Wednesday, 17 April 2019

ಆತ್ಮದೀಪ

ಮಣ್ಣಿನಿಂದ ಮಾಡಿದ ಸಣ್ಣದೊಂದು ಹಣತೆ ನಾನು
ನನಗಿಲ್ಲ ನನ್ನನ್ನು ಕುರಿತು ಎಳ್ಳಷ್ಟೂ ಪ್ರೀತಿ 
ಜಗತ್ತು ಎಲ್ಲಿಯವರೆಗೂ ಬಯಸುತ್ತದೋ ಜ್ಯೋತಿ
ನನ್ನಿಂದ, ಉರಿಯುತ್ತಾ  ಕೊಡಲು ಸಿದ್ಧನಾಗಿಹೆನು 

ಆದರೆ ನನ್ನ ಬೆಳಕಿನಿಂದ ಏನಾದರೂ 
ಕೋರೈಸಿದರೆ ನಿದ್ರಿಸಿದ ಜಗದ ಕಣ್ಣು 
ನಂದಿಸಿಬಿಡಲಿ ಬೇಕಾದರೆ ನನ್ನನ್ನು 
ನಂದಲು ನನ್ನದೇನೂ ಇಲ್ಲ ತಕರಾರು 

ತಿಳಿದುಕೊಳ್ಳಲಿ ಇಷ್ಟನ್ನು ಮಾತ್ರ ನನ್ನನ್ನು ಕುರಿತು ಜಗತ್ತು:
ಮಣ್ಣಿನ ದೀಪವಾದರೂ ನಾನು ಭಿನ್ನ 
ಪ್ರಕೃತಿಯು ಹಾಗೆ ಸೃಷ್ಟಿಸಿದೆ ನನ್ನನ್ನ 
ಜೀವಂತ ಹಣತೆಯು ನಾನು, ಅಭಿಮಾನ ನನ್ನಲ್ಲಿ ತುಂಬಿರುವುದು 

ನಂದಿಸಲು ನನ್ನನ್ನು ಕೈ ಮುಂದೆ ಮಾಡುವ ಮುನ್ನ 
ಯೋಚಿಸಲಿ ಜಗತ್ತು ಒಂದಲ್ಲ ಹತ್ತು ಸಲ 
ಪಶ್ಚಾತ್ತಾಪ ಪಡಬಾರದಲ್ಲ ಅನಂತರ 
ನಂದಿಸಿದ ನಂತರ ಹಚ್ಚಲಾಗದು ನನ್ನನ್ನು ಪುನಃ

ಯಲ್ಲಪ್ಪ ನಂದಿ.