Tuesday, 20 November 2018

ಕನಕದಾಸ ಜಯಂತಿ ನಿಮಿತ್ತ ವಿಶೇಷ ಲೇಖನ.

ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ನವೆಂಬರ್ 26 2018 ಕನಕ ಜಯಂತಿಯ ಅಂಗವಾಗಿ ಈ ವಿಶೇಷ ಲೇಖನ.

ಕನ್ನಡ ಸಾಹಿತ್ಯಕ್ಕೆ ತಮ್ಮದೆ ಕೀರ್ತನೆಗಳ ಮೂಲಕ ಅನರ್ಘ್ಯ ಕೊಡುಗೆಯನ್ನು ನೀಡಿದವರು ಹಾಗೂ ದಾಸ ಸಾಹಿತ್ಯದ ಶ್ರೇಷ್ಠದಾಸರಲ್ಲಿ ಒಬ್ಬರಾಗಿರುವ ಕನಕದಾಸರು ವಿಶ್ವಮಾನವರಾಗಿದ್ದಾರೆ. ಅವರ ಕೀರ್ತನೆಗಳು ಮನುಜ ಕುಲ ಸನ್ಮಾರ್ಗದತ್ತ ಕೊಂಡೊಯುವಂತದ್ದದ್ದು.

ಕರ್ನಾಟಕದಲ್ಲಿ 15 ಮತ್ತು 16ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು

"ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ" ಎಂಬ ಕಾವ್ಯ ಭಾವಾರ್ಥವು ಯುವಕರ ಮನ ಮಿಡಿಯುವುದು ಯುವಕರ ನಿಲುವನ್ನು ಅವರ ಗುರಿಯನ್ನು ದಾರಿಗೆ ಒಯ್ಯುವಂತೆ ಮಾಡಿದ ನಮ್ಮ ಶ್ರೇಷ್ಠ ಸಂತಕವಿ ಕನಕದಾಸರು.

ಈಗಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದ ಬೀರಪ್ಪ ಬಚ್ಚಮ್ಮ ದಂಪತಿಗಳ ಮಗ. ಇವರ ಪೂರ್ವದ ಹೆಸರು ತಿಮ್ಮಪ್ಪ ನಾಯಕ. ಬಾಡ ಗ್ರಾಮದಲ್ಲಿ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಠಾನ ಮಾಡಿ ದೇವಾಲಯವನ್ನು ಕಟ್ಟಿಸಿದರಂತೆ. ದಂಡನಾಯಕರಾಗಿದ್ದ ಕನಕದಾಸರಿಗೆ ಯುದ್ಧವೊಂದರಲ್ಲಿ ಸೋಲುಂಟಾಗಿ, ಜೀವನದಲ್ಲಿ ವೈರಾಗ್ಯ ಉಂಟಾಗಿ ವ್ಯಾಸರಾಯರಿಂದ ದೀಕ್ಷೆ ಪಡೆದು ಕನಕದಾಸರಾದರು.

ಪುರಂದರರ ಸಮಕಾಲೀನರು : ಕನಕದಾಸರು ಪುರಂದರದಾಸರ ಸಮಕಾಲಿನವರು, ಅದೇ ರೀತಿ ಸ್ವತಂತ್ರ ಕಾಂತಿವುಳ್ಳವರೂ, ಸಮಾಜ ಸುಧಾರಕರೂ, ವೈಚಾರಿಕ ಮನೋಧರ್ಮದವರಾಗಿದ್ದರು. ಇವರು ಕೀರ್ತನೆಗಳಲ್ಲದೆ ಅನೇಕ ಕಾವ್ಯಗಳಾದ "ಮೋಹನ ತರಂಗಿಣಿ", ಹರಿಭಕ್ತಸಾರ, ನಳಚರಿತ್ರೆ, 'ರಾಮಧ್ಯಾನ ಚರಿತ್ರೆ, ಮುಂತಾದವುಗಳನ್ನು ಅಲ್ಲದೇ ಅಲ್ಲಮನ ಬೆಡಗಿನ ವಚನಗಳಂತೆ ಮುಡಿಗೆಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅಪಾರವಾದ ವಿಶಿಷ್ಟ ಕೊಡುಗೆ ನೀಡಿದ್ದಾರೆ

ಕೃಷ್ಣನ ಭಕ್ತ : ಅನೇಕರ ನಂಬಿಕೆಯಂತೆ ಕನಕರು ಕೂಡ ಶ್ರೀಕೃಷ್ಣನ ಭಕ್ತರು. ಉಡುಪಿಯ ದೇವಾಲಯದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂಭಾಗದ ಸ್ಥಳದಲ್ಲಿ ನಿಂತು "ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ" ಎಂದೂ ಹಾಡತೊಡಗಿದರು. ಆಗ ಹಿಂಬಾಗದ ಗೋಡೆ ಬಿರುಕು ಒಡೆದು ಕೃಷ್ಣನ ವಿಗ್ರಹ ತಿರುಗಿತಂತೆ ಅವರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮನ ದರ್ಶನ ನೀಡಿರುವ ಕಿಂಡಿಯನ್ನು ಇಂದಿಗೂ 'ಕನಕನ ಕಿಂಡಿ' ಎಂದೆ ಪ್ರಸಿದ್ದಿ ಪಡೆದಿದೆ. ಅಂದು ಕಂಡಂತಹ ಉಡುಪಿಯ ಶ್ರೀಕೃಷ್ಣನ ದರ್ಶನವನ್ನು ಇಂದಿಗೂ ಕಾಣಬಹುದು.  ಯುವರಾಜ ನಂದಿ.

Thursday, 27 September 2018

ಭಗತ್ ಸಿಂಗ್ ರವರ ಬಗ್ಗೆ ಒಂದು ಪರಿಚಯ

 ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು
– ಭಗತ್ ಸಿಂಗ್ – 


ಸೆಪ್ಟಂಬರ್ 27, 1907ರಂದು ಈಗಿನ ಪಾಕಿಸ್ತಾನದ ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ ಭಗತ್ ಸಿಂಗ್ ರವರ ಜನನವಾಯಿತು. ಸ್ವಾತಂತ್ರ್ಯ ಚಳುವಳಿಯನ್ನು ನಡೆಸಿ ಯುವ ಜನತೆಗೆ ಪ್ರೀತಿ ಪಾತ್ರರಾಗಿದ್ದ ಭಗತ್ ಸಿಂಗ್ ರವರು ತನ್ನ 23ನೇ ವಯಸ್ಸಿನಲ್ಲಿ 1931ರ ಮಾಚರ್್ 23ರಂದು ಸಂಜೆ 7 ಗಂಟೆ 33 ನಿಮಿಷಗಳ ಸಮಯದಲ್ಲಿ ತನ್ನ ಇಬ್ಬರು ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ರವರ ಜೊತೆ ಬ್ರಿಟೀಷ್ರ ದುರಾಡಳಿತದ ಭಾಗವಾಗಿ ನೇಣಿಗೆ ಶರಣಾಗತಿಯಾದರು.

ವ್ಯಕ್ತಿಗಳನ್ನು ತುಳಿದು ಹಾಕುವುದರಿಂದ ಯಾರು ಅವರ ವಿಚಾರಗಳನ್ನು ಕೊಲ್ಲಲಾರರು.
1919ರ ಏಪ್ರಿಲ್ 13ರಂದು ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಬ್ರಿಟೀಷರ ಕ್ರೌರ್ಯದಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರನ್ನು ಹತ್ಯೆಗಯ್ಯಲಾಯಿತು. 1919ರ ಏಪ್ರಿಲ್ 20ರಂದು ಭಗತ್ ಸಿಂಗ್ ರು ಜಲಿಯನ್ ವಾಲಾಬಾಗ್ ಪ್ರದೇಶಕ್ಕೆ ಹೋಗಿ ಮೂಕ ಪ್ರೇಕ್ಷಕರಾಗಿ ಅತ್ತಿಂದಿತ್ತ ಓಡಾಡಿ ರಕ್ತಸಿಕ್ತವಾದ ಮಣ್ಣನ್ನು ತನ್ನ ಡಬ್ಬಿಯಲ್ಲಿ ಹಾಕಿಕೊಂಡರು. ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರಡು ಸಾವಿರ ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ. ಎಂಬ ಭಾವನೆ ಭಗತ್ ಸಿಂಗ್ ರ ಮನಸ್ಸಿನಲ್ಲಿ ಅಂದುಕೊಂಡರು.

ಸ್ವಾತಂತ್ರ್ಯ ಹೋರಾಟವನ್ನು ಸಂಘಟಿತಗೊಳಿಸಲು 1926ರ ಮಾರ್ಚ್ ನಲ್ಲಿ ನೌಜವಾನ್ ಭಾರತ್ ಸಭಾ ಎಂಬ ಸಂಘಟನೆಯನ್ನು ಪ್ರಪ್ರಥಮವಾಗಿ ರಚಿಸಿದಾಗ ರಾಮಕಿಶನ್ ಅಧ್ಯಕ್ಷರಾಗಿಯೂ ಭಗತ್ ಸಿಂಗ್ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು. ನಂತರ ದಿನಗಳಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲು, 1928ರ ಸೆಪ್ಟಂಬರ್ನಲ್ಲಿ ದೆಹಲಿಯ ಫಿರೋಜ್ಷಾ ಕೋಟ್ಲಾದಲ್ಲಿ ನಡೆದ ಸಭೆಯಲ್ಲಿ ಭಗತ್ ಸಿಂಗ್, ಸುಖದೇವ್, ಬಿಜೋಯ್ ಕುಮಾರ್ ಸಿನ್ಹ, ಬ್ರಹ್ಮದತ್, ಸುರೇಂದ್ರ ಪಾಂಡೆ, ಜತೀಂದ್ರನಾಥ್ ದಾಸ್, ಯಶ್ ಪಾಲ್, ಚಂದ್ರಶೇಖರ್ ಆಜಾದ್, ಮಹಾಬೀರ್ ಸಿಂಗ್, ಭಗವತಿ ಚರಣ್, ರಾಜಗುರು, ಸೋಹನ್ ಸಿಂಗ್ ಜೋಶ್ ಇತ್ಯಾದಿ ಪ್ರಮುಖರು ಅರವತ್ತು ಮಂದಿ ಭಾಗವಹಿಸಿದ್ದ ಈ ಸಭೆಯಲ್ಲಿ 5 ಮಂದಿ ಮಹಿಳೆಯರಿದ್ದರು. ಸಮಾವೇಶದ ಕಾರ್ಯದರ್ಶಿ ಭಗತ್ಸಿಂಗ್, ಅದಾಗಲೇ ಒಂದು ಸಾವಿರ ಸದಸ್ಯರು ಸಂಘಟನೆಯಲ್ಲಿದ್ದರು. ಹೋರಾಟದ ಮಾರ್ಗಸೂಚಿಯಾಗಿ ಸಂಘಟನೆಗೆ ಸಮಾಜವಾದಿ ತತ್ವದ ಆಧಾರವಿರಬೇಕೆಂಬ ಸಲಹೆಯನ್ನು ಭಗತ್ ಸಿಂಗ್ ಸಭೆಯ ಮುಂದಿಟ್ಟು ನಂತರ ಹಿಂದುಸ್ತಾನ್ ಸಮಾಜವಾದಿ ಗಣತಂತ್ರ ಎಂಬ ಹೆಸರನ್ನು ಪಡೆಯಿತು.

ಕಿವುಡರಿಗೆ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ನಾವು ಬ್ರಿಟೀಷ್ ಸರಕಾರಕ್ಕೆ ಬಾಂಬ್ ಹಾಕಿದ್ದೆವು – ಭಗತ್ ಸಿಂಗ್
1929ರ ಏಪ್ರಿಲ್ 8 ಅಂದಿನ ಬ್ರಿಟೀಷ್ ಸರಕಾರದ ಅಧಿಕಾರಾವಧಿಯಲ್ಲಿ ಕಾರ್ಮಿಕ ವಿವಾದಗಳ ಕಾಯಿದೆಯನ್ನು ಶಾಸನಸಭೆಯಲ್ಲಿ ಮಂಡಿಸಲು ನಿಗದಿಯಾಗಿದ್ದ ದಿನ. ಆ ದಿನದ ಆಯ್ಕೆ ಕೇವಲ ಆಕಸ್ಮಿಕವಲ್ಲ, ಭಾರತದ ಕಾರ್ಮಿಕ ವರ್ಗಕ್ಕೆ ಬಿಡಿಸಲಾಗದ ಕೈಕೋಳವನ್ನು ತೊಡಿಸಲು ಬ್ರಿಟೀಷ್ ಸರಕಾರ ಆ ದಿನವನ್ನು ಮೀಸಲಾಗಿರಿಸಿತ್ತು ಮತ್ತು ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯ ಯೋಜನೆಯ ಕಾರ್ಮಿಕ ವರ್ಗದ ಪರವಾರ ಪ್ರಬಲ ಕ್ರಮವಾಗಿತ್ತು. ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ತ್ ಇಬ್ಬರು ಅಂದು ಕಾಯಿದೆಯನ್ನು ವಿರೋಧಿಸಬೇಕು ಮತ್ತು ಕಾಯಿದೆಯಲ್ಲಿ ಅಡಕವಾಗಿರುವ ಕಾರ್ಮಿಕ ವಿರೋಧಿ ಅಂಶವನ್ನು ಜನತೆಗೆ ತಿಳಿಸಬೇಕೆಂಬ ಸಂಘಟನೆಯ ಸಭೆಯ ತೀರ್ಮಾನದಂತೆ ಅಂದಿನ ಅಸೆಂಬ್ಲಿ ಹಾಲ್ನಲ್ಲಿ ಬಾಂಬು ಎಸೆದು ಗದ್ದಲ ಎಬ್ಬಿಸಿ ಬಂಧಿತರಾದರು ಮತ್ತು ಇಂಕ್ವಿಲಾಬ್ ಜಿಂದಾಬಾದ್ ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ ಎಂಬ ಘೋಷಣೆಯನ್ನು ಕೂಗಿದರು. ಎರಡು ವರ್ಷಗಳ ಜೈಲುವಾಸ, ಜೈಲಿನಲ್ಲೂ ಮತ್ತು ಹೊರಗೂ ದೊಡ್ಡ ಮಟ್ಟದಲ್ಲಿ ಚಳುವಳಿಗಳು ನಡೆದವು ಜೈಲಿನಲ್ಲೂ ಭಗತ್ಸಿಂಗ್ ಮತ್ತು ಸಂಗಾತಿಗಳು ಉಪವಾಸ ಸಹ ನಡೆಸಿದರು. ಎರಡು ವರ್ಷಗಳ ನ್ಯಾಯಾಲಯದಲ್ಲಿ ವಿಚಾರಣೆಯ ನಂತರ 1930ರ ಅಕ್ಟೋಬರ್ 7ರಂದು ತೀರ್ಪನ್ನು ಪ್ರಕಟಿಸಿ 1931ರ ಮಾಚರ್್ 23ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಮೂವರನ್ನು ಗಲ್ಲಿಗೇರಿಸಲಾಯಿತು.

Wednesday, 5 September 2018

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು.

ಜೀವನದಲ್ಲಿ ಜ್ಞಾನದ ಬೆಳಕು ಚೆಲ್ಲಿದ ಗುರುವನ್ನು ನೆನೆಯುವ ದಿನ ಇಂದು ಶಿಕ್ಷಕರ ದಿನ.
ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ಹೊಡೆದೋಡಿಸಿವಿದ್ಯೆಯೆಂಬ ಸುಜ್ಞಾನದ ಬೆಳಕನ್ನು  ತರುವ ಶ್ರೇಷ್ಠ ವ್ಯಕ್ತಿಯೇ ಗುರು.

ಗುರುವಿನ ಸ್ಥಾನದಲ್ಲಿ ತಂದೆ-ತಾಯಿಗಳು, ಶಿಕ್ಷಕರು, ಹಿರಿಯರು, ಹಿತೈಷಿಗಳು, ಸ್ನೇಹಿತರು ಮುಂತಾದವರು ನಿಲ್ಲುತ್ತಾರೆ. ಹೆಚ್ಚಾಗಿ ಗುರು ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ವಿದ್ಯಾದಾನದ ಮೂಲಕ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ, ಸಮಾಜಕ್ಕೆ ಹಾಗೂ ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ಕೊಡುಗೆ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಹಾಗೂ ಅಧ್ಯಾಪಕ ವರ್ಗದವರು. ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಜಗತ್ತು ಕಂಡ ಸರ್ವಶ್ರೇಷ್ಠ ಶಿಕ್ಷಕ, ಶಿಕ್ಷಕ ವೃತ್ತಿಯನ್ನು ತನ್ನ ಜೀವನಾಡಿಯೆಂದು ಭಾವಿಸಿದ್ದಂತಹ ಮಹಾನ್ ಪುರುಷ, ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ರಾಷ್ಟ್ರದೆಲ್ಲೆಡೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ.
ಜ್ಞಾನಾರ್ಜನೆ ಮತ್ತು ಜ್ಞಾನಬೋಧನೆ ತನ್ನ ಎರಡು ಕಣ್ಣುಗಳಂತೆ ಎಂದು ತಿಳಿದು ಜೀವನವಿಡೀ ಬೋಧನೆಗೆ ಹಾಗೂ ಈ ಮೂಲಕ ಸಮಾಜದ ಬದಲಾವಣೆಗೆ ತನ್ನ ತನು-ಮನವನ್ನು ಮೀಸಲಾಗಿಟ್ಟಿದ್ದ ಸರ್ವಪಲ್ಲಿ ರಾಧಾಕೃಷ್ಣನ್‍ರವರು ಜನಿಸಿದ್ದು 1888 ಸೆಪ್ಟೆಂಬರ್ 5 ರಂದು ತಮಿಳುನಾಡಿನ ತಿರುತ್ತಣಿಯಲ್ಲಿ.  ಚಿಕ್ಕ ವಯಸ್ಸಿನಿಂದಲೂ ಪುಸ್ತಕಗಳನ್ನು ಓದುವ ಗೀಳು ಹೆಚ್ಚಾಗಿದ್ದ ಇವರಿಗೆ ತದನಂತರದ ದಿನಗಳಲ್ಲಿ ತತ್ವಶಾಸ್ತ್ರ ಅಚ್ಚುಮೆಚ್ಚಿನ ಹಾಗೂ ಆಸಕ್ತಿಯ ವಿಷಯವಾಗಿ ಹೊರಹೊಮ್ಮಿತು. ಅವರು ತತ್ವಶಾಸ್ತ್ರ ಬೋಧನೆ ಮಾಡುವ ಸಮಯದಲ್ಲಿ ಇಡೀ ತರಗತಿಯೇ ನಿಶ್ಶಬ್ಧತೆಯಿಂದ ಇರುತ್ತಿತ್ತು. ಅಷ್ಟರಮಟ್ಟಿಗೆ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರ ಬೋಧನೆಯನ್ನು ಬಹಳ ಇಷ್ಟಪಟ್ಟು ಆಲಿಸುತ್ತಿದ್ದರು. ರಾಧಾಕೃಷ್ಣನ್‍ರವರು ಬೋಧಿಸುತ್ತಿದ್ದ ತರಗತಿಗಳಲ್ಲಿ ಬೇರೆ ತರಗತಿಗಳ ವಿದ್ಯಾರ್ಥಿಗಳೂ ಕೂಡ ಬಂದು ಕುಳಿತು ಬೋಧನೆಯನ್ನು ಕೇಳುತ್ತಿದ್ದರು.


ಬೋಧಿಸುವ ಸಮಯದಲ್ಲಿ ತತ್ವಶಾಸ್ತ್ರ ವಿಷಯಗಳನ್ನು ಅಚ್ಚುಕಟ್ಟಾಗಿ, ಸ್ವಾರಸ್ಯಕರವಾಗಿ ಮನಮುಟ್ಟುವಂತೆ ಹೇಳುತ್ತಿದ್ದರು. ರಾಧಾಕೃಷ್ಣನ್‍ರವರ ಬೋಧನಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತುಂಬಿ ತುಳುಕುತ್ತಿತ್ತು. ಅಷ್ಟರಮಟ್ಟಿಗೆ ತಮ್ಮ ಪಾಂಡಿತ್ಯ, ಹಾವ-ಭಾವದಿಂದ ವಿದ್ಯಾರ್ಥಿಗಳ ಪ್ರೀತಿಯ ಹಾಗೂ ನೆಚ್ಚಿನ ಶಿಕ್ಷಕರಾಗಿದ್ದರು. ಆದರ್ಶ ಹಾಗೂ ಅತ್ಯುತ್ತಮ ಶಿಕ್ಷಕನ ಹೆಗ್ಗುರುತು ಮತ್ತು ಮಾದರಿಯಾಗಿದ್ದವರು ರಾಧಾಕೃಷ್ಣನ್‍ರವರು. ಸಾಧನೆಗೆ ಅಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದನ್ನು ಎಲ್ಲಾ ಸಾಧಕರು ಹಾಗೂ ಸಾಧನೆಯ ಹಾದಿಯಲ್ಲಿರುವವರು ಖಡಾಖಂಡಿತವಾಗಿ ಒಪ್ಪಿಕೊಳ್ಳುತ್ತಾರೆ.  ಆದರೆ, ಸಾಧನೆ ಮಾಡಲು ಉತ್ತಮ ಮಾರ್ಗದರ್ಶಕ ಹಾಗೂ ಸೂಕ್ತ ಮಾರ್ಗದರ್ಶನ ಬೇಕಲ್ಲವೆ..? ಅಂತಹ ಮಾರ್ಗದರ್ಶಕರ ಮುಂಚೂಣಿ ಸ್ಥಾನದಲ್ಲಿ ನೆಲೆಸಿರುವವರೇ ಗುರು.
ಅದಕ್ಕಾಗಿ ಅಲ್ಲವೆ ಸಾಧನೆ ಮಾಡಲು ನಿಶ್ಚಯಿಸಿರುವವನಿಗೆ ಹಿಂದೆ ಗುರು ಮುಂದೆ ಗುರಿ ಇರಬೇಕೆಂದು ತಿಳಿದವರು ನುಡಿದಿರುವುದು. ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನಾದರೂ ಸಾಧಿಸಲು ಹೊರಟವನ ಪ್ರಯತ್ನ ಬರೀ ವ್ಯರ್ಥ ಪ್ರಯತ್ನವೇ ಸರಿ. ಹಾಗಾಗಿಯೇ ಅಲ್ಲವೇ, ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ನುಡಿದಿರುವುದು.


ಶಿಕ್ಷಕ ಎಂಬ ಪವಾಡ ಪುರುಷನ ಹಾಗೂ ಅವನ ಮಹಿಮೆಯನ್ನು ಆದಿಗುರು ಶಂಕರಾಚಾರ್ಯರು ತಮ್ಮ ಸ್ತೋತ್ರದ ಮೂಲಕ ಹೀಗೆ ಬಣ್ಣಿಸುತ್ತಾರೆ.
ಗುರುಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರ
ಗುರುಸ್ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ ||
ಗುರುವನ್ನು ಕೇವಲ ಒಬ್ಬ ವ್ಯಕ್ತಿಯನ್ನಾಗಿ ನೋಡದೆ, ಶಕ್ತಿಯಾಗಿ ನೋಡಿದಲ್ಲಿ ಅವನ ನಿಜವಾದ ಅಂತಃಶಕ್ತಿ ಅನಾವರಣಗೊಳ್ಳುತ್ತದೆ. ಅವನಲ್ಲಿರುವ ವಾತ್ಸಲ್ಯ, ಪ್ರೀತಿ, ತ್ಯಾಗ, ಚೈತನ್ಯದಂತಹ ವ್ಯಕ್ತಿತ್ವಗಳಿಗೆ ಅವನಿಗವನೇ ಸಾಟಿ. ಹಾಗಾಗಿಯೇ ಉಪನಿಷತ್ತಿನಲ್ಲಿ ಗು ಎಂದರೆ ಕತ್ತಲು, ರು ಎಂದರೆ ಹೋಗಲಾಡಿಸುವವನು ಎಂದು ಅದ್ಭುತವಾಗಿ ವರ್ಣಿಸಲಾಗಿದೆ. ನನ್ನ ಪ್ರೀತಿಯ ಶಿಕ್ಷಕ ವೃಂದದವರಿಗೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು.

Thursday, 23 August 2018


List Of All Important Toll-Free Numbers in India

100 Police (पुलिस)
101 Fire (फायर)
102 Ambulance (एम्बुलेंस)
103 Traffic Police (ट्रैफिक पुलिस)
1031 Anti Corruption Helpline
+91-9540161344 Air Ambulance (एयर एम्बुलेंस)
1033 Emergency Relief Centre on National Highways
104 State Level helpline for Health
104 Hospital On Wheels
1066 Anti-Poison
1070 Central Relief Commissioner for Natural Calamities
1070 Relief Commissioners of Central/State/Union territory
1071 Air Accident (एयर एक्सीडेंट)
1072 Train accident (ट्रेन एक्सीडेंट)
1073 Road Accident (रोड एक्सीडेंट)
1073 Traffic Help Line (ट्रैफिक हेल्प लाइन)
1077 Control room of District Collector/Magistrate
108 Disaster management
1090 Anti terror Helpline/Alert All India
1091 Women in Distress
1092 Earth-quake Help line service
1096 Natural Disaster Control Room
1097 AIDS Helpline
1097 AIDS Helpline Service
1098 Child Abuse Hotline
1099 Central Accident and Trauma Services
1099 Catastrophe & Trauma Service
112 General emergency Department of Telecommunications (DoT)
112 All in one Emergency Number
1251 LIC Of India
12727 Public Grievance Cell Telecom Circle HQs
1320, 131, 1321 Indian Railway General Enquiry
1322 For any theft or harassment, nuisance caused due to smoking or alcohol consumption on train
1322 Indian Railway Security Helpline
133 Railway Helpline for Arrival/Departure and Reservation services
139 Railway Enquiry
1407 Indian Airlines
1414 Air India ( Confirmation / Cancellation Enquiry)(Called Party)
1500 for any queries related to landline telephone, ISDN etc. Also accessible from CellOne, Excel & Tarang phones
1512 Indian Railway
1551 Kisan Call Center (किसान कॉल सेंटर)
155200 Military Police HelpLine
155233 Indian Oil Help Line
155255 / 1800 4254732 Insurance Regulatory and Development Authority (IRDA)
155313 Water Board (वाटर बोर्ड)
155333 Electricity Complaints
1580 Trunk Booking
1581 Trunk Assistance
1582 STD Complaints
1583 National Directory Enquiry (NDQ) Service
1586 International Trunk Booking
1587 International Trunk Enquiry
1588 International Trunk Delay Information
1589 Telex complaints
1600 Free Phone Enquiry
1602 India Telephone Card Enquiry
166 / 1660-69 Billing complaint center
1671-73 Billing Complaint Center
1717 Weather Enquiry
1718 Maritime Search and Rescue control room of coastal guard
1800-11-0031 Drug de-addiction
1800-11-4000 National Consumer Helpline
1800-11-7800 MyGov Toll Free Number for MannKiBaat for ideas and Suggestions
1800-111-139 IRCTC Help Line
1800-180-1104 National Health Helpline
1800-180-5522 Anti Ragging-Emails at helpline@antiragging.in
1800-3000-780 Mann Ki Baat on the toll-free number
181 Domestic abuse and sexual violence-Women’s Helpline
1904 Indian Army Help Line
1906 LPG Emergency Helpline Number
1910 Blood bank Information
1911 Dial a doctor
1913 Tourist Office (Govt.of India)
1916 Water Supply Complain
1918 Leased Circuits Fault Booking
1919 Eye Donation
1919 Eye bank information service
1947 Aadhar Card-UIDAI (Unique Idenditification authority of India), 1800-180-1947
1950 Election Commission of India
1951 Change Number Announcement (Hindi)
1952 Changed Number Announcement (English)
1953 Changed Number Announcement (Regional language)
1954 Changed Number Announcement (in case of shift)
1957 Sancharnet Internet Help Desk Service
1958 Leased Circuit Fault Booking (WTR)
1961 Aaykar Sampark Kendra (ASK)
197 Directory Enquiry Service
198 Telephone Complaint Booking
List Of Airlines Toll-Free Numbers (एयरलाइन्स का Toll-Free Numbers)
Indian Airlines (इंडियन एयरलाइन्स) >> 1800 180 1407
Jet Airways (जेट एयरवेज) >> 1800 225 522
Spice Jet (स्पाइस जेट) >> 1800 180 3333
Air India (एयर इंडिया) >> 1800 227 722
Kingfisher (किंगफ़िशर) >> 1800 180 0101
List Of Banks Toll-Free Numbers (बैंक का Toll-Free Numbers)

ABN AMRO (ए बी एन अमरो) >> 1800 112 224
Canara Bank (कैनरा बैंक) >> 1800 446 000
Citibank (सिटी बैंक) >> 1800 442 265
Corporation Bank (कॉर्पोरेशन बैंक) >> 1800 443 555
Development Credit Bank (डेवेलपमेंट क्रेडिट बैंक) >> 1800 225 769
HDFC Bank (एच डी एफ सी बैंक) >> 1800 227 227
ICICI Bank (आई सी आई सी आई बैंक) >> 1800 333 499
ICICI Bank NRI (आई सी आई सी आई बैंक एन आर आई) >> 1800 224 848
IDBI Bank (आई डी बी आई बैंक) >> 1800 116 999
Indian Bank (इंडियन बैंक) >> 1800 425 1400
ING Vysya (आई एन जी वयस्य) >> 1800 449 900
Kotak Mahindra Bank (कोटक महिन्द्रा बैंक) >> 1800 226 022
Lord Krishna Bank (लार्ड कृष्णा बैंक) >> 1800 112 300
Punjab National Bank (पंजाब नेशनल बैंक) >> 1800 122 222
State Bank of India (भारतीय स्टेट बैंक) >> 1800 441 955
Syndicate Bank (सिंडिकेट बैंक) >> 1800 446 655
Union Bank Of India (यूनियन बैंक ऑफ़ इंडिया) >> 1800 222 244
List Of Automobiles Toll-Free Numbers (ऑटोमोबाइल का Toll-Free Numbers)
Mahindra Scorpio (महिन्द्रा स्कॉर्पियो) >> 800 226 006
Maruti (मारुती) >> 1800 111 515
Tata Motors (टाटा मोटर्स) >> 1800 255 52
Windshield Experts (विंडशील्ड एक्सपर्ट्स) >> 1800 113 636
List Of Computers / IT Toll-Free Numbers (कंप्यूटर / आई टी का Toll-Free Numbers)
Adrenalin (एड्रेनैलिन) >> 1800 444 445
AMD (ए एम डी) >> 1800 425 6664
Apple Computers (एप्पल कंप्यूटर) >> 1800 444 683
Canon (कैनन) >> 1800 333 366
Cisco Systems (सिस्को सिस्टम्स) >> 1800 221 777
HP (एच पी) >> 1800 444 999
Data One Broadband (डाटा वन ब्रॉडबैंड) >> 1800 424 1800
Dell (डैल) >> 1800 444 026
Epson (एप्सन) >> 1800 44 0011
eSys (इसिस) >> 3970 0011
HCL (एच सी एल) >> 1800 180 8080
IBM (आई बी एम) >> 1800 443 333
Lexmark (लेक्समार्क) >> 1800 22 4477
Marshal's Point (मार्शल'स पॉइंट) >> 1800 33 4488
Microsoft (माइक्रोसॉफ्ट) >> 1800 111 100
TVS Electronics (टी भी एस इलेक्ट्रॉनिक) >> 1800 444 566
Wipro (विप्रो) >> 1800 333 312
Xerox (ज़ेरॉक्स) >> 1800 180 1225
Zenith (जेनिथ) >> 1800 222 004
List Of Indian Railways Toll-Free Numbers (इंडियन रेलवे का Toll-Free Numbers)
General Enquiry (सामान्य पूछताछ) >> 139
Central Enquiry (केन्द्रीय पूछताछ) >> 131
Reservation (आरक्षण) >> 139
Railway Reservation Enquiry (रेलवे आरक्षण पूछताछ) >> 1345, 1335, 1330
List Of Indian Railways Toll-Free Numbers (इंडियन रेलवे का Toll-Free Numbers)
General Enquiry (सामान्य पूछताछ) >> 139
Central Enquiry (केन्द्रीय पूछताछ) >> 131
Reservation (आरक्षण) >> 139
Railway Reservation Enquiry (रेलवे आरक्षण पूछताछ) >> 1345, 1335, 1330
List Of Couriers / Packers & Movers Toll-Free Numbers (कूरियर/पैकर & मूवर्स का Toll-Free Numbers)
ABT Courier (ए बी टी कूरियर) >> 1800 448 585
DHL (डी एच एल) >> 1800 111 345
FedEx (फेड एक्स) >> 1800 226 161
Goel Packers & Movers (गोएल पैकर्स & मूवर्स) >> 1800 113 456
UPS (यु पि एस) >> 1800 227 171
List Of Home Appliances Toll-Free Numbers (घरेलु उपकरणों का Toll-Free Numbers)
Aiwa/Sony (एवा/सोनी) >> 1800 111 188
Anchor Switches (एंकर स्विच) >> 1800 227 7979
Blue Star (ब्लू स्टार) >> 1800 222 200
Bose Audio (बोस ऑडियो) >> 112 673
Daikin Air Conditioners (दैकिन एयर कंडीशनर) >> 1800 444 222
DishTV (डिश टी वी) >> 1800 123 474
Faber Chimneys (फेबर चिमनी) >> 1800 214 595
Godrej (गोदरेज) >> 1800 225 511
LG (एल जी) >> 1901 180 9999
Philips (फिलिप्स) >> 1800 224 422
Toshiba (तोशिबा) >> 1800 200 8674
Samsung (सैमसंग) >> 1800 113 444
Sanyo (संयो) >> 1800 110 101
Voltas (वोल्टास) >> 1800 334 546
List Of Investments / Finance Toll-Free Numbers (निवेश/वित् का Toll-Free Numbers)
CAMS (सी ए एम एस) >> 1800 442 267
Easy IPO's (इजी आई पी ओ'स) >> 3030 5757
J M Morgan Stanley (जे एम मॉर्गन स्टैनले) >> 1800 220 004
Kotak Mutual Fund (कोटक म्यूच्यूअल फण्ड) >> 1800 222 626
LIC Housing Finance (एल आई सी हाउसिंग फाइनेंस) >> 1800 440 005
SBI Mutual Fund (एस बी आई म्यूच्यूअल फण्ड) >> 1800 223 040
Sharekhan (शरेखन) >> 1800 227 500
Tata Mutual Fund (टाटा म्यूच्यूअल फण्ड) >> 1800 220 101
List Of Leisure Travels Toll-Free Numbers (अवकाश यात्रा का Toll-Free Numbers)
Club Mahindra Holidays (क्लब महिंद्रा हॉलीडेज) >> 1800 334 539
Cox & Kings (कॉक्स & किंग्स) >> 1800 221 235
God TV Tours (गॉड टी वी टूर्स) >> 1800 442 777
Kerala Tourism (केरला टूरिज्म) >> 1800 444 747
Kumarakom Lake Resort (कुमारकोम लेक रिसोर्ट) >> 1800 445 030
Darjeeling Tours (दार्जीलिंग टूर्स) >> 09733306673
Raj Travels & Tours (राज ट्रेवल्स & टूर्स) >> 1800 229 900
Sita Tours (सीता टूर्स) >> 1800 111 911

List Of Healthcare Toll-Free Numbers ( स्वास्थ्या का Toll-Free Numbers)
Best on Health (बेस्ट ऑफ़ हेल्थ) >> 1800 11 8899
Dr Batras (डॉ बत्रा'स)1800 11 6767
Johnson & Johnson (जॉनसन & जॉनसन) >> 1800 22 8111
Kaya Skin Clinic (काया स्किन क्लिनिक) >> 1800 22 5292
LifeCell (लाइफ सेल) >> 1800 44 5323
Rudraksha (रुद्राक्ष) >> 1800 21 4708
List Of Insurance Toll-Free Numbers (बिमा का Toll-Free Numbers)
AMP Sanmar (ए एम पी सन्मार) >> 1800 44 2200
Aviva (अविवा) >> 1800 33 2244
Bajaj Allianz (बजाज एलियांज) >> 1800 22 5858
ICICI Lombard (आई सी आई सी आई लोमबार्ड) >> 18002666
List Of All DTH and Dish Toll-Free Numbers (सभी DTH और Dish Toll-Free Numbers)
Airtel (एयरटेल) >> 18001028080 (एयरटेल यूजर >> 12150)
Tata Sky (टाटा स्काई) >> 18001806633,
Reliance (रिलायंस) >> 18002009001,
D2H (डी 2 एच) >> 18001370111,
Dish TV (डिश टी वी) >> 18001801

Thursday, 12 July 2018

ಪ್ರಥಮಗಳಿಗೆಲ್ಲಾ ಪ್ರಥಮರು ಭಾರತೀಯರು…



ಯಲ್ಲಪ್ಪ ನಂದಿ 

ಇತ್ತೀಚೆಗೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣವೊಂದರಲ್ಲಿ “ಭಾರತೀಯರಿಗೆಲ್ಲಾ ಒಂದು ರೀತಿಯ ಒಣ ಜಂಭ.ಜಗತ್ತಿನ ಅನೇಕ ಪ್ರಮುಖ ಅನ್ವೇಷಣೆಗಳನ್ನು ತಾವೇ ಮಾಡಿದ್ದೇವೆ.ಆ ಮೂಲಕ ಪ್ರಪಂಚದ ಅನೇಕ ವಿಷಯಗಳಿಗೆ, ಪ್ರಥಮ ಘಟನೆಗಳಿಗೆಲ್ಲಾ ತಾವೇ ಪ್ರಥಮರು ಎಂದು ಕೊಚ್ಚಿಕೊಳ್ಳುತ್ತಾರೆ. ಇಂದಿನ ವಿಮಾನಕ್ಕೂ ರಾಮಾಯಣದ ಪುಷ್ಪಕ ವಿಮಾನಕ್ಕೂ ನಂಟು ಕಲ್ಪಿಸುತ್ತಾರೆ. ರಾಮಸೇತುವೆಯ ಮೂಲಕ ಜಗತ್ತಿನ ಅತೀ ಉದ್ದದ ಸೇತುವೆಯನ್ನು ಮೊದಲಿಗೆ ತಾವೇ ನಿರ್ಮಿಸಿದ್ದು ಎನ್ನುತ್ತಾರೆ.ಎಲ್ಲವೂ ಅರ್ಥವಿಲ್ಲದ ಮಾತುಗಳು.ಒಟ್ಟಿನಲ್ಲಿ ಭಾರತೀಯರಿಗೆ ಜಗತ್ತಿನ ಎಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುವ ಹುಚ್ಚು” ಎಂದು ಬರೆದಿದ್ದರು. ಆದರೆ ಆ ರೀತಿ ಬರೆದವರಿಗೆ ಯಾವ ಪ್ರಚಾರವೂ ಸಿಗಲಿಲ್ಲ. ಹಾಗಾದರೆ ಭಾರತೀಯರು ಪ್ರಥಮಗಳಿಗೆಲ್ಲಾ ಪ್ರಥಮರು ಹೌದೇ,ಅಥವಾ ಸುಮ್ಮನೇ ಅರ್ಥವಿಲ್ಲದೇ ಹೇಳುತ್ತಾರೆಯೇ ಎಂದು ನಾವು ತಿಳಿದುಕೊಳ್ಳಬೇಕಿದೆ.
ಇತ್ತೀಚೆಗಷ್ಟೇ ಶ್ರೀರಾಮನ ಹುಟ್ಟಿದ ದಿನಾಂಕವನ್ನು ಖಚಿತವಾಗಿ ನಿರ್ಧರಿಸಿದ್ದಾರೆ. ಕ್ರಿ.ಪೂ. ಜನವರಿ 10-5114 ರಂದು ಶ್ರೀರಾಮ ಜನಿಸಿದ ಎಂಬುದಕ್ಕೆ ಆಧಾರಗಳಿವೆ.ಅಲ್ಲದೇ ರಾಮಾಯಣ ನಡೆದದ್ದು ನಿಜ ಎಂಬುದಕ್ಕೂ ಅನೇಕ ಅಧಾರಗಳು ಸಿಕ್ಕಿದೆ. ಅಮೇರಿಕಾದ ‘ನಾಸಾ’ ಕೂಡ ಲಂಕೆಗೆ ನಿರ್ಮಿಸಲಾಗಿರುವ ರಾಮಸೇತುವಿನ ದೃಶ್ಯವನ್ನು ಅನೇಕ ಬಾರಿ ಉಪಗ್ರಹದಿಂದ ಸೆರೆಹಿಡಿದು ಕೊಟ್ಟಿದೆ.ಇದೆಲ್ಲವೂ ನಿಜ ಎಂದಾದರೆ ರಾಮಸೇತುವನ್ನು ನಿರ್ಮಿಸಿದ್ದು ಭಾರತೀಯರೇ ಎಂದಾಯಿತಲ್ಲವೇ. ರಾಮಾಯಣ ಕಾಲದ ನಲ ಮತ್ತು ನೀಲ ಜಗತ್ತು ಕಂಡ ಮೊದಲ ಇಂಜಿನಿಯರ್ ಗಳೆಂದು ಸಾಬೀತಾಯಿತಲ್ಲವೇ. ಆ ಕಾಲದಲ್ಲೇ ಒಂದು ಸಾವಿರ ಯೋಜನಗಳಷ್ಟು ದೂರ ಸೇತುವೆ ನಿರ್ಮಿಸಿದದ್ದರಿಂದ ಜಗತ್ತಿನ ಅತೀ ಉದ್ದದ ಸೇತುವೆಯನ್ನು ಮೊದಲು ಭಾರತೀಯರು ಕಟ್ಟಿದ್ದು ಎಂದು ನಾವೆಲ್ಲಾ ಹೆಮ್ಮೆಪಡಬೇಕು ತಾನೆ.ರೈಟ್ ಸಹೋದರರು ಬಹಳ ಕಷ್ಟಪಟ್ಟು ವಿಮಾನವನ್ನು ಕಂಡುಹಿಡಿದು ನವಯುಗಕ್ಕೆ ನಾಂದಿ ಹಾಡಿದರು ಎಂದು ಅನೇಕರು ಹೇಳುತ್ತಾರೆ. ಹಾಗಾದರೆ ರಾಮಾಯಣದ ಪುಷ್ಪಕ ವಿಮಾನ ಯಾವ ರೀತಿಯದು?ಎಷ್ಟು ದೂರಕ್ಕೆ ಬೇಕಾದರೂ ಹಾರಬಲ್ಲ,ಎಷ್ಟು ಜನರನ್ನು ಬೇಕಾದರೂ ಹೊತ್ತೊಯ್ಯಬಲ್ಲ ಶಕ್ತಿ ಇದ್ದಂತಹ ಹಾರುವ ಹಕ್ಕಿಯನ್ನು ತ್ರೇತಾಯುಗದ ಕಾಲದಲ್ಲೇ ಭಾರತೀಯರು ಹೊಂದಿದ್ದರು. ಯಾವುದೇ ವಿಜ್ಞಾನದ ಹಿನ್ನಲೆ ಇಲ್ಲದೇ ಹಾರುವ ವಾಹನವನ್ನು ನಿರ್ಮಿಸುವುದು ಅಸಾಧ್ಯ.ಹಾಗಾದರೆ ವಿಮಾನವನ್ನು ನಿರ್ಮಿಸುವಷ್ಟು ಬುದ್ಧಿವಂತಿಕೆ ಭಾರತೀಯರಲ್ಲಿ ಬಹಳ ಮೊದಲೇ ಇತ್ತು ಎಂದು ಎಲ್ಲರೂ ಒಪ್ಪಿಕೊಳ್ಳಬೇಕಲ್ಲವೇ. ಪುರಾಣ ಕಾಲದ ವಾಸ್ತುಶಿಲ್ಪಿ ‘ಮಯ’. ಈತ ನಾಗರೀಕತೆಗಳು ಸರಿಯಾಗಿ ಬೆಳೆಯುವುದಕ್ಕೂ ಬಹಳ ಮೊದಲೇ ಸುಂದರವಾದ ದೇಗುಲಗಳನ್ನು,ಕಟ್ಟಡಗಳನ್ನು ಕಟ್ಟಿದ್ದ. ಹಾಗಾಗಿ ಮಯ ಜಗತ್ತಿನ ಮೊದಲ ವಾಸ್ತುಶಿಲ್ಪಿ ಎಂದು ಒಪ್ಪಿಕೊಳ್ಳಬೇಕಲ್ಲವೇ.
ಗೆಲೆಲಿಯೋ,ಅರಿಸ್ಟಾಟಲ್.ಸಾಕ್ರೆಟಿಸ್ ಇವರನ್ನೆಲ್ಲಾ ಜಗತ್ತಿನ ಶ್ರೇಷ್ಟ ಜ್ಯೋತಿಷ್ಯತಜ್ಞರು,ಗಣಿತಜ್ಞರು,ಖಗೋಳ ಶಾಸ್ತ್ರಜ್ಞರು,ತತ್ವಜ್ಞಾನಿಗಳು ಎಂದೆಲ್ಲಾ ಜನರು ಕರೆಯುತ್ತಾರೆ. ಹಾಗಾದರೆ ಭಾಸ್ಕರಾಚಾರ್ಯರು,ಆರ್ಯಭಟ ಇವರೆಲ್ಲಾ ಯಾರು.ಆರ್ಯಭಟ ಮತ್ತು ಭಾಸ್ಕರಾಚಾರ್ಯರು ಗೆಲೆಲಿಯೋ, ಅರಿಸ್ಟಾಟಲ್, ಸಾಕ್ರೆಟಿಸ್ ಇವರಿಗಿಂತಲೂ ಎಷ್ಟೋ ಮೊದಲೇ ಈ ಭೂಮಿಯಲ್ಲಿ ಬದುಕಿ ಬಾಳಿದವರು. ಗೆಲೆಲಿಯೋ ಟೆಲಿಸ್ಕೋಪ್ ನೋಡಿ ಗ್ರಹಗಳ ಚಲನೆಯನ್ನು, ಗ್ರಹಣಕಾಲವನ್ನು, ಹವಾಮಾನವನ್ನು ನಿರ್ಧರಿಸುತ್ತಿದ್ದರೆ, ಭಾಸ್ಕರಾಚಾರ್ಯರು ಕೇವಲ ತಮ್ಮ ಜ್ಞಾನದಿಂದಲೇ ಗ್ರಹಗತಿಗಳನ್ನು ತಿಳಿಯುತ್ತಿದ್ದರು.ಅಲ್ಲದೇ ಗ್ರಹಗತಿಗಳನ್ನು, ಗ್ರಹಣದ ಸಮಯವನ್ನು ನಿಖರವಾಗಿ ತಿಳಿಸುವಂಥ ಯಂತ್ರವೊಂದನ್ನು ಸಹ ಭಾಸ್ಕರಾಚಾರ್ಯರು ತಯಾರಿಸಿದ್ದರು. ಗಣಿತದಲ್ಲಿಯೂ ಪರಿಣತರಾಗಿದ್ದ ಆಚಾರ್ಯರು ಭೂಮಿಯಿಂದ ಸೌರಮಂಡಲಕ್ಕಿರುವ ದೂರವನ್ನು,ಮತ್ತು ಇನ್ನೂ ಅನೇಕ ಸಮಸ್ಯೆಗಳನ್ನೂ ತಮ್ಮ ಗಣಿತದ ಜ್ಞಾನವನ್ನು ಉಪಯೋಗಿಸಿಕೊಂಡು ಪರಿಹರಿಸುತ್ತಿದ್ದರು.ಅಲ್ಲದೇ ಜ್ಯೋತಿಷ್ಯದಲ್ಲಿ ಅಪ್ರತಿಮ ಪರಿಣತಿಯನ್ನು ಸಾಧಿಸಿ,ಎಂಟನೇ ಶತಮಾನದಲ್ಲೇ ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ‘ಲೀಲಾವತಿ’ ‘ಸಿದ್ಧಾಂತ ಶಿರೋಮಣಿ’ ‘ಬೀಜಗಣಿತ‘ ಮುಂತಾದ ಅಮೂಲ್ಯ ಗ್ರಂಥಗಳನ್ನು ಬರೆದಿದ್ದರು. ಈ ಜಗತ್ತಿನಲ್ಲಿ ಎಲ್ಲವೂ ಶೂನ್ಯದಿಂದ ಆರಂಭವಾಗಿ ಶೂನ್ಯದಲ್ಲೇ ಅಂತ್ಯವಾಗುತ್ತದೆ ಎಂದು ಅನೇಕ ತತ್ವಶಾಸ್ತ್ರಜ್ಞರು ಹೇಳುತ್ತಾರೆ.ವಿದೇಶಿಯರಿಗೆ ಶೂನ್ಯ ಎಂದರೆ ಏನು ಎಂದೇ ಗೊತ್ತಿರಲಿಲ್ಲ.ಹಾಗಿದ್ದಾಗ ಆರ್ಯಭಟ ಮೊಟ್ಟಮೊದಲ ಬಾರಿಗೆ ಸೊನ್ನೆಯನ್ನು ಪರಿಚಯಿಸಿ ಗಣಿತಶಾಸ್ತ್ರದ ಬೆಳವಣಿಗೆಗೆ ಕಾರಣನಾದ ಮಹಾನ್ ಪುರುಷನಾದ. ಗೆಲೆಲಿಯೋಗಿಂತಲೂ ಮೊದಲೇ ಆರ್ಯಭಟ ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತಲೇ ಸ್ಥಿರವಾಗಿರುವ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲ ಬಾರಿಗೆ ಹೇಳಿದ್ದ.ಇದನ್ನು ಅರ್ಥಮಾಡಿಕೊಳ್ಳಲು ನಂತರ ಬಂದ ವಿಜ್ಞಾನಿಗಳಿಗೆ ಶತಮಾನಗಳೇ ಬೇಕಾದವು. ಬೆಳಕನ್ನು ಪ್ರತಿಫಲಿಸುವ ಶಕ್ತಿ ಚಂದ್ರನಿಗಿದೆ,ಎಲ್ಲಾ ಗ್ರಹಗಳಿಗೂ ಉಪಗ್ರಹಗಳಿವೆ ಎಂಬಂತಹ ಮಹತ್ವದ ಸಂಗತಿಗಳನ್ನು ಮೊದಲಿಗೆ ಜಗತ್ತಿಗೆ ತಿಳಿಸಿದವನು ಆರ್ಯಭಟ.ಹಾಗಿದ್ದರೆ ಖಗೋಳ ಶಾಸ್ತ್ರದಲ್ಲೂ ನಾವೇ ಮೊದಲಿಗರು ಎಂದಾಯಿತಲ್ಲ.
ಇಂದು ಮಕ್ಕಳಿಲ್ಲದವರಿಗೆ ಪ್ರನಾಳ ಶಿಶು(ಟೆಸ್ಟ್ ಟ್ಯೂಬ್ ಬೇಬಿ) ವರದಾನವಾಗಿ ಪರಿಣಮಿಸಿದೆ. ಎಷ್ಟೋ ಜನರು ಈ ವಿಧಾನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ.ಆದರೆ ಇದರ ಇತಿಹಾಸವನ್ನು ನಾವು ಗಮನಿಸಬೇಕು.ಮಹಾಭಾರತ ಕಾಲದಲ್ಲಿ ಗರ್ಭಿಣಿಯಾಗಿದ್ದ ಗಾಂಧಾರಿ ತನಗೆ ಎಷ್ಟು ತಿಂಗಳುಗಳು ಕಳೆದರೂ ಪ್ರಸವವಾಗದೇ ಇದ್ದುದ್ದರಿಂದ ಹತಾಶಗೊಂಡು ತನ್ನ ಹೊಟ್ಟೆಯನ್ನು ಒಡೆದುಕೊಂಡು ಗರ್ಭವನ್ನು ಹೊರಗೆ ಬಿಸಾಕುತ್ತಾಳೆ. ಇದನ್ನು ನೋಡಿದ ವೇದವ್ಯಾಸರು ತುಂಡು ತುಂಡಾಗಿ ಬಿದ್ದಿದ್ದ ಪಿಂಡವನ್ನು ಮಡಕೆಯಲ್ಲಿಟ್ಟು ಅದಕ್ಕೆ ತಕ್ಕ ಪೋಷಕಾಂಶಗಳನ್ನು ಕೊಟ್ಟು ಬೆಳೆಸುತ್ತಾರೆ. ಇದರಿಂದ ಕೌರವರು ಜನಿಸುತ್ತಾರೆ. ಹಾಗಾದರೆ ಜೀವವನ್ನು ಗರ್ಭದ ಹೊರಗೂ ಬೆಳೆಸುವ ವಿದ್ಯೆ ಭಾರತೀಯರಿಗೆ ಮಹಾಭಾರತ ಕಾಲದಲ್ಲೇ ತಿಳಿದಿತ್ತು ತಾನೆ.ಇನ್ನು ಆಧುನಿಕ ವಿಜ್ಞಾನ ಬೆಳೆದ ಬಳಿಕ ಭಾರತದ ಕೋಲ್ಕತ್ತಾದ ವೈದ್ಯರಾದ ಡಾ.ಸುಭಾಶ್ ಮುಖೋಪಾದ್ಯಾಯ 1997ರಲ್ಲೇ ಪ್ರನಾಳ ಶಿಶು ವಿಧಾನದಲ್ಲಿ ಪರಿಣತಿಯನ್ನು ಸಾಧಿಸಿರುತ್ತಾರೆ. ಆದರೆ ಅವರು ತಮ್ಮ ಬೇಗ ತೀರಿಹೋಗಿದ್ದರಿಂದ ಪ್ರನಾಳಶಿಶು ವಿಧಾನದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದ ಇಬ್ಬರು ಬ್ರಿಟನ್ ವೈದ್ಯರು ನೋಬೆಲ್ ಪ್ರಶಸ್ತಿ ಪಡೆಯುತ್ತಾರೆ.ಇನ್ನು ಯಾವ ರೀತಿಯಿಂದ ನೋಡಿದರೂ ಭಾರತದ ಸುಶೃತ ಜಗತ್ತಿನ ಮೊದಲ ಶಸ್ತ್ರಚಿಕಿತ್ಸಕ.ಈಗಿನ ವೈದ್ಯರು ಕಷ್ಟದಿಂದ ಮಾಡುವ ಪ್ಲಾಸ್ಟೀಕ್ ಸರ್ಜರಿಗಳನ್ನು ಸಹ ಸುಶೃತ ಮಾಡುತ್ತಿದ್ದ.ಚರಕ ‘ಚರಕ ಸಂಹಿತೆ’ ಬರೆಯುವ ಮೂಲಕ ಭಾರತದ ವದ್ಯಕೀಯ ಪಿತಾಮಹನಾದ.ಅಲ್ಲದೇ ಸತ್ತವನನ್ನೂ ಬದುಕಿಸುವಂತಹ ಸಂಜೀವಿನಿಯನ್ನು ಹೊಂದಿದ್ದಂತಹ ಆಯುರ್ವೇದ ಸಂಪತ್ತು ಭಾರತದಲ್ಲಿತ್ತು.
ಮಹಾಯುದ್ಧದ ಕಾಲದಲ್ಲಿ ಹಿರೋಶಿಮಾ,ನಾಗಸಾಕಿಗಳ ಮೇಲೆ ಅಣುಬಾಂಬ್ ಪ್ರಯೋಗ ಮಾಡಿ ಲಕ್ಷಾಂತರ ಜೀವರಾಶಿಗಳನ್ನು ಕೊಲ್ಲಲಾಯಿತು.ಆದರೆ ಅಣುಬಾಂಬ್ ಗೆ ಸಮನಾದ ಒಂದು ಅಸ್ತ್ರವನ್ನು ಭಾರತೀಯರು ಪುರಾಣಕಾಲದಲ್ಲೇ ಹೊಂದಿದ್ದರು.ಅದುವೇ ‘ಬ್ರಹ್ಮಾಸ್ತ್ರ’.ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಾಗ ಭೂಮಿ ನಡುಗುತ್ತಿತ್ತು.ನದಿ ಸಮುದ್ರಗಳೆಲ್ಲ ಉಕ್ಕಿ ಹರಿಯುತ್ತಿದ್ದವು.ಬಿರುಗಾಳಿ ಬೀಸಿ ಅನೇಕ ಜೀವ ರಾಶಿಗಳು ಕ್ಷೋಭೆಗೊಳ್ಳುತ್ತಿದ್ದವು.ಒಂದು ರೀತಿಯಲ್ಲಿ ನೋಡುವುದಾದರೆ ಅಣುಬಾಂಬ್ ಗಿಂತಲೂ ಭೀಕರವಾದ ಪರಿಣಾಮವನ್ನು ಬ್ರಹ್ಮಾಸ್ತ್ರ ಉಂಟು ಮಾಡುತ್ತಿತ್ತು.ರಾಜಕೀಯದಲ್ಲೂ ಭಾರತೀಯರೇ ಮುಂದು.ಶ್ರೀಕೃಷ್ಣ ಈ ಭೂಮಂಡಲದ ಮೊದಲ ರಾಜಕಾರಣಿ.ಕೌರವರೊಂದಿಗೆ ಸಂಧಿಗೆ ಹೋಗುವುದು,ನ್ಯಾಯದ ಪರ ನಿಂತು ಪಾಂಡವರಿಗೆ ಸಹಾಯ ಮಾಡಿದ್ದು,ಧರ್ಮರಾಯನಿಗೆ ಮಾರ್ಗದರ್ಶನ ಮಾಡಿದ್ದು,ಅನೇಕ ಸಲ ಪಲಾಯನವಾದವನ್ನು ಅನುಸರಿಸಿದ್ದು ಎಲ್ಲವೂ ಆತ ಎಷ್ಟು ದೊಡ್ಡ ರಾಜಕಾರಣಿಯಾಗಿದ್ದ ಎಂಬುದಕ್ಕೆ ನಿದರ್ಶನಗಳು.
ಹಣವನ್ನು ಯಾವಮಾರ್ಗದಿಂದಾದರೂ ಸಂಪಾದಿಸಬಹುದು,ಹೇಗೆ ಬೇಕಾದರೂ ಖರ್ಚು ಮಾಡಬಹುದು ಎಂದು ಅನೇಕರು ತಿಳಿದುಕೊಂಡಿದ್ದ ಸಮಯದಲ್ಲಿ ‘ಅರ್ಥಶಾಸ್ತ್ರ’ವನ್ನು ಬರೆದು ಜನರಿಗೆ ಮಾರ್ಗದರ್ಶನ ಮಾಡಿ,ಹೊಸ ಅರ್ಥವ್ಯವಸ್ಥೆಗೆ ನಾಂದಿ ಹಾಡಿದವನು ಭಾರತದ ಕೌಟಿಲ್ಯ. ಹಾಗಾಗಿ ಕೌಟಿಲ್ಯ ಜಗತ್ತಿನ ಮೊದಲ ಅರ್ಥಶಾಸ್ತ್ರಜ್ಞ.ಇನ್ನು ಲೈಂಗಿಕತೆಯಲ್ಲೂ ಭಾರತೀಯರೇ ಮುಂದು.ಕಾಮವನ್ನು ಯಾವಾಗ,ಹೇಗೆ ಬೇಕಾದರೂ ಅನುಭವಿಸಬಹುದು ಎಂದು ಜನರು ತಿಳಿದಿದ್ದ ಕಾಲದಲ್ಲಿ ಮನುಷ್ಯರು ಪ್ರಾಣಿಗಳಂತೆ ವರ್ತಿಸಬಾರದು,ಲೈಂಗಿಕ ಕ್ರಿಯೆಗೂ ಒಂದು ರೀತಿ, ನೀತಿ ಇದೆ.ಕ್ರಮಗಳಿವೆ ಎಂದು ಜಗತ್ತಿಗೆ ಮೊಟ್ಟಮೊದಲ ಬಾರಿಗೆ ತಿಳಿಸಿ ಭಾರತದ ವಾತ್ಸಾಯನ ‘ಕಾಮಸೂತ್ರ’ ಪುಸ್ತಕವನ್ನು ಬರೆದ. ಹಾಗಾಗಿಯೇ ಭಾರತದಲ್ಲಿ ವಿದೇಶಗಳಂತೆ ಮುಕ್ತ ಲೈಂಗಿಕತೆಯಿಲ್ಲದೇ ಕಾಮವು ನಾಲ್ಕು ಗೋಡೆಗಳ ಒಳಗೆ ಸೀಮಿತವಾಗಿದೆ.
ಆದರೆ ಇದು ಯಾವುದೂ ಇಂದಿನ ತಲೆಮಾರಿನ ಅನೇಕರಿಗೆ ಗೊತ್ತಿಲ್ಲ. ಭಾರತವೆಂದರೆ ಈಗಲೂ ಹಿಂದುಳಿದ ದೇಶವೆಂದೇ ಅನೇಕರು ಭಾವಿಸಿಕೊಂಡಿದ್ದಾರೆ. ಇಡೀ ಜಗತ್ತನ್ನು ಉಳಿಸಬಲ್ಲ ಅನೇಕ ಸಾಧನೆಗಳಿಗೆ ಬಹಳ ಹಿಂದೆಯೇ ನಾವು ಕಾರಣವಾಗಿದ್ದೇವೆ ಎಂದು ಅನೇಕರಿಗೆ ತಿಳಿದಿಲ್ಲ. ಅನೇಕ ಭಾರತೀಯರು ವಿದೇಶಿಯರು ಹೇಳಿದ್ದನ್ನೇ ನಂಬಿಕೊಂಡು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಬಹಳ ಹಿಂದೆಯೇ ನಾವು ಪ್ರಭುತ್ವ ಸಾಧಿಸಿದ್ದ ಜ್ಯೋತಿಷ್ಯ,ಖಗೋಳಶಾಸ್ತ್ರ, ವೇದಗಣಿತ, ಆಯುರ್ವೇದ ಗಳನ್ನು ಇಂದಿನ ಮಕ್ಕಳಿಗೆ ಶಾಲಾ ಹಂತದಿಂದಲೇ ಕಲಿಸಿಕೊಡುವಂತಾದರೆ ಪ್ರಥಮಗಳಿಗೆಲ್ಲಾ ಪ್ರಥಮರಾದವರು ನಾವು ಎಂಬ ಹೆಮ್ಮೆ ನಮ್ಮಲ್ಲಿ ಮೂಡಿ ಭಾರತ ಜಗದ್ಗುರುವಾಗುತ್ತದೆ.ವಿಜ್ಞಾನ-ಧರ್ಮ-ಇತಿಹಾಸ ಇವು ಮೂರೂ ಒಟ್ಟಿಗೆ ಬೆರೆತು ಕೆಲಸ ಮಾಡಿದಾಗಲೇ ಒಂದು ದೇಶದ ಅಭಿವೃದ್ಧಿ ಸಾಧ್ಯ.ವಿವೇಕಾನಂದರು ಹೇಳಿದಂತೆ “ಯಾರು ಇತಿಹಾಸವನ್ನು ತಿಳಿದಿರುವುದಿಲ್ಲವೋ ಅವರು ಇತಿಹಾಸವನ್ನು ಸೃಷ್ಟಿಸಲಾರರು” ಎಂಬುದನ್ನು ನೆನಪಿಟ್ಟುಕೊಂಡು ಅಭಿವೃದ್ಧಿಯತ್ತ ಸಾಗಿ ಭಾರತೀಯರಾದ ನಾವು ಜಗತ್ತಿನ ಇನ್ನೂ ಅನೇಕ ಪ್ರಥಮಗಳಿಗೆ ಪ್ರಥಮರಾಗೋಣ.


Thursday, 7 June 2018

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. 

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಕನ್ನಡಿಗರು





ಕುವೆಂಪು
೧೯೬೭ - ಶ್ರೀ ರಾಮಾಯಣ ದರ್ಶನಂ


ದ. ರಾ. ಬೇಂದ್ರೆ
೧೯೭೩ - ನಾಕುತಂತಿ


ಶಿವರಾಮ ಕಾರಂತ
೧೯೭೭ - ಮೂಕಜ್ಜಿಯ ಕನಸುಗಳು


ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೯೮೩ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.


ವಿ. ಕೃ. ಗೋಕಾಕ
೧೯೯೦ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ


ಯು. ಆರ್. ಅನಂತಮೂರ್ತಿ
೧೯೯೪ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.


ಗಿರೀಶ್ ಕಾರ್ನಾಡ್
೧೯೯೮ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು


ಚಂದ್ರಶೇಖರ ಕಂಬಾರ
೨೦೧೦ - ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

ರಾಮಾಯಣ

ರಾಮಾಯಣ

ರಾಮಾಯಣ ಹಿಂದೂಗಳ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಋಷಿಯಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯ ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು.
ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ ೫ನೇ ಶತಮಾನದಿಂದ ಕ್ರಿ.ಪೂ ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಆದರೆ ಬೇರೆ ಪೌರಾಣಿಕಗಳಂತೆ ಈ ಕಾವ್ಯವೂ ಅನೇಕ ಮಾರ್ಪಾಡುಗಳಿಗೆ ಒಳಗಾಗಿರುವುದರಿಂದ ಇದರ ನಿಖರವಾದ ಕಾಲ ಊಹಿಸುವುದು ಕಷ್ಟವಾಗಿದೆ.
ರಾಮಾಯಣವು ನಂತರದ ಸಂಸ್ಕೃತ ಕಾವ್ಯದ ಮೇಲೆ ಶ್ಲೋಕದ ಹೊಸ ಛಂದಸ್ಸಿನಿಂದಾಗಿ ಬಹುಮುಖ್ಯ ಪ್ರಭಾವ ಬೀರಿದೆ. ಇದು ಪುರಾತನ ಹಿಂದೂ ಋಷಿಗಳ ಬೋಧನೆಗಳನ್ನು ಕಥಾಮಾಧ್ಯಮದ ಮೂಲಕ, ಹಾಗೂ ತಾತ್ವಿಕ ಮತ್ತು ಭಕ್ತಿಸಂಬಂಧಿತ ಚರ್ಚಾಭಾಗಗಳ ಮೂಲಕ ಒಳಗೊಂಡಿದೆ. ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಮತ್ತು ಕಥೆಯ ಖಳನಾಯಕನಾದ ರಾವಣ ಈ ಎಲ್ಲ ಪಾತ್ರಗಳು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ.
ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು. ಪ್ರಭಾವಗೊಂಡ ಪ್ರಮುಖರೆಂದರೆ, ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು(ರಾಮಾಯಣ ದರ್ಶನಂ).
ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ಎಂಟನೆ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ದಕ್ಷಿಣಪೂರ್ವ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಈ ಪ್ರದೇಶದಲ್ಲಿ ಖ್ಮೇರ್, ಮಜಪಾಹಿತ್, ಶೈಲೇಂದ್ರ, ಚಂಪಾ, ಶ್ರೀವಿಜಯ ಮೊದಲಾದ ಕೆಲವು ಮುಖ್ಯ ಭಾರತೀಯ ಸಾಮ್ರಾಜ್ಯಗಳು ಸ್ಥಾಪಿಸಲ್ಪಟ್ಟವು. ಇವುಗಳ ಮೂಲಕ ರಾಮಾಯಣ ಇಂಡೊನೇಷ್ಯಾ (ಜಾವಾ, ಸುಮಾತ್ರಾ ಮತ್ತು ಬೋರ್ನಿಯೊ), ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಯಿತು.

ರಾಮಾಯಣದ ರಚನೆ

ರಾಮಾಯಣಗಳಲ್ಲೆಲ್ಲ ಹಳೆಯದೂ ಹೆಚ್ಚು ಜನರು ಓದುವಂಥದೂ ಆದ ವಾಲ್ಮೀಕಿಯ 'ರಾಮಾಯಣ'ವು ಅನೇಕ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿರುವ ಅನೇಕ ರಾಮಾಯಣದ ಆವೃತ್ತಿಗಳಿಗೆ ಆಧಾರವಾಗಿದೆ. ಈ ಕೃತಿಯು ಅನೇಕ ಪೂರ್ಣ ಮತ್ತು ಅಪೂರ್ಣ ಹಸ್ತಪ್ರತಿಗಳಲ್ಲಿ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ಅತ್ಯಂತ ಹಳೆಯದು ೧೧ನೆಯ ಶತಮಾನದ್ದು. ವಾಲ್ಮೀಕಿ ರಾಮಾಯಣದ ಪ್ರಸ್ತುತ ಪ್ರತಿಯು ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಎರಡು ಪ್ರಾದೇಶಿಕ ಆವೃತ್ತಿಗಳ ರೂಪದಲ್ಲಿ ನಮಗೆ ಲಭ್ಯವಾಗಿದೆ . ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳು ಕಾಂಡಗಳಾಗಿ ವಿಭಜಿಸಲಾಗುತ್ತದೆ .
ವಾಲ್ಮೀಕಿ ರಾಮಾಯಣದ ಮೊದಲ ಮತ್ತು ಕಡೆಯ ಕಾಂಡಗಳನ್ನು ವಾಲ್ಮೀಕಿಯೇ ಬರೆದಿರುವದರ ಬಗ್ಗೆ ಸಂದೇಹಗಳಿವೆ . ಈ ಎರಡು ಅಧ್ಯಾಯಗಳು ಮತ್ತು ಉಳಿದ ಭಾಗದ ನಡುವೆ ಶೈಲಿಯಲ್ಲಿ ವ್ಯತ್ಯಾಸ ಮತ್ತು ಕಥೆಯಲ್ಲಿ ಅನೇಕ ವಿರೋಧಾಭಾಸಗಳಿದ್ದರೂ ಈ ಎರಡು ಅಧ್ಯಾಯಗಳು ಕೃತಿಯ ಬೇರ್ಪಡಿಸಲಾಗದ ಅಂಗ ಎಂದು ಅನೇಕ ತಜ್ಞರ ಅಭಿಪ್ರಾಯವಾಗಿದೆ. ರಾಮಾಯಣದಲ್ಲಿ ಕಂಡುಬರುವ ರಾಮನ ಜನ್ಮ, ಅವನ ದೈವೀ ಅಂಶ ಮತ್ತು ರಾವಣನನ್ನು ಕುರಿತಾದ ದಂತಕಥೆಗಳಂಥ ಅನೇಕ ಪೌರಾಣಿಕ ಅಂಶಗಳ ಬಹುಭಾಗ ಈ ಎರಡು ಅಧ್ಯಾಯಗಳಲ್ಲೇ ಕಂಡುಬರುತ್ತದೆ .

ರಾಮಾಯಣದ ಮುಖ್ಯ ಪಾತ್ರಗಳು

ಸಾರಾಂಶ


ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ, ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು.

ರಾಮನ ಯೌವನ

ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮನು ರಾಕ್ಷಸರರ ರಾಜ ರಾವಣನ ಘೋರ ತಪಸ್ಸಿಗೆ ಮೆಚ್ಚಿ ಅವನನ್ನು ದೇವತೆಗಳು, ರಾಕ್ಷಸರು, ಅಥವಾ ಯಕ್ಷಕಿನ್ನರರು ಕೊಲ್ಲಲಾಗದೆಂಬ ವರವನ್ನು ಕೊಟ್ಟಿದ್ದನು .ಅದನ್ನು ಅವನು ಹಿಂತೆಗೆದುಕೊಳ್ಳುವದು ಸಾಧ್ಯವಿರಲಿಲ್ಲ. ಅಂಥ ವರವನ್ನು ಪಡೆದು ರಾವಣನು ತನ್ನ ಸಹಚರ ರಾಕ್ಷಸರೊಡಗೂಡಿ ಭೂಸಂಹಾರಕ್ಕೆ ತೊಡಗಿ , ಶಿಷ್ಟಜನರಿಗೆ ಅದರಲ್ಲೂ ಬ್ರಾಹ್ಮಣರಿಗೆ ಅವರ ಜಪತಪಗಳಿಗೆ ಉಪದ್ರವ ಕೊಡಲಾರಂಭಿಸಿದನು . ಇದನ್ನು ನೋಡಿ ಎಲ್ಲ ದೇವತೆಗಳು ಭೂಮಿಯನ್ನೂ ತಮ್ಮನ್ನು ಈ ದುಷ್ಟನಿಂದ ಕಾಪಾಡು ಎಂದು ಬ್ರಹ್ಮನ ಮೊರೆ ಹೊಕ್ಕರು . ಬ್ರಹ್ಮನು ವಿಷ್ಣುವಿನ ಬಳಿಸಾರಿ ದೇವತೆಗಳ ಚಿಂತೆಯನ್ನು ಅರುಹಿ , ರಾವಣನು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಮರಣಹೊಂದದ ವರವನ್ನು ಪಡೆದಿಲ್ಲದಿರುವದರಿಂದ ವಿಷ್ಣುವೇ ಮಾನವನಾಗಿ ಅವತಾರವೆತ್ತಿ ರಾವಣನನ್ನು ಸಂಹರಿಸಬೇಕೆಂದು ಕೇಳಿಕೊಂಡನು.

ಈ ಮಧ್ಯೆ ಕೋಸಲವನ್ನು ಆಳುತ್ತಿದ್ದ ಅಯೋಧ್ಯೆಯ ರಾಜ ದಶರಥನಿಗೆ ಮಕ್ಕಳಿಲ್ಲದ್ದರಿಂದ ತನ್ನ ಉತ್ತರಾಧಿಕಾರಿಯ ಬಗ್ಗೆ ಚಿಂತೆಯಲ್ಲಿದ್ದನು . ಮಂತ್ರಿಗಳು ಹಾಗೂ ಪುರೋಹಿತರ ಸಲಹೆಯ ಮೇರೆಗೆ ಪುತ್ರಸಂತಾನಕ್ಕಾಆಗಿ ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದನು. ವಿಷ್ಣು ದಶರಥನ ಜ್ಯೇಷ್ಠ ಪುತ್ರನಾಗಿ ಜನಿಸಲು ನಿರ್ಧರಿಸಿ ದೈವೀ ಪುರುಷನೊಬ್ಬನನ್ನು ಯಜ್ಞಕುಂಡದಲ್ಲಿ ಹುಟ್ಟುವಂತೆ ಮಾಡಿದನು. ಈ ದೈವೀ ಪುರುಷ ದಶರಥನಿಗೆ ಅಮೃತವಿದ್ದ ಚಿನ್ನದ ಕಲಶವೊಂದನ್ನು ನೀಡಿ ತನ್ನ ರಾಣಿಯರಿಗೆ ಅದನ್ನು ನೀಡುವಂತೆ ಹೇಳಿದನು. ದಶರಥನು ಅದನ್ನು ತನ್ನ ಮೂವರು ರಾ‍ಣಿಯರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಇವರ ನಡುವೆ ಹಂಚಿದನು. ಕಾಲಕ್ರಮೇಣ ಅವರು ಗರ್ಭಿಣಿಯರಾಗಿ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ರಾಣಿ ಕೌಸಲ್ಯೆಗೆ ಹಿರಿಯ ಮಗನಾಗಿ ರಾಮನೂ , ಕೈಕೇಯಿಗೆ ಭರತನೂ ಮತ್ತು ಲಕ್ಷ್ಮಣ ಮತ್ತು ಶತ್ರುಘ್ನರು ಸುಮಿತ್ರೆಗೂ ಜನಿಸಿದರು.
ಈ ಬಾಲಕರು ವಸಿಷ್ಠರಿಂದ ಶಾಸ್ತ್ರಗಳನ್ನೂ ಬಿಲ್ಲುವಿದ್ಯೆಯನ್ನೂ ಕಲಿಯುತ್ತ ಬೆಳೆದರು. ಒಂದು ದಿನ ವಿಶ್ವಾಮಿತ್ರರು ರಾಜ್ಯಕ್ಕೆ ಬಂದು ದಶರಥನಲ್ಲಿ ತಮ್ಮ ಯಜ್ಞಯಾಗಾದಿಗಳಿಗೆ ಭಂಗತರುತ್ತಿರುವ ರಾಕ್ಷಸರಿಂದ ತಮ್ಮನ್ನು ಕಾಪಾಡಲು ರಾಮನನ್ನು ಕಳಿಸಬೇಕೆಂದು ಕೋರಿದರು. ಒಲ್ಲದ ಮನ್ಸಸ್ಸಿನಿಂದ ವಿಶ್ವಾಮಿತ್ರರೊಡನೆ ರಾಮಲಕ್ಷ್ಮಣರನ್ನು ಕಳಿಸಿಕೊಡಲು ಅವನು ಒಪ್ಪಿದನು. ಈ ಸೋದರರು ತಮ್ಮ ಕರ್ತವ್ಯವನ್ನು ಪೂರೈಸಲು ವಿಶ್ವಾಮಿತ್ರನು ಸಂತೋಷಪಟ್ಟು ಅವರಿಗೆ ಅನೇಕ ದಿವ್ಯಾಸ್ತ್ರಗಳನ್ನು ಅನುಗ್ರಹಿಸಿದನು.
ವಿಶ್ವಾಮಿತ್ರರೊಡನೆಯ ಪ್ರಯಾಣದ ಕೊನೆಯಲ್ಲಿ ರಾಮನು ಮಿಥಿಲಾ ರಾಜ್ಯಕ್ಕೆ ಬಂದನು. ಅಲ್ಲಿ ಜನಕ ಮಹಾರಾಜನು ತನ್ನ ಮಗಳು ಅಪ್ರತಿಮ ಸುಂದರಿ ಸೀತೆಯನ್ನು ತನ್ನ ಆಸ್ಥಾನದಲ್ಲಿದ್ದ ಶಿವನ ಬಹಳ ಬಲಿಷ್ಠವಾದ ಧನುಸ್ಸನ್ನು ಹೆದೆಯೀರಿಸಿದವನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲಿರುವದನ್ನು ಅರಿತನು. ಅನೇಕ ವಿವಾಹೇಚ್ಛುಗಳು ಪ್ರಯತ್ನಿಸಿ ಸೋತಿದ್ದ ಈ ಕಾರ್ಯವನ್ನು ಸಾಧಿಸಲು ರಾಮನು ನಿಶ್ಚಯಿಸಿದನು. ಅವನು ಜನಕನ ಆಸ್ಥಾನಕ್ಕೆ ಬಂದಾಗ ಜನಕನು ಅವನ ಲಾವಣ್ಯಕ್ಕೆ ಮಾರುಹೋದನು. ಐದು ಸಾವಿರ ಜನರು ಆ ಬಿಲ್ಲನ್ನು ಎಂಟು ಗಾಲಿಗಳ ರಥದಲ್ಲಿ ಆಸ್ಥಾನಕ್ಕೆ ಎಳೆದು ತಂದರು. ರಾಮನು ಬಹಳ ಸುಲಭವಾಗಿ ಅದನ್ನು ಮುರಿಯುವಷ್ಟು ಬಗ್ಗಿಸಿದನು. ಜನಕನು ಸಂತಸದಿಂದ ತನ್ನ ಲಾವಣ್ಯವತಿ ಮಗಳನ್ನು ರಾಮನಿಗೆ ಮದುವೆ ಮಾಡಿಕೊಟ್ಟನು. ಭವ್ಯವದ ಮದುವೆ ಸಮಾರಂಭದ ನಂತರ ನವಜೋಡಿಯು ಅಯೋಧ್ಯೆಗೆ ಪ್ರಯಾಣ ಬೆಳೆಸಿತು.

ರಾಮನ ವನವಾಸ

ರಾಜ ದಶರಥನು ತನ್ನ ಹಿರಿಯ ಮಗ ಹಾಗೂ ಪದ್ಧತಿಯಂತೆ ಉತ್ತರಾಧಿಕಾರಿಯಾದ ರಾಮನನ್ನು ಯುವರಾಜನನ್ನಾಗಿ ಮಾಡಲು ನಿರ್ಧರಿಸಿದನು. ಅವನ ಪ್ರಜೆಗಳು ಈ ಘೋಷಣೆಯನ್ನು ಸಂತಸದಿಂದ ಸ್ವಾಗತಿಸಿದರು. ಇಡೀ ನಗರವು ಈ ಸಂಬಂಧದ ಉತ್ಸವವನ್ನೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳಲ್ಲಿ ತೊಡಗಿತು. ದಶರಥನು ಈ ಆಚರಣೆಗಳ ಸಂಬಂಧ ಚರ್ಚಿಸಲು ತನ್ನ ಪತ್ನಿ ಕೈಕೇಯಿ ಇದ್ದಲ್ಲಿಗೆ ಹೋದನು. ಆದರೆ ದುಷ್ಟದಾಸಿಯಾದ ಮಂಥರೆಯಿಂದ ದುರ್ಬೋಧನೆಗೊಳಗಾಗಿ 'ಯುವರಾಜನಾಗುತ್ತಿರುವದು ಪ್ರವಾಸದಲ್ಲಿರುವ ತನ್ನ ಮಗ ಭರತನಲ್ಲ, ಆದರೆ ಕೌಸಲ್ಯೆಯ ಮಗ ರಾಮ' ಎಂದು ಅಸೂಯೆಪಟ್ಟು ದುಃಖಿಸಿದಳು. ದಶರಥನು ಬಂದಾಗ ಅವಳು ಅಂತಃಪುರದಲ್ಲಿ ಕಣ್ಣೀರುಗರೆಯುತ್ತಿದ್ದಳು. ಚಿಂತಿತನಾದ ದಶರಥನ ಪ್ರಶ್ನೆಗಳಿಗೆ ಉತ್ತರವಾಗಿ ಕೈಕೇಯಿ, ಅನೇಕ ವರ್ಷಗಳ ಹಿಂದೆ ದಶರಥ ತನಗಿತ್ತಿದ್ದ ಎರಡು ವರಗಳನ್ನು ನೆನಪಿಸಿದಳು. ಈ ವರಗಳನ್ನು ಪೂರೈಸಿದರೆ ಪ್ರಸನ್ನಳಾಗುವುದಾಗಿ ಹೇಳಿದಳು. ಇದಕ್ಕೆ ಪೂರಕವಾಗಿ ಅವಳು, ಮೊದಲನೆಯದಾಗಿ, ತನ್ನ ಮಗ ಭರತನನ್ನು ಯುವರಾಜನಾಗಿ ನೇಮಿಸಬೇಕೆಂದೂ, ಎರಡನೆಯದಾಗಿ, ರಾಮನನ್ನು ಹದಿನಾಲ್ಕು ವರ್ಷಕಾಲ ಘೋರವಾದ ದಂಡಕಾರಣ್ಯಕ್ಕೆ ವನವಾಸಕ್ಕೆ ಕಳಿಸಬೇಕೆಂದೂ ಕೇಳಿದಳು. ದುಃಖಿತನಾದ ದಶರಥ, ಆದಾಗ್ಯೂ ತನ್ನ ವಚನವನ್ನು ಪರಿಪಾಲಿಸಿಕೊಳ್ಳಲು ನಿರ್ಧರಿಸಿದನು. ಆದರ್ಶ ಪುತ್ರನಾದ ರಾಮ, ಸಿಂಹಾಸನದ ಮೇಲೆ ತನಗಿದ್ದ ಹಕ್ಕನ್ನು ಬಿಟ್ಟುಕೊಟ್ಟು ವನವಾಸಕ್ಕೆ ಹೊರಡಲು ಸಿದ್ಧನಾದನು. ಅವನ ನಿಷ್ಠಾವಂತ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣ, ರಾಮನ ಜೊತೆ ಹೊರಡಲು ನಿರ್ಧರಿಸಿದರು. ದಶರಥ ದುಃಖದಲ್ಲಿದ್ದಂತೆ ರಾಮ, ಅಯೋಧ್ಯೆಯ ಪರಿತಪ್ತ ಜನರಿಂದ ಹಿಂಬಾಲಿಸಲ್ಪಟ್ಟು ವನವಾಸಕ್ಕೆ ತೆರಳಿದನು. ಸ್ವಲ್ಪ ಕಾಲಾನಂತರ ದಶರಥ ದುಃಖದಿಂದ ಮರಣವನ್ನಪ್ಪಿದನು.

ಸೀತಾಪಹರಣ

ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆ ಮತ್ತು ಅಲ್ಲಿನ ಜನರನ್ನು ಬಿಟ್ಟು ಗಂಗಾ ನದಿಯನ್ನು ದಾಟಿ ಕಾಡಿನೊಳಕ್ಕೆ ಹೋದರು. ಚಿತ್ರಕೂಟ ಎಂಬ ಸುಂದರ ಸ್ಥಳವನ್ನು ಹುಡುಕಿ ಅಲ್ಲಿ ತಮ್ಮ ಕುಟೀರವನ್ನು ಸ್ಥಾಪಿಸಿದರು. ಅತ್ಯಂತ ಸುಂದರವಾಗಿದ್ದ ಈ ಸ್ಥಳದಲ್ಲಿ ಎಲ್ಲ ರೀತಿಯ ಫಲಪುಷ್ಪಗಳಿದ್ದು ಸಂಪೂರ್ಣ ಪ್ರೇಮದಿಂದ ಕೂಡಿದ್ದ ಕುಟೀರ ಭೂಮಿಯ ಮೇಲಿದ್ದ ಸ್ವರ್ಗವೇ ಆಯಿತು. ಕಾಡಿನಲ್ಲಿ ರಾಮ ಗರುಡರಾಜನಾದ ಜಟಾಯುವಿನೊಂದಿಗೆ ಮಿತ್ರತ್ವವನ್ನು ಸ್ಥಾಪಿಸಿದ.
ಇಷ್ಟರಲ್ಲಿ ಅಯೋಧ್ಯೆಗೆ ಮರಳಿ ಬಂದ ಭರತ, ನಡೆದ ವಿಷಯವನ್ನು ಕೇಳಿ, ರಾಮನನ್ನು ವನವಾಸಕ್ಕೆ ಕಳಿಸುವಲ್ಲಿ ತನ್ನ ತಾಯಿ ಕೈಕೇಯಿ ವಹಿಸಿದ ಪಾತ್ರದ ಬಗ್ಗೆ ಕೋಪಗೊಂಡನು. ರಾಮನನ್ನು ಹಿಂದಕ್ಕೆ ತರುವ ಉದ್ದೇಶದಿಂದ ಕಾಡಿಗೆ ಬಂದು ರಾಮನನ್ನು ಹಿಂದಕ್ಕೆ ಬರುವಂತೆ ಬೇಡಿಕೊಂಡನು. ತಂದೆಯ ವಚನದಿಂದ ಬದ್ಧನಾದ ರಾಮ ಇದಕ್ಕೆ ನಿರಾಕರಿಸಿದಾಗ ರಾಮನ ಪಾದುಕೆಗಳನ್ನು ಅಯೋಧ್ಯೆಗೆ ಒಯ್ದು ಸಿಂಹಾಸನದ ಮೇಲೆ ಸ್ಥಾಪಿಸಿ ರಾಮನ ಹೆಸರಿನಲ್ಲಿ ನಂದಿಗ್ರಾಮದಿಂದ ಭರತ ರಾಜ್ಯವನ್ನು ಆಳುತ್ತಿದ್ದನು. ಹದಿನಾಲ್ಕು ವರ್ಷಗಳಲ್ಲಿ ರಾಮ ಮರಳಿ ಬರದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನೂ ಭರತ ತೆಗೆದುಕೊಂಡನು.

ಒಂದು ದಿನ, ರಾವಣನ ತಂಗಿಯಾದ ಶೂರ್ಪನಖಿ ಎಂಬ ರಾಕ್ಷಸಿ ಚಿತ್ರಕೂಟದಲ್ಲಿ ರಾಮನನ್ನು ಕಂಡು ಅವನನ್ನು ಪ್ರೇಮಿಸಿದಳು. ಸುಂದರ ಹುಡುಗಿಯ ವೇಷ ಧರಿಸಿ ರಾಮನನ್ನು ಆಕರ್ಷಿಸಲು ಪ್ರಯತ್ನಿಸಿದಳು. ತನ್ನ ಪತ್ನಿಯತ್ತ ನಿಷ್ಠಾವಂತನಾದ ರಾಮ ಪ್ರತಿಕ್ರಿಯೆ ತೋರಿಸಲಿಲ್ಲ. ಶೂರ್ಪನಖಿಯ ವರ್ತನೆಯಿಂದ ಕುಪಿತನಾದ ಲಕ್ಷ್ಮಣ ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸಿಬಿಟ್ಟನು. ರಾವಣನತ್ತ ಮರಳಿ ಶೂರ್ಪನಖಿ ಇದರ ಬಗ್ಗೆ ದೂರಿತ್ತಳು. ಅವಳಿಂದ ಸೀತೆಯ ಸೌಂದರ್ಯದ ಬಗ್ಗೆ ಕೇಳಿದ ರಾವಣ, ರಾಮನನ್ನು ಕೊಂದು ಸೀತೆಯನ್ನು ಹೊತ್ತೊಯ್ಯುವ ನಿರ್ಧಾರವನ್ನು ಮಾಡಿದನು. ರಾವಣನ ಸಹಾಯಕ್ಕೆ ಬಂದ ಮಾರೀಚ ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಕುಟೀರದಲ್ಲಿ ಬಿಟ್ಟು ದೂರ ಬರುವಂತೆ ಮಾಡಿದನು. ಹೊರಡುವ ಮುನ್ನ, ಲಕ್ಷ್ಮಣ ಮಣ್ಣಿನಲ್ಲಿ ಒಂದು ಗೆರೆಯನ್ನು ಎಳೆದು ಅದರ ಒಳಗೆ ಇರುವವರೆಗೂ ಸೀತೆ ಸುರಕ್ಷಿತಳಾಗಿ ಇರುವಳೆಂದು ತಿಳಿಸಿ ಹೋದನು. ಮುದುಕನ ವೇಷ ಧರಿಸಿ ಬಂದ ರಾವಣ ಅನ್ನದಾನ ಮಾಡುವಂತೆ ಸೀತೆಯನ್ನು ಕೇಳಿಕೊಂಡನು. ಗೆರೆಯನ್ನು ದಾಟಲು ಹೆದರಿದರೂ, ಅವನಿಗೆ ದಾನ ಮಾಡಲು ಸೀತೆ ಮುಂದೆ ಬಂದಾಗ ರಾವಣ ಅವಳನ್ನು ಹೊತ್ತುಕೊಂಡು ತನ್ನ ಪುಷ್ಪಕ ವಿಮಾನದಲ್ಲಿ ಹಾರಿದನು. ಇದನ್ನು ಕಂಡ ಜಟಾಯು ಸೀತೆಯ ರಕ್ಷಣೆಗೆ ಬಂದಾಗ ರಾವಣ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹೋದನು.
ಹಿಂದಕ್ಕೆ ಮರಳಿದ ರಾಮ-ಲಕ್ಷ್ಮಣರು ಸೀತೆಯನ್ನು ಕಾಣದೆ ಹುಡುಕುತ್ತಿದ್ದಾಗ ಜಟಾಯುವಿನಿಂದ ಸೀತಾಪಹರನದ ವಿಷಯವನ್ನು ತಿಳಿದರು.

ವಾನರ ಸಾಮ್ರಾಜ್ಯ

ತಮ್ಮ ಹುಡುಕಾಟವನ್ನು ಮುಂದುವರೆಸಿ ರಾಮ ಲಕ್ಷ್ಮಣರು ಕಿಷ್ಕಿಂದೆಯ ವಾನರ ರಾಜನಾದ ಸುಗ್ರೀವ ಹಾಗೂ ಹನುಮಂತನನ್ನು ಭೇಟಿಯಾಗುತ್ತಾರೆ. ಹನುಮಂತ ಸುಗ್ರೀವನ ಸೈನ್ಯಕ್ಕೆ ಸೇನಾಧಿಪತಿ. ಸೀತೆ ರಾವಣನ ರಥದಿಂದ ಎಸೆದ ಆಭರಣಗಳು ವಾನರರಿಗೆ ದೊರೆತಿರುತ್ತದೆ. ತನ್ನ ಅಣ್ಣ ವಾಲಿಯಿಂದ ಸಾಮ್ರಾಜ್ಯದಿಂದ ಹೊರಗಟ್ಟಲ್ಪಟ್ಟ ಸುಗ್ರೀವ ರಾಮನ ಸಹಾಯ ಪಡೆಯುತ್ತಾನೆ. ಪರಸ್ಪರ ಕಾಳಗದಲ್ಲಿ ರಾಮನ ಸಹಾಯ ಪಡೆದ ಸುಗ್ರೀವನಿಂದ ವಾಲಿ ಮಡಿಯುತ್ತಾನೆ.
ಸಹಾಯ ಮಾಡಿದ ರಾಮನೊಂದಿಗೆ ಸುಗ್ರೀವ ತನ್ನ ಸೈನ್ಯವನ್ನು ಕೂಡಿ ಲಂಕೆಯೆಡೆಗೆ ಹೊರಡುತ್ತಾನೆ.
ರಾಮ, ಸುಗ್ರೀವರು ಸೀತೆಯನ್ನು ಹುಡುಕಲು ತಮ್ಮ ವಾನರಸೇನೆಯನ್ನು ನಾನಾದಿಕ್ಕಿಗೆ ಕಳಿಸಿದರು .ಅವರು ರಾವಣನಿಂದ ಹತನಾದ ಜಟಾಯುವಿನ ಸೋದರ, ಸಂಪಾತಿಯನ್ನು ಭೇಟಿಯಾಗುವವರೆಗೆ ಅವರ ಪ್ರಯತ್ನಗಳಿಗೆ ವಿಶೇಷ ಫಲ ದೊರೆಯಲಿಲ್ಲ . ಸಂಪಾತಿಯು ಅಂಗವೈಕಲ್ಯದಿಂದಾಗಿ ಹಾರಲು ಅಸಮರ್ಥನಾಗಿದ್ದನು . ಅವನು ಸೂರ್ಯನ ಅತಿ ಸಮೀಪಕ್ಕೆ ಹಾರಿದ್ದರಿಂದ ಅವನ ರೆಕ್ಕೆಗಳು ಸುಟ್ಟುಹೋಗಿದ್ದವು . ಬಲಶಾಲಿಯಾದ ಜಟಾಯುವು ಅವನನ್ನು ಸಾವಿನಿಂದ ರಕ್ಷಿಸಿದ್ದನು. ಇಬ್ಬರಲ್ಲಿ ಜಟಾಯು ದೇಹಬಲದಿಂದ ಗಟ್ಟಿಗನಾದರೂ ಸಂಪಾತಿಗೆ ಕಣ್ಣಿನ ಹೆಚ್ಚಿನ ದೃಷ್ಟಿಯಿದ್ದು ನೂರಾರು ಯೋಜನಗಳಷ್ಟು ದೂರ ನೋಡಬಲ್ಲವನಾಗಿದ್ದನು . ರಾವಣನು ತನ್ನ ಸೋದರನನ್ನು ಕೊಂದದ್ದನ್ನು ಕೇಳಿ ಅವನು ವಾನರರಿಗೆ ಸಹಾಯ ಮಾಡಲು ಒಪ್ಪಿದನು . ಅನತಿಕಾಲದಲ್ಲೇ ಅವನು ಸೀತೆಯನ್ನು ದಕ್ಷಿಣದಿಕ್ಕಿನಲ್ಲಿರುವದಾಗಿ ಪತ್ತೆಹಚ್ಚಿದನು. ಅವಳು ದಕ್ಷಿಣದಲ್ಲಿ ಸಮುದ್ರದಾಚೆಗಿನ ಲಂಕಾದ್ವೀಪದಲ್ಲಿನ ಅಶೋಕವನವೊಂದರಲ್ಲಿ ಸೆರೆಯಾಗಿರುವದನ್ನು ನೋಡಿ ಹೇಳಿದನು .

ಲಂಕೆಯಲ್ಲಿ ಹನುಮಂತ

ಸುಗ್ರೀವನು ತನ್ನ ವಾನರಸೈನ್ಯವನ್ನು ಅಂಗದನ ನೇತೃತ್ವದಲ್ಲಿ ದಕ್ಷಿಣಕ್ಕೆ ಕಳಿಸಿದನು. ಹನುಮಂತನು ಅಂಗದನ ಸೇನಾಪತಿಯಾಗಿ ತೆರಳಿದನು. ಅವರು ದಕ್ಷಿಣದಲ್ಲಿ ಬಹುದೂರ ಹೋದಮೇಲೆ ತಮ್ಮ ಮತ್ತು ಲಂಕಾದ್ವೀಪದ ನಡುವೆ ಮಹಾಸಾಗರವನ್ನು ಕಂಡರು. ಆ ಸಮುದ್ರವನ್ನು ದಾಟುವ ಬಗೆ ಹೇಗೆಂದು ತಿಳಿಯದಾದರು .ತನ್ನ ಸೈನಿಕರಿಗೆ ಅಲ್ಲಿಯೇ ಇರಹೇಳಿ ಹನುಮಂತನು ತನ್ನದೇಹವನ್ನು ಹಿಗ್ಗಿಸಿ ಮಹಾರೂಪ ತಾಳಿ ಅಪಾರ ಜಲರಾಶಿಯನ್ನು ಜಿಗಿದು ದಾಟಿ ತ್ರಿಕೂಟಪರ್ವತದ ಮೇಲೆ ಇಳಿದು ಲಂಕಾಪಟ್ಟಣದತ್ತನೋಡಿದನು. ನಗರಕ್ಕೆ ಭಾರೀ ಪಹರೆ ಇದ್ದದ್ದರಿಂದ ಬೆಕ್ಕಿನ ರೂಪತಾಳಿ ನಗರವನ್ನು ನುಸುಳಿ ನಗರವನ್ನು ವೀಕ್ಷಿಸಿದನು. ರಾವಣನು ತನ್ನ ಅಂತಃಪುರದಲ್ಲಿ ಸುಂದರಸ್ತ್ರೀಯರಿಂದ ಸುತ್ತುವರಿಯಲ್ಪಟ್ಟಿದ್ದನು. ಆದರೆ ಅಲ್ಲಿ ಸೀತೆ ಇರಲಿಲ್ಲ. ತನ್ನ ಅನ್ವೇಷಣೆಯನ್ನು ಮುಂದುವರಿಸಿ ಕೊನೆಗೆ ಆಶೋಕವನದಲ್ಲಿ ಮರದ ಕೆಳಗೆ ರಾಕ್ಷಸಿಯರಿಂದ ಸುತ್ತುವರೆಯಲ್ಪಟ್ಟು ದುಃಖದಿಂದ ಕಳೆಗುಂದಿದ ಸೌಂದರ್ಯವುಳ್ಳ ಸೀತೆಯನ್ನು ನೋಡಿದನು.
ಸಣ್ಣ ಕಪಿಯೊಂದರ ವೇಷ ತಾಳಿ ಹನುಮಂತನು ಮರದಿಂದ ಕೆಳಗೆ ಜಿಗಿದು ಅವಳಿಗೆ ರಾಮನ ಉಂಗುರವನ್ನು ಕೊಟ್ಟು ಅವಳಿಂದ ಒಂದು ಉಂಗುರವನ್ನು ತೆಗೆದುಕೊಂಡನು. ಅವಳನ್ನು ತನ್ನೊಡನೆ ಕೊಂಡೊಯ್ಯಲು ಸಿದ್ಧವಾಗಲು, ರಾಮನೇ ತನ್ನನ್ನು ರಕ್ಷಿಸಲು ಬರಬೇಕೆಂದು ಹೇಳಿ ತನ್ನನ್ನು ಹುಡುಕಿದ್ದಕ್ಕೆ ಸಾಕ್ಷಿಯಾಗಿ ಒಂದು ಬೆಲೆಯುಳ್ಳ ವಜ್ರವನ್ನು ರಾಮನಿಗೆ ಕೊಡುವದಕ್ಕಾಗಿ ಹನುಮಂತನಿಗೆ ಕೊಟ್ಟಳು. ಅವರು ಮಾತನಾಡುತ್ತಿರುವಾಗ ಅಲ್ಲಿ ಬಂದ ರಾವಣನು ಅವಳ ಮನವೊಲಿಸಲು ವ್ಯರ್ಥ ಪ್ರಯತ್ನ ಮಾಡಿ ಅವಳು ಇನ್ನೆರಡು ತಿಂಗಳಲ್ಲಿ ತನ್ನ ವಶವಾಗದಿದ್ದರೆ ತನ್ನ ಬೆಳಗಿನ ಉಪಾಹಾರಕ್ಕಾಗಿ ಅವಳ ಅಂಗಾಂಗಗಳನ್ನು ತುಂಡರಿಸುವದಾಗಿ ಬೆದರಿಸಿದನು.
ಸಿಟ್ಟಿಗೆದ್ದ ಹನುಮಂತನು ಮಾವಿನ ತೋಟವನ್ನು ಹಾಳುಮಾಡಿದನು. ಅವನನ್ನು ರಾಕ್ಷಸರು ಬಂಧಿಸಿ ರಾವಣನ ಮುಂದೆ ಕೊಂಡೊಯ್ದರು. ಹನುಮಂತನು ತಾನು ರಾಮನ ದೂತನೆಂದು ಹೇಳಿ , ಸೀತೆಯನ್ನು ರಾಮನಿಗೆ ಒಪ್ಪಿಸು ಇಲ್ಲವೆ ರಾಮನ ಕ್ರೋಧಕ್ಕೆ ಬಲಿಯಾಗು ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ರಾವಣನು ಅವನನ್ನು ಕೊಲ್ಲಲು ಆಜ್ಞೆ ಮಾಡಿದನು.
ಆಗ ರಾವಣನ ನ್ಯಾಯಪರ ತಮ್ಮನಾದ ವಿಭೀಷಣನು ಮಧ್ಯಪ್ರವೇಶಿಸಿ ರಾವಣನಿಗೆ ಶಾಸ್ತ್ರಗಳಲ್ಲಿ ಹೇಳಿದ ಪ್ರಕಾರ ದೂತನನ್ನು ಕೊಲ್ಲುವದು ಅನುಚಿತ ಎಂದು ಹೇಳಿ ಅವನ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಲು ಸಲಹೆ ಮಾಡಿದನು. ರಾವಣನು ಒಪ್ಪಿ ತನ್ನ ರಾಕ್ಷಸ ಸೇವಕರಿಗೆ ಹನುಮಂತನ ಬಾಲಕೆ ಬೆಂಕಿಹಚ್ಚಲು ಆಜ್ಞೆ ಮಾಡಿದನು. ಬಾಲಕ್ಕೆ ಬೆಂಕಿ ಹತ್ತಿದ ನಂತರ ಹನುಮಂತನು ತನ್ನ ಶರೀರವನ್ನು ಸಣ್ಣದಾಗಿ ಮಾಡಿಕೊಂಡು ಕಟ್ಟುಗಳಿಂದ ಪಾರಾಗಿ ಮನೆಗಳ ಮೇಲೆಲ್ಲ ಜಿಗಿಯುತ್ತ ಹೋಗಿ ಲಂಕೆಯಲ್ಲೆಲ್ಲ ಬೆಂಕಿಯನ್ನು ಹರಡಿದನು. ಅವನು ರಾಮ, ಸುಗ್ರೀವರಿದ್ದಲ್ಲಿಗೆ ಮರಳಿ ಬಂದು ಸೀತೆಯು ಬಂಧನದಲ್ಲಿರುವದನ್ನು ತಿಳಿಸಿ ಯುದ್ಧಸಿದ್ಧತೆಗೆ ತೊಡಗಿದನು.

ಲಂಕೆಯಲ್ಲಿ ಯುದ್ಧ

ಸಮುದ್ರಕ್ಕೆ ಸೇತುವೆಯನ್ನು ಕಟ್ಟದ ಹೊರತು ಹನುಮಂತನ ಹೊರತು ಬೇರಾರೂ ಅದನ್ನು ದಾಟಲಾರರು ಎಂದು ರಾಮನು ನಿರ್ಣಯಿಸಿದನು. ವ್ಯರ್ಥವಾಗಿ ಮೂರು ದಿನ ಕಾದರೂ ತನ್ನನ್ನು ಅಲಕ್ಷಿಸಿದ್ದಕ್ಕಾಗಿ ಸಿಟ್ಟಿಗೆದ್ದ ರಾಮನು ತನ್ನ ಬಾಣಗಳನ್ನು ಸಮುದ್ರಕ್ಕೆ ಗುರಿಯಿಡಲು ವರುಣನು ಪ್ರತ್ಯಕ್ಷವಾದನು . ಸಮುದ್ರದೇವತೆಯಾದ ಅವನು 'ಸೇತುವೆಯನ್ನು ಕಟ್ಟುವದಾದರೆ ನೆಲದ ಮೇಲೇ ಕಟ್ಟಿದಷ್ಟು ದೃಢವಾಗಿರುವಂತೆ ಸೇತುವೆಗೆ ಅಲೆಗಳು ಅನುಕೂಲವಾಗಿರುವಂತೆ ಏರ್ಪಡಿಸುವದಾಗಿ' ಮಾತು ಕೊಟ್ಟನು.
ರಾಮನು ಸೈನ್ಯದೊಂದಿಗೆ ಬರುವ ವಾರ್ತೆಯಿಂದ ಲಂಕೆಯಲ್ಲಿ ಭೀತಿಯ ವಾತಾವರಣ ಉಂಟಾಯಿತು. ರಾವಣನ ತಮ್ಮನಾದ ವಿಭೀಷಣನು, ರಾಮನೊಂದಿಗೆ ಸಂಧಿ ಮಾಡಿಕೊಳ್ಳಲು ರಾವಣನಿಗೆ ಸಲಹೆಯಿತ್ತಾಗ ರಾವಣನು ಅತೀವ ಸಿಟ್ಟಿಗೆದ್ದದ್ದರಿಂದ, ರಾಮನನ್ನು ಸೇರಿಕೊಂಡನು. ನಂತರ ನಡೆದ ಘನಘೋರ ಯುದ್ಧದಲ್ಲಿ ದೇವತೆಗಳೂ ಭಾಗವಹಿಸಿದರು. ವಿಷ್ಣು ಮತ್ತು ಇಂದ್ರ, ರಾಮನ ಪಕ್ಷವನ್ನೂ ಅಸುರರು ರಾವಣನ ಪಕ್ಷವನ್ನೂ ವಹಿಸಿದರು.
ಎರಡೂ ಪಕ್ಷಗಳಿಗೆ ಮಿಶ್ರಫಲಗಳೊಡನೆ ಯುದ್ಧ ಸ್ವಲ್ಪ ಕಾಲ ನಡೆದ ನಂತರ ರಾಮ-ರಾವಣರ ನಡುವೆ ನೇರ ಹೋರಾಟದ ಮೂಲಕ ಯುದ್ಧದ ಫಲಿತಾಂಶವನ್ನು ಘೋಷಿಸುವುದೆಂದು ತೀರ್ಮಾನಿಸಲಾಯಿತು. ಈ ಕಾಳಗದ ತೀವ್ರತೆಯಿಂದ ದೇವ-ದೇವತೆಗಳೂ ಭೀತರಾದರು. ರಾಮನ ಪ್ರತಿಯೊಂದು ಬಾಣವೂ ರಾವಣನ ಒಂದು ತಲೆ ಕತ್ತರಿಸಿದರೂ ಅದು ಮತ್ತೆ ಬೆಳೆಯುತ್ತಿತ್ತು. ಏನು ಮಾಡಬೇಕೆಂದು ತೋಚದೆ ಇದ್ದ ರಾಮನಿಗೆ ರಾವಣನ ದೇಹದತ್ತ ಗುರಿಯಿಡುವಂತೆ ವಿಭೀಷಣ ತಿಳಿಸಿಕೊಟ್ಟ.
ಈ ಉಪಾಯ ಫಲಿಸಿ ರಾವಣ ಉರುಳಿ ಬಿದ್ದಂತೆ, ಆಕಾಶದಿಂದ ಪುಷ್ಪಗಳು ರಾಮನ ಮೇಲೆ ಮಳೆಗರೆದವು. ಅವನ ಕಿವಿಗಳಲ್ಲಿ ದೈವೀ ಸಂಗೀತ ಅನುರಣಿಸಿತು. ರಾವಣನ ಪತ್ನಿ ಮಂಡೋದರಿಯ ವಿಲಾಪವನ್ನು ಕೇಳಿದ ರಾಮ ರಾವಣನಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರವನ್ನು ಮಾಡಿ ಲಂಕೆಯನ್ನು ಪ್ರವೇಶಿಸಿದನು.
ಸಂತೋಷದಿಂದ ಬೀಗುತ್ತಿದ್ದ ಸೀತೆ ರಾಮನ ಜೊತೆಗೂಡಿದಳು. ಆದರೆ ಅವಳ ಸಂತೋಷ ತಾತ್ಕಾಲಿಕವಾಗಿತ್ತು. ತಲೆ ತಗ್ಗಿಸಿ ಅವಳನ್ನು ಬರಮಾಡಿಕೊಂಡ ರಾಮ, ರಾವಣನ ಮನೆಯಲ್ಲಿ ಅವಳು ಇದ್ದದ್ದರಿಂದ ತನ್ನ ಪತ್ನಿಯಾಗಲು ಅವಳು ತಕ್ಕವಳಾಗಿ ಉಳಿದಿಲ್ಲವೆಂದು ಹೇಳಿದ. ತನ್ನ ಪಾತಿವ್ರತ್ಯದ ಬಗ್ಗೆ ಅವನಿಗೆ ಭರವಸೆಯಿತ್ತಳು ಸೀತೆ. ಆದರು ರಾಮನ ಅನುಮಾನ ಮುಂದುವರೆದಿದ್ದರಿಂದ ಸೀತೆ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಿ ತನ್ನ ಚಿತೆಯನ್ನು ನಿರ್ಮಿಸಬೇಕೆಂದು ಹೇಳಿದಳು. ಎಲ್ಲ ಪ್ರೇಕ್ಷಕರ ಅಂತಃಕರಣವೂ ಸೀತೆಯ ಕಡೆಗಿದ್ದಿತು. ಸೀತೆ ಚಿತೆಯನ್ನೇರಿ ಕೆಲ ಕ್ಷಣಗಳಲ್ಲಿಯೇ ಅಗ್ನಿ ಆಕೆಯನ್ನು ತನ್ನ ಬಾಹುಗಳಲ್ಲಿ ಎತ್ತಿ ತಂದು ಬಿಟ್ಟನು. ಅಗ್ನಿಪರೀಕ್ಷೆಯಲ್ಲಿ ತನ್ನ ನಿರಪರಾಧವನ್ನು ತೋರಿಸಿದ ಸೀತೆಯನ್ನು ರಾಮ ಸ್ವಾಗತಿಸಿದನು. ರಾಮನ ನಡತೆಯನ್ನು ಸೀತೆ ಕ್ಷಮಿಸಿದಳು.
ಯುದ್ಧವನ್ನು ಗೆದ್ದು, ರಾವಣನನ್ನು ಸೋಲಿಸಿ, ಸೀತೆಯನ್ನು ಮರಳಿ ಪಡೆದು, ರಾಮ ವಿಜೃಂಭಣೆಯಿಂದ ಅಯೋಧ್ಯೆಗೆ ಮರಳಿ ಭರತ ಮತ್ತು ಅಯೋಧ್ಯೆಯ ಜನರ ಅಪಾರ ಸಂತೋಷಕ್ಕೆ ರಾಜ್ಯಭಾರವನ್ನು ವಹಿಸಿಕೊಂಡನು.

ಸೀತಾ ಪರಿತ್ಯಾಗ

ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ,ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾಡತೊಡಗಿದರು. ತನ್ನ ಪ್ರಜೆಗಳನ್ನು ಸಂತೋಷಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು.
ಸೀತೆ ಸ್ವಲ್ಪಮಾತ್ರವೂ ಗೊಣಗದೆ ಕಾಡಿಗೆ ಹೊರಟಳು. ದು:ಖತಪ್ತಳಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ,ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ.
ಲವ, ಕುಶರು ಇಬ್ಬರು ಬೆಳೆದು ಇಪ್ಪತ್ತು ವರ್ಷದ ಯುವಕರಾಗಿದ್ದರು. ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು. ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳನ್ನೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ, ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ, ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮದಿಂದ ಕರೆದುಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಮೇಲಿರುವ ಕಳಂಕದಿಂದ ದೂರಾಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ.
ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ - ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿದು ನನ್ನನ್ನು ನಿನ್ನ ಬಳಿ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯನ್ನು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ.

ರಾಮಾಯಣದ ನೀತಿಪಾಠ

ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ . ಜೀವನವು ಕ್ಷಣಭಂಗುರವಾಗಿದ್ದು ಭೋಗಲಾಲಸೆಯ ನೀತಿಯು ಅರ್ಥಹೀನವಾದದ್ದು . ಆದರೆ ಹಾಗೆಂದು ಯಾವದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು. ವೇದದಲ್ಲಿ ಉಕ್ತವಾದದ್ದೇ ಧರ್ಮ, ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ, ನಷ್ಟಗಳಿಗಾಗಿ ಅಲ್ಲ ಎಂಬುದು ಅವನ ಅಭಿಪ್ರಾಯ. ಇಂಥ ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವದು ಅಷ್ಟೇ ಅಲ್ಲದೆ , ಯಾವುದೇ ಮಾತು ಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತು ಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತು ಕೊಡುತ್ತದೆ.
ನಾರದ ಮುನಿಯು ಇಡೀ ರಾಮಾಯಣವನ್ನು ಸ್ವಲ್ಪದರಲ್ಲಿ ವಾಲ್ಮೀಕಿಗೆ ಹೇಳಿದ ಸಂಕ್ಷೇಪ ರಾಮಾಯಣವು ವಾಲ್ಮೀಕಿರಾಮಾಯಣದ ಮೊದಲ ಸರ್ಗವಾಗಿದೆ. ನಾರದನು ಆದರ್ಶಮನುಷ್ಯನ ೧೬ ಗುಣಗಳನ್ನು ಪಟ್ಟಿ ಮಾಡಿ ರಾಮನು ಈ ಎಲ್ಲ ೧೬ ಗುಣಗಳನ್ನು ಹೊಂದಿದ ಸಂಪೂರ್ಣ ಮಾನವ ಎಂದು ಹೇಳುತ್ತಾನೆ ರಾಮನೇ ಸ್ವತಃ ತಾನು ಮನುಷ್ಯಮಾತ್ರನೆಂದು ಹೇಳಿದರೂ, ಒಮ್ಮೆ ಕೂಡ ತಾನು ದೈವಾಂಶವುಳ್ಳವನೆಂದು ಹೇಳದಿದ್ದರೂ, ಹಿಂದುಗಳು ಅವನನ್ನು ಆದರ್ಶವ್ಯಕ್ತಿಯೆಂದೂ ವಿಷ್ಣು ದೇವರ ಪ್ರಮುಖ ಅವತಾರಗಳಲ್ಲೊಬ್ಬ ಎಂದೂ ಪರಿಗಣಿಸುತ್ತಾರೆ.
ವಾಲ್ಮೀಕಿಯು ಅವನನ್ನು ತನ್ನ ಕಥೆಯಲ್ಲಿ ಒಬ್ಬ ಅತಿಮಾನವ ಎಂದು ಚಿತ್ರಿಸದೆ, ಎಲ್ಲ ಗುಣದೋಷಗಳಿಂದ ಕೂಡಿ, ನೈತಿಕ ಸಂದಿಗ್ಧಗಳನ್ನೆದುರಿಸಿ ಅವುಗಳನ್ನು ಧರ್ಮ (ಸರಿಯಾದ ಮಾರ್ಗ)ವನ್ನು ಅನುಸರಿಸುವುದರಿಂದ ಗೆದ್ದ ಒಬ್ಬ ಸಹಜಮಾನವನನ್ನಾಗಿ ಚಿತ್ರಿಸಿದ್ದಾನೆ. ವಾಲ್ಮೀಕಿ ರಾಮಾಯಣದಲ್ಲಿ ಕಥಾನಾಯಕನ ಪರಿಶುದ್ಧ ಚಾರಿತ್ರ್ಯದ ಬಗ್ಗೆ ಸಂಶಯವನ್ನುಂಟುಮಾಡುವ ಅನೇಕ ಸಂದರ್ಭಗಳಿವೆ. ತನ್ನ ರಾಜ್ಯವನ್ನು ಮರಳಿ ಪಡೆಯಲು ಸುಗ್ರೀವನಿಗೆ ಸಹಾಯಮಾಡಲು ವಾಲಿಯನ್ನು ಮರದ ಮರೆಯಿಂದ ರಾಮನು ಕೊಲ್ಲುವದು ಯುದ್ಧದ ನಿಯಮಗಳಿಗೆ ವಿರೋಧವಾಗಿತ್ತು. ಸೀತೆಯು ರಾವಣನ ಸೆರೆಯಿಂದ ಬಿಡುಗಡೆ ಹೊಂದಿದಾಗ ಅಗ್ನಿಯನ್ನು ಪ್ರವೇಶಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧ ಮಾಡುವಂತೆ ರಾಮನು ಅವಳನ್ನು ಬಲವಂತಪಡಿಸುತ್ತಾನೆ. ನಂತರ ಶೂದ್ರ ಶಂಬೂಕನನ್ನು ಸಮಾಜದ ಕೆಳವರ್ಗದಲ್ಲಿದ್ದು ಯೋಗಿಗಳಂತೆ ತಪಸ್ಸನ್ನು ಮಾಡಿದ್ದಕ್ಕಾಗಿ ರಾಮನು ಕೊಲ್ಲುವನು. ಇವು ಮತ್ತು ಉಳಿದ ಅನೇಕ ಇಂಥ ರಾಮಾಯಣದಲ್ಲಿನ ಪ್ರಸಂಗಗಳು ಕಥಾನಾಯಕನಾದ ರಾಮನ ಮನುಷ್ಯ ಸಹಜ ಗುಣವನ್ನೆತ್ತಿ ತೋರಿಸಿ ಕಥೆಯ ಮೂಲನೀತಿಯಾಗಿರುವ 'ಮನುಷ್ಯನು ಸತ್ಯಮಾರ್ಗವನ್ನು ಅನುಸರಿಸಲು ಅತಿಮಾನವನಿರುವದು ಅವಶ್ಯವಿಲ್ಲ' ಎಂಬುದನ್ನು ಸಮರ್ಥಿಸುತ್ತವೆ.

ಪಠ್ಯದ ಚರಿತ್ರೆ

ಸಾಂಪ್ರದಾಯಿಕ ನಂಬುಗೆಯಂತೆ ಈ ಕಾವ್ಯವು ಹಿಂದೂ ಕಾಲಗಣನೆಯ ನಾಲ್ಕು ಯುಗಗಳಲ್ಲೊಂದಾದ ತ್ರೇತಾಯುಗಕ್ಕೆ ಸೇರಿದ್ದು , ವಾಲ್ಮೀಕಿಯು ರಚಿಸಿದ್ದು . ವಾಲ್ಮೀಕಿಯೂ ಈ ಕಥೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಾನೆ.
ರಾಮಾಯಣದ ಭಾಷೆ ಪಾಣಿನಿಯ ಕಾಲಕ್ಕಿಂತಲೂ ಹಳೆಯದಾದ ಸಂಸ್ಕೃತ. ಮಹಾಭಾರತ ಮತ್ತು ರಾಮಾಯಣಗಳೆರಡರಲ್ಲೂ ಸಂಸ್ಕೃತದ ಈ ಪ್ರಭೇದ ಕಂಡುಬರುತ್ತದೆ. ರಾಮಾಯಣದ ಮೂಲ ಕೃತಿಯ ರಚನೆ ಕ್ರಿ.ಪೂ. ಐದನೆ ಶತಮಾನದಲ್ಲಿ ಆದದ್ದಿರಬಹುದು. ಅನೇಕ ಶತಮಾನಗಳ ಕಾಲ ಬಾಯಿಂದ ಬಾಯಿಗೆ, ಹಾಗೂ ಲಿಖಿತ ರೂಪದಲ್ಲೂ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಹೊಂದುತ್ತಾ, ಮಧ್ಯೆಮಧ್ಯೆ ಅನೇಕ ಮಾರ್ಪಾಟುಗಳನ್ನು ಹೊಂದುತ್ತ ಇಂದಿನ ರೂಪವನ್ನು ಪಡೆದಿದೆ. ಹೀಗಾಗಿ ರಾಮಾಯಣದ ರಚನಾಕಾಲವನ್ನು ಕೇವಲ ಭಾಷಾ ವಿಶ್ಲೇಷಣೆಯಿಂದ ಕಂಡುಹಿಡಿಯಲಾಗದು. ದೀರ್ಘವಾದ ಪ್ರಕ್ರಿಯೆಯ ಮೂಲಕ ಇಂದಿನ ರೂಪವನ್ನು ರಾಮಾಯಣ ಪಡೆದಿದ್ದು, ಈ ಪ್ರಕ್ರಿಯೆ ಸುಮಾರು ಕ್ರಿ.ಪೂ. ಐದನೆ ಶತಮಾನದಲ್ಲಿ ಆರಂಭಗೊಂಡು ಕ್ರಿ.ಶ. ನಾಲ್ಕನೆಯ ಶತಮಾನದ ಹೊತ್ತಿಗೆ ಪೂರ್ಣವಾಯಿತು ಎಂದು ಪರಿಗಣಿಸಲಾಗಿದೆ.
ರಾಮಾಯಣದ ಕಥೆಯ ಕಾಲ ಇನ್ನೂ ಹಳೆಯದಿರಬಹುದು. ರಾಮಾಯಣದಲ್ಲಿ ಬರುವ ಪಾತ್ರಗಳ ಹೆಸರುಗಳು - ರಾಮ, ಸೀತೆ, ದಶರಥ, ಜನಕ, ವಸಿಷ್ಠ, ವಿಶ್ವಾಮಿತ್ರ - ಈ ಎಲ್ಲ ಹೆಸರುಗಳೂ ವಾಲ್ಮೀಕಿ ರಾಮಾಯಣಕ್ಕಿಂತ ಹಳೆಯದಾದ ವೇದಬ್ರಾಹ್ಮಣಗಳಲ್ಲಿ ಕಂಡುಬರುತ್ತವೆ. ಆದರೆ ವೇದಗಳಲ್ಲೆಲ್ಲೂ ವಾಲ್ಮೀಕಿಯ ರಾಮಾಯಣದ ಕಥೆಯನ್ನು ಹೋಲುವ ಯಾವ ಕಥೆಯೂ ಕಂಡುಬರುವುದಿಲ್ಲ. ರಾಮಾಯಣದಲ್ಲಿ ಮುಖ್ಯ ಪಾತ್ರ ವಹಿಸುವ ಬ್ರಹ್ಮ ಮತ್ತು ವಿಷ್ಣು ವೇದೋಕ್ತ ದೇವತೆಗಳಲ್ಲ. ಮಹಾಭಾರತ-ರಾಮಾಯಣಗಳ ಮತ್ತು ಪುರಾಣಗಳ ರಚನಾನಂತರವೇ ಈ ದೇವರುಗಳ ಜನಪ್ರಿಯತೆ ಹೆಚ್ಚಿರುವುದು ಕಂಡುಬರುತ್ತದೆ.
ಸಾಮಾನ್ಯವಾಗಿ, ರಾಮಾಯಣದ ಎರಡನೆ ಕಾಂಡದಿಂದ ಆರನೆ ಕಾಂಡದವರೆಗಿನ ಭಾಗಗಳು ಈ ಕಾವ್ಯದ ಅತಿ ಪ್ರಾಚೀನ ಭಾಗಗಳೆಂದು ಪರಿಗಣಿಸಲಾಗುತ್ತದೆ. ಮೊದಲ ಕಾಂಡವಾದ ಬಾಲಕಾಂಡ ಮತ್ತು ಕೊನೆಯದಾದ ಉತ್ತರಕಾಂಡ ನಂತರ ಸೇರಿಸಲ್ಪಟ್ಟ ಭಾಗಗಳೆಂದು ಪರಿಗಣಿತವಾಗಿವೆ. ಬಾಲಕಾಂಡ ಮತ್ತು ಅಯೋಧ್ಯಾಕಾಂಡದ ಕರ್ತೃ ಅಥವಾ ಕರ್ತೃಗಳು ಗಂಗಾ ಜಲಾನಯನ ಪ್ರದೇಶ ಹಾಗೂ ಪ್ರಾಚೀನ ಭಾರತದ "ಹದಿನಾರು ಜನಪದ"ಗಳ ಕಾಲದಲ್ಲಿನ ಮಗಧ ಹಾಗೂ ಕೋಸಲ ಪ್ರದೇಶಗಳ ನಿಕಟ ಪರಿಚಯ ಪಡೆದಿದ್ದರೆನ್ನುವುದು ಕಂಡುಬರುತ್ತದೆ. ಇದಕ್ಕೆ ಕಾರಣ ರಾಮಾಯಣದ ಈ ಭಾಗಗಳಲ್ಲಿನ ರಾಜಕೀಯ ಹಾಗೂ ಭೌಗೋಳಿಕ ವರ್ಣನೆಗಳು "ಹದಿನಾರು ಜನಪದ"ಗಳ ಕಾಲದ ಸ್ಥಿತಿಗತಿಗಳನ್ನು ಬಿಂಬಿಸುತ್ತವೆ.
ಆದರೆ ರಾಮಾಯಣದ ಅರಣ್ಯಕಾಂಡವನ್ನು ಗಮನಿಸಿದರೆ, ರಾಕ್ಷಸರು, ವಿಚಿತ್ರ ಪ್ರಾಣಿಗಳು, ಮೊದಲಾದವುಗಳನ್ನೊಳಗೊಂಡ ಕಲ್ಪನಾಲೋಕದತ್ತ ವರ್ಣನೆಗಳು ಸರಿಯುತ್ತವೆ. ಮಧ್ಯ ಹಾಗೂ ದಕ್ಷಿಣ ಭಾರತದ ಭೌಗೋಳಿಕ ವರ್ಣನೆಗಳು ವಾಸ್ತವದಿಂದ ಸಾಕಷ್ಟು ದೂರವಿರುವುದು ಕಂಡುಬರುತ್ತದೆ. ಶ್ರೀಲಂಕಾ ದ್ವೀಪದ ಸರಿಯಾದ ಸ್ಥಳದ ಬಗ್ಗೆ ವಿವರಗಳು ಅಸ್ಪಷ್ಟವಾಗಿರುವುದು ಸಹ ಕಂಡುಬರುತ್ತದೆ. ಈ ಅಂಶಗಳ ಆಧಾರದ ಮೇಲೆ, ಚರಿತ್ರಜ್ಞ ಎಚ್.ಡಿ.ಸಂಕಾಲಿಯಾ ಅವರು ರಾಮಾಯಣದ ಕಾಲ ಸುಮಾರು ಕ್ರಿ.ಪೂ. ನಾಲ್ಕನೆಯ ಶತಮಾನ ಇದ್ದಿರಬಹುದೆಂದು ಪ್ರತಿಪಾದಿಸಿದ್ದಾರೆ. ಆದರೆ ಇನ್ನೊಬ್ಬ ಚರಿತ್ರಕಾರರಾದ ಎ.ಎಲ್.ಬಾಷಮ್ ಅವರು ರಾಮನು ಕ್ರಿ.ಪೂ. ೭ ನೆಯ ಅಥವಾ ೮ ನೆಯ ಶತಮಾನದಲ್ಲಿ ಇದ್ದಿರಬಹುದಾದ ಸಣ್ಣ ರಾಜ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು ರಾಮಾಯಣದ ಕಥೆಯ ಕಾಲ ಕ್ರಿ.ಪೂ. ೬೦೦೦ ದಷ್ಟು ಹಳೆಯದಿರಬಹುದೆಂದು ಪ್ರತಿಪಾದಿಸಿದ್ದಾರೆ.

ವಿಭಿನ್ನ ರೂಪಾಂತರಗಳು

ಅನೇಕ ಜಾನಪದ ಕಥೆಗಳಂತೆ, ರಾಮಾಯಣದ ಕಥೆಯ ವಿವಿಧ ರೂಪಾಂತರಗಳು ಅಸ್ತಿತ್ವದಲ್ಲಿವೆ. ಮುಖ್ಯವಾಗಿ, ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ರಾಮಾಯಣದ ಕಥೆ ದಕ್ಷಿಣ ಭಾರತ ಮತ್ತು ದಕ್ಷಿಣಪೂರ್ವ ಏಷ್ಯಾದಲ್ಲಿ ಪ್ರಚಲಿತವಾಗಿರುವ ರೂಪಾಂತರಕ್ಕಿಂತ ಕೆಲವು ಅಂಶಗಳಲ್ಲಿ ಭಿನ್ನವಾಗಿದೆ. ರಾಮಾಯಣದ ಕಥಾಸಂಪ್ರದಾಯ ಥೈಲೆಂಡ್, ಕಾಂಬೋಡಿಯ, ಮಲೇಷಿಯ, ಲಾಓಸ್, ವಿಯೆಟ್ನಾಮ್ ಮತ್ತು ಇಂಡೊನೇಷ್ಯಾ ದೇಶಗಳಲ್ಲೂ ಪ್ರಚಲಿತವಾಗಿದೆ.
ಮಲೇಷಿಯಾದ ಕೆಲವು ರೂಪಾಂತರಗಳಲ್ಲಿ ಲಕ್ಷ್ಮಣನಿಗೆ ರಾಮನ ಪಾತ್ರಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ರಾಮನ ಪಾತ್ರವನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ.

ಭಾರತೀಯ ರೂಪಾಂತರಗಳು

ಭಾರತದಲ್ಲಿ ವಿವಿಧ ಕಾಲಗಳಲ್ಲಿ ಅನೇಕ ಬರಹಗಾರರು ಬರೆದ ರಾಮಾಯಣದ ರೂಪಾಂತರಗಳಿವೆ. ಈ ವಿವಿಧ ರೂಪಾಂತರಗಳು ಒಂದರಿಂದ ಇನ್ನೊಂದು ಸಾಕಷ್ಟು ಭಿನ್ನವಾಗಿಯೂ ಇವೆ. ೧೪-೧೫ ನೆಯ ಶತಮಾನಗಳಲ್ಲಿ, ಕುಮಾರ ವಾಲ್ಮೀಕಿ ಕನ್ನಡಲ್ಲಿ ತೊರವೆ ರಾಮಾಯಣ ಎಂಬ ರೂಪಾಂತರದ ಕರ್ತೃ. ಕನ್ನಡದ ಇತರ ಮುಖ್ಯ ರಾಮಾಯಣಗಳೆಂದರೆ ರಾಷ್ಟ್ರಕವಿ ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ "ಶ್ರೀ ರಾಮಾಯಣ ದರ್ಶನಂ" ಮತ್ತು ರಂಗನಾಥ ಶರ್ಮಾ ಅವರ "ಕನ್ನಡ ವಾಲ್ಮೀಕಿ ರಾಮಾಯಣ."
೧೨ ನೆಯ ಶತಮಾನದಲ್ಲಿ ತಮಿಳು ಕವಿ ಕಂಬ "ರಾಮಾವತಾರಮ್" ಅಥವಾ ಕಂಬರಾಮಾಯಣ ರಚಿಸಿದ. ಹಿಂದಿ ಭಾಷೆಯ ಪ್ರಸಿದ್ಧ ರಾಮಾಯಣ ೧೫೭೬ ರಲ್ಲಿ ತುಲಸೀದಾಸರು ರಚಿಸಿದ ಶ್ರೀ ರಾಮಚರಿತ ಮಾನಸ. ಇದಲ್ಲದೆ ಗುಜರಾತಿ ಕವಿ ಪ್ರೇಮಾನಂದರು ೧೭ ನೆಯ ಶತಮಾನದಲ್ಲಿ, ಬಂಗಾಲಿ ಕವಿ ಕೃತ್ತಿವಾಸರು ೧೪ ನೆಯ ಶತಮಾನದಲ್ಲಿ, ಒರಿಯಾ ಕವಿ ಬಲರಾಮದಾಸರು ೧೬ ನೆಯ ಶತಮಾನದಲ್ಲಿ, ಮರಾಠಿ ಕವಿ ಶ್ರೀಧರ ೧೮ ನೆಯ ಶತಮಾನದಲ್ಲಿ, ತೆಲುಗು ಕವಿ ರಂಗನಾಥರು ೧೫ ನೆಯ ಶತಮಾನದಲ್ಲಿ ರಾಮಾಯಣದ ಆವೃತ್ತಿಗಳನ್ನು ರಚಿಸಿದ್ದಾರೆ.
ರಾಮಾಯಣದ ಉಪ-ರೂಪಾಂತರಗಳಲ್ಲಿ ಒಂದು ರಾವಣನ ಕೇಡಿಗ ತಮ್ಮಂದಿರಾದ ಅಹಿ ರಾವಣ ಮತ್ತು ಮಹಿ ರಾವಣರನ್ನು ಕುರಿತದ್ದು. ಈ ಕಥೆಯಂತೆ ಅಹಿ-ಮಹಿ ರಾವಣರು ರಾಮ ಮತ್ತು ಲಕ್ಷ್ಮಣರನ್ನು ಕಾಳಿಗೆ ಬಲಿ ಕೊಡಲು ಹೊತ್ತೊಯ್ಯುತ್ತಾರೆ. ಈ ಕಥೆಯಲ್ಲಿ ಹನುಮಂತನ ಪಾತ್ರ ಬಹಳ ಮುಖ್ಯವಾಗಿದ್ದು ಅವನೇ ರಾಮ-ಲಕ್ಷ್ಮಣರನ್ನು ಕಾಪಾಡುತ್ತಾನೆ.
ಕೇರಳದ ಮಾಪಿಳ್ಳೆಗಳಲ್ಲಿ ಪ್ರಚಲಿತವಾಗಿರುವ ರಾಮಾಯಣದ ಒಂದು ರೂಪಾಂತರದ ಬಗ್ಗೆಯೂ ವರದಿಗಳಿವೆ.
"ಮಾಪಿಳ್ಳೆ ರಾಮಾಯಣ" ಎಂದು ಕರೆಯಲ್ಪಡುವ ಈ ರೂಪಾಂತರ ಮಾಪಿಳ್ಳೆಗಳ ಜಾನಪದ ಹಾಡುಗಳ ಗುಂಪಿನಲ್ಲಿ ಸೇರಿದೆ. ಮುಸಲ್ಮಾನ ಸಂಪ್ರದಾಯದಲ್ಲಿ ಸೇರಿರುವ ಈ ರೂಪಾಂತರದಲ್ಲಿ ರಾಮಾಯಣದ ನಾಯಕ ಒಬ್ಬ ಮುಸ್ಲಿಮ್ ಸುಲ್ತಾನ. ರಾಮನ ಹೆಸರನ್ನು "ಲಾಮನ್" ಎಂದು ಬದಲಾಯಿಸಿರುವುದನ್ನು ಬಿಟ್ಟರೆ ಬೇರೆಲ್ಲ ಪಾತ್ರಗಳೂ ರಾಮಾಯಣದಲ್ಲಿ ಇರುವಂತೆಯೇ ಇವೆ. ಮುಸ್ಲಿಮ್ ಸಾಮಾಜಿಕ ರೀತಿನೀತಿಗಳಿಗೆ ಹೊಂದಿಕೊಳ್ಳುವಂತೆ ಕಥೆಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಲಾಗಿದೆ.

ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳು

ಏಷ್ಯಾದ ಇನ್ನೂ ಅನೇಕ ಸಂಸ್ಕೃತಿಗಳು ರಾಮಾಯಣವನ್ನು ಆಮದು ಪಡೆದಿದ್ದು, ಕೆಲವು ದೇಶಗಳ ರಾಷ್ಟ್ರೀಯ ಮಹಾಕಾವ್ಯಗಳು ರಾಮಾಯಣದಿಂದಲೇ ಸ್ಫೂರ್ತಿ ಪಡೆದಿವೆ. ಚೀನಾ ದೇಶದ ಮಹಾಕಾವ್ಯ "ಪಶ್ಚಿಮದತ್ತ ಪಯಣ" ದ ಕೆಲವು ಭಾಗಗಳು ರಾಮಾಯಣವನ್ನು ಆಧರಿಸಿದವು. ಪ್ರಮುಖವಾಗಿ ಈ ಕಾವ್ಯದ "ಸುನ್ ವುಕಾಂಗ್" ಪಾತ್ರ ಹನುಮಂತನನ್ನು ಆಧರಿಸಿದ ಪಾತ್ರ ಎಂದು ನಂಬಲಾಗಿದೆ. ಇಂಡೊನೇಷ್ಯಾದ ಜಾವಾ ಪ್ರದೇಶದಲ್ಲಿ ಒಂಬತ್ತನೆ ಶತಮಾನದ ಸುಮಾರಿನಲ್ಲಿ ರಾಮಾಯಣದ ಒಂದು ರೂಪಾಂತರವಾದ "ಕಾಕಾವಿನ್ ರಾಮಾಯಣ" ಜನ್ಮತಾಳಿತು. ಇದು ಸಂಸ್ಕೃತ ರಾಮಾಯಣವನ್ನು ಹೆಚ್ಚು ಬದಲಿಸದೆ ಮಾಡಿದ ಭಾಷಾಂತರವಾಗಿದೆ. ಲಾಓಸ್ ದೇಶದ ಕಾವ್ಯ "ಫ್ರಾ ಲಕ್ ಫ್ರಾ ಲಾಮ್" ರಾಮಾಯಣದ ರೂಪಾಂತರ; ಇದರ ಹೆಸರಿನಲ್ಲಿರುವ "ಲಕ್" ಮತ್ತು "ಲಾಮ್" ಲಕ್ಷ್ಮಣ ಮತ್ತು ರಾಮರ ಹೆಸರಿನ ಲಾಓ ರೂಪಾಂತರಗಳು. ಇದರಲ್ಲಿ ರಾಮನ ಜೀವನವನ್ನು ಬುದ್ಧನ ಹಿಂದಿನ ಅವತಾರಗಳಲ್ಲಿ ಒಂದೆಂದು ಚಿತ್ರಿಸಲಾಗಿದೆ. ಮಲೇಷ್ಯಾದ "ಹಿಕಾಯತ್ ಸೆರಿ ರಾಮ" ಕಾವ್ಯದಲ್ಲಿ ದಶರಥ ಪ್ರವಾದಿ ಆದಮನ ಮೊಮ್ಮಗ ಎಂದು ಚಿತ್ರಿಸಲಾಗಿದೆಯಲ್ಲದೆ, ರಾವಣ ಬ್ರಹ್ಮನಿಂದ ವರ ಪಡೆಯುವುದರ ಬದಲು ಅಲ್ಲಾನಿಂದ ವರ ಪಡೆಯುತ್ತಾನೆ.
ಥೈಲೆಂಡಿನ ಕಾವ್ಯವಾದ "ರಾಮಕಿಯೆನ್" ಸಹ ರಾಮಾಯಣವನ್ನು ಆಧರಿಸಿದೆ. ಇದರಲ್ಲಿ ಸೀತೆಯನ್ನು ರಾವಣ ಮತ್ತು ಮಂಡೋದರಿಯರ ಮಗಳೆಂದು ಚಿತ್ರಿಸಲಾಗಿದೆ. ಜ್ಯೋತಿಷಿಯಾದ ವಿಭೀಷಣನು ಸೀತೆಯ ಜಾತಕವನ್ನು ನೋಡಿ ಅಪಶಕುನವನ್ನು ಮುನ್ನುಡಿಯುತ್ತಾನೆ. ಹಾಗಾಗಿ ರಾವಣ ಅವಳನ್ನು ನೀರಿಗೆ ಎಸೆಯಿಸುತ್ತಾನೆ, ಮತ್ತು ನಂತರ ಜನಕ ಸೀತೆಯನ್ನು ಪಡೆಯುತ್ತಾನೆ. ಮುಖ್ಯ ಕಥೆ ರಾಮಾಯಣದ ಕಥೆಯಂತಿದ್ದರೂ ಸಾಮಾಜಿಕ ಸಂಪ್ರದಾಯಗಳನ್ನು ಥಾಯಿ ಸಮಾಜದ ಸಂಪ್ರದಾಯಗಳಿಗೆ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಹನುಮಂತನ ಪಾತ್ರ ಬಹಳ ಮುಖ್ಯವಾಗಿದೆ. ಈ ಕಾವ್ಯದ ವರ್ಣಚಿತ್ರಗಳು ಬ್ಯಾ೦ಗ್‍ಕಾಕ್ ನಲ್ಲಿರುವ "ವಾತ್ ಫ್ರಾ ಕಯೆವ್" ದೇವಸ್ಥಾನದಲ್ಲಿ ಕಂಡುಬರುತ್ತವೆ.
ಇತರ ದಕ್ಷಿಣಪೂರ್ವ ಏಷ್ಯಾದ ರೂಪಾಂತರಗಳಲ್ಲಿ ಬಾಲಿಯ "ರಾಮಕವಚ", ಫಿಲಿಪ್ಪೀನ್ಸ್ ನ "ಮರಡಿಯ ಲಾವಣ", ಕಾಂಬೋಡಿಯದ "ರೀಮ್‍ಕರ್" ಮತ್ತು ಮ್ಯಾನ್‍ಮಾರ್ ನ "ಯಾಮ ಜಾತ್‍ದವ್" ಗಳನ್ನು ಹೆಸರಿಸಬಹುದು.

ವರ್ತಮಾನದಲ್ಲಿ ರಾಮಾಯಣ

ಕನ್ನಡದ ರಾಷ್ಟ್ರಕವಿಯಾಗಿದ್ದ ಕುವೆಂಪು ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚಿಸಿದ್ದಾರೆ. ತೆಲುಗು ಕವಿಯಾದ ವಿಶ್ವನಾಥ ಸತ್ಯನಾರಾಯಣ ಎಂಬುವವರು ರಾಮಾಯಣ ಕಲ್ಪವೃಕ್ಷಮು ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಇಬ್ಬರು ಕವಿಗಳಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಅಶೋಕ್ ಬ್ಯಾಂಕರ್ ಎಂಬ ಆಂಗ್ಲ ಲೇಖಕರು ರಾಮಾಯಣವನ್ನು ಆಧರಿಸಿ ಆರು ಸರಣಿ ಕಾದಂಬರಿಗಳನ್ನು ಹೊರತಂದಿದ್ದಾರೆ.
ಕಂಚೀಪುರಂನ ಗೇಟಿ ರೈಲ್ವೇ ಥಿಯೇಟರ್ ಕಂಪನಿಯು ದ್ರವಿಡರ ಸ್ವಾಭಿಮಾನವನ್ನು ಪುನರ್ಸ್ಥಾಪಿಸುವ ಉದ್ದೇಶದಿಂದ ಈ ಕಾವ್ಯದ ಪರಿಷ್ಕೃತ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ರಾವಣನನ್ನು ವಿದ್ವಾಂಸನೆಂದೂ, ರಾಜನೀತಿಜ್ಞನೆಂದೂ, ಸೀತೆ ಅವನಿಗೆ ಮರುಳಾದಳೆಂದೂ , ರಾಮನು ನೀತಿನಿಯಮ, ನಯನಾಜೂಕುಗಳಿಲ್ಲದ ಲಂಪಟ ರಾಜಕುಮಾರನೆಂದೂ, ಕುಡಿದು ಉನ್ಮತ್ತಸ್ಥಿತಿಯಲ್ಲಿ ಭಾರೀ ಮಾರಣಹೋಮಕ್ಕೆ ಆಜ್ನೆ ನೀಡಿದನೆಂದೂ ಚಿತ್ರಿಸುವ ರಾಮಾಯಣದ ಈ ಆವೃತ್ತಿಗಳು ಸಾಂಪ್ರದಾಯಿಕ ಪ್ರಸ್ತುತಿಗಳಿಂದ ಬಹಳಷ್ಟು ದೂರ ಇವೆ. ಈ ರೀತಿಯ ಪಾತ್ರಚಿತ್ರಣಗಳು ತನ್ನ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಪುನರ್ ಸ್ಥಾಪಿಸುವ ದ್ರಾವಿಡ ಚಳುವಳಿಯ ಹೆಚ್ಚುತ್ತಿರುವ ಗುಪ್ತಪ್ರಯತ್ನದ ಅಂಗಗಳಾಗಿವೆ.

ಮಹಾಭಾರತ

ಮಹಾಭಾರತ


ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.
ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ.

ಇತಿಹಾಸ ಹಾಗೂ ಹಿನ್ನೆಲೆ

ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡುಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಕೆಲವು ಚರಿತ್ರಜ್ಞರ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. ೧೪೦೦. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿದ ಹಲವು ವಿದುಷರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. ೩೧೦೦ಕ್ಕೆ ಹೋಲುತ್ತದೆಂದು ಹೇಳಲಾಗುತ್ತದೆ. ಆದ್ದರಿಂದ ಇವು ಘಟಿತ ಘಟನೆಗಳೋ ಅಲ್ಲವೋ, ಹೌದಾಗಿದ್ದರೆ ಯಾವ ಕಾಲದಲ್ಲಿ ನಡೆದದ್ದು ಎಂಬ ಎಲ್ಲಾ ವಿಷಯಗಳ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ.

ಕಥಾವಸ್ತು

ಮಹಾಭಾರತದ ಮುಖ್ಯವಾಗಿ ಚಂದ್ರ ವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರು ವಂಶದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ ಕಥೆ ಎನಿಸಿಕೊಳ್ಫುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ್ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು.
ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.

ಮುಖ್ಯ ಪಾತ್ರಗಳು

ಪರ್ವಗಳು

ಉಪಕಥೆಗಳು ಮತ್ತು ಗ್ರಂಥಗಳು

ಮಹಾಭಾರತದ ಭಾಗವಾದ ಹಲವು ಪ್ರಮುಖ ಕಥೆಗಳು/ಗ್ರಂಥಗಳು:

ತತ್ವಶಾಸ್ತ್ರ


ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ, ಕಾಮ, ಧರ್ಮ, ಮತ್ತು ಮೋಕ್ಷ.
ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ. ಮಹಾಭಾರತದಲ್ಲಿ ವೈಶಂಪಾಯನ ಜನಮೇಜಯನಿಗೆ ಹೇಳುತ್ತಾನೆ:
"ಓ ವಿವೇಕಿ! ಇವೆಲ್ಲವೂ ಜ್ಞಾನವನ್ನೇ ಪ್ರತಿನಿಧಿಸುತ್ತವೆ ಎಂದು ತಿಳಿ: ಸಾಂಖ್ಯ, ಯೋಗ, ಪಂಚರಾತ್ರ, ಆರಣ್ಯಕ. ಅವುಗಳ ದಾರಿಗಳು ಬೇರೆ, ಆದರೆ ಮೂಲದಲ್ಲಿ ಎಲ್ಲವೂ ಒಂದೇ!"
ಮಹಾಭಾರತದಲ್ಲಿ ಅಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ, ಯುದ್ಧನೀತಿ, ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು.

ಕನ್ನಡ ಸಾಹಿತ್ಯದಲ್ಲಿ ಮಹಾಭಾರತ

ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ. ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ.
ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ - ಕೃಷ್ಣಾವಸಾನದ ನಂತರ ಕುಮಾರವ್ಯಾಸ ತನ್ನ ಕಾವ್ಯವನ್ನು ಮುಗಿಸಿರುವುದರಿಂದ ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ. ಮಹಾಭಾರತದ ಉಳಿದ ಭಾಗ ವಾರ್ಧಕ ಷಟ್ಪದಿಯಲ್ಲಿ, ಲಕ್ಷ್ಮೀಶ ಕವಿ ವಿರಚಿತ "ಜೈಮಿನಿ ಭಾರತ"ದಲ್ಲಿ ಮೂಡಿ ಬ೦ದಿದೆ.
ಆಧುನಿಕ ಕನ್ನಡದಲ್ಲಿ ಪ್ರಸಿದ್ಧವಾದ ಮಹಾಭಾರತದ ಆವೃತ್ತಿ ಎ ಅರ್ ಕೃಷ್ಣಶಾಸ್ತ್ರಿಗಳು ಬರೆದ "ವಚನ ಭಾರತ." ಈ ಕೃತಿ ಸರಳವಾದ ಆಧುನಿಕ ಕನ್ನಡದಲ್ಲಿ ಬರೆಯಲ್ಪಟ್ಟಿದೆ. ಆಧುನಿಕ ಕನ್ನಡದಲ್ಲಿ ಮಹಾಭಾರತದ ಇನ್ನೊಂದು ಕೃತಿ "ಪರ್ವ" (ಎಸ್ ಎಲ್ ಭೈರಪ್ಪ).
ೇಲಿನವು ಮುಖ್ಯ ಮಹಾಭಾರತ ಕಥೆಯನ್ನು ಆಧರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆದ ಕೃತಿಗಳು ಅನೇಕ. ಆಧುನಿಕ ಕನ್ನಡದಲ್ಲಿ ಕುವೆಂಪು ರವರ "ಬೆರಳ್ ಗೆ ಕೊರಳ್" ಮಹಾಭಾರತದ ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ. ಹಾಗೆಯೇ ಬಿ ಎಂ ಶ್ರೀ ರವರ "ಗದಾಯುದ್ಧಂ" ರನ್ನನ ಕಾವ್ಯದ ನಾಟಕ ರೂಪಾಂತರ. ಗಿರೀಶ್ ಕಾರ್ನಾಡ್ ರ "ಯಯಾತಿ" ಮಹಾಭಾರತದ ಉಪಕಥೆಯೊಂದನ್ನು ಆಧರಿಸಿ ಬರೆದ ನಾಟಕ. ಇತ್ತೀಚೆಗೆ ರಾಮಚಂದ್ರ ಭಾವೆಯವರು ಅಂಧಪರ್ವ, ಅಶ್ವಮೇಧ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಕ್ರಮವಾಗಿ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿವೆ. ಅಂಧಪರ್ವ ಕಾದಂಬರಿಯಾಗಿ ಹೊರಬಂದಿದೆ. ಅಲ್ಲದೆ ಮಹಾಭಾರತ ಪಾತ್ರಪ್ರಪಂಚ ಎಂಬ ಸಂಕಲನವೂ ಇದೆ.

ಕೆಲವು ಉಕ್ತಿಗಳು