Tuesday, 29 September 2020

ವಿಚಿತ್ರವೀರ್ಯ

ವಿಚಿತ್ರವೀರ್ಯ ಮಹಾಭಾರತದಲ್ಲಿ ಶಂತನು ಮತ್ತು ಸತ್ಯವತಿಯ ಮಗ.ಇವನ ಅಣ್ಣ ಚಿತ್ರಾಂಗದ ಶಂತನುವಿನ ನಂತರ ಹಸ್ತಿನಾಪುರದ ಪಟ್ಟವೇರಿದ.ಚಿತ್ರಾಂಗದ ಸಂತಾನವಿಲ್ಲದೆ ನಿಧನ ಹೊಂದಿದುದರಿಂದ ಅವನ ತಮ್ಮನಾದ ವಿಚಿತ್ರವೀರ್ಯ ಸಿಂಹಾಸನವನ್ನೇರಿದ.ಇವನು ಪಟ್ಟವೇರಿದ ಸಮಯದಲ್ಲಿ ಇನ್ನೂ ಬಾಲಕನಾಗಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ಭೀಷ್ಮನು ಇವನ ಪರವಾಗಿ ರಾಜ್ಯಭಾರ ನಿಭಾಯಿಸಿದ.ಇವನು ಪ್ರಾಯ ಪ್ರಬುದ್ಧನಾದ ಸಮಯದಲ್ಲಿ ಇವನಿಗಾಗಿ ಭೀಷ್ಮನು ಕನ್ಯೆಯನ್ನು ಅರಸುತ್ತಿರುವಾಗ ಕಾಶಿಯ ರಾಜ ಸ್ವಯಂವರವನ್ನು ಏರ್ಪಡಿಸಿದ ವಿಷಯ ತಿಳಿದು ಅಲ್ಲಿಗೆ ಧಾವಿಸಿದ.ಅಲ್ಲಿ ಸ್ವಯಂವರವನ್ನು ವಿಚಿತ್ರವೀರ್ಯನ ಪರವಾಗಿ ಗೆದ್ದು ಕಾಶಿ ರಾಜನ ಮೂವರು ಕುವರಿಯರಾದ ಅಂಬಾ,ಅಂಬಿಕ ಮತ್ತು ಅಂಬಾಲಿಕರನ್ನು ಕರೆತರಲು ಪ್ರಯತ್ನಿಸಿದ. ಆದರೆ ಅಂಬಾ ಮೊದಲೇ ಸಾಳ್ವನನ್ನು ಪ್ರೀತಿಸುತ್ತಿದ್ದುದರಿಂದ ಅಂಬಿಕ ಮತ್ತು ಅಂಬಾಲಿಕೆಯರನ್ನು ಒತ್ತಾಯ ಪೂರ್ವಕ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿದ. ಮುಂದೆ ವಿಚಿತ್ರವೀರ್ಯನಿಗೆ ಮಕ್ಕಳಾಗುವ ಮೊದಲೇ ಕ್ಷಯ ರೋಗದಿಂದ ತೀರಿಕೊಂಡುದುದರಿಂದ ತಾಯಿ ಸತ್ಯವತಿ ಭೀಷ್ಮನಿಗೆ ಅಂಬಿಕ ಮತ್ತು ಅಂಬಾಲಿಕೆಯರನ್ನು ಮದುವೆಯಾಗುವಂತೆ ತಿಳಿಸುತ್ತಾಳೆ. ಆದರೆ ಭೀಷ್ಮನು ಮೊದಲೇ ಆಜನ್ಮ ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ವ್ಯಾಸನನ್ನು ಕರೆದು ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳನ್ನು ಕರುಣಿಸುವಂತೆ ಹೇಳಲು ಹೇಳುತ್ತಾನೆ. ಅದರಂತೆ ವ್ಯಾಸನ ಮೂಲಕ ಸತ್ಯವತಿಯು ಅಂಬಿಕೆ ಮಾತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಮಾಡುತ್ತಾಳೆ. ಇವರೇ ಅಂಬಿಕೆಯ ಮಗ ಧೃತರಾಷ್ಟ್ರ ಮತ್ತು ಅಂಬಾಲಿಕೆಯ ಮಗ ಪಾಂಡುವಾಗಿ ಮಹಾಭಾರತ ಕಥೆಯಲ್ಲಿ ಪ್ರಸಿದ್ಧರಾದವರು.



ಶಿಖಂಡಿ

ಶಿಖಂಡಿ ಎಂಬುದು ಮಹಾಭಾರತದಲ್ಲಿ ಬರುವ ಒಂದು ವಿಶಿಷ್ಟ ಪಾತ್ರಪಾಂಚಾಲ ದೇಶದ ರಾಜನಾದ ದ್ರುಪದನ  ಮಗಳು. ಆಕೆಯ ಅಣ್ಣ ದೃಷ್ಟದ್ಯುಮ್ನ. ಮೂಲತಃ ಹೆಣ್ಣಾಗಿ ಹುಟ್ಟಿದ್ದರೂ ತನ್ನ ಗುಣ, ಶೌರ್ಯ, ವರ್ತನೆಗಳಿಂದ ಗಂಡಸೆಂದು ಬಿಂಬಿಸಲ್ಪಟ್ಟ ಪಾತ್ರವಿದು.

 

ಹಿನ್ನೆಲೆ

·         ಭೀಷ್ಮ ತನ್ನ ತಮ್ಮನಾದ ವಿಚಿತ್ರವೀರ್ಯನ ಮದುವೆಗೆಂದು ಅಂಬೆಅಂಬಿಕಾಅಂಬಾಲಿಕ ಎಂಬ ಮೂವರು ರಾಜಕುಮಾರಿಯನ್ನು ಅಪಹರಿಸುತ್ತಾನೆ. ಅವರಲ್ಲಿ ಅಂಬೆ (ಅಂಬಾ) ತಾನು ಮತ್ತೊಬ್ಬ ವ್ಯಕ್ತಿಯನ್ನು ಈಗಾಗಲೇ ಪ್ರೀತಿಸಿರುವದಾಗಿಯೂ, ತನ್ನನ್ನು ಬಿಟ್ಟು ಬಿಡಬೇಕೆಂದೂ ಭೀಷ್ಮನಲ್ಲಿ ವಿನಂತಿಸಿಕೊಳ್ಳುತ್ತಾಳೆ. ಮನ ಕರಗಿದ ಭೀಷ್ಮ ಅಂಬೆಯನ್ನು ಆಕೆಯ ಪ್ರಿಯಕರನಿಗೋಸ್ಕರ ಕಳಿಸಿಕೊಡುತ್ತಾನೆ.

·         ಆದರೆ ಪ್ರಿಯಕರ ಅಂಬೆಯನ್ನು ತಿರಸ್ಕರಿಸುತ್ತಾನೆ. ಈಗ ಅಂಬೆಯದು ವಿಚಿತ್ರ ಪರಿಸ್ಥಿತಿ. ಇತ್ತ ಪ್ರಿಯಕರನಿಂದಲೂ ತಿರಸ್ಕೃತಗೊಂಡು ಅತ್ತ ವಿಚಿತ್ರವೀರ್ಯನನ್ನೂ ಮದುವೆಯಾಗದೇ ಕಂಗೆಡುತ್ತಾಳೆ. ಹತಾಶೆಗೊಂಡ ಅಂಬೆ ತೀರ ಕೊನೆಗೆ ಭೀಷ್ಮನನ್ನೇ ಮದುವೆಯಾಗುವಂತೆ ಒತ್ತಾಯಿಸು ತ್ತಾಳೆ. ಭೀಷ್ಮ ಒಪ್ಪುವುದಿಲ್ಲ. ಹೀಗೆ ಎಲ್ಲ ಕಡೆಗಳಿಂದಲೂ ತಿರಸ್ಕೃತಗೊಂಡ ಅಂಬೆ ಆಗ ಕೋಪದಿಂದ ಭೀಷ್ಮನೆದುರು ಶಪಥಗೈಯುತ್ತಾಳೆ.

ಅಂಬೆಯ ಶಪಥ

ಮುಂದಿನ ಜನ್ಮದಲ್ಲಿ ನಾನೇ ನಿನ್ನ ಸಾವಿಗೆ ಕಾರಣಳಾಗುವೆ ಎಂದು ಭೀಷ್ಮನೆಡೆಗೆ ಕೋಪದಿಂದ ಗರ್ಜಿಸುತ್ತ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಹಾಗೆ ಆತ್ಮಾಹುತಿ ಮಾಡಿಕೊಂಡ ಅಂಬೆ ದ್ರುಪದನ ಮಗಳಾಗಿ ಜನಿಸುತ್ತಾಳೆ.ಆಕೆಯ ಹುಟ್ಟಿನ ಸಮಯದಲ್ಲಿ ಅಶರೀರ ವಾಣಿ ಯೊಂದು ಈಕೆಯ ಹಿನ್ನೆಲೆಯನ್ನು ತಂದೆ ದ್ರುಪದನಿಗೆ ತಿಳಿಸುತ್ತದೆ.

ಭೀಷ್ಮನಿಗೆದುರಾಗಿ

·         ಕಾರಣಕ್ಕೆ ಹೆಣ್ಣು ಮಗುವನ್ನು ಗಂಡಸಿನಂತೆ ಬೆಳೆಸುವಂತೆ ಸೂಚಿಸುತ್ತದೆ. ಹಾಗಾಗಿ ಶಿಖಂಡಿ ಹೆಣ್ಣಾದರೂ ಗಂಡಸಿನಂತೆ ಬೆಳೆಯುತ್ತದೆ. ಮುಂದೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಭೀಷ್ಮನಿಗೆದುರಾಗಿ ಶಿಖಂಡಿಯನ್ನೇ ತಂದು ನಿಲ್ಲಿಸುತ್ತಾನೆ. ಭೀಷ್ಮ ಹೆಣ್ಣಿನ ಎದುರು ಯುದ್ಧ ಮಾಡಲಾರೆ ಎಂದು ಶಸ್ತ್ರ ಕೆಳಗಿಡುತ್ತಾನೆ.

·         ಆಗ ಕೃಷ್ಣ ಅರ್ಜುನನಿಗೆ ಮೋಸದಿಂದ ಭೀಷ್ಮನೊಂದಿಗೆ ಹೋರಾಡುವಂತೆ ಪ್ರೆರೇಪಿಸಿ ಭೀಷ್ಮನನ್ನು ಹೊಡೆದುರುಳಿಸುತ್ತಾನೆ. ಹೀಗೆ ಭೀಷ್ಮನ ಸಾವಿಗೆ ಕಾರಣವಾಗುವುದರ ಮೂಲಕ ಅಂಬೆಯು ಶಿಖಂಡಿಯಾಗಿ ತನ್ನ ಶಪಥ ಪೂರೈಸಿಕೊಳ್ಳುತ್ತಾಳೆ. ಶಿಖಂಡಿ ಎಂದರೆ 'ಉಭಯ ಲಿಂಗಿ'ಗಳು ಎಂದು ಹೇಳಲಾಗುತ್ತದೆ.