೆಯೂ ಸಹ ಅರಾವಣನ ಕಿರೀಟದ ಮೇಲೆ ಸರ್ಪವನ್ನು ಒಳಗೊಂಡಿರುತ್ತದೆ.

ಅರಾವಣನ ಮೂರ್ತಿಶಿಲ್ಪದ ಮತ್ತೊಂದು ಪ್ರಮುಖವಾದ ವೈಶಿಷ್ಟ್ಯವು ಅತಿಮಾನುಷ ಶಕ್ತಿಯುಳ್ಳ ಕೋರೆಹಲ್ಲಿನ ಉಪಸ್ಥಿತಿಯಾಗಿದೆ. ಅಂತಹ ಅತಿಮಾನುಷ ಶಕ್ತಿಯ ಹಲ್ಲನ್ನು ಮಧ್ಯ ಕೂವಗಮ್ ಪ್ರತಿಮೆಯು ಹೊಂದಿಲ್ಲದಿದ್ದರೂ, ಅವುಗಳು ಹೆಚ್ಚಿನ ದ್ರೌಪದಿ ಆರಾಧನಾ ಪದ್ಧತಿ ಚಿತ್ರಗಳ ಸಾಮಾನ್ಯ ವೈಶಿಷ್ಟ್ಯವಾಗಿದೆ.

ಅರಾವಣ-ತಲೆಯ ಪ್ರತಿಮೆಗಳು ಒಂದೋ ಬಣ್ಣದಲ್ಲಿ ಚಿತ್ರಿಸಲಾಗಿರುತ್ತದೆ ಅಥವಾ ಉತ್ಸವಗಳಿಗೆ ಬಣ್ಣ ರಹಿತವಾದ ಚಲಿಸಲಾಗುವಂತಹವುಗಳಾಗಿರುತ್ತದೆ, ಅವುಗಳನ್ನು ಒಟ್ಟಿಗೆ ಅರಾವಣನ ದೇವಾಲಯಗಳಲ್ಲಿ ಇರಿಸಲಾಗಿರುತ್ತದೆ. ಕೂವಗಮ್, ಕೋಥಡೈ, ಕೋಥಟ್ಟೈ ಮತ್ತು ಪಿಲ್ಲೈಯಾರ್ಕುಪ್ಪಮ್‌ಗಳು ಕೆಂಪು ಮುಖವಾಗಿ ಬಣ್ಣಬಳಿದ ಮತ್ತು ಬಹು-ವರ್ಣದ ಅಲಂಕರಣದ ಪ್ರತಿಮೆಗಳನ್ನು ಹೊಂದಿರುತ್ತದೆ. ಬಣ್ಣ ರಹಿತವಾದ ಕಪ್ಪು ಕಲ್ಲಿನ ಅರಾವಣ-ತಲೆಯ ಚಿತ್ರಗಳನ್ನು ಕೋಥಟ್ಟೈ, ಮಧುಕರೈ ಮತ್ತು ಪಿಲ್ಲೈಯಾರ್ಕುಪ್ಪಮ್‌ಗಳಲ್ಲಿ ನೋಡಬಹುದು.

ಕೆಲವು ಚಿತ್ರಕಲೆಗಳು ಅರಾವಣನ ತ್ಯಾಗವನ್ನು ಸಹ ರೂಪಿಸುತ್ತವೆ. ಈ ದೃಶ್ಯಗಳಲ್ಲಿ, ಅವನ ತಲೆಯನ್ನು ಇನ್ನೇನು ಛೇದನ ಮಾಡುವಾಗ ಅವನು ಆಗಾಗ್ಗೆ ಕಾಳಿಗೆ ತಲೆಬಾಗುವ ಅಥವಾ ಸೌಕಾರ್‌ಪೇಟ್ ಚಿತ್ರಕಲೆಯಲ್ಲಿ ತೋರುವಂತೆ, ಸ್ವಯಂ-ಶಿರಚ್ಛೇದನ ಮಾಡಿಕೊಂಡಿರುವ ಅರಾವಣನು ಖಡ್ಗ ಮತ್ತು ತನ್ನ ಬೇರ್ಪಡಿತ ತಲೆಯನ್ನು ದೇವಿಗೆ ಅರ್ಪಿಸುತ್ತಿರುವಂತೆ ಚಿತ್ರಿಸಲಾಗಿದೆ.


ಮಹಾಭಾರತ 

ಮಹಾಭಾರತದ ಪ್ರಥಮ ಪುಸ್ತಕವಾದ ಆದಿ ಪರ್ವ (ಪ್ರಾರಂಭಗಳ ಪುಸ್ತಕ) ದಲ್ಲಿ ಐರಾವಣನ ಪೋಷಕರ ಮದುವೆಯನ್ನು ನಮೂದಿಸಲಾಗಿದ್ದರೂ, ಐರಾವಣನ ಜನ್ಮ ಮತ್ತು ಸಾವುಗಳೆರಡನ್ನೂ ನಂತರದ ಆರನೇ ಪುಸ್ತಕವಾದ ಭೀಷ್ಮ ಪರ್ವ (ಭೀಷ್ಮನ ಪುಸ್ತಕ)ದಲ್ಲಿ ನಮೂದಿಸಲಾಗಿದೆ. ಈ ಮಹಾಕಾವ್ಯದ ಆರನೇ ಪುಸ್ತಕದಲ್ಲಿ, ಪಾಂಡವರ ಮೂರನೇ ಸಹೋದರನಾದ ಅರ್ಜುನನನ್ನು ಇಂದ್ರಪ್ರಸ್ಥ (ಪಾಂಡವ ರಾಜ್ಯದ ರಾಜಧಾನಿ)ಯಿಂದ ಪಾಂಡವ ಸಹೋದರರ ಸರ್ವಸಮಾನ ಪತ್ನಿಯಾದ ದ್ರೌಪದಿಯೊಂದಿಗಿನ ಮದುವೆಯ ನಿಯಮಗಳನ್ನು ಮೀರಿದ್ದಕ್ಕಾಗಿ ಒಂದು ವರ್ಷದ ಪ್ರಾಯಶ್ಚಿತ್ತದ ತೀರ್ಥಯಾತ್ರೆಗೆ ಹೋಗಲು ಗಡೀಪಾರು ಮಾಡಲಾಗುತ್ತದೆ. ಅರ್ಜುನನು ಪ್ರಸ್ತುತ ಭಾರತದ ಉತ್ತರ-ಪೂರ್ವ ಪ್ರಾಂತ್ಯಕ್ಕೆ ತಲುಪುತ್ತಾನೆ ಮತ್ತು ನಾಗ (ಸರ್ಪ) ರಾಣಿಯ ವಿಧವಾ ಪತ್ನಿಯಾದ ಉಲುಪಿಯೊಂದಿಗೆ ಪ್ರೇಮಪಾಶದಲ್ಲಿ ಸಿಲುಕುತ್ತಾನೆ. ಇಬ್ಬರೂ ಮದುವೆಯಾಗುತ್ತಾರೆ ಮತ್ತು ಐರಾವಣ ಎಂಬ ಹೆಸರಿನ ಮಗನನ್ನು ಹೊಂದುತ್ತಾರೆ, ನಂತರ, ಅರ್ಜುನನು ಐರಾವಣ ಮತ್ತು ಉಲುಪಿಯನ್ನು ನಾಗಗಳ ನಿವಾಸಸ್ಥಾನವಾದ ನಾಗಲೋಕದಲ್ಲಿ ಬಿಟ್ಟು ತೀರ್ಥಯಾತ್ರೆಯನ್ನು ಮುಂದುವರೆಸುತ್ತಾನೆ. ಐರಾವಣನನ್ನು ಪರಕ್ಷೇತ್ರೆ ಯಲ್ಲಿ ಜನಸಿದವನೆಂದು ವಿವರಿಸಲಾಗುತ್ತದೆ, ಪ್ರಾಸಂಗಿಕವಾಗಿ "ಮತ್ತೋರ್ವ ವ್ಯಕ್ತಿಗೆ ಸೇರಿದ ಪ್ರಾಂತ್ಯ", ಹಿಲ್ಟೆಬೀಟೆಲ್ ವ್ಯಾಖ್ಯಾನಿಸುವಂತೆ "ಮತ್ತೊಬ್ಬ ಪತ್ನಿಯೊಂದಿಗೆ". ಐರಾವಣನು ನಾಗಲೋಕದಲ್ಲಿ ತಾಯಿಯ ರಕ್ಷಣೆಯಲ್ಲಿ ಬೆಳೆಯುತ್ತಾನೆ, ಆದರೆ ಅರ್ಜುನನೊಂದಿಗಿನ ದ್ವೇಷದಿಂದಾಗಿ ಅವನ ತಾಯಿಯ ಚಿಕ್ಕಪ್ಪನು ಇವನನ್ನು ತಿರಸ್ಕರಿಸುತ್ತಾನೆ. ಪ್ರಬುದ್ಧಾವಸ್ಥೆಯನ್ನು ತಲುಪಿದ ಬಳಿಕೆ, ಐರಾವಣನು ತನ್ನ ತಂದೆಯೊಂದಿಗೆ ಒಗ್ಗೂಡುವ ಆಕಾಕ್ಷೆಯೊಂದಿಗೆ, ಅರ್ಜುನನ ತಂದೆಯಾದ ದೇವ ಇಂದ್ರನ ವಾಸಸ್ಥಾನವಾದ ಇಂದ್ರಲೋಕಕ್ಕೆ ತೆರಳುತ್ತಾನೆ. ತನ್ನ ಪ್ರೌಢ ಪುತ್ರನನ್ನ ನೋಡಿದ ಅರ್ಜುನನು ಕುರುಕ್ಷೇತ್ರ ಯುದ್ಧದಲ್ಲಿ ಅವನ ಸಹಾಯವನ್ನು ಕೋರುತ್ತಾನೆ.

ಈ ಮೂಲಕ ಐರಾವಣನು ಅಂತಿಮವಾಗಿ ತನ್ನ ಸೋದರ ಸಂಬಂಧಿಗಳು ಮತ್ತು ವಿರೋಧಿಗಳಾದ ಕೌರವರ ವಿರುದ್ಧ ತನ್ನ ತಂದೆ ಮತ್ತು ಪಾಂಡವರಿಗೆ ಸಹಾಯ ಮಾಡಲು ಯುದ್ಧ ಭೂಮಿಯಾದ ಕುರುಕ್ಷೇತ್ರವನ್ನು ತಲುಪುತ್ತಾನೆ. ಯುದ್ಧದ ಮೊದಲನೇ ದಿನದಂದು, ಹಿಂದಿನ ಅವತಾರದಲ್ಲಿ ಕ್ರೋಧಾವಸನೆಂಬ ದೈತ್ಯ (ರಾಕ್ಷಸ)ನಾಗಿದ್ದ ಕ್ಷತ್ರಿಯರಾಜನಾದ ಶ್ರುತಾಯುಷನೊಂದಿಗೆ ಸೆಣಸುತ್ತಾನೆ. ಅರ್ಜುನನನು ನಂತರ ಶ್ರುತಾಯುಷನನ್ನು ಕೊಲ್ಲುತ್ತಾನೆ. ಯುದ್ಧದ ಏಳನೇ ದಿನದಂದು, ಐರಾವಣನು ಅವಂತಿಯ ರಾಜರಾದ ವಿಂಧ ಮತ್ತು ಅನುವಿಂಧರನ್ನು ಪರಾಭವಗೊಳಿಸುತ್ತಾನೆ, ಅವರನ್ನು ನಂತರ ಅರ್ಜುನನು ಕೊಲ್ಲುತ್ತಾನೆ.

ಯುದ್ಧದ ಎಂಟನೇ ದಿನದಂದು, ಗಾಂಧಾರ ರಾಜಕುಮಾರ, ರಾಜ ಸುವಲನ ಪುತ್ರರು ಮತ್ತು ಕೌರವರ ವಿಶ್ವಾಸಘಾತುಕ ಸೋದರಮಾಮನಾದ ಶಕುನಿಯ ಕಿರಿಯ ಪುತ್ರರೊಂದಿಗೆ ಐರಾವಣನು ಸೆಣಸಾಡುತ್ತಾನೆ. ಸಹೋದರರಾದ ಗಯಾ, ಗವಾಕ್ಷ, ವೃಶ್ವ, ಚರ್ಮಾವತ, ಆರ್ಜವ ಮತ್ತು ಸುಕರು ಐರಾವಣನ ಮೇಲೆ ಸಂಪೂರ್ಣ ಕೌರವ ಸೈನ್ಯದ ನೆರವಿನಿಂದ ಆಕ್ರಮಣ ಮಾಡುತ್ತಾರೆ, ಆದರೆ ಐರಾವಣನ ನಾಗಾ ಸೈನ್ಯವು ಎಲ್ಲ ವಿರೋಧಿಗಳನ್ನು ಸಂಹಾರ ಮಾಡುತ್ತದೆ. "ಶತ್ರುಗಳ ಶಿಕ್ಷಕ"ನಾದ ಐರಾವಣನು ಮಾಯಾ (ಮಾಯೆ)ಯಲ್ಲಿ ಪರಿಣಿತನಾಗಿದ್ದು, ಖಡ್ಗದ ಯುದ್ಧದಲ್ಲಿ ಕೌರವ ಸಹೋದರರಲ್ಲಿ ಐವರನ್ನು ಸಂಹಾರ ಮಾಡುತ್ತಾನೆ; ವೃಷವ ಮಾತ್ರ ಸಾವಿನಿಂದ ಪಾರಾಗುತ್ತಾನೆ.

ಇದರಿಂದ ಕಂಗೆಟ್ಟ ಹಿರಿಯ ಕೌರವನಾದ ದುರ್ಯೋಧನನು ಐರಾವಣನನ್ನು ಕೊಲ್ಲಲು ಋಷ್ಯಶೃಂಗನ ಮಗನಾದ ರಾಕ್ಷಸ (ದೈತ್ಯ) ಅಲಂವುಷ (ಅಥವಾ ಅಲಂಬುಷ)ನಿಗೆ ಆದೇಶಿಸುತ್ತಾನೆ. ಈ ಬಾರಿ ಅಲಂಬುಷ ಹಾಗೂ ಐರಾವಣನ ಇಬ್ಬರೂ ಯುದ್ಧದಲ್ಲಿ ಮಾಯೆಯನ್ನು ಬಳಸುತ್ತಾರೆ. ಅಲಂಬುಷನು ಐರಾವಣನನ್ನು ಬಿಲ್ಲಿನಿಂದ ಆಕ್ರಮಣ ಮಾಡುತ್ತಾನೆ, ಆದರೆ ಪ್ರತಿಯಾಗಿ ಐರಾವಣನು ಅಲಂಬುಷನ ಬಿಲ್ಲನ್ನು ಮುರಿಯುತ್ತಾನೆ ಮತ್ತು ರಾಕ್ಷಸನನ್ನು ಹಲವು ಭಾಗಗಳಾಗಿ ಸಂಹರಿಸುತ್ತಾನೆ. ಆದರೆ ಅಲಂಬುಷನ ದೇಹವು ತನ್ನಷ್ಟಕ್ಕೇ ಮರುರೂಪುಗೊಳ್ಳುತ್ತದೆ. ಆಗ ಐರಾವಣನು ಶೇಷ (ಅನಂತ) ಸರ್ಪದ ರೂಪವನ್ನು ತಾಳುತ್ತಾನೆ ಮತ್ತು ಅವನ ಸರ್ಪ ಸೈನ್ಯವು ಅವನನ್ನು ರಕ್ಷಿಸಲು ಸುತ್ತವರಿಯುತ್ತದೆ. ಇದಕ್ಕ ಪ್ರತಿಯಾಗಿ ಅಲಂಬುಷನು ಸರ್ಪಗಳ ಅನಂತ ವೈರಿಯಾದ ಗರುಡ (ಹದ್ದು)ನ ರೂಪವನ್ನು ತಾಳುತ್ತಾನೆ ಮತ್ತು ಸರ್ಪದ ಸೈನ್ಯವನ್ನು ನಾಶ ಮಾಡುತ್ತಾನೆ. ಅಂತಿಮವಾಗಿ, ಅಲಂಬುಷನು ಐರಾವಣನ ಶಿರಚ್ಛೇದವನ್ನು ಮಾಡುವ ಮೂಲಕ ಸಂಹಾರ ಮಾಡುತ್ತಾನೆ, ಆದರೂ ನಂತರ ಅವನ ಸೋದರ ಸಂಬಂಧಿಯಾದ ಘಟೋತ್ಕಜನು ಅಂತಿಮವಾಗಿ ಅಲಂಬುಷನನ್ನು ಕೊಲ್ಲುತ್ತಾನೆ.


ತಮಿಳು ಸಂಪ್ರದಾಯಗಳು-ತ್ಯಾಗದ ಬಲಿಯಾಗಿ ಆಯ್ಕೆ.

ಐರಾವಣಕ್ಕೆ ಸಂಬಂಧಿಸಿದಂತೆ ತಮಿಳು ಸಂಪ್ರದಾಯದ ಮೊಟ್ಟಮೊದಲಿನ ಮೂಲಗಳು ಮಹಾಭಾರತದ 9 ನೇ ಶತಮಾನದ ಆವೃತ್ತಿಯಾದ ಪೆರುಂತೆವನಾರ್ ಅವರ ಪಾರ್ಥ ವೆಂಪ ದಲ್ಲಿ ಕಂಡು ಬರುತ್ತದೆ.

ಈ ಸಾಹಿತ್ಯ ಕೃತಿಯ ವೈಶಿಷ್ಟ್ಯವೆಂದರೆ ಅದು ಕಾಲಪ್ಪಾಲಿ ("ಯುದ್ಧಭೂಮಿಗೆ ಬಲಿದಾನ") ಎಂದು ಕರೆಯುವ ಧಾರ್ಮಿಕ ವಿಧಿಯಾಗಿದ್ದು, ಈ ಪದವು ತಮಿಳು ಆವೃತ್ತಿಯ ಮಹಾಭಾರತದಲ್ಲಿ ಮಾತ್ರ ಕಂಡುಬರುತ್ತದೆ. ಇದು ವಿಜಯವನ್ನು ಖಚಿತಪಡಿಸಿಕೊಳ್ಳಲು ಯುದ್ಧಕ್ಕೆ ತೆರಳುವ ಮುನ್ನ ಕೈಗೊಳ್ಳುವ ಧಾರ್ಮಿಕ ಕಾರ್ಯವಾಗಿದೆ. ಪೆರುಂತೆವನಾರ್ ಅವರ ನಿರೂಪಣೆಯಲ್ಲಿ, ಮಹಾಭಾರತದ ಯುದ್ಧದ ಸ್ವಲ್ಪ ಮೊದಲು, ಕೌರವರ ನಾಯಕ ಮತ್ತು ಪಾಂಡವರ ವಿರೋಧಿಯಾದ ದುರ್ಯೋಧನನು ನಿಜವಾಗಿಯೂ ನಾಳೆಯ ದಿನವಾದ ಹುಣ್ಣಿಮೆಯು ಕಾಲಪ್ಪಾಳಿ ಗೆ ಪ್ರಶಸ್ತ ದಿನವೆಂದು ಪಾಂಡವರ ನುರಿತ ಜ್ಯೋತಿಷಿಯಾದ ಸಹದೇವನಿಂದ ತಿಳಿದುಕೊಳ್ಳುತ್ತಾನೆ. ಈ ಪ್ರಕಾರವಾಗಿ, ದುರ್ಯೋಧನನು ಐರಾವಣನನ್ನು ಸಂಪರ್ಕಿಸಿ ಕಾಲಪ್ಪಾಳಿ ಗೆ ತ್ಯಾಗದ ಬಲಿಯಾಗಬೇಕೆಂದು ಮನವೊಪ್ಪಿಸುತ್ತಾನೆ.

ಪಾಂಡವರ ನಿಕಟ ಸಲಹಾಗಾರ ಮತ್ತು ಆಪ್ತನಾದ ಕೃಷ್ಣನು ದುರ್ಯೋಧನನ ಯೋಜನೆಯ ಬಗ್ಗೆ ಕೇಳುತ್ತಾನೆ ಮತ್ತು ಐರಾವಣನು ಕೌರವರ ಬದಲಿಗೆ ಪಾಂಡವರ ಪರವಾಗಿ ತನ್ನಷ್ಟಕ್ಕೇ ಬಲಿದಾನ ಮಾಡುವಂತೆ ಖಚಿತಪಡಿಸಿಕೊಳ್ಳಲು ಯೋಜನೆಯೊಂದನ್ನು ಸಿದ್ಧಪಡಿಸುತ್ತಾನೆ. ಮೊದಲು ಸಮಸ್ಯೆಯನ್ನು ಕೃಷ್ಣನು ಪಾಂಡವರ ಹಿರಿಯನಾದ ಯುಧಿಷ್ಠಿರ (ಧರ್ಮ ಅಥವಾ ಧರ್ಮರಾಜ)ನೊಂದಿಗೆ ಚರ್ಚಿಸುತ್ತಾನೆ, ಮತ್ತು ಕಾಳಿಯನ್ನು ಆಯುಧ-ಪೂಜೆ ("ಶಸ್ತ್ರಾಸ್ತ್ರಗಳ ಪೂಜೆ")ಯ ಭಾಗವಾಗಿ ಬಲಿ ನೀಡುವಂತೆ ಶಿಫಾರಸು ಮಾಡುತ್ತಾನೆ. ಬಲಿಯಾಗಿ ನೀಡಲು ನಾಲ್ಕು ಜನ ಹೆಚ್ಚು ಅರ್ಹರಾದ ಜನರಿದ್ದಾರೆಂದು ಕೃಷ್ಣನು ತಿಳಿದುಕೊಳ್ಳುತ್ತಾನೆ: ಕೌರವರ ಪಕ್ಷದಲ್ಲಿರುವ ಶಲ್ಯ, ಪಾಂಡವರ ನಾಯಕನಾದ ಅರ್ಜುನ, ಅರಾವಣ ಮತ್ತು ಸ್ವತಃ ಕೃಷ್ಣ. ಈ ಪಟ್ಟಿಯಿಂದ, ಕೃಷ್ಣನು ಅಂತಿಮವಾಗಿ ಅರಾವಣನೇ ಅತ್ಯುತ್ತಮ ಆಯ್ಕೆಯೆಂದು ನಿರ್ಧರಿಸುತ್ತಾನೆ. ಪಾಂಡವರ ಪರವಾಗಿ ಕಾರಪ್ಪಾಳಿ ಗೆ ಒಳಗಾಗಲು ಅರಾವಣನು ಒಪ್ಪುತ್ತಾನೆ ಆದರೆ ತನ್ನ ಮುಂಚಿತ ವಾಗ್ಧಾನವನ್ನು ದುರ್ಯೋಧನನಿಗೆ ತಿಳಿಸುತ್ತಾನೆ.

ನಂತರ ತಮಿಳು ಮೂಲಗಳು ಪೆರುಂತೆವನಾರ್ ಅವರ ಆವೃತ್ತಿಗೆ ಭಿನ್ನರೂಪಗಳನ್ನು ಒದಗಿಸುತ್ತವೆ. ವಿಲ್ಲಿಪುತುರಾವರ್ ಅವರ 14 ನೇ ಶತಮಾನದ ಆವೃತ್ತಿಯಲ್ಲಿ, ಮೊದಲಿಗೆ ಕೃಷ್ಣನೇ ತ್ಯಾಗದ ಬಲಿಯಾಗಿ ಅರ್ಪಿಸಿಕೊಳ್ಳಲು ಸಿದ್ಧನಾಗುತ್ತಾನೆ ಆದರೆ ನಂತರ ಅವನ ಬದಲು ಅರಾವಣನು ಸ್ವಯಂಪ್ರೇರಣೆಯಿಂದ ಒಪ್ಪುತ್ತಾನೆ. ಪುರಾಣ ಕಥೆಯ ಈ ಆವೃತ್ತಿಯಲ್ಲಿ ದುರ್ಯೋಧನನ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇತರ ವಿವರಣೆಗಳಲ್ಲಿ, ಕೌರವರು ನೀಡಿದ ಬಿಳಿ ಆನೆಯ ಬಲಿಗೆ ಪ್ರತಿರೋಧವಾಗಿ ಅರಾವಣನು ಬಲಿದಾನ ಮಾಡಿದನು. ತಂಜಾವೂರು ಜಿಲ್ಲೆಯ ನೆಪ್ಪಟ್ಟೂರು ಗ್ರಾಮದ ಸಂಪ್ರದಾಯಗಳಲ್ಲಿ, ಅರಾವಣನನ್ನು ಎಲ್ಲಾ ದುರ್ಯೋಧನನನ್ನು ಒಂದೇ ಬಾರಿಗೆ ಸಂಹಾರಮ ಮಾಡುವಷ್ಟು ಮತ್ತು ಈ ಮೂಲಕ ಸಂಭವಿಸಬಹುದಾದ ಯಾವುದೇ ಯುದ್ಧವನ್ನು ತಪ್ಪಿಸುವಷ್ಟು ಬಲಶಾಲಿಯಾಗಿ ವಿವರಿಸಲಾಗುತ್ತದೆ. ಆದ್ದರಿಂದ "ಯುದ್ಧದ ಬಹುದೊಡ್ಡ ತ್ಯಾಗವು ನಡೆಯಲಿ" ಎಂಬ ಕಾರಣಕ್ಕಾಗಿ ಅರಾವಣನ ಮಾನವ ಬಲಿಯನ್ನು ಕೃಷ್ಣನು ಸೂಚಿಸುತ್ತಾನೆ.

ತೆರುಕುಟ್ಟು ಪ್ರದರ್ಶನಗಳಲ್ಲಿ, ಅರಾವಣನ ಬಲಿದಾನದ ಸಂದರ್ಭದಲ್ಲಿ, ಅವನನ್ನು ಆಗಾಗ್ಗೆ ತಮ್ಮ ತಂದೆಯವರಾದ ಯಯಾತಿ ಮತ್ತು ಶಂತನುವಿಗಾಗಿ ತಮ್ಮ ತಾರುಣ್ಯವನ್ು ಮತ್ತು ಲೈಂಗಿಕ ಇಚ್ಛೆಗಳನ್ನು ತ್ಯಾಗ ಮಾಡಿದ ಮಹಾಭಾರತದ ಪಾತ್ರಗಳಾದ ಪುರು ಮತ್ತು ಭೀಷ್ಮನಿಗೆ ಹೋಲಿಕೆ ಮಾಡಲಾಗುತ್ತದೆ. ನಾಟಕದಲ್ಲಿ, ಅರಾವಣನ ಅನುಮತಿಯನ್ನು ಪಡೆದ ಬಳಿಕ, ಕೃಷ್ಣನು ಅರಾವಣನ ತಾಯಿಯಾದ ಉಲುಪಿ- ತಮಿಳಿನಲ್ಲಿ ನಾಗಕನ್ನಿ ಅಥವಾ ನಾಕಕನ್ನಿ ("ಸರ್ಪ ಕನ್ನಿಕೆ)ಯ ಒಪ್ಪಿಗೆಗಾಗಿ ಸಂಪರ್ಕಿಸುತ್ತಾನೆ. ಮೊದಲು ಅವಳು ತನ್ನ ಮಗನ ಉದ್ದೇಶಿತ ಬಲಿಗೆ ಬಲವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಾಳೆ, ಆದರೆ ಅಂತಿಮವಾಗಿ ಅರಾವಳು ತಾನು ಕಾಳಿಗೆ ಮಾತ್ರ ಸಮರ್ಪಿತನಾದವನೆಂದು ವಿವರಿಸಿದ ಬಳಿಕ ಅಂತಿಮವಾಗಿ ಒಪ್ಪುತ್ತಾಳೆ.

ಅಂತಿಮವಾಗಿ, ಪುರಾಣ ಕಥನದ ಎಲ್ಲಾ ಆವೃತ್ತಿಗಳಲ್ಲಿ, ಹೊಸ ಚಂದ್ರನ ದಿನವು ಒಂದು ದಿನ ಮೊದಲೇ ಅಂದರೆ ಪ್ರಸ್ತುತ ದಿನವೇ ಬರುವಂತೆ ಸಹಕರಿಸಲು ಸೂರ್ಯ (ಸೂರ್ಯ) ಮತ್ತು ಚಂದ್ರ (ಚಂದ್ರ)ರಿಗೆ ಚಮತ್ಕಾರ ಮಾಡುತ್ತಾನೆ. ಇದು ಅರಾವಣನಿಗೆ ಪಾಂಡವರ ಪರವಾಗಿ ಮೊದಲು ಮಾಂಸವನ್ನು ಬಲಿ ಕೊಡುವಂತೆ ಮತ್ತು ನಂತರ ಕೇವಲ ದುರ್ಯೋಧನನಿಗೆ ನೀಡಿದ ವಾಗ್ಧಾನವನ್ನು ಪೂರೈಸಲು ಅವನ ಪರವಾಗಿ ಮಾರನೇ ದಿನ ಉಳಿಕೆಯ ಬಲಿದಾನವನ್ನು ಮಾಡಲು ಅವಕಾಶ ನೀಡುತ್ತದೆ.


ಮೂರು ವರಗಳು

ಪರಾತ ವೆನ್ಪ ದಲ್ಲಿ, ಧೀರ ಯೋಧನ ಕೈಯಲ್ಲಿ ಯುದ್ಧಭೂಮಿಯಲ್ಲಿ ನನಗೆ ವೀರ ಮರಣವನ್ನು ನೀಡಲು ವರವನ್ನು ನೀಡುವಂತೆ ಅರಾವಣನು ಕೃಷ್ಣನಿಗೆ ಕೇಳುತ್ತಾನೆ. ಪರಾತ ವೆನ್ಪ ವು ಕೇವಲ ವರದ ಕುರಿತಂತೆ ಮಾತ್ರ ವಿವರಿಸಿದರೂ, ಒಟ್ಟಾರೆಯಾಗಿ ತಮಿಳು ಸಂಪ್ರದಾಯವು ಒಟ್ಟು ಮೂರು ವಿಶಿಷ್ಟ ವರಗಳನ್ನು ಉಳಿಸಿಕೊಂಡು ಬಂದಿದೆ. ಹಿಲ್ಟೆಬೀಟಲ್ ಪ್ರಕಾರವಾಗಿ ಪರಾತ ವೆನ್ಪ ದ ಏಕೈಕ ವರವು ಅಲಂಬುಷನ ಕೈಯಲ್ಲಿ (ತಮಿಳಿನಲ್ಲಿ ಅಲಂಪುಕನ್) ಯುದ್ಧದ ಸಮಯದಲ್ಲಿ ಅರಾವಣನ ಸಾವಿನ ಬಗ್ಗೆ ಮೂಲ ಸಂಸ್ಕೃತದ ವಿವರಣೆಯೊಂದಿಗೆ ಅರಾವಣನ ಯುದ್ಧ-ಮುಂಚಿನ ತ್ಯಾಗದ ತಮಿಳು ಸಂಪ್ರದಾಯವನ್ನು ಸಮನ್ವಯಗೊಳಿಸುವ ಮೊದಲಿನ (9 ನೇ ಶತಮಾನದ) ಪ್ರಯತ್ನವಾಗಿತ್ತು ಎಂದು ಸೂಚಿಸುತ್ತದೆ.

ಕುಟ್ಟಂತಾವರ್ ಮತ್ತು ದ್ರೌಪದಿ ಭಕ್ತ ವೃಂದಗಳಲ್ಲಿ, ಅರಾವಣನಿಗೆ ಯುದ್ಧದ ಸಂಪೂರ್ಣ 18 ದಿನಗಳನ್ನು ನೋಡಲು ಎರಡನೆಯ ವರವನ್ನು ನೀಡಿದುದಾಗಿ ನಂಬಲಾಗಿದೆ. ಎರಡನೆಯ ವರವನ್ನು ನಿಜವಾಗಿಯೂ ಮಹಾಭಾರತದ ವಿಲ್ಲಿಪುಟ್ಟುರಾಲ್ವರ್ ಅವರು 14 ನೇ ಶತಮಾನದ ಆವೃತ್ತಿಯಲ್ಲಿ ಕಾಣಬಹುದಾಗಿದೆ. ಈ ಆವೃತ್ತಿಯಲ್ಲಿ, ಅರಾವಣನಿಗೆ ಯುದ್ಧದ " ಕೆಲವು ದಿನಗಳನ್ನು" ವೀಕ್ಷಿಸಲು ಮತ್ತು ಹಲವು ವೈರಿಗಳನ್ನು ಕೊಂದ ನಂತರ ವೀರೋಚಿತವಾಗಿ ಸಾವನ್ನು ಪಡೆಯಲು ವರಗಳನ್ನು ನೀಡಲಾಯಿತು, ಆದರೂ ವಿಲ್ಲಿಪುಟ್ಟುರಾಲ್ವರ್ ಅವರು ಎಂಟನೇ ದಿನದಂದು ಅರಾವಣನ ಸಾವಿನ ನಂತರ ಸಂಪೂರ್ಣ ಯುದ್ಧವನ್ನು ನೋಡಲು ಅವನ ತಲೆಯು ಬದುಕಿತ್ತೇ ಎಂಬ ಬಗ್ಗೆ ಪ್ರಸ್ತಾಪವನ್ನು ಮಾಡುವುದಿಲ್ಲ.

ಮೂರನೇ ವರವನ್ನು ಕೇವಲ ಸಾಂಪ್ರದಾಯಿಕ ಆಚರಣೆಗಳಲ್ಲಿ ಮಾತ್ರ ಕಾಣಬಹುದು. ಈ ಮೂರನೇ ವರವು ತ್ಯಾಗಕ್ಕೂ ಮೊದಲು ಅರಾವಣನಿಗೆ ಮದುವೆಯಾಗಲು, ಈ ಮೂಲಕ ಅಂತ್ಯಸಂಸ್ಕಾರ ಮತ್ತು ಶವಸಂಸ್ಕಾರಕ್ಕೆ ಸಂಬಂಧಿಸಿದ ನೀಡುವಿಕೆಗಳಿಗೆ ಅರ್ಹತೆಯನ್ನು ಒದಗಿಸುತ್ತದೆ (ಅವಿವಾಹಿತರನ್ನು ಹೂತು ಹಾಕಲಾಗುತ್ತಿತ್ತು). ಆದರೆ,ವೈಧವ್ಯದ ತಪ್ಪಿಸಲಾಗದ ವಿಧಿಯ ಬಗ್ಗೆ ಭಯಭೀತರಾಗಿ ಯಾವ ಮಹಿಳೆಯೂ ಸಹ ಅರಾವಣನನ್ನು ಮದುವೆಯಾಗಲು ಬಯಸುವುದಿಲ್ಲ (ಸತಿ ಸಹ ನೋಡಿ). ಕುಟ್ಟಾಂತವರ್ ಆರಾಧನೆಯ ಆವೃತ್ತಿಯಲ್ಲಿ, ಕೃಷ್ಣನು ಸ್ವತಃ ಮಾಯಾಂಗನೆ ಮೋಹಿನಿಯ ರೂಪವನ್ನು ಧರಿಸಿ, ಅರಾವಣನನ್ನು ಮದುವೆಯಾಗಿ, ಆ ರಾತ್ರಿಯನ್ನು ಅವನೊಂದಿಗೆ ಕಳೆದು ಈ ಬಿಕ್ಕಟ್ಟನ್ನು ಪರಿಹರಿಸುತ್ತಾನೆ. ಕೂವಗಾಮ್ ಆವೃತ್ತಿಯು ಹೆಚ್ಚುವರಿಯಾಗಿ ಮಾರನೇ ದಿನ ಅರಾವಣನ ಬಲಿಯ ನಂತರ ವಿಧವೆಯಾಗಿ ಕೃಷ್ಣನು ದುಃಖಿಸುವುದನ್ನು , ನಂತರ ಅವನು ಯುದ್ಧದ ಅವಧಿಗೆ ತನ್ನ ಮೂಲ ಪುರುಷ ರೂಪಕ್ಕೆ ಮರಳುವುದನ್ನು ನಿರೂಪಿಸುತ್ತದೆ.

ತರ್ಕುಟ್ಟು ಪ್ರದರ್ಶನವು ಸೊಗಸಾದ ಮದುವೆ ಸಮಾರಂಭ ಮತ್ತು ಆ ನಂತರ ಮೋಹಿನಿಯ ಹಠಾತ್ ತೆರಳುವಿಕೆಯನ್ನು ಪ್ರಸ್ತುತ ಪಡಿಸುವ ಮೂಲಕ ಮದುವೆಯು ಸಂಪೂರ್ಣವಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ವ್ಯತ್ಯಸ್ಥ ಲಿಂಗಿಗಳಲ್ಲಿ ಜನಪ್ರಿಯವಾಗಿರುವ ಮತ್ತೊಂದು ಆವೃತ್ತಿಯು ಅರಾವಣನು "ಮೈಥುನದ ಸ್ವರ್ಗಸುಖ"ವನ್ನು ಅನುಭವಿಸುವ ಬಯಕೆಯ ಹಿಂದಿನ ಕಾರಣವನ್ನು ನೀಡುತ್ತದೆ ಮತ್ತು ಮದುವೆಯ ಸಂಪೂರ್ಣತೆಯ ಬಗ್ಗೆ ವಿವರಪೂರ್ಣವಾಗಿ ತಿಳಿಸುತ್ತದೆ. ಈ ಮೂರನೇ ಮದುವೆಯ ವರವು ಆದರೆ ಎಲ್ಲಾ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಒಂದೇ ರೀತಿಯಾಗಿಲ್ಲ. ಮತ್ತೊಂದು ಪುರಾಣ ಕಥೆಗಳಲ್ಲಿ, ಕೃಷ್ಣನು ಕೆಲವು ಇತರೆ ಮದುವೆ ಪೂರ್ಣ-ಯುದ್ಧವನ್ನು ಸಂಘಟಿಸುತ್ತಾನೆ. ತಂಜಾವೂರಿನಲ್ಲಿ, ಅರಾವಣ ಮತ್ತು ಮೋಹಿನಿಯ ಮದುವೆಯು ತಿಳಿದಿಲ್ಲ; ಬದಲಿಗೆ ಅರಾವಣನು ಕೃಷ್ಣನ ಕಿರಿಯ ಸೋದರ-ಸಂಬಂಧಿ ಸತ್ಯಕಿಯ ಮಗಳಾದ ಪಾರವನಸ್ಸಿಯಲ್‌ಳನ್ನು ಮದುವೆಯಾದನು ಎಂದು ಚಿತ್ರಿಸುತ್ತದೆ.

ಮೊದಲ (ವೀರೋಚಿತ-ಮರಣ) ಮತ್ತು ಮೂರನೇ (ಮದುವೆ)ಯ ವರಗಳು ಕುಟ್ಟಾಂತವರ್ ಭಕ್ತ ವರ್ಗದಿಂದ ಹುಟ್ಟಿದವು ಮತ್ತು ಎರಡನೆಯ ವರವು ದ್ರೌಪದಿ ಭಕ್ತ ವರ್ಗದಿಂದ ಹುಟ್ಟಿತು ಎಂದು ಹಿಲ್ಟೆಬೀಟೆಲ್ ಊಹಿಸುತ್ತಾರೆ. ಕುಟ್ಟಾಂತವರ್ ಭಕ್ತ ವರ್ಗವು ಅಲಿ (ತಮಿಳುನಾಡಿನಲ್ಲಿ ಅಧಿಕೃತವಾಗಿ, "ಎನುಚ್ಸ್" ) ಪಾತ್ರ ನಿರ್ವಹಣೆಯ ಮೂಲಕ ವೀರೋಚಿತ ಮರಣ ಮತ್ತು ಮದುವೆ ಸಮಾರಂಭಗಳೆರಡನ್ನೂ ಧಾರ್ಮಿಕ ಸಂಸ್ಕಾರವಾಗಿಸಿದೆ. ಆದರೆ, ದ್ರೌಪದಿ ಭಕ್ತ ವರ್ಗದಲ್ಲಿ ಅದು ಅರಾವಣನ ಮಣ್ಣಿನ ತಲೆಯಾಗಿದ್ದು, ಅದನ್ನು ವೇದಿಕೆ ಮೇಲೆ ಕುಳ್ಳಿರಿಸಿ 18 ದಿನದ ಯುದ್ಧವನ್ನು ಮರು ಪಾತ್ರ ನಿರ್ವಹಣೆ ಮಾಡುತ್ತಾರೆ ,ಅದು ಪ್ರಮುಖವಾಗಿ ಧಾರ್ಮಿಕ ಸಂಸ್ಕಾರವಾಗಿದೆ. ಹೆಚ್ಚಿನದಾಗಿ, ತಂಜಾವೂರು ಭಾಗದ ದ್ರೌಪದಿ ಭಕ್ತ ವರ್ಗದ ಉಲ್ಲೇಖಗಳು ಇತರ ಎರಡು ವರಗಳನ್ನು ಬಿಟ್ಟು ಕೇವಲ ಈ ಎರಡನೆಯ ವರದ ಬಗ್ಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಯುದ್ಧ-ಪೂರ್ವದ ತ್ಯಾಗವು ಮೊದಲ ಮತ್ತು ಎರಡನೆಯ ವರಗಳೊಂದಿಗೆ ಸಾಮರಸ್ಯವನ್ನು ಹೊಂದಿಲ್ಲ, ಆದರೆ ಭಕ್ತ ಜನರು ತಮ್ಮದೇ ವಿವರಣೆಗಳನ್ನು ಹೊಂದಿದ್ದಾರೆ. ಯುದ್ಧಕ್ಕೂ ಮೊದಲು ಸ್ವಯ-ತ್ಯಾಗವು ಯುದ್ಧದ ಸಂದರ್ಭದಲ್ಲಿನ ವೀರೋಚಿತ ಮರಣದೊಂದಿಗೆ ಸಾಮರಸ್ಯತೆಯನ್ನು ಹೊಂದಿಲ್ಲ ಮತ್ತು ಎರಡೂ ಸಹ ಯುದ್ಧದ ಪೂರ್ಣಾವಧಿಯನ್ನು ನೋಡಲು ಬದುಕುಳಿಯುವುದಕ್ಕೂ ಸಾಮರಸ್ಯತೆಯನ್ನು ಹೊಂದಿಲ್ಲ. ಅರಾವಣನ ದೇಹವು ತ್ಯಾಗದ ನಂತರ ತನ್ನಷ್ಟಕ್ಕೇ ಮರುರೂಪುಗೊಂಡಿತು ಮತ್ತು ಅರಾವಣನು ಯುದ್ಧದ ಎಂಟನೇ ದಿನದಂದು ವೀರೋಚಿತ ಮರಣವನ್ನು ಹೊಂದಿದನು ಎಂದು ವಾದಿಸುತ್ತಾ ಕುತ್ತಂತವರ್ ಭಕ್ತ ವರ್ಗವು ಮೊದಲ ವಾದವನ್ನು ಪರಿಹರಿಸುತ್ತದೆ. ಕುಟ್ಟಾಂತವರ್ ಭಕ್ತ ವರ್ಗವು ಯುದ್ಧದ ನಿರಂತರ ವೀಕ್ಷಣೆಯು ಎರಡನೆ ವರದ ಬಗ್ಗೆ ಅಷ್ಟು ಹೆಚ್ಚಾಗಿ ಕಾಳಜಿಯನ್ನು ಹೊಂದಿಲ್ಲ. ಮತ್ತೊಂದು ಕಡೆ, ದ್ರೌಪದಿ ಭಕ್ತ ವರ್ಗದವರು ವೀರೋಚಿತ ಮರಣದ ಮೊದಲನೇ ವರದ ಬಗ್ಗೆ ಅಷ್ಟು ಹೆಚ್ಚಾಗಿ ಕಾಳಜಿಯನ್ನು ಹೊಂದಿಲ್ಲ; ಅರಾವಣನು ತನ್ನ ಬೇರ್ಪಡಿತ ತಲೆಯ ಕಣ್ಣುಗಳ ಮೂಲಕ ಸಂಪೂರ್ಣ ಯುದ್ಧವನ್ನು ವೀಕ್ಷಿಸಲು ಸಾಮರ್ಥ್ಯ ಹೊಂದಿದ್ದನು ಎಂದು ವಾದಿಸುವ ಮೂಲಕ ಅವರು ಅರಾವಣನ ಯುದ್ಧದ ನಿರಂತರ ವೀಕ್ಷಣೆಯು ಎರಡನೆಯ ವರವನ್ನು ಪರಿಹರಿಸುತ್ತಾರೆ. ಅರಾವಣನ ದೇಹವು ತ್ಯಾಗದ ನಂತರ ಮರುರೂಪುಗೊಂಡಿತು, ಅವನು ನಂತರ ಎಂಟನೇ ದಿನದಂದು ಸಾವನ್ನಪ್ಪುವ ಮೊದಲು ವೀರೋಚಿತವಾಗಿ ಹೋರಾಡಿದ, ತನ್ನ ಬೇರ್ಪಡಿತ ತಲೆಯ ಕಣ್ಣುಗಳ ಮೂಲಕ ಸಂಪೂರ್ಣ ಯುದ್ಧವನ್ನು ವೀಕ್ಷಿಸಿದ ಎಂದು ಹೇಳುವ ಮೂಲಕ ಮೂರನೆಯ ಅಭಿಪ್ರಾಯವು ಎಲ್ಲಾ ವರಗಳನ್ನು ಸಾಮರಸ್ಯಗೊಳಿಸುತ್ತದೆ.

ಯಾವುದೇ ದೃಷ್ಟಾಂತದಲ್ಲಿ, ತಮಿಳು ಸಂಪ್ರದಾಯಗಳಲ್ಲಿ ಯುದ್ಧ-ಪೂರ್ವ ತ್ಯಾಗವು ಸಾಮಾನ್ಯವಾದ ವಸ್ತುವಾಗಿದೆ. ಅರಾವಣನು ಕೋರಿಕೊಂಡ ಮತ್ತು ವರಗಳನ್ನು ಪಡೆದ ಬಳಿಕ, ಅವನು ತ್ಯಾಗಕ್ಕೆ ಸಿದ್ಧನಾಗಿದ್ದ. ಅವನು ಕುರುಕ್ಷೇತ್ರ ಯುದ್ಧಭೂಮಿಯತ್ತ ತೆರಳಿದ. ಯುಧಿಷ್ಠಿರನು ತನ್ನ "ಶಸ್ತ್ರಾಸ್ತ್ರಗಳ ಪ್ರಾಂಗಣ" ದಲ್ಲಿ ಕಾಳಿಯನ್ನು ಪೂಜಿಸುತ್ತಿರುವಾಗ, ಅರಾವಣನು ತನ್ನ ಭುಜಬಂಧ ಮತ್ತು ಎದೆಗೂಡಿನ ಕವಚವನ್ನು ತೆಗೆದುಹಾಕಿದ. ಅವನು ನಂತರ ತನ್ನ ದೇಹವು 32 ತುಂಡುಗಳಾಗಿ ಕತ್ತರಿಸಿದ -ತನ್ನ 32 ದೇಹದ ಸಂಪೂರ್ಣತೆಗೆ ಒಂದೊಂದು ತುಂಡು- ಅವುಗಳನ್ನು ಯುಧಿಷ್ಟಿರನು ಕಾಳಿಗೆ ಸಮರ್ಪಿಸಿದ. ತೆರ್ಕುಟ್ಟು ಪ್ರದರ್ಶನದಲ್ಲಿ, ಅರಾವಣನ ಪಾತ್ರವನ್ನು ಮಾಡುವ ಪಾತ್ರಧಾರಿಯ ಕುತ್ತಿಗೆಯ ಕೆಳಭಾಗವನ್ನು ಬಿಳಿಯ ಬಟ್ಟೆಯಿಂದ ಮುಚ್ಚುವ ಮೂಲಕ ಇದನ್ನು ಚಿತ್ರಿಸಲಾಗುತ್ತದೆ. ಈ ಹಂತದಲ್ಲಿ ಅರಾವಣನ ಉತ್ಸಾಹವು ನಟನನ್ನು ಪ್ರಭಾವಗೊಳಿಸುತ್ತದೆ ಎಂದೂ ಸಹ ನಂಬಲಾಗಿದೆ. ಕೆಲವೊಮ್ಮೆ ಬಲಿಯನ್ನು ಸೂಚಿಸಲು ತೆರ್ಕುಟ್ಟು ವೇದಿಕೆಯಲ್ಲಿ ಕೋಳಿಯನ್ನು ಬಲಿ ನೀಡಲಾಗುತ್ತದೆ. ವಿಲ್ಲುಪುಟುರಾಲ್ವರ್ ಅವರ ಹೇಳುವಿಕೆಯಲ್ಲಿ, ಅರಾವಣನ ಸ್ವಯಂ ಬಲಿದಾನಕ್ಕೆ ಪೂರಕವಾಗಿ ಆನೆಯೊಂದನ್ನು ದೇವತೆಗೆ ಬಲಿ ನೀಡಲಾಯಿತು.

ಅರಾವಣನ ಮಾಂಸವನ್ನು ತೆಗೆದ ಬಳಿಕ ಕೇವಲ ಅವನ ತಲೆ ಮತ್ತು ಎಲುಬುಗಳು ಉಳಿದಿದ್ದವು. ಕೃಷ್ಣನು ಅವನ ತಾತ ಮತ್ತು ಉಲುಪಿಯ ತಂದೆಯಾದ ನಾದ ನಾಗ, ಆದಿ-ಶೇಷನಿಗೆ ಪ್ರಾರ್ಥನೆ ಮಾಡಲು ಸಲಹೆ ನೀಡುತ್ತಾನೆ. ಆದಿಶೇಷನು ಅರಾವಣನ ಸುತ್ತಲೂ ಸ್ವತಃ ಸುರುಳಿಯನ್ನು ಮಾಡುತ್ತಾನೆ ಮತ್ತು ಅವನ ಮಾಂಸವಾಗುತ್ತಾನೆ ಮತ್ತು ಅವನ ದೇಹವನ್ನು ಮರುಸ್ಥಾಪಿಸುತ್ತಾನೆ.

ಎರಡನೆಯ ವರವನ್ನು ಪೂರ್ಣಗೊಳಿಸಲು, ಕೃಷ್ಣನು ಬಲಶಾಲಿ ಅರಾವಣನನ್ನು ಸೋಲಿಸಲು ವೈರಿಯೊಬ್ಬನನ್ನು ಸಾಕಷ್ಟು ಬಲವುಳ್ಳವನಾಗಿ ಮಾಡಿ ಅವನಿಗೆ ವೀರೋಚಿತವಾದ ಮರಣವನ್ನು ದಯಪಾಲಿಸುತ್ತಾನೆ. ಕೃಷ್ಣನು ಅಲಂಬುಷನನ್ನು ಆಯ್ಕೆ ಮಾಡುತ್ತಾನೆ. ನಂತರ, ಕಥೆಯ ಆವೃತ್ತಿಯನ್ನಾಧರಿಸಿ, ಕೃಷ್ಣನು ಒಂದೋ ಅಲೌಕಿಕ ಧ್ವನಿಯ ಮೂಲಕ ಗರುಡನ ರೂಪವನ್ನು ತಾಳಲು ಅಲಂಬುಷನಿಗೆ ಸಲಹೆ ನೀಡುತ್ತಾನೆ, ಇಲ್ಲವೇ ಅಲಂಬುಷನಿಗೆ ಸಹಾಯ ಮಾಡಲು ನಿಜವಾದ ಗರುಡನನ್ನು ಕಳುಹಿಸುತ್ತಾನೆ. ಗರುಡನ ದೃಷ್ಟಿಯಲ್ಲಿ - ಅವನ ಚಿರಸ್ಥಾಯಿ "ಹದ್ದು" ವೈರಿ- ಶೇಷನು ಭಯದಿಂದ ಸುರುಳಿಯನ್ನು ಬಿಚ್ಚಿ, ಅರಾವಣನನ್ನು ರಕ್ಷಣೆಯಿಲ್ಲದಂತೆ ಮಾಡಿ ಅಂತಿಮವಾಗಿ ಬಲಹೀನನಾದ ಅರಾವಣನ್ನು ಅಲಂಬುಷನು ಶಿರಚ್ಛೇದ ಮಾಡುತ್ತಾನೆ.


ಅರಾವಣನಿಂದ ಕುಟ್ಟಾಂತವರ್

ಕೂವಾಗಮ್‌ನ ಸ್ಥಳೀಯ ಸಾಂಪ್ರದಾಯಿಕ ಕಥೆಯು ಅರಾವಣನನ್ನು ಹೇಗೆ ಕುಟ್ಟಾಂತವರ್ ಎಂದು ಕರೆಯುತ್ತಾರೆ ಎಂದು ವಿವರಿಸುತ್ತದೆ. ಯುದ್ಧದ ನಂತರ, ಪಾಂಡವರು ಕೌರವರನ್ನು ಪರಾಭವಗೊಳಿಸಿದ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ಕೃಷ್ಣನು ಯುದ್ಧದ ಏಕೈಕ ಸಾಕ್ಷಿಯಾದ ಅರಾವಣನಿಗೆ ಕೇಳುತ್ತಾನೆ ,"ಈ ಯುದ್ಧವನ್ನು ಗೆಲ್ಲಲು ನಿಜವಾಗಿ ಯಾರು ಕಾರಣರು?" ಅರಾವಣನು ತಾನು ಎರಡು ಸಂಗತಿಗಳನ್ನು ನೋಡಿದ ಬಗ್ಗೆ ಪ್ರತಿಕ್ರಿಯಿಸುತ್ತಾನೆ: ವೈರಿಗಳನ್ನು ಶಿರಚ್ಛೇದ ಮಾಡಿದ ಕೃಷ್ಣನ ಚಕ್ರ, ಮತ್ತು ಅವರ ರಕ್ತವನ್ನು ಸಂಗ್ರಹಿಸಿದ ಅವನ ಶಂಖ. ಈ ಪ್ರತ್ಯುತ್ತರವು ಕೃಷ್ಣನಿಗೆ ಜಯದ ಸಂಪೂರ್ಣ ಶ್ರೇಯವನ್ನು ನೀಡಿದುದನ್ನು ಅರ್ಥ ಮಾಡಿಸುತ್ತದೆ.

ಅರಾವಣನ ಅಭಿಪ್ರಾಯವು ಮಹಾಭಾರತದಲ್ಲಿ ಯುದ್ಧದ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಭಾವ ವಹಿಸಿದ ಬಗ್ಗೆ ವಿವರವಾಗಿ ಒಳಗೊಂಡಿರುವ ಜಂಭದ ಮತ್ತು ಮುಂಗೋಪಿಯಾದ ಭೀಮನನ್ನು ಕೆರಳಿಸುತ್ತದೆ. ಆದರೆ, ಭೀಮನು ಅರಾವಣನನ್ನು ಘಾಸಿಗೊಳಿಸುವ ಮೊದಲೇ, ಅರಾವಣನ ಶಿರವನ್ನು ಕರಪಾರಿಕಾ ನದಿಯಲ್ಲಿ ಎಸೆಯುವ ಬಗ್ಗೆ ಕೃಷ್ಣನು ಆದೇಶ ನೀಡುತ್ತಾನೆ, ಅಲ್ಲಿ ಅವನು ಮಗುವಿನ ರೂಪವನ್ನು ಧರಿಸುತ್ತಾನೆ ಮತ್ತು ಅಂತಿಮವಾಗಿ ನದಿ ತೀರದ ಚಂದ್ರಗಿರಿ ರಾಜನಿಗೆ ಕಂಡುಬರುತ್ತದೆ. ಮಗುವನ್ನು ರಾಜನು ಎತ್ತಿಕೊಂಡಾಗ ಅದು "ಕುವ ಕುವ" ಎಂದು ಅಳುತ್ತದೆ, ಆದ್ದರಿಂದ ಅವನು ಆ ಸ್ಥಳವನ್ನು ಕುವಕ್ಕಮ್ (ಕೂವಗಮ್) ಎಂದು ಹೆಸರಿಸುತ್ತಾನೆ. ರಾಜನು ಮಗುವಿಗೆ ಕಾರಪಾಲನ್ ("ಬಾಣದ-ಮಗು") ಎಂದೂ ಹೆಸರಿಡುತ್ತಾನೆ.

ಕಾರಪಾಲನು ಬೆಳೆಯುವ, ಯುದ್ಧದಲ್ಲಿ ಅವನ ದತ್ತು ತಂದೆಯನ್ನು ಗಾಯಗೊಳಿಸಿದ ರಾಕ್ಷಸಸಾದ ಕುಟ್ಟಕುರನ್ ಅನ್ನು ಕೊಲ್ಲುವ ಬಗ್ಗೆಯೂ ಸಂಪ್ರದಾಯಗಳು ನಿರೂಪಿಸುತ್ತವೆ. ಈ ಸಂಪ್ರದಾಯದಲ್ಲಿ ಅತ್ಯುಚ್ಛ ದೇವತೆಯಾಗಿ ಗುರುತಿಸಲಾಗುವ ದ್ರೌಪದಿಯು ಕಾರಪಾಲನಿಗೆ ಕುಟ್ಟಾಂತವರ್ -ಕುಟ್ಟಕುರನ್‌ನ ಸಂಹಾರಕ ಎಂದು ಹೆಸರಿಸಿ ಆಶೀರ್ವಾದಿಸುತ್ತಾಳೆ ಮತ್ತು ಅವನಿಗೆ ಕೂವಾಗಮ್‌ನಲ್ಲಿ ದೇವಾಲಯವೊಂದನ್ನು ನೀಡುತ್ತಾಳೆ.

ಈ ಪದ್ಧತಿಯಲ್ಲಿ ಹಲವಾರು ಭಿನ್ನತೆಗಳಿವೆ. ಕೆಲವು ಆವೃತ್ತಿಗಳು ಮಗುವನ್ನು ಕಂಡುಹಿಡಿದ ಕೀರ್ತಿಯನ್ನು ಚಂದ್ರಗಿರಿಯ ರಾಣಿ ಕಿರುಪಾನ್ಸಿಗೆ ನೀಡುತ್ತವೆ. ಇತರರು ಒಟ್ಟಾರೆಯಾಗಿ ಚಂದ್ರಗಿರಿಯ ರಾಜನ ಹೆಸರನ್ನೇ ಬಿಡುತ್ತವೆ ಮತ್ತು ಕೂವಾಗಮ್ ದೇವಾಲಯದ ಉಲ್ಲೇಖವನ್ನೇ ಬಿಟ್ಟು ಬಿಡುತ್ತವೆ. ಬದಲಿಗೆ ಅವುಗಳು ಕುಟ್ಟುಕುರನ್ ರಾಕ್ಷಸನ ಬಗ್ಗೆ ಮತ್ತು ಒಂದು ತಲೆ ಮತ್ತು ನೀರಿನಿಂದ ಜನಿಸಿದ ವ್ಯಕ್ತಿಯೊಬ್ಬನಿಂದ ಅವನು ಕೊಲ್ಲಲ್ಪಡುವ ಅಸಾಧ್ಯವಾದ ವರವನ್ನು ಅವನಿಗೆ ನೀಡಿದ ಬಗ್ಗೆ ಕೇಂದ್ರೀಕರಿಸುತ್ತವೆ. ಕೃಷ್ಣನಾಗಿ ರೂಪತಾಳಿದ ವಿಷ್ಣುವು ಅರಾವಣನು ಈ ರಾಕ್ಷಸನನ್ನು ಕೊಲ್ಲವನು ಎಂದು ದೇವರಿಗೆ ಮಾಹಿತಿ ನೀಡುತ್ತಾನೆ. ಇದನ್ನು ಮನಸ್ಸಿನಲ್ಲಿರಿಸಿಕೊಂಡು, ಅರಾವಣನ ತಲೆಯನ್ನು ನೀರಿಗೆ ಹಾಕಲಾಗುತ್ತದೆ ಮತ್ತು ಅದು ಕುಟ್ಟನ್ ಎಂದು ("ನೀರಿನಿಂದ ಜನಿಸಿದ") ಕರೆಯಲಾಗುವ ಮಗುವಾಗಿ ರೂಪಾಂತರವಾಗುತ್ತದೆ ಮತ್ತು ಅದು ರಾಕ್ಷಸನನ್ನು ಕೊಲ್ಲುತ್ತದೆ.


ಆಚರಣೆಗಳು ಮತ್ತು ದೇವಾಲಯಗಳು

ಕುಟ್ಟಾಂತವರ್ ಆರಾಧನಾ ಪದ್ದತಿಯು ಅರಾವಣನ ಬಗ್ಗೆ ವಿವರಿಸುವ ಮೂಲ ತಮಿಳು ಸಂಪ್ರದಾಯವಾಗಿದ್ದಿರಬಹುದು ಎಂದು ವಾದಿಸುತ್ತಾನೆ,[೬೩] ಆದರೆ ಈ ಸಂಪ್ರದಾಯವೊಂದೇ ಗೌರವಾನ್ವಿತವಾದುದಲ್ಲ. ದ್ರೌಪದಿ ಆರಾಧನಾ ಪದ್ದತಿಯು ತನ್ನದೇ ಆದ ಸಂಪ್ರದಾಯ ಮತ್ತು ಶಾಸ್ತ್ರೋಕ್ತಗಳನ್ನು ಬೆಳೆಸಿಕೊಂಡಿದೆ.

ಬಹುತೇಕ ಕುಟ್ಟಾಂತವರ್ ಭಕ್ತರು ತಮಿಳು ನಾಡಿನ ಕಡಲೂರು, ತಿರುವಣ್ಣಾಮಲೈ, ವೆಲ್ಲೂರ್ ಮತ್ತು ವಿಲ್ಲಿಪುರಂನಲ್ಲಿ ನೆಲೆಸಿದ್ದಾರೆ. ದ್ರೌಪದಿಯ ಭಕ್ತರು ಈ ಜಿಲ್ಲೆಗಳಲ್ಲಿ ವ್ಯಾಪಿಸಿರುವುದಲ್ಲದೇ, ಕಾಂಚೀಪುರಂ (ಹಳೆಯ ಚಿಂಗ್ಲೆ ಪೇಟ್) ಜಿಲ್ಲೆಯಲ್ಲೂ ಇದ್ದಾರೆ. ಈಕೆಯ ದೇವಸ್ಥಾನಗಳನ್ನು ತಂಜಾವೂರು ಜಿಲ್ಲೆ ಮತ್ತು ಆಂದ್ರ ಪ್ರದೇಶ ಹಾಗೂ ಕರ್ನಾಟಕದ ದಕ್ಷಿಣ ಜಿಲ್ಲೆಗಳ ಆಚೆಗೂ ಕಾಣಬಹುದು. ದ್ರೌಪದಿಯ ದೇವಸ್ಥಾನಗಳಿಗೆ ಹೋಲಿಸಿದಲ್ಲಿ ಕುಟ್ಟಾಂತವರ್‌ನ ದೇವಾಲಯಗಳು ಕೆಲವೇ ಇವೆ.ಇವು ಕೋಯಮತ್ತೂರಿನ ಮೂಲಕ ಹಾದು ಹೋಗುವ ಕಡಲೂರು ಮತ್ತು ವಿಲ್ಲಾಪುರಂ ಜಿಲ್ಲೆಗಳ ಪ್ರಾಂತಗಳಿಗೆ ಮಾತ್ರ ಸೀಮಿತವಾಗಿವೆ. ಈ ದೇವಾಲಯಗಳಲ್ಲಿ ಮೂವತ್ತೆರಡು ದೇವಾಲಯಗಳು ಪ್ರಾಮುಖ್ಯವಾಗಿದ್ದು, ಕೂವಾಗಂ ಅತ್ಯಂತ ಪ್ರಮುಖವಾಗಿದೆ.


ಕೊಯಂಬತ್ತೂರು ಜಿಲ್ಲೆ

ಸಿಂಕಾನಲ್ಲೂರ್

ಕಂಸಪ್ಪಲ್ಲಿ

ಕುಮಾರಮಂಕಲಂ

ಕುರಿಸ್ಸಿ

ಕುಟ್ಟಂಪಟಿ

ಟುಟಿಯಾಲುರ್


ಕಡ್ಡಲೂರ್ ಜಿಲ್ಲೆ

ಕೊತ್ತಟ್ಟಾಯ್

ಪೂವನಕಿರಿ

ತೇವನಾಪಟ್ಟಣಂ

ತಿರುವೇತ್ಕಾಲಂ

ಈರೋಡ್ ಜಿಲ್ಲೆ

ಕಲಾರಿಕಿಯಂ

ಸೇಲಂ ಜಿಲ್ಲೆ

ಪಲಯಕುರಮಂಕಲಂ

ಪನಾಯ್ಮಟಲ್

ಪೆಲೂರ್

ತೆತಾವೂರ್


ತಿರುವಣ್ಣಾಮಲೈ ಜಿಲ್ಲೆ

ಸೆರ್ಪಾಪಟ್ಟು

ಕಿಲ್ವನಾಂಪತಿ

ತೇವನೂರ್

ವೇತಾಂತವತಿ

ವೀರನಂತಲ್


ವೆಲ್ಲೂರು ಜಿಲ್ಲೆ

ಕೋಲಾವರಂ

ಒಟುಕ್ಕಟ್ಟುರ್

ಪುಲಿಮೆಟು

ಪುತೂರ್

ವೆಲ್ಲಾಯಂಪತಿ


ವಿಲ್ಲುಪುರಂ ಜಿಲ್ಲೆ

ಕೊನಾಲೂರ್

ಕೂವಾಗಂ (ಕುವಾಕ್ಕಂ)

ಪೆಣ್ಣೈವಲಂ

ತೈಯಲಪುರಂ

ಪುದುಚೆರಿ ಕೇಂದ್ರಾಡಳಿತ ಪ್ರದೇಶ

ಮದುಕರಾಯ್

ಪಿಲ್ಲಯರ್ಕುಪ್ಪಂ


ಅರಾವಣನ ಬೇರ್ಪಟ್ಟ ತಲೆಯು ಸಾಮಾನ್ಯವಾಗಿ ದ್ರೌಪದಿ ದೇವಾಲಯಗಳ ಪ್ರಮುಖ ಅಂಶವಾಗಿದೆ. ಕೆಲವೊಮ್ಮೆ ಇದು ಮರದಿಂದ ಮಾಡಲ್ಪಟ್ಟಿದ್ದು ಹಗುರವಾಗಿರುತ್ತದೆ; ಕೆಲವು ಸಮಯಗಳಲ್ಲಿ ದೇವಸ್ಥಾನದಲ್ಲಿ ಇದು ತನ್ನದೇ ಆದ ಪಾವಿತ್ರತೆಯನ್ನು ಹೊಂದಿರುತ್ತದೆ. ಕೆಲವೊಮ್ಮೆ ಅರಾವಣನ ತಲೆಯ ಪ್ರತಿಮೆಗಳನ್ನು ದ್ರೌಪದಿ ದೇವಾಲಯಗಳ ಮೂಲೆಗಳಲ್ಲಿ ಹಾಗೂ ಮೇಲ್ಛಾವಣಿಯ ತುದಿಗಳಲ್ಲಿ ಇರಿಸಲಾಗಿರುತ್ತದೆ.

ಒಬ್ಬ ಪೇಯಿ ಅಥವಾ ಭೂತ ( ಪ್ರೇತಾತ್ಮ) ವಾಗಿ , ಅರಾವಣನು ದೇವಾಲಯ ಮತ್ತು ಪಾತುಕಾಲಮ್ ಆಚರಣೆಗೆ, ಇತರ ಆತ್ಮಗಳ ವಿರುದ್ಧ ರಕ್ಷಕನಾಗಿ ನಿಲ್ಲುತ್ತಾನೆ.

ದ್ರೌಪದಿ ಧರ್ಮಾಚರಣೆಯಲ್ಲಿ ಪಾತುಕಾಲಮ್ ಮಹಾಭಾರತ ಯುದ್ಧದ ಸಾಂಕೇತಿಕ ಸ್ಥಳವಾಗಿದ್ದು ಶಾಸ್ತ್ರೋಕ್ತವಾಗಿ ಪುನರ್-ಅಭಿನಯಿಸಲಾಗುತ್ತದೆ. ತಂಜಾವೂರಿನ ತಾಲ್ಲೂಕು ಗಳಾದ , ಕುಂಬಕೋಣಂ ಮತ್ತು ಪಟ್ಟುಕ್ಕೋಟೈ ನಲ್ಲಿ , ಅರಾವಣನ ತಲೆಯನ್ನು ಶಾಶ್ವ.ತವಾಗಿ ಒಂದು ಮಂಟಪ ಅಥವಾ ದೇವಸ್ಥಾನದ ಗೂಡಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಕುಂಬಕೋಣಂನ ಹಾಜಿಯಾರ್ ತಿರು ದೇವಾಲಯದಲ್ಲಿ ಅರಾವಣನ ಅತ್ಯಂತ ದೊಡ್ಡ ತಲೆಯ ಮೂರ್ತಿ ಇದೆ.




ವಿದುರ


ವಿದುರ ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ. ಕೆಲವರ ಪ್ರಕಾರ ಮಾಂಡವ್ಯ ಮುನಿಯಿಂದ ಶಾಪಗ್ರಸ್ತನಾದ ಯಮನ ಅವತಾರ.


ಜನ್ಮ ವೃತ್ತಾಂತ

ಈ ರಾಣಿಯರು ಹಸ್ತಿನಾಪುರದ ರಾಜ ವಿಚಿತ್ರವೀರ್ಯನ ಪತ್ನಿಯರು. ರಾಜನು ಪುತ್ರ ವಿಹೀನನಾಗಿ ಮರಣಿಸಿದಾಗ ತಾಯಿ ಸತ್ಯವತಿ ತನ್ನ ಪುತ್ರನಾದ ವ್ಯಾಸನನ್ನು ಸಹಾಯಕ್ಕಾಗಿ ಕರೆದಳು. ಆಶ್ರಮದಲ್ಲಿ ಮುನಿ ಜೀವನ ನಡೆಸುತ್ತಿದ್ದ ವ್ಯಾಸ ಮಹರ್ಷಿಯನ್ನು ನೋಡಿದ ಅಂಬಿಕೆ ಕಣ್ಣು ಮುಚ್ಚಿಕೊಂಡಳು (ಧೃತರಾಷ್ಟ್ರನ ಜನನ) ಹಾಗೂ ಅಂಬಾಲಿಕೆಯ ಬಣ್ಣ ಇಳಿದುಹೋಯಿತು (ಪಾಂಡುವಿನ ಜನನ). ರಾಣಿಯರನ್ನು ಮತ್ತೊಂದು ಸಲ ಕರೆದಾಗ ಅವರು ಹೋಗಲು ಒಪ್ಪದೇ ತಮ್ಮ ದಾಸಿಯನ್ನು ಕಳಿಸಿದರು. ಈ ದಾಸಿಯು ಮಾನಸಿಕ ಸ್ಥೈರ್ಯವನ್ನು ಹೊಂದಿದ ಕಾರಣ ಧೃತಿಗೆಡದೆ ಮುನಿಯ ಬಳಿಗೆ ಹೋದಳು. ಈ ಕಾರಣದಿಂದ ಅವಳ ಪುತ್ರನು ತನ್ನ ಮಲ ಸಹೋದರರಂತೆ ಯಾವುದೇ ಊನಗಳಿಲ್ಲದೇ ಹುಟ್ಟಿದನು. ಇವನೇ ವಿದುರ.


ಪಾತ್ರ

ವಿದುರನು ರಾಜಮನೆತನದವನಲ್ಲವಾದ ಕಾರಣ ಸಿಂಹಾಸನದ ಹಕ್ಕುದಾರನಾಗಿ ಪರಿಗಣಿತನಾಗಲಿಲ್ಲ. ತನ್ನ ಮಲ ಸಹೋದರರಿಗೆ ಪ್ರಧಾನ ಮಂತ್ರಿಯಾಗಿ ಸಹಾಯ ಮಾಡುತ್ತಿದ್ದನು. ಕೃಷ್ಣನ ನಂತರ ಪಾಂಡವರ ವಿಶ್ವಸನೀಯ ಸಲಹೆಗಾರನಾಗಿದ್ದನು. ಕೌರವರ ಕುಯುಕ್ತಿಗಳ ವಿರುದ್ಧ ಪಾಂಡವರನ್ನು ಎಚ್ಚರಿಸುತ್ತಿದ್ದನು. ಯಾರೂ ಸಹಿಸಲಾರದಂತಹ ಕಷ್ಟಕರವಾದ ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಅತಿ ಬುದ್ಧಿವಂತನಾಗಿದ್ದನು.

ಅಂತ್ಯ

ಕುರುಕ್ಷೇತ್ರ ಯುದ್ಧದ ನಂತರ ಯುಧಿಷ್ಠಿರನನ್ನು ರಾಜನನ್ನಾಗಿ ನೇಮಿಸಿದನು. ಸಹೋದರ ಧೃತರಾಷ್ಟ್ರ ಮತ್ತು ಅತ್ತಿಗೆಯಂದಿರಾದ ಗಾಂಧಾರಿ ಮತ್ತು ಕುಂತಿಯರೊಡಗೂಡಿ ವಾನಪ್ರಸ್ಥಕ್ಕೆ ತೆರಳಿದನು. ಗಂಗಾ ನದಿಯ ದಡದಲ್ಲಿ ಕೊನೆಯುಸಿರೆಳೆದನು.



Tuesday, 29 September 2020

ವಿಚಿತ್ರವೀರ್ಯ

ವಿಚಿತ್ರವೀರ್ಯ ಮಹಾಭಾರತದಲ್ಲಿ ಶಂತನು ಮತ್ತು ಸತ್ಯವತಿಯ ಮಗ.ಇವನ ಅಣ್ಣ ಚಿತ್ರಾಂಗದ ಶಂತನುವಿನ ನಂತರ ಹಸ್ತಿನಾಪುರದ ಪಟ್ಟವೇರಿದ.ಚಿತ್ರಾಂಗದ ಸಂತಾನವಿಲ್ಲದೆ ನಿಧನ ಹೊಂದಿದುದರಿಂದ ಅವನ ತಮ್ಮನಾದ ವಿಚಿತ್ರವೀರ್ಯ ಸಿಂಹಾಸನವನ್ನೇರಿದ.ಇವನು ಪಟ್ಟವೇರಿದ ಸಮಯದಲ್ಲಿ ಇನ್ನೂ ಬಾಲಕನಾಗಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ಭೀಷ್ಮನು ಇವನ ಪರವಾಗಿ ರಾಜ್ಯಭಾರ ನಿಭಾಯಿಸಿದ.ಇವನು ಪ್ರಾಯ ಪ್ರಬುದ್ಧನಾದ ಸಮಯದಲ್ಲಿ ಇವನಿಗಾಗಿ ಭೀಷ್ಮನು ಕನ್ಯೆಯನ್ನು ಅರಸುತ್ತಿರುವಾಗ ಕಾಶಿಯ ರಾಜ ಸ್ವಯಂವರವನ್ನು ಏರ್ಪಡಿಸಿದ ವಿಷಯ ತಿಳಿದು ಅಲ್ಲಿಗೆ ಧಾವಿಸಿದ.ಅಲ್ಲಿ ಸ್ವಯಂವರವನ್ನು ವಿಚಿತ್ರವೀರ್ಯನ ಪರವಾಗಿ ಗೆದ್ದು ಕಾಶಿ ರಾಜನ ಮೂವರು ಕುವರಿಯರಾದ ಅಂಬಾ,ಅಂಬಿಕ ಮತ್ತು ಅಂಬಾಲಿಕರನ್ನು ಕರೆತರಲು ಪ್ರಯತ್ನಿಸಿದ. ಆದರೆ ಅಂಬಾ ಮೊದಲೇ ಸಾಳ್ವನನ್ನು ಪ್ರೀತಿಸುತ್ತಿದ್ದುದರಿಂದ ಅಂಬಿಕ ಮತ್ತು ಅಂಬಾಲಿಕೆಯರನ್ನು ಒತ್ತಾಯ ಪೂರ್ವಕ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿದ. ಮುಂದೆ ವಿಚಿತ್ರವೀರ್ಯನಿಗೆ ಮಕ್ಕಳಾಗುವ ಮೊದಲೇ ಕ್ಷಯ ರೋಗದಿಂದ ತೀರಿಕೊಂಡುದುದರಿಂದ ತಾಯಿ ಸತ್ಯವತಿ ಭೀಷ್ಮನಿಗೆ ಅಂಬಿಕ ಮತ್ತು ಅಂಬಾಲಿಕೆಯರನ್ನು ಮದುವೆಯಾಗುವಂತೆ ತಿಳಿಸುತ್ತಾಳೆ. ಆದರೆ ಭೀಷ್ಮನು ಮೊದಲೇ ಆಜನ್ಮ ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ವ್ಯಾಸನನ್ನು ಕರೆದು ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳನ್ನು ಕರುಣಿಸುವಂತೆ ಹೇಳಲು ಹೇಳುತ್ತಾನೆ. ಅದರಂತೆ ವ್ಯಾಸನ ಮೂಲಕ ಸತ್ಯವತಿಯು ಅಂಬಿಕೆ ಮಾತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಮಾಡುತ್ತಾಳೆ. ಇವರೇ ಅಂಬಿಕೆಯ ಮಗ ಧೃತರಾಷ್ಟ್ರ ಮತ್ತು ಅಂಬಾಲಿಕೆಯ ಮಗ ಪಾಂಡುವಾಗಿ ಮಹಾಭಾರತ ಕಥೆಯಲ್ಲಿ ಪ್ರಸಿದ್ಧರಾದವರು.



ಶಿಖಂಡಿ

ಶಿಖಂಡಿ ಎಂಬುದು ಮಹಾಭಾರತದಲ್ಲಿ ಬರುವ ಒಂದು ವಿಶಿಷ್ಟ ಪಾತ್ರಪಾಂಚಾಲ ದೇಶದ ರಾಜನಾದ ದ್ರುಪದನ  ಮಗಳು. ಆಕೆಯ ಅಣ್ಣ ದೃಷ್ಟದ್ಯುಮ್ನ. ಮೂಲತಃ ಹೆಣ್ಣಾಗಿ ಹುಟ್ಟಿದ್ದರೂ ತನ್ನ ಗುಣ, ಶೌರ್ಯ, ವರ್ತನೆಗಳಿಂದ ಗಂಡಸೆಂದು ಬಿಂಬಿಸಲ್ಪಟ್ಟ ಪಾತ್ರವಿದು.

 

ಹಿನ್ನೆಲೆ

·         ಭೀಷ್ಮ ತನ್ನ ತಮ್ಮನಾದ ವಿಚಿತ್ರವೀರ್ಯನ ಮದುವೆಗೆಂದು ಅಂಬೆಅಂಬಿಕಾಅಂಬಾಲಿಕ ಎಂಬ ಮೂವರು ರಾಜಕುಮಾರಿಯನ್ನು ಅಪಹರಿಸುತ್ತಾನೆ. ಅವರಲ್ಲಿ ಅಂಬೆ (ಅಂಬಾ) ತಾನು ಮತ್ತೊಬ್ಬ ವ್ಯಕ್ತಿಯನ್ನು ಈಗಾಗಲೇ ಪ್ರೀತಿಸಿರುವದಾಗಿಯೂ, ತನ್ನನ್ನು ಬಿಟ್ಟು ಬಿಡಬೇಕೆಂದೂ ಭೀಷ್ಮನಲ್ಲಿ ವಿನಂತಿಸಿಕೊಳ್ಳುತ್ತಾಳೆ. ಮನ ಕರಗಿದ ಭೀಷ್ಮ ಅಂಬೆಯನ್ನು ಆಕೆಯ ಪ್ರಿಯಕರನಿಗೋಸ್ಕರ ಕಳಿಸಿಕೊಡುತ್ತಾನೆ.

·         ಆದರೆ ಪ್ರಿಯಕರ ಅಂಬೆಯನ್ನು ತಿರಸ್ಕರಿಸುತ್ತಾನೆ. ಈಗ ಅಂಬೆಯದು ವಿಚಿತ್ರ ಪರಿಸ್ಥಿತಿ. ಇತ್ತ ಪ್ರಿಯಕರನಿಂದಲೂ ತಿರಸ್ಕೃತಗೊಂಡು ಅತ್ತ ವಿಚಿತ್ರವೀರ್ಯನನ್ನೂ ಮದುವೆಯಾಗದೇ ಕಂಗೆಡುತ್ತಾಳೆ. ಹತಾಶೆಗೊಂಡ ಅಂಬೆ ತೀರ ಕೊನೆಗೆ ಭೀಷ್ಮನನ್ನೇ ಮದುವೆಯಾಗುವಂತೆ ಒತ್ತಾಯಿಸು ತ್ತಾಳೆ. ಭೀಷ್ಮ ಒಪ್ಪುವುದಿಲ್ಲ. ಹೀಗೆ ಎಲ್ಲ ಕಡೆಗಳಿಂದಲೂ ತಿರಸ್ಕೃತಗೊಂಡ ಅಂಬೆ ಆಗ ಕೋಪದಿಂದ ಭೀಷ್ಮನೆದುರು ಶಪಥಗೈಯುತ್ತಾಳೆ.

ಅಂಬೆಯ ಶಪಥ

ಮುಂದಿನ ಜನ್ಮದಲ್ಲಿ ನಾನೇ ನಿನ್ನ ಸಾವಿಗೆ ಕಾರಣಳಾಗುವೆ ಎಂದು ಭೀಷ್ಮನೆಡೆಗೆ ಕೋಪದಿಂದ ಗರ್ಜಿಸುತ್ತ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಹಾಗೆ ಆತ್ಮಾಹುತಿ ಮಾಡಿಕೊಂಡ ಅಂಬೆ ದ್ರುಪದನ ಮಗಳಾಗಿ ಜನಿಸುತ್ತಾಳೆ.ಆಕೆಯ ಹುಟ್ಟಿನ ಸಮಯದಲ್ಲಿ ಅಶರೀರ ವಾಣಿ ಯೊಂದು ಈಕೆಯ ಹಿನ್ನೆಲೆಯನ್ನು ತಂದೆ ದ್ರುಪದನಿಗೆ ತಿಳಿಸುತ್ತದೆ.

ಭೀಷ್ಮನಿಗೆದುರಾಗಿ

·         ಕಾರಣಕ್ಕೆ ಹೆಣ್ಣು ಮಗುವನ್ನು ಗಂಡಸಿನಂತೆ ಬೆಳೆಸುವಂತೆ ಸೂಚಿಸುತ್ತದೆ. ಹಾಗಾಗಿ ಶಿಖಂಡಿ ಹೆಣ್ಣಾದರೂ ಗಂಡಸಿನಂತೆ ಬೆಳೆಯುತ್ತದೆ. ಮುಂದೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಭೀಷ್ಮನಿಗೆದುರಾಗಿ ಶಿಖಂಡಿಯನ್ನೇ ತಂದು ನಿಲ್ಲಿಸುತ್ತಾನೆ. ಭೀಷ್ಮ ಹೆಣ್ಣಿನ ಎದುರು ಯುದ್ಧ ಮಾಡಲಾರೆ ಎಂದು ಶಸ್ತ್ರ ಕೆಳಗಿಡುತ್ತಾನೆ.

·         ಆಗ ಕೃಷ್ಣ ಅರ್ಜುನನಿಗೆ ಮೋಸದಿಂದ ಭೀಷ್ಮನೊಂದಿಗೆ ಹೋರಾಡುವಂತೆ ಪ್ರೆರೇಪಿಸಿ ಭೀಷ್ಮನನ್ನು ಹೊಡೆದುರುಳಿಸುತ್ತಾನೆ. ಹೀಗೆ ಭೀಷ್ಮನ ಸಾವಿಗೆ ಕಾರಣವಾಗುವುದರ ಮೂಲಕ ಅಂಬೆಯು ಶಿಖಂಡಿಯಾಗಿ ತನ್ನ ಶಪಥ ಪೂರೈಸಿಕೊಳ್ಳುತ್ತಾಳೆ. ಶಿಖಂಡಿ ಎಂದರೆ 'ಉಭಯ ಲಿಂಗಿ'ಗಳು ಎಂದು ಹೇಳಲಾಗುತ್ತದೆ.