ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ನವೆಂಬರ್ 26 2018 ಕನಕ ಜಯಂತಿಯ ಅಂಗವಾಗಿ ಈ ವಿಶೇಷ ಲೇಖನ.
ಕನ್ನಡ ಸಾಹಿತ್ಯಕ್ಕೆ ತಮ್ಮದೆ ಕೀರ್ತನೆಗಳ ಮೂಲಕ ಅನರ್ಘ್ಯ ಕೊಡುಗೆಯನ್ನು ನೀಡಿದವರು ಹಾಗೂ ದಾಸ ಸಾಹಿತ್ಯದ ಶ್ರೇಷ್ಠದಾಸರಲ್ಲಿ ಒಬ್ಬರಾಗಿರುವ ಕನಕದಾಸರು ವಿಶ್ವಮಾನವರಾಗಿದ್ದಾರೆ. ಅವರ ಕೀರ್ತನೆಗಳು ಮನುಜ ಕುಲ ಸನ್ಮಾರ್ಗದತ್ತ ಕೊಂಡೊಯುವಂತದ್ದದ್ದು.
ಕರ್ನಾಟಕದಲ್ಲಿ 15 ಮತ್ತು 16ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು
"ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ" ಎಂಬ ಕಾವ್ಯ ಭಾವಾರ್ಥವು ಯುವಕರ ಮನ ಮಿಡಿಯುವುದು ಯುವಕರ ನಿಲುವನ್ನು ಅವರ ಗುರಿಯನ್ನು ದಾರಿಗೆ ಒಯ್ಯುವಂತೆ ಮಾಡಿದ ನಮ್ಮ ಶ್ರೇಷ್ಠ ಸಂತಕವಿ ಕನಕದಾಸರು.
ಈಗಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದ ಬೀರಪ್ಪ ಬಚ್ಚಮ್ಮ ದಂಪತಿಗಳ ಮಗ. ಇವರ ಪೂರ್ವದ ಹೆಸರು ತಿಮ್ಮಪ್ಪ ನಾಯಕ. ಬಾಡ ಗ್ರಾಮದಲ್ಲಿ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಠಾನ ಮಾಡಿ ದೇವಾಲಯವನ್ನು ಕಟ್ಟಿಸಿದರಂತೆ. ದಂಡನಾಯಕರಾಗಿದ್ದ ಕನಕದಾಸರಿಗೆ ಯುದ್ಧವೊಂದರಲ್ಲಿ ಸೋಲುಂಟಾಗಿ, ಜೀವನದಲ್ಲಿ ವೈರಾಗ್ಯ ಉಂಟಾಗಿ ವ್ಯಾಸರಾಯರಿಂದ ದೀಕ್ಷೆ ಪಡೆದು ಕನಕದಾಸರಾದರು.
ಪುರಂದರರ ಸಮಕಾಲೀನರು : ಕನಕದಾಸರು ಪುರಂದರದಾಸರ ಸಮಕಾಲಿನವರು, ಅದೇ ರೀತಿ ಸ್ವತಂತ್ರ ಕಾಂತಿವುಳ್ಳವರೂ, ಸಮಾಜ ಸುಧಾರಕರೂ, ವೈಚಾರಿಕ ಮನೋಧರ್ಮದವರಾಗಿದ್ದರು. ಇವರು ಕೀರ್ತನೆಗಳಲ್ಲದೆ ಅನೇಕ ಕಾವ್ಯಗಳಾದ "ಮೋಹನ ತರಂಗಿಣಿ", ಹರಿಭಕ್ತಸಾರ, ನಳಚರಿತ್ರೆ, 'ರಾಮಧ್ಯಾನ ಚರಿತ್ರೆ, ಮುಂತಾದವುಗಳನ್ನು ಅಲ್ಲದೇ ಅಲ್ಲಮನ ಬೆಡಗಿನ ವಚನಗಳಂತೆ ಮುಡಿಗೆಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅಪಾರವಾದ ವಿಶಿಷ್ಟ ಕೊಡುಗೆ ನೀಡಿದ್ದಾರೆ
ಕೃಷ್ಣನ ಭಕ್ತ : ಅನೇಕರ ನಂಬಿಕೆಯಂತೆ ಕನಕರು ಕೂಡ ಶ್ರೀಕೃಷ್ಣನ ಭಕ್ತರು. ಉಡುಪಿಯ ದೇವಾಲಯದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂಭಾಗದ ಸ್ಥಳದಲ್ಲಿ ನಿಂತು "ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ" ಎಂದೂ ಹಾಡತೊಡಗಿದರು. ಆಗ ಹಿಂಬಾಗದ ಗೋಡೆ ಬಿರುಕು ಒಡೆದು ಕೃಷ್ಣನ ವಿಗ್ರಹ ತಿರುಗಿತಂತೆ ಅವರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮನ ದರ್ಶನ ನೀಡಿರುವ ಕಿಂಡಿಯನ್ನು ಇಂದಿಗೂ 'ಕನಕನ ಕಿಂಡಿ' ಎಂದೆ ಪ್ರಸಿದ್ದಿ ಪಡೆದಿದೆ. ಅಂದು ಕಂಡಂತಹ ಉಡುಪಿಯ ಶ್ರೀಕೃಷ್ಣನ ದರ್ಶನವನ್ನು ಇಂದಿಗೂ ಕಾಣಬಹುದು. ಯುವರಾಜ ನಂದಿ.