ಕುರುಬರು ಇರಬೇಕು
ಊರು ತುಂಬ
ಕುರಿಗಳು ಇರಬೇಕು
ದೇಶ ತುಂಬ...
ಕುರಿ ಹಾಲು ಇರಬೇಕು
ಮನೆ ತುಂಬ
ಕುರಿ ಹಾಲು ಕುಡಿಬೇಕು
ಹೊಟ್ಟೆ ತುಂಬ...
ಗಟ್ಟಿ ಇರಬೇಕು
ತೋಳ ತುಂಬ
ತೊಡೆ ತಟ್ಟಬೇಕು
ಕಣದ ತುಂಬ..
ಕಂಬಳಿ ಬೀಸಬೇಕು
ಮೋಡ ತುಂಬ
ಮೇಘ ಸುರಿಯಬೇಕು
ಧರೆಯ ತುಂಬ..
ಭಕ್ತಿಯ ಮಾಡಬೇಕು
ಭಾವ ತುಂಬಿ
ಸಿದ್ದರ ನೆನೆಯಬೇಕು
ಮನ ತುಂಬಿ...
ಹಾಲುಮತದ ಕುರುಬ ಯಲ್ಲಪ್ಪ ನಂದಿ.